UV Fusion: ಇತಿಹಾಸದಲ್ಲಿ ಮರೆಯಾದ ಭೈರಾದೇವಿಯ ಸಾಮ್ರಾಜ್ಯ
Team Udayavani, Nov 3, 2024, 4:36 PM IST
ಭಟ್ಕಳ… ಭಟ್ಟಾಕಳಂಕನ ನಾಡು. ಒಂದೆಡೆ ಮಲೆನಾಡಿನ ಹಸುರು ಗುಡ್ಡದ ಸಾಲುಗಳು ಮತ್ತೂಂದೆಡೆ ಕರಾವಳಿಯ ಕಡಲ ಭೋರ್ಗರೆತ, ಚರಿತ್ರೆಯ ಪುಟಗಳನ್ನು ತೆರೆದರೆ ಪೋರ್ಚುಗೀಸರ ಕೌರ್ಯದಿಂದ ಕಂಗೆಟ್ಟು ವಲಸೆ ಬಂದ ಅದೆಷ್ಟೋ ನಿರಾಶ್ರಿತ ಸಾರಸ್ವತ ಕುಟುಂಬಗಳಿಗೆ ಆಶ್ರಯ ನೀಡಿದ ತಾಣ. ಆಶ್ರಯದ ಅಭಯ ನೀಡಿದವಳು ಕರುನಾಡಿನ ಕರಿ ಮೆಣಸಿನ ರಾಣಿ ಚೆನ್ನಭೈರಾದೇವಿ. ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು 50ವರ್ಷಗಳ ಕಾಲ, ವಿಜಯನಗರದ ಅರಸರಿಗೆ ವಿಧೇಯಳಾಗಿ ಆಳಿದ ಏಕೈಕ ಮಹಾಮಂಡಳೇಶ್ವರಿ.
ಪೋರ್ಚುಗೀಸರ ದಾಳಿಗಳಿಗೆ ಪ್ರತಿರೋದಿಸಿ ಅವರನ್ನು ತನ್ನ ಷರತ್ತುಗಳನ್ನು ಒಪ್ಪಿಕೊಳ್ಳುವಂತೆ ಬಗ್ಗಿಸಿದ ಛಲಗಾತಿ. ಭಟ್ಕಳ ಗೇರುಸೊಪ್ಪ, ಸಂಗೀತಪುರ ಮುಂತಾದ ಕಡೆಗಳಲ್ಲಿ ಹಲವಾರು ಜಿನಾಲಯಗಳನ್ನು ಕಟ್ಟಿಸಿದ ಜಿನ ಸಾಧ್ವಿ.
ಈಕೆ ಶ್ರೀಮಂತಗೊಳಿಸಿ ಬಿಟ್ಟು ಹೋದ ಈ ಭೂಮಿ ಇಂದಿಗೆ ಬಿಕೋ ಎನ್ನಿಸುವ ಬರಡು. ಇತಿಹಾಸ ಕೇವಲ ಕತೆಯಲ್ಲ ಅದು ಒಂದು ನಾಗರಿಕತೆಯ ಬೆಳವಣಿಗೆಗೆ ಉತ್ತೇಜನ ನೀಡುವ ಬೇರುಗಳು, ಅವುಗಳನ್ನೇ ಕತ್ತರಿಸಿದರೆ ಭವಿಷ್ಯದ ಹೊಸ ಚಿಗುರು ಎಲ್ಲಿಂದ ಪೋಷಣೆ ಪಡೆದಾವು?
ಇಂದಿನ ಯುವ ಜನತೆಗೆ ಭವಿಷ್ಯದ ಹಪಾಹಪಿ. ಚರಿತ್ರೆಯ ಚಿಂತೆಯಿಂದ ಬದಲಾಗುವುದಾದರು ಏನೂ? ಕಂಡಿತಾ ಬದಲಾವಣೆ ಆಗುವುದು. ‘A country that doesn’t know it’s past doesn’t have a future’ ಪ್ರಸಿದ್ಧ ಇತಿಹಾಸಕಾರರಾದ ವಿಕ್ರಂ ಸಂಪತ್ ರವರ ಮಾತು ನೂರಕ್ಕೆ ನೂರರಷ್ಟು ಸತ್ಯ . ನೆನ್ನೆಗಳ ಹೋರಾಟಗಳ ಫಲವೇ ನಮ್ಮ ಇಂದಿನ ಸುಖ. ಇಂದು ಇತಿಹಾಸವಾಗಿರುವ ಅನೇಕ ಸಾಮ್ರಾಜ್ಯಗಳು ಕಲೆ , ಸಂಸ್ಕೃತಿಗಳಿಗೆ ನೀಡಿದ ಕೊಡುಗೆಗಳು, ಪರಕೀಯರ ಆಕ್ರಮಣಕ್ಕೆ ಒಡ್ಡಿದ ಪ್ರತಿರೋಧಗಳ ಭದ್ರ ಬುನಾದಿಯ ಮೇಲೆ ನಿಂತಿರುವುದು ನಮ್ಮ ಇಂದಿನ ನಾಗರೀಕತೆ. ರಾಷ್ಟ್ರೀಯ ಏಕತೆಯು ಸುಣ್ಣ ಬಣ್ಣ ಬಳಿದ, ಬುನಾದಿಯೇ ಇಲ್ಲದ, ತಿರುಚಿದ ಇತಿಹಾಸದ ಗೋಡೆಗಳ ಮೇಲೆ ನಿಲ್ಲಲು ಸಾಧ್ಯವೇ ಇಲ್ಲ.
ತ್ತೀಚಿಗೆ ಭಟ್ಕಳಕ್ಕೆ ಭೇಟಿ ನೀಡಿದಾಗ ಅಲ್ಲಿನ ಸ್ಮಾರಕಗಳ ದುಸ್ಥಿತಿಯನ್ನು ಕಂಡ ಅನಂತರ ಅನ್ನಿಸಿದ್ದು ಅದೆಷ್ಟೋ ಸ್ಮಾರಕಗಳು ಭಟ್ಕಳ ಪೇಟೆಯ ನಡುವೆಯೇ ಇದ್ದಿದ್ದರೂ ಸರಿಯಾದ ನಿರ್ವಹಣೆ ಇಲ್ಲ. ಇನ್ನು ಹಾಡುವಳ್ಳಿಯಲ್ಲಿ ಚೆನ್ನಾಭೈರದೇವಿಯ ಕಾಲದ ಬಸದಿಗಳು ಚಂದ್ರ ಗಿರಿ ಮತ್ತು ಇಂದ್ರ ಗಿರಿಯ ಮೇಲೆ ಇವೆಯೆಂತೆ ಆದರೆ ಹೋಗಲು ದಾರಿ ಇಲ್ಲ, ಕಳೆಗಳಿಂದ ದಾರಿಯೇ ಸಂಪೂರ್ಣ ಮುಚ್ಚಿ ಹೋಗಿದೆ ಆದ ಕಾರಣ ಮೇಲಿನ ಬಸದಿಯ ಚಿಂತೆ ಯಾರಿಗೂ ಇಲ್ಲ.
ಇನ್ನು ಹಲವಾರು ಜೈನ ಬಸದಿಗಳು ಹಾಗೂ ಪ್ರಾಚೀನ ಸ್ಮಾರಕಗಳ ಪರಿಸ್ಥಿತಿ ಚಿಂತಾಜನಕ.ಇದನ್ನು ಉದ್ಧರಿಸುವ ಹೊಣೆ ಯಾರದ್ದೂ ? ಪ್ರವಾಸೋದ್ಯಮ ಪ್ರಗತಿ ಕಂಡರೆ ಅದು ಲಾಭವಲ್ಲವೇ?ಯಾಕೆ ಅತ್ತ ಕಡೆ ಇಷ್ಟು ನಿರ್ಲಕ್ಷ್ಯ ತಿಳಿದಿಲ್ಲ.
ನಮ್ಮ ಪ್ರಾಂತ್ಯದ ಇತಿಹಾಸವನ್ನು, ಸಂಸ್ಕೃತಿ, ಆಚರಣೆಗಳನ್ನು ಮೊದಲು ಅರಿಯೋಣ ಅನಂತರ ಇನ್ನೊಬ್ಬರಿಗೆ ತಿಳಿಸೋಣ ಆಗಲಾದರು ಅನ್ಯ ಸಂಸ್ಕೃತಿಗಳ ಅಂಧಾನುಕರಣೆ ನಿಂತೀತು, ತವರು ನೆಲದ ಮಣ್ಣಿನ ಪ್ರೀತಿ ನಮ್ಮನು ಸೆಳೆದೀತು ಪ್ರಾಜ್ಞದ ಹೊಸ ದಿಗಂತದತ್ತ.
-ಸುನಿಧಿ ಹೆಬ್ಟಾರ್, ಭಂಡಾರ್ಕಾರ್ಸ್ ಕಾಲೇಜು , ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.