ಯಶವಂತ ಚಿತ್ತಾಲರ ʼಮೂರು ದಾರಿಗಳುʼ ಪುಸ್ತಕ ಪರಿಚಯ
Team Udayavani, Jul 24, 2020, 9:00 AM IST
ಸಾಣೆಕಟ್ಟೆಯಿಂದ ಶುರುವಾಗುವ ಕಾದಂಬರಿ, ನಿರ್ಮಲೆಯನ್ನು ಸ್ಟುಡಿಯೋದ ರಂಗಪ್ಪನೊಟ್ಟಿಗೆ ನೋಡಿದ ಮಾಧವನಿಂದ ಹರಡಿದ ಸುದ್ದಿ ಊರಿನಲ್ಲೆಲ್ಲ ಹಬ್ಬಿ ಅದರ ಆಜುಬಾಜುಗಳಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ.
ಜನರ ದೃಷ್ಟಿಯಲ್ಲಿ ದಾರಿ ತಪ್ಪಿರಬಹುದಾದ ಮಗಳ ಮದುವೆಗಾಗಿ ಬಡಿದಾಡುವ ವಿಶ್ವನಾಥರು, ಹರಡಿದ ಸುದ್ದಿ ಊಹಾಪೋಹವೋ? ನಿಜ ಸಂಗತಿಯೋ? ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದೇ ವಾಸ್ತವವಾಗಿ ಚಿಂತಿಸುವ ವಾಸುದೇವ, ಬಾಯಿಚಪಲ ತೀರಿಸಿಕೊಳ್ಳಲೆಂದೇ ಬದುಕಿರುವ ತುಂಗಕ್ಕ, ನಾರಾಯಣ, ಪುರುಷೋತ್ತಮ, ರಾಮನಾಥ ಮುಂತಾದವರು, ನಲ್ಮೆಯ ಜೀವವೊಂದಕ್ಕೆ ಏನೇ ಆದರೂ ಒಳ್ಳೆಯದಾಗಲಿ ಎನ್ನುವ ಚಂದ್ರ ಭಾಗಕ್ಕ, ದೇವಪ್ಪ ಮಾಸ್ತರ, ರಾಧಮ್ಮ, ಅನಸೂಯಾ ಮುಂತಾದವರು.
ರಕ್ತಗತವಾಗಿ ಬಂದ ಕಾಮವನ್ನು ಪೋಷಿಸುವ ರಂಗಪ್ಪ, ತನ್ನೊಳಗಿನ ಕೋಪ ಹಾಗೂ ಸಮಾಜದಿಂದ ಬಂದ ಈಷ್ಯೆìಯ ಹೊಡೆತಕ್ಕೆ, ವಾಸುದೇವನ ಪ್ರೀತಿ, ವಿಶ್ವನಾಥರ ಕಾಳಜಿಯನ್ನು ಗುರುತಿಸಲಾಗದೇ ಸೋಲುವ ನಿರ್ಮಲೆ.
ಇವರೆಲ್ಲರ ಮೂಲಕ ಮನುಷ್ಯ ಸಹಜವಾದ ಕಾಮ, ಕೋಪ, ಈಷ್ಯೆìಗಳೆಲ್ಲ ಮನುಷ್ಯನ ಬದುಕಿನಲ್ಲಿ ಬೀರುವ ಪ್ರಭಾವವನ್ನು ಅಚ್ಚು ಕಟ್ಟಾಗಿ, ಸಶಕ್ತವಾಗಿ, ಅಲ್ಲಿನ ನೆಲದ ಭಾಷಾ ಶೈಲಿಯಲ್ಲಿ ಯಶವಂತ ಚಿತ್ತಾಲರು “ಮೂರು ದಾರಿಗಳು’ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.
ಕಥೆಯು ಹನೇಹಳ್ಳಿ, ಕಾರವಾರ, ಕುಮಟಾ ಈ ಮೂರು ದಾರಿಗಳಲ್ಲಿ ಸಾಗುತ್ತದೆ.
ಕರಾವಳಿ ಭಾಗದ ಲೇಖಕರು ಸಮುದ್ರದ ಅಲೆಗಳು ದಡ ಮುಟ್ಟಿ ವಾಪಾಸು ಹೋಗುವಂತೆ ಕಥೆಯಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ದಾಟುವಾಗ ಹಿಂದಕ್ಕೆಳೆದು ಮತ್ತೆ ಮೂಲ ಕಥೆಗೆ ಬರುವುದು ಅಂದರೆ, ಒಂದೇ ಸಮಯದಲ್ಲಿ ಎರಡೂ ಊರಲ್ಲಿ ನಡೆದ ಘಟನೆಗಳನ್ನು ಒಂದಾದರೊಂದರ ಮೇಲೆ ಹೇಳುವಲ್ಲಿ ಎಡವುದರಲ್ಲಿನ ಅಪಾಯದಿಂದ ಸಂಪೂರ್ಣ ಮುಕ್ತರಾಗಿ¨ªಾರೆ. ಪತ್ರಗಳನ್ನು ಒಂದು ಊರಿನಿಂದ ಇನ್ನೊಂದು ಊರಿಗೆ ತಲುಪಿಸುವಲ್ಲಿಯೂ ಅಷ್ಟೇ ಎಚ್ಚರದ ಹೆಜ್ಜೆಗಳಿವೆ.
ವಾಸುದೇವನ ಮೂಲಕ, ಪ್ರತಿಯೊಬ್ಬರೂ ತಮ್ಮ ತಮ್ಮ ಸುಖದ ದಾರಿಗಳನ್ನು ತಾವೇ ಕಂಡುಕೊಳ್ಳಬೇಕು. ನಾನು ಎಂ.ಎಸ್ಸಿ.ಕಲಿಯಬೇಕು; ಪಿಎಚ್.ಡಿ. ಮಾಡಬೇಕು; ಅಮೆರಿಕಕ್ಕೂ ಹೋಗಬೇಕು. ಯಾಕೆ? ಇವೇ ಸುಖದಾಯಕವೆಂದಲ್ಲ. ಅವುಗಳಿಂದ ಬರುವ ಪ್ರಸಿದ್ಧಿಯಿಂದ ಜನರಲ್ಲಿ ನಾನು ಸುಖೀ ಎಂಬ ಭ್ರಮೆ ಹುಟ್ಟಿ, “ನೀನು ಸುಖೀಯಪ್ಪಾ’ ಎಂದು ಅವರ ಬಾಯಿಂದ ಕೇಳಬೇಕು.
“ಉಳಿದವರ’ ಮಹತ್ವ ನಮಗೆ ಇದು. ಸಮಾಜ ಪ್ರತಿಷ್ಠೆ, ಪ್ರಸಿದ್ಧಿಯ ಅರ್ಥ ಇದು. ನನಗೆ ಇಂತಹ ಭ್ರಮೆಯ ಮೇಲೆ ನಿಂತ ಸುಖದ ಹುಚ್ಚು ಬೇಡ. ನನ್ನ ಸುಖಕ್ಕೆ ಆಂತರ್ಯದ ಸಾಕ್ಷಿಯೊಂದೇ ಸಾಕು ಎಂದು ಹೇಳಿಸಿ ನಾವು ಯಾವ ರೀತಿಯ ಸುಖೀಗಳು ಎನ್ನುವ ಎತ್ತರದ ಪ್ರಶ್ನೆಯ ಮರದ ಮೇಲೆ ನಮ್ಮನ್ನು ಇಳಿಸುತ್ತಾರೆ. ಬೇಡವಾಗಿದ್ದನ್ನು ಪದೇ ಪದೆ ಹೇಳಿ ದಾಗ ಕುತೂಹಲಕ್ಕಾದರೂ ಅದು ಹೇಗೆ ಬೇಕೆನಿಸು ತ್ತದೆ!?ಅನ್ನುವುದಕ್ಕೆ ನಿರ್ಮಲೆ ಇಲ್ಲಿ ನಿದರ್ಶನ.
ಹೆಜ್ಜೆ ಮೂಡದ ಹಾದಿಯಲ್ಲಿನ ಮೌನಿ ನಿರ್ಮಲೆ, ತಥಾಸ್ತು ಎಂದ ಪ್ರೀತಿಯಲ್ಲಿ ಮುಖ್ಯವಾಹಿನಿಗೆ ಬಂದು, ಸಿಡಿಮದ್ದಿನ ವಾಸನೆಯಲ್ಲಿ ಸ್ವ ಕೋಪದಿಂದ, ಸಮಾಜದ ಮತುಗಳಿಂದ ಉರಿದು ಸಿಡಿಮ¨ªಾಗಿಯೇ ಸುಟ್ಟುಹೋಗುತ್ತಾಳೆ. ಉಪಸಂಹಾರವನ್ನು ಮಂಜು ಮಂಜಾದ ಕಣ್ಣಿನಲ್ಲಿಯೇ ಓದುವಂತೆ ಯಶವಂತರು ಮಾಡಿದ್ದಾರೆ. ಕೊನೆಯಲ್ಲಿ ವಿಶ್ವನಾಥರು ತಮ್ಮ ಮಗಳನ್ನು ಅಪವಾದದಿಂದ ಪಾರು ಮಾಡಲು ನಡೆಸುವ ಹೋರಾಟದ ಮೂಲಕ ಅಪ್ಪನ ಸ್ಥಾನದಲ್ಲಿ ನಿಂತವನ ಗುಣ, ಘನತೆ, ಕರ್ತವ್ಯಗಳನ್ನು ಹೇಳುತ್ತಾ ಕಥೆಯಾದಳು ಹುಡುಗಿಗೆ ಮುನ್ನುಡಿ ಬರೆಯುತ್ತಾರೆ.
-ಚಿದಂಬರ ಕುಲಕರ್ಣಿ, ಕೆ.ಇ.ಬೋರ್ಡ್ ಪ್ರಥಮ ದರ್ಜೆ ಕಾಲೇಜು, ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.