Uv Fusion: ಬಸ್ ಪ್ರಯಾಣ
Team Udayavani, Dec 23, 2023, 7:15 AM IST
ಪ್ರಯಾಣವೇ ಒಂದು ಖುಷಿ ಕೊಡುವ ಸಂಗತಿ. ನಮ್ಮ ಮನಸ್ಸಿನ ದುಗುಡಗಳನ್ನು ಕಳೆಯಲು ಸಹಾಯ ಮಾಡುವ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ. ಈಗ ನಾನು ನಿಮಗೆ ತಿಳಿಯ ಬಯಸುವುದು ಏನೆಂದರೆ, ಬಸ್‌ನ ಪ್ರಯಾಣದ ಬಗ್ಗೆ. ಪ್ರತಿಯೊಬ್ಬ ವ್ಯಕ್ತಿ ಕೂಡ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಬಸ್ ಪ್ರಯಾಣ ಮಾಡಿರುತ್ತಾರೆ. ಬಸ್‌ನ ಪ್ರಯಾಣ ಕೆಲವೊಂದು ಬಾರಿ ಖುಷಿ ನೀಡಬಹುದು, ಇನ್ನೊಂದು ಬಾರಿ ಕಷ್ಟವನ್ನು ನೀಡಬಹುದು.
ಬಸ್‌ನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಸೀಟು ಖಾಲಿ ಇದ್ದರೆ ಒಂದು ಖುಷಿ, ಅದರಲ್ಲಿಯೂ ಕೂಡ ಬಸ್‌ನ ವಿಂಡೋ ಸೀಟ್ ಸಿಕ್ಕರೆ, ಬಾಹ್ಯ ಪರಿಸರವನ್ನು ನೋಡುವ ಹರುಷವೇ ಬೇರೆ.
ಬಸ್ ಪ್ರಯಾಣವು ಖುಷಿ ನೀಡುವುದು ಮಾತ್ರವಲ್ಲದೆ, ಹಲವಾರು ಜೀವನದ ಮೌಲ್ಯಗಳನ್ನು ನೀಡುತ್ತದೆ. ಬಸ್‌ನಲ್ಲಿ ಹಿರಿಯರು, ಅಂಗವಿಕಲರು, ಗರ್ಭಿಣಿಯರು ಹಾಗೂ ಇತರ ನಿಶಕ್ತರು ಬಂದಾಗ ನಾವು ಕುಳಿತುಕೊಳ್ಳುವ ಸ್ಥಳವನ್ನು ಬಿಟ್ಟು ಕೊಟ್ಟು ಮಾನವೀಯತೆ ಎಂಬ ಮೌಲ್ಯವನ್ನು ಹೇಳಿದರೆ, ಚಾಲಕನ ಸಮಯ ಪ್ರಜ್ಞೆ, ಸರಿಯಾದ ಸಮಯಕ್ಕೆ ನಿಗದಿತವಾದ ಸ್ಥಳಕ್ಕೆ ತಲುಪುವಂತೆ ಮಾಡುತ್ತದೆ.
ಇನ್ನು ಬಸ್‌ನಲ್ಲಿ ಕೆಲವೊಂದು ಬಾರಿ ನಗೆಯನ್ನು ಉಂಟುಮಾಡುವ ಸನ್ನಿವೇಶವನ್ನು ನೋಡಬಹುದು. ಕೆಲವೊಂದು ಬಾರಿ ಕುಡುಕ ಒಬ್ಬ ಬಸ್ ಹತ್ತಿದಾಗ ಅವನ ಸಂವಹನ ಪ್ರಕ್ರಿಯೆಯು ಬಸ್‌ನ ನಿರ್ವಾಹಕನಿಗೆ ಕಷ್ಟ ತಂದರೂ, ಪ್ರಯಾಣಿಕರಿಗೆ ನಗುವನ್ನು ಉಂಟುಮಾಡುತ್ತದೆ. ಇದು ಮಾತ್ರವಲ್ಲ, ಬಸ್‌ನಲ್ಲಿ ಕೆಲವೊಂದು ಬಾರಿ ಚಿಕ್ಕ ಮಕ್ಕಳು ಅಳುತ್ತಿರುತ್ತಾರೆ.
ಆಗ ಎಲ್ಲ ಸಹ ಪ್ರಯಾಣಿಕರ ಗಮನವನ್ನು ಆ ಮಗುವಿನ ಕಡೆ ಕೊಂಡುಯ್ಯುತ್ತದೆ. ತಾಯಿ ಮಗುವನ್ನು ಸಮಾಧಾನ ಮಾಡಲು, ಪ್ರಯತ್ನಿಸುತ್ತಿರುವಾಗ ಬಸ್‌ನ ನಿರ್ವಾಹಕ ಮಗುವನ್ನು ನಗುವಂತೆ ಮಾಡುವ ಪ್ರಯತ್ನಗಳೇ, ಸಣ್ಣ ಮನಸ್ಸಿಗೆ ಖುಷಿಯನ್ನು ನೀಡುತ್ತದೆ.
ಬಸ್‌ನಲ್ಲಿ ಹಲವಾರು ಬಾರಿ ನಿಗದಿತ ಸಮಯವನ್ನು, ತಲುಪಲು ವಿಳಂಬವಾದಾಗ ಬಸ್ಸಿನ ಚಾಲಕರು,ನಿರ್ವಾಹಕರು ನಡುವಿನ ಕಲಹವನ್ನು ನೋಡಬಹುದು ಆಗಿದೆ. ಹಲವಾರು ಪ್ರದೇಶಗಳಿಗೆ ಹೊಸ ಪ್ರಯಾಣಿಕರು ಬಂದಾಗ ಅವರಿಗೆ ನಿರ್ವಾಹಕ ಇಳಿಯುವ ಸ್ಥಳ ಬಂದಾಗ ತಿಳಿಸುತ್ತಾರೆ.
ನಾವು ದಿನ ಒಂದೇ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರೆ,ಟಿಕೆಟಿನಲ್ಲಿ ವಿನಾಯಿತಿ ಹಾಗೂ ಒಂದು ದಿನ ಬರಲಿಲ್ಲವಾದರೆ ವಿಚಾರಿಸುವ ಕಾಳಜಿಯನ್ನು ಬಸ್ ನಿರ್ವಾಹಕರಲ್ಲಿ ನೋಡಬಹುದಾಗಿದೆ.
ಬಸ್ ಒಂದು ವಾಹನವಾಗಿದು, ಕೆಲವೊಂದು ಬಾರಿ ಬಸ್ಸಿನಲ್ಲಿ ಅಧಿಕ ಪ್ರಯಾಣಿಕರು ಆಗಿ ಫುಟ್ ಬೋರ್ಡ್ ನಲ್ಲಿ ಈ ಹಿಂದೆ ಸಂಚರಿಸುತ್ತಿದ್ದರು. ಇದರಿಂದ ಹಲವಾರು ಪ್ರಯಾಣಿಕರು ತಮ್ಮ ಜೀವವನ್ನು ಮತ್ತು ಅಂಗಗಳ ಹಾನಿಯನ್ನು ಅನುಭವಿಸಿದ ಪ್ರಕರಣಗಳನ್ನು ನೋಡಿದ್ದೇವೆ. ಅದಕ್ಕಾಗಿ ಹಲವಾರು ಸಂಘ ಸಂಸ್ಥೆಗಳು ಅರಿವನ್ನು ಮೂಡಿಸಿ,ಇದು ಈಗ ಕಡಿಮೆಯಾಗಿದೆ ಆದರೆ ಸಂಪೂರ್ಣವಾಗಿ ನಿಂತಿಲ್ಲ. ಬಸ್‌ನ ಚಾಲಕನ ಸಮಯ ಪ್ರಜ್ಞೆ ಹಲವಾರು ಅಪಘಾತಗಳನ್ನು ನಿಲ್ಲಿಸಿದ ನಿದರ್ಶನಗಳನ್ನು ನಾವು ನೋಡಬಹುದು.
ಒಮ್ಮೆ ಚಾಲಕ ತನ್ನ ಪ್ರಾಣ ಮಾತ್ರವಲ್ಲದೇ, ಬಸ್‌ನ ಪ್ರಯಾಣಿಕರ ಜೀವವನ್ನು ಸುರಕ್ಷಿತವಾಗಿ ಇರಿಸುವ ಕೆಲಸವನ್ನು ಮಾಡುತ್ತಾರೆ,ಆದರೆ ಕೆಲವೊಂದು ಬಾರಿ ಎಡವಿದ್ದುಂಟು. ಈಗ ಮಹಿಳೆಯರಿಗೆ ಶಕ್ತಿ ಯೋಜನೆ ಮೂಲಕ ಉಚಿತ ಪ್ರಯಾಣವನ್ನು ನೀಡಿದ್ದಾರೆ.
ಈ ಯೋಜನೆ ಉತ್ತಮವಾಗಿದ್ದು, ಇದರಲ್ಲಿ ಒಂದು ವರ್ಗಕ್ಕೆ ನಷ್ಟವಾದರೆ, ಇನ್ನೊಂದು ವರ್ಗಕ್ಕೆ ಲಾಭವಾಗಿದೆ. ನನ್ನ ಆಶಯ ಇಷ್ಟೇ ಬಸ್‌ಗಳು ಸರಕಾರಿಯಾಗಿರಲಿ, ಅಥವಾ ಖಾಸಗಿ ಆಗಿರಲಿ ನಮ್ಮ ಜೀವನದ ಹಲವಾರು ಘಟ್ಟದಲ್ಲಿ ಜೀವನದ ಮೌಲ್ಯವನ್ನು ಎತ್ತಿ ಹಿಡಿಯುವ ಸಾಧನವಾಗಿದೆ.
ದೇವಿಶ್ರೀ ಶಂಕರಪುರ
ಆಳ್ವಾಸ್ ಕಾಲೇಜು ಮೂಡುಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.