Uv Fusion: ಬೃಹತ್ ಬ್ರಹ್ಮಾಂಡ
Team Udayavani, Oct 2, 2023, 11:58 AM IST
ಮನುಕುಲದ ಜ್ಞಾನಕ್ಕೊಂದು ಸವಾಲು ಅಗಣ್ಯ ಬ್ರಹ್ಮಾಂಡ! ಭಾರತವು ತನ್ನ ಮೊದಲ ಉಪಗ್ರಹ ಆರ್ಯಭಟವನ್ನು 1975ರಲ್ಲಿ ರಷ್ಯಾದ ರಾಕೆಟ್‌ನಿಂದ ಉಡಾವಣೆ ಮಾಡುವಾಗ ಜಗತ್ತಿನ ಯಾವ ವ್ಯಕ್ತಿಗೂ ನಂಬಿಕೆ ಇರಲಿಲ್ಲ. ಭಾರತವು ತನ್ನದೇ ಉಡಾವಣೆ ವಾಹನದಿಂದ ಚಂದ್ರನ ದಕ್ಷಿಣ ಭಾಗದಲ್ಲಿ ತನ್ನ ನೌಕೆಯನ್ನು ಇಳಿಸುತ್ತದೆ ಎಂದು. ಚಂದ್ರನಲ್ಲಿಗೆ ತಲುಪಿದ ನಾಲ್ಕನೇ ಹಾಗೂ ದಕ್ಷಿಣ ಭಾಗದಲ್ಲಿ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ. ಭಾರತವು ಸೇರಿದಂತೆ ಜಗತ್ತಿನ ಬಲಾಡ್ಯ ದೇಶಗಳು ಕೇವಲ ಚಂದ್ರನಲ್ಲಿಗೆ ತಲುಪಲು ಹರಸಾಹಸ ಪಡುತ್ತಿರಬೇಕಾದರೆ, ನಮ್ಮೆಲ್ಲರಿಗೆ ಕಾಡುವ ಪ್ರಶ್ನೆ ಹೌ ಬಿಗ್ ದ ಯುನಿವರ್ಸ್ ವಾಸ್?
ನಮ್ಮೆಲ್ಲರಿಗೂ ಚಿಕ್ಕವಯಸ್ಸಿನಿಂದಲೂ ನಕ್ಷತ್ರಗಳು ಕುತೂಹಲ ಮೂಡಿಸುವುದಂತು ಸಹಜ. ಆದರೆ ನಮಗೆ ಗೊತ್ತು ಸೂರ್ಯನು ಒಂದು ನಕ್ಷತ್ರವೇ. ಆದರೆ ಅವನು ನಮ್ಮ ಹತ್ತಿರ ಇದ್ದಾನೆ ಅಷ್ಟೇ. ತುಂಬಾ ಹತ್ತಿರ ಏನಲ್ಲ 15 ಕೋಟಿ ಕಿಲೋ ಮೀಟರ್. ಆದರೆ ಸೂರ್ಯನ ಬೆಳಕು ನಮಗೆ ತಲುಪಬೇಕಾದರೆ ಸುಮಾರು ಎಂಟು ನಿಮಿಷಕ್ಕಿಂತ ಜಾಸ್ತಿ ಸಮಯ ಬೇಕಾಗುತ್ತೆ. ಹಾಗಂತ ಬೆಳಕೇನು ನಿಧಾನಕ್ಕೆ ಬರಲ್ಲ ಅದರ ವೇಗ ಸೆಕೆಂಡಿಗೆ ಮೂರು ಲಕ್ಷ ಕಿಲೋ ಮೀಟರ್.
ನಮ್ಮ ಬ್ರಹ್ಮಾಂಡ ಎಷ್ಟು ದೊಡ್ಡದು ಅನ್ನೋ ಬಗ್ಗೆ ಲೆಕ್ಕ ಹಾಕೋಣ ಬನ್ನಿ. ಇದಕ್ಕೆ ಕಿಲೋ ಮೀಟರ್ ಅಳತೆ ಸಾಕಾಗೋಲ್ಲ. ಜ್ಯೋತಿರ್ ವರ್ಷ ಅನ್ನುವ ಮಾನದಂಡವನ್ನು ಬಳಸುತ್ತಾರೆ. ಒಂದು ಜ್ಯೋತಿರ್ ವರ್ಷ ಅಂದರೆ ಬೆಳಕು ತನ್ನ ಸೆಕೆಂಡಿಗೆ ಮೂರು ಲಕ್ಷ ಕಿ.ಲೋ.ಮೀಟರ್ ವೇಗದಲ್ಲಿ, ಒಂದು ವರ್ಷದ ಅವಧಿಯಲ್ಲಿ ಚಲಿಸುವ ದೂರ.
ಭೂಮಿ ಸೂರ್ಯನನ್ನು ಕೇಂದ್ರವಾಗಿಟ್ಟುಕೊಂಡು ಗುರುತ್ವಾಕರ್ಷಣೆ ಆಧಾರದ ಮೇಲೆ ಸುತ್ತುತ್ತಾ ಇರುತ್ತೆ. ಸೂರ್ಯ ಭೂಮಿಗಿಂತ 109 ಪಟ್ಟು ದೊಡ್ಡದು. ಸೂರ್ಯ ನಮ್ಮ ಮಿಲ್ಕಿವೇ ಗ್ಯಾಲಕ್ಸಿ ಗೆ ಒಂದು ಸಣ್ಣ ನಕ್ಷತ್ರ ಅಷ್ಟೇ.
ಮಿಲ್ಕಿ ವೇ ಗ್ಯಾಲಕ್ಸಿ ಎಷ್ಟು ದೊಡ್ಡದು ಗೊತ್ತಾ?
ಈ ನಕ್ಷತ್ರ ಪುಂಜದಲ್ಲಿ ನಮ್ಮ ಸೂರ್ಯನಂತಹ 100ರಿಂದ 400 ಮಿಲಿಯನ್ ನಕ್ಷತ್ರಗಳು ಇದ್ದಾವೆ. ಮಿಲ್ಕಿ ವೇ ಗ್ಯಾಲಕ್ಸಿಯ ಒಂದು ಬದಿಯಿಂದ ಮತ್ತೂಂದು ಬದಿಯ ಉದ್ದ ಒಂದು ಲಕ್ಷ ಜ್ಯೋತಿರ್ ವರ್ಷಗಳು. ಈ ರೀತಿಯ 54 ಗ್ಯಾಲಕ್ಸಿಗಳ ಗುತ್ಛವನ್ನು ಲೋಕಲ್ ಗ್ರೂಪ್ ಆಫ್ ಗ್ಯಾಲಕ್ಸಿ. ಲೋಕಲ್ ಗ್ರೂಪ್ ಆಫ್ ಗ್ಯಾಲಕ್ಸಿ ಕೂಡ ವರ್ಗು ಸೂಪರ್ ಕ್ಲಸ್ಟರ್ ಅನ್ನೋ ಭಾಗದ ಒಂದು ಸಣ್ಣ ಭಾಗ ಅಷ್ಟೇ. ವರ್ಗು ಸೂಪರ್ ಕ್ಲಸ್ಟರ್ ಒಂದು ತುದಿಯಿಂದ ಇನ್ನೊಂದು ತುದಿಯ ಉದ್ದ 110 ಮಿಲಿಯನ್ ಜ್ಯೋತಿರ್ ವರ್ಷಗಳು.
ಈ ವರ್ಗು ಸೂಪರ್ ಕ್ಲಸ್ಟರ್ ಕೂಡ ಗ್ರೇಟ್ ಅನಿಮಾಕಿಯಾ ಸೂಪರ್ ಕ್ಲಸ್ಟರ್‌ನ ಒಂದು ಧೂಳಿಗೆ ಸಮ. ಈ ಸೂಪರ್ ಕ್ಲಸ್ಟರ್‌ನ ಒಂದು ತುದಿಯಿಂದ ಮತ್ತೂಂದು ತುದಿಯ ಉದ್ದ 520 ಮಿಲಿಯನ್ ಜ್ಯೋತಿರ್ ವರ್ಷಗಳು.
ದಿ ಗ್ರೇಟರ್ ಅನಿಮಾಕಿಯಾ ಸೂಪರ್ ಕ್ಲಸ್ಟರ್ ಕೂಡ ಅಬ್ಸರಬಲ್ ಯುನಿವರ್ಸ್‌ನ ಒಂದು ಚಿಕ್ಕ ಅಣುವಿನಂತಹ ಭಾಗ. ಈ ಅಬ್ಸರಬಲ್ ಯೂನಿವರ್ಸನವರಗೆ ಮಾತ್ರ ಮಾನವ ಜ್ಞಾನಕ್ಕೆ ನೀಲುಕಿದ ಒಂದು ಸಣ್ಣ ಭಾಗ ಅಷ್ಟೇ. ಈ ಅಬ್ಸರಬಲ್ ಯೂನಿವರ್ಸ್ ನಲ್ಲಿ ಒಂದರಲ್ಲಿ ಸುಮಾರು ಎರಡು ಟ್ರಿಲಿಯನ್ ಗ್ಯಾಲಕ್ಸಿಗಳು ಇರಬಹುದೆಂದು ಅಂದಾಜಿಸಲಾಗಿದೆ.
ಈ ಅಬ್ಸರಬಲ್ ಯೂನಿವರ್ಸ್‌ನ ಅಗಲ 93 ಬಿಲಿಯನ್ ಜ್ಯೋತಿರ್ ವರ್ಷ. ಇದರರ್ಥ ಇದರ ಆಚೆಗಿನ ಬ್ರಹ್ಮಾಂಡದ ಬೆಳಕು ಇದುವರೆಗೆ ನಮ್ಮನ್ನು ಬಂದು ತಲುಪೆ ಇಲ್ಲ.
ಇಂತಹ ಬ್ರಹ್ಮಾಂಡದಲ್ಲಿ ಬದುಕಿರುವ ನಾವು ಸಣ್ಣ ಧೂಳಿಗೂ ಸಮವಾಗಲಾರವು. ಆದರೂ ನಾವು ಜಾತಿ, ಧರ್ಮ ಮುಂತಾದ ವಿಷಯಗಳನ್ನು ಹೊತ್ತು ಪ್ರಪಂಚಕ್ಕೆ ನಾವೇ ಹೆಚ್ಚು ಎಂದು ಬೀಗುವುದನ್ನು ಕಂಡರೆ ಹಾಸ್ಯಸ್ಪದ ಎನಿಸುತ್ತದೆ.
-ಭವಾನಿ ಎಸ್.
ಶಂಕರಘಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.