ಟೆನಿಸ್ ತ್ರಿವಿಕ್ರಮರು


Team Udayavani, Jun 27, 2021, 12:44 PM IST

ಟೆನಿಸ್ ತ್ರಿವಿಕ್ರಮರು

ಇತ್ತೀಚೆಗಷ್ಟೇ ಮುಗಿದ ಫ್ರೆಂಚ್‌ ಓಪನ್‌ ಪುರುಷರ ಸಿಂಗಲ್ಸ್‌ ಪ್ರಶಸ್ತಿಯನ್ನು ವಿಶ್ವದ ನಂ.1 ಆಟಗಾರ ನೊವಾಕ್‌ ಜೊಕೋವಿಕ್‌ ಗೆದ್ದುಕೊಂಡರು. ಇದು ಅವರು ಗೆದ್ದ 19ನೇ ಗ್ರ್ಯಾನ್‌ಸ್ಲಾಮ್‌ ಕಿರೀಟ. ಇಲ್ಲಿಗೆ ಹಲವು ವರ್ಷಗಳಿಂದ ನಡೆಯುತ್ತಿದ್ದ ಚರ್ಚೆಯೊಂದು ಮತ್ತೆ ಮುನ್ನೆಲೆಗೆ ಬಂದಿದೆ. ಟೆನಿಸ್‌ ಜಗತ್ತಿನ ಸಾರ್ವಕಾಲಿಕ ಮೂವರು ಶ್ರೇಷ್ಠ ಆಟಗಾರರು ಒಂದು ಕಾಲಘಟ್ಟದಲ್ಲಿ ಆಡುತ್ತಿರುವುದಕ್ಕೆ ಸಂಬಂಧಿಸಿದ ಚರ್ಚೆ ಇದು. ರೋಜರ್‌ ಫೆಡರರ್‌, ರಫೆಲ್‌ ನಡಾಲ್‌, ನೊವಾಕ್‌ ಜೊಕೋವಿಕ್‌, ಹೀಗೆ ಗ್ರ್ಯಾನ್‌ಸ್ಲಾಮ್‌ಗಳನ್ನು ಸತತವಾಗಿ ಗೆಲ್ಲುತ್ತಿರುವುದರ ಹಿಂದಿನ ರಹಸ್ಯವಾದರೂ ಏನು? ಇವರ ಸಾಮರ್ಥ್ಯದ ಗುಟ್ಟೇನು? ಈ ಮೂವರಲ್ಲಿ ನಿಜಕ್ಕೂ ಯಾರು ಶ್ರೇಷ್ಠ ಆಟಗಾರ?

ಕಳೆದೊಂದು ದಶಕ ಅಂದರೆ 2010ರಿಂದ 2021ರ ವರೆಗೆ ನಡೆದ 45 ಗ್ರ್ಯಾನ್‌ಸ್ಲಾಮ್‌ಗಳಲ್ಲಿ 37 ಪ್ರಶಸ್ತಿಗಳನ್ನು ಈ ಮೂವರೇ ಗೆದ್ದಿದ್ದಾರೆ! ಬಿಟ್ಟುಕೊಟ್ಟಿರುವುದು ಕೇವಲ 8 ಪ್ರಶಸ್ತಿಗಳನ್ನು ಮಾತ್ರ. ಈಗ ನೀವು ಮೂವರ ಅಧಿಪತ್ಯವನ್ನು ಊಹಿಸಿ. ಟೆನಿಸ್‌ನಲ್ಲಿ ಗರಿಷ್ಠ ಪ್ರಶಸ್ತಿಗಳನ್ನು ಗೆದ್ದಿರುವ ಮೂವರು ತಾರೆಯರೂ ಇವರೇ. ಸ್ವಿಟ್ಸರ್ಲೆಂಡ್‌ನ‌ ರೋಜರ್‌ ಫೆಡರರ್‌ 20 ಪ್ರಶಸ್ತಿಗಳನ್ನು ಗೆದ್ದು ಅಗ್ರಸ್ಥಾನದಲ್ಲಿದ್ದರೆ, ನಡಾಲ್‌ 20 ಪ್ರಶಸ್ತಿಗಳನ್ನು ಗೆದ್ದು 2 ನೇ ಸ್ಥಾನದಲ್ಲಿದ್ದಾರೆ. ಜೊಕೋವಿಕ್‌ 19 ಪ್ರಶಸ್ತಿ ಗೆದ್ದು 3 ನೇ ಸ್ಥಾನದಲ್ಲಿದ್ದಾರೆ. ಇವರನ್ನು ಬಿಟ್ಟರೆ ಗರಿಷ್ಠ ಪ್ರಶಸ್ತಿ ಗೆದ್ದ ಇನ್ನೊಬ್ಬ ಸಾಧಕ ಪೀಟ್‌ ಸಾಂಪ್ರಾಸ್‌. ಪ್ರಶಸ್ತಿಗಳ ಸಂಖ್ಯೆ 14. ಈ ಮೂವರು ತಮ್ಮ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲುವ ಮುಂಚೆಯೇ ಸಾಂಪ್ರಾಸ್‌ ನಿವೃತ್ತಿ ಹೊಂದಿದ್ದರು. ಅನಂತರ ಈ ಮೂವರ ಆರ್ಭಟ ಶುರುವಾದಾಗ ಅದು ಈ ಮಟ್ಟಕ್ಕೆ ಬೆಳೆಯುತ್ತದೆ ಎಂದು ಯಾರೂ ಊಹೆ ಮಾಡಿರಲಿಲ್ಲ !

ಮೂವರಿಗೆ ಇನ್ನೆಷ್ಟು  ಪ್ರಶಸ್ತಿ? :

ಬರೀ ಗ್ರ್ಯಾನ್‌ಸ್ಲಾಮ್‌ ಒಂದನ್ನೇ ಗಮನದಲ್ಲಿಟ್ಟುಕೊಂಡರೂ, ಈ ಮೂವರಲ್ಲಿ ಯಾರು ಹೆಚ್ಚು ಪ್ರಶಸ್ತಿ ಗೆಲ್ಲುತ್ತಾರೆಂದು ಊಹಿಸುವುದು ಕಷ್ಟ. ಆದರೆ ಮೂವರ ವಯಸ್ಸನ್ನು ಗಮನಿಸಿದರೆ, ಒಂದು ಹಂತದ ಅಂದಾಜು ಮಾಡಬಹುದು. ಮೂವರಿಗೆ ದೈಹಿಕ ಸಕ್ಷಮತೆಯ ಸಮಸ್ಯೆ ದೊಡ್ಡ ಪ್ರಮಾಣ ದಲ್ಲಿ ಕಾಡಿದೆ. ಇದೇ ಕಾರಣದಿಂದ ಆಗಾಗ ಟೆನಿಸ್‌ನಿಂದ ದೂರವಾಗಿದ್ದು, ಹಾಗೆಯೇ ಪ್ರಶಸ್ತಿಗಳನ್ನು ಕಳೆದುಕೊಂಡಿದ್ದೂ ಇದೆ.

ಫೆಡರರ್‌ಗೆ ಇನ್ನು ಮೂರು ಕಷ್ಟವಲ್ಲ :

ಫೆಡರರ್‌ಗೆ ಈಗ 39 ವರ್ಷ. ಕ್ರೀಡಾಭಾಷೆಯಲ್ಲಿ ಹೇಳುವುದಾದರೆ ಇನ್ನೆರಡು ವರ್ಷಕ್ಕೆ ಅವರು ನಿವೃತ್ತಿ ಘೋಷಿಸಬೇಕು. ಅದರ ಅನಂತರವೂ ಮುಂದುವರಿದರೆ ಅದು ಅವರ ಶರೀರಶಕ್ತಿಯನ್ನು ನಿರ್ಧರಿಸಿ ಕೈಗೊಳ್ಳುವ ತೀರ್ಮಾನ. ಪ್ರಸ್ತುತ ಫೆಡರರ್‌ ಯುವ ಫೆಡರರ್‌ ಆಗಿದ್ದಾಗ ಇದ್ದ ಸಕ್ಷಮತೆ ಹೊಂದಿಲ್ಲ. ಆದ್ದರಿಂದ 40 ವರ್ಷವಾದಾಗ ಅವರು ನಿವೃತ್ತಿ ಘೋಷಿಸುವ ಸಾಧ್ಯತೆಯೊಂದ್ದಿದೆ ಎನ್ನಲಡ್ಡಿಯಿಲ್ಲ.

ಹಾಗಾದರೆ ಅವರು ಇನ್ನೂ 6 ಗ್ರ್ಯಾನ್‌ಸ್ಲಾಮ್‌ಗಳನ್ನು ಆಡಬಹುದು. ಅದರಲ್ಲಿ ಗರಿಷ್ಠವೆಂದರೆ 2ರಿಂದ 3 ಪ್ರಶಸ್ತಿಯನ್ನು ಗೆಲ್ಲಬಹುದು. ಸದ್ಯದ ಅವರ ಪ್ರದರ್ಶನ ಗಮನಿಸಿದರೆ ಇದೂ ಅನುಮಾನ. ಆದರೂ ಫೆಡರರ್‌ ಊಹಾತೀತ ಆಟಗಾರ. ಪದೇಪದೆ ಜನರ ಊಹೆಗಳನ್ನು ಸುಳ್ಳು ಮಾಡಿದ್ದಾರೆ. ಅವರು ತಮ್ಮ 20ನೇ ಪ್ರಶಸ್ತಿ ಗೆಲ್ಲುತ್ತಾರೆಂದು ಯಾರೂ ನಂಬಿರಲಿಲ್ಲ. ಕಾರಣ ಅಷ್ಟೊತ್ತಿಗಾಗಲೇ ಅವರ ಪ್ರದರ್ಶನ ಮಟ್ಟ ಸಂಪೂರ್ಣ ಕುಸಿದಿತ್ತು. ಈ ತರ್ಕವನ್ನು ಅನ್ವಯಿಸಿದರೆ ಮುಂಚಿತವಾಗಿ, ಹೀಗೆಯೇ ಎಂದು ಊಹೆ ಮಾಡುವುದು ತಪ್ಪಾದೀತು. ಒಟ್ಟಾರೆ ಫೆಡರರ್‌ ಪ್ರಶಸ್ತಿಗಳ ಸಂಖ್ಯೆ 23ಕ್ಕೇರಬಹುದು.

ಸ್ಪರ್ಧೆಯಿರುವುದು ನಡಾಲ್‌-ಜೊಕೋ ನಡುವೆ : ಫೆಡರರ್‌ ಬಹುತೇಕ ನಿವೃತ್ತಿಯ ಸನಿಹವಿರುವುದರಿಂದ, ಪ್ರಶಸ್ತಿಯ ಲೆಕ್ಕಾಚಾರದಲ್ಲಿ (ಆಟದ ಕೌಶಲದ ದೃಷ್ಟಿಯನ್ನು ಇಲ್ಲಿ ಪರಿಗಣಿಸಿಲ್ಲ) ಸಾರ್ವಕಾಲಿಕ ಶ್ರೇಷ್ಠ ಆಟಗಾರ ಸ್ಥಾನ ಗಳಿಸುವ ಪೈಪೋಟಿಯಿರುವುದು ನಡಾಲ್‌ ಮತ್ತು ಜೊಕೋವಿಕ್‌ ನಡುವೆ. ಇಬ್ಬರಿಗೂ ವಯಸ್ಸಿದೆ, ಶಕ್ತಿಯೂ ಇದೆ. ಈ ಇಬ್ಬರ ಮಧ್ಯೆ ಮುಂದಿನ ದಿನಗಳಲ್ಲಿ ಪ್ರಶಸ್ತಿಗಳನ್ನು ಜಯಿಸಲು ಪೈಪೋಟಿ ಶುರುವಾಗಬಹುದು. ಅಷ್ಟರಲ್ಲಿ ಫೆಡರರ್‌ ಯುಗಾಂತ್ಯವಾಗಿರುತ್ತದೆ ಎನ್ನುವುದು ಫ್ರೆಡ್ಡೀ ಅಭಿಮಾನಿಗಳ ಆತಂಕ.

ಫ್ರೆಂಚ್‌ ಓಪನ್‌ ಸರದಾರ  : ಸ್ಪೇನಿನ ಬಲಾಡ್ಯ ಆಟಗಾರ ರಫೆಲ್‌ ನಡಾಲ್‌ಗೆ ಈಗ 35 ವರ್ಷ. ಎಡಗೈನ ಬಲಿಷ್ಠ ಸರ್ವೀಸ್‌ಗಳು ಇವರ ತಾಕತ್ತು. ಇವರು ಈಗ 20 ಪ್ರಶಸ್ತಿ ಗೆದ್ದಿದ್ದಾರೆ. ಇವರ ಸದ್ಯದ ದೈಹಿಕ ಕ್ಷಮತೆಯನ್ನು ಗಮನಿಸಿದರೆ ಇನ್ನೂ ಕನಿಷ್ಠ 6 ಪ್ರಶಸ್ತಿಯನ್ನು ಗೆಲ್ಲಬಲ್ಲರು. ಇವರಿಗೆ ನಿವೃತ್ತಿಯಾಗಲು ಕನಿಷ್ಠ 6 ವರ್ಷಗಳಿವೆ. ಅಷ್ಟರಲ್ಲಿ 26 ಗ್ರ್ಯಾನ್‌ಸ್ಲಾಮ್‌ಗಳನ್ನು ಆಡಿ, ಕನಿಷ್ಠ 6 ಪ್ರಶಸ್ತಿಗಳನ್ನು ಗೆಲ್ಲುವುದು ಅಸಾಧ್ಯವಂತೂ ಅಲ್ಲ.  ನಡಾಲ್‌ ಗ್ರ್ಯಾನ್‌ಸ್ಲಾಮ್‌ನಲ್ಲಿ ಪ್ರಶಸ್ತಿ ಗೆಲ್ಲಲು ಆರಂಭಿಸಿದ ಅನಂತರ ಎರಡು ಬಾರಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. 2011-12ರಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಸಾಧನೆ ತೋರಲಿಲ್ಲ. ಆದರೆ ಅವರಿಗೆ ನಿಜಕ್ಕೂ ಬರಗಾಲ ಉಂಟಾಗಿದ್ದು 2014ರ ಅಂತ್ಯದ ಅನಂತರ. ಮುಂದಿನ ಎರಡು ವರ್ಷಗಳ ಕಾಲ ಅವರು ಯಾವುದೇ ಗ್ರ್ಯಾನ್‌ಸ್ಲಾಮ್‌ ಗೆಲ್ಲಲಿಲ್ಲ. ಈ ಅವಧಿಯಲ್ಲಿ ಅವರು ಬೇಗ ಬೇಗ ಸೋತು ಹೊರಬೀಳುತ್ತಿದ್ದುದ್ದನ್ನು ಗಮನಿಸಿದಾಗ ನಡಾಲ್‌ ವೃತ್ತಿಜೀವನ ಮುಗಿಯಿತು ಎಂದೇ ಭಾವಿಸಲಾಗಿತ್ತು. 2017ರಿಂದ ನಡಾಲ್‌ ತಿರುಗಿಬಿದ್ದು ಸ್ಫೋಟಕ ಆಟವಾಡಿದರು. ಈ ಎರಡು ವರ್ಷಗಳಲ್ಲಿ ಅವರು ಐದು ಗ್ರ್ಯಾನ್‌ಸ್ಲಾಮ್‌ ಗೆದ್ದರು. ಹಾಗಾಗಿ ಅವರ ಓಟ ನಿಲ್ಲುತ್ತದೆ ಎಂದು ಭಾವಿಸುವುದಕ್ಕೆ ಸದ್ಯ ಕಾರಣವಿಲ್ಲ.

ಒಂದಕ್ಕಿಂತ ಹೆಚ್ಚು ಗ್ರ್ಯಾನ್‌ಸ್ಲಾಮ್‌ ಗೆದ್ದ ವಿಶ್ವದ ಮೊದಲ ಆಟಗಾರ ಜೊಕೋ! :ವಿಶ್ವದ ನಂ.1 ಟೆನಿಸಿಗ, ಸರ್ಬಿಯಾದ ನೊವಾಕ್‌ ಜೊಕೋವಿಕ್‌ 2021ರ ಫ್ರೆಂಚ್‌ ಓಪನ್‌ ಟ್ರೋಫಿ ಗೆಲ್ಲುವ ಮೂಲಕ ಮುಕ್ತ ಟೆನಿಸ್‌ ಯುಗದಲ್ಲಿ ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಕನಿಷ್ಠ ತಲಾ 2 ಬಾರಿ ಪ್ರಶಸ್ತಿ ಜಯಿಸಿದ ವಿಶ್ವದ ಮೊದಲ ಆಟಗಾರ ಎಂಬ ಹಿರಿಮೆಗೆ  ಪಾತ್ರರಾಗಿದ್ದಾರೆ. ಈ ಸಾಧನೆ ಬಳಿಕ ಮಾತನಾಡಿದ ಅವರು ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ನನ್ನ ವೃತ್ತಿಜೀವನದಲ್ಲಿ ಈ ಮಾತು ಸಾಬೀತಾಗಿದೆ. ಹೆಚ್ಚಿನವರು ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದನ್ನು ನಾನು ಮಾಡಿ ತೋರಿಸಿದ್ದೇನೆ ಹೀಗಾಗಿ ಒಂದೇ ಋತುವಿನಲ್ಲಿ ಎಲ್ಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದು “ಗೋಲ್ಡನ್‌ ಗ್ರಾನ್‌ಸ್ಲಾಮ್‌’ ಸಾಧಿಸುವ ಮೂಲಕ ಮತ್ತೂಂದು ಮೈಲುಗಲ್ಲಿಗೆ ಕಾತರದಿಂದ ಕಾಯುತ್ತಿದ್ದೇನೆ ಎಂದು ಜೊಕೋ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಬಲಿಷ್ಠ ಜೊಕೋ 25 ದಾಟುವುದು ಕಷ್ಟವೇ ಅಲ್ಲ: ಸರ್ಬಿಯದ ನೊವಾಕ್‌ ಜೊಕೋವಿಕ್‌ಗೆ ಈಗ 34 ವರ್ಷ. ಅವರ ಮುಂದೆಯೂ ಈಗ 6 ವರ್ಷ ಅವಧಿಯಿದೆ. ಲೆಕ್ಕಾಚಾರದ ಪ್ರಕಾರ ಅವರಿಗೆ 28 ಗ್ರ್ಯಾನ್‌ಸ್ಲಾéಮ್‌ಗಳು ಸಿಗುತ್ತವೆ. ಅವರು ದೈಹಿಕ ಸಕ್ಷಮತೆ ಉಳಿಸಿಕೊಂಡರೆ ಅವರ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಸಂಖ್ಯೆ 30ಕ್ಕೆ ಮುಟ್ಟಿದರೂ ಅಚ್ಚರಿಯಿಲ್ಲ. ಆದರೆ ಅವರ ಪ್ರತಿಭೆ, ಕೌಶಲಗಳನ್ನು ಗಮನಿಸಿದರೆ ಅವರಿಗೆ ಸವಾಲಾಗಬಲ್ಲಂಥದ್ದು ದೈಹಿಕ ಶಕ್ತಿಯ ಕೊರತೆ ಮಾತ್ರ!

ಫೆಡರರ್‌, ನಡಾಲ್‌ಗೆ ಹೋಲಿಸಿದರೆ ಅತೀಹೆಚ್ಚು ಸಕ್ಷಮತೆ ಕೊರತೆಯಿಂದ ನರಳುತ್ತಿರುವುದು ಜೊಕೋವಿಕ್‌. ಒಂದು ವೇಳೆ ಜೊಕೋ ನಿರೀಕ್ಷೆಯಷ್ಟು ಸಾಧಿಸದಿದ್ದರೆ ಅದಕ್ಕೆ ಏಕೈಕ ಕಾರಣ ದೇಹ ಸ್ಪಂದಿಸದಿರುವುದು ಮಾತ್ರ ಎಂಬುದು ಸ್ಪಷ್ಟ. ಆರಂಭದಲ್ಲಿ ಫೆಡರರ್‌, ನಡಾಲ್‌ ಪೈಪೋಟಿ ಮೇಲೆ ಗ್ರ್ಯಾನ್‌ಸ್ಲ್ಯಾಮ್‌ ಗೆಲ್ಲುತ್ತಿದ್ದಾಗ ಅವರಿಗೆ ಜೊಕೋವಿಕ್‌ ರೂಪದಲ್ಲಿ ಸ್ಪರ್ಧಿಯೊಬ್ಬರು ಹುಟ್ಟಿಕೊಂಡರು. ಈ ಇಬ್ಬರ ಏಕಸ್ವಾಮ್ಯ ಮುರಿದು ಸತತವಾಗಿ ಪ್ರಶಸ್ತಿ ಗೆಲ್ಲುತ್ತ ಹೋದರು. ಅಲ್ಲಿಗೆ ನಡಾಲ್‌, ಫೆಡರರ್‌ ಯುಗಾಂತ್ಯವಾಯಿತು ಎಂದುಕೊಂಡಿದ್ದಾಗ ಜೊಕೋ ಭುಜದ ನೋವಿನ ಸಮಸ್ಯೆಗೆ ತುತ್ತಾಗಿ ಮಂಕಾಗಿದ್ದು ಇತಿಹಾಸ.

 

ಅಭಿ ಸುಳ್ಯ

ಟಾಪ್ ನ್ಯೂಸ್

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

6(1

Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

5

Kundapura: ಬಸ್‌ ತಂಗುದಾಣಗಳೇ ಮಾಯ; ಜನರು ಅಯೋಮಯ!

4

ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್‌

3

Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.