UV Fusion: ಬಾಂಧವ್ಯ ಬೆಸೆಯುವ ಹಬ್ಬಗಳ ಆಚರಣೆ
Team Udayavani, Nov 30, 2024, 4:07 PM IST
ನಮ್ಮ ಎಲ್ಲ ಹಿಂದೂ ಹಬ್ಬಗಳಿಗೂ ಒಂದಲ್ಲ ಒಂದು ಅರ್ಥ ಇದ್ದೆ ಇರುತ್ತೆ, ಪ್ರತಿ ಮಾಸಕ್ಕೂ ಅದಕ್ಕೆ ತಕ್ಕಂತೆ ಅನುಗುಣವಾದ ಹಬ್ಬ. ಚೈತ್ರಮಾಸದ ಆರಂಭದಲ್ಲೇ ಯುಗಾದಿ, ಶ್ರಾವಣ ಮಾಸದ ಗಣೇಶ ಚತುರ್ಥಿ, ಭದ್ರ ಕಳೆದು ಅಶ್ವಿನಾ ಮಾಸದಲ್ಲಿ ನವರಾತ್ರಿ ಪ್ರಾರಂಭವಾಗುತ್ತದೆ.ಅನಂತರ ದೀಪಾವಳಿ, ಮಹಾಶಿವರಾತ್ರಿ.
ಹಬ್ಬ ಅಂದರೆ ಸಡಗರ ಸಂಭ್ರಮ ಎಲ್ಲ ಹಬ್ಬಕ್ಕಿಂತ ಊರಹಬ್ಬ ವಿಶೇಷ, ಪ್ರತಿಯೊಂದು ಹಳ್ಳಿಯೂ ತಮ್ಮದೇ ಆದ ಆಚರಣೆಯನ್ನ ಅನುಸರಿಸುತ್ತದೆ. ಅದೆಲ್ಲಕ್ಕಿಂತ ಜಾಸ್ತಿ ಮನೆ ತುಂಬಾ ಸೇರಿರೋ ನೆಂಟರು ಎಲ್ಲೋ ಕೆಲಸ ಮಾಡ್ತಿರೋ ಮಗ ಮನೆಗೆ ಬಂದಿದ್ದಾನೆ. ಎಲ್ಲೋ ಹಾಸ್ಟೆಲ್‌ನಲ್ಲಿ ಓದ್ತಾ ಇರೋ ಮಗಳು ಮನೆಗೆ ಬಂದಿದ್ದಾಳೆ. ಅದನ್ನ ನೋಡಿ ಅಮ್ಮ ಅಪ್ಪ -ಅಜ್ಜಿ ತಾತ ನಮ್ಮ ಕಣ್ಣ ಮುಂದೆ ಬೆಳದ ಮಗು ಈಗ ತನ್ನದೇ ಜವಾಬ್ದಾರಿ ಹೊತ್ತು ಪಟ್ಟಣದಲ್ಲಿ ಕಷ್ಟ ಪಡುತ್ತಾ ಇದೆ ಅಂತ ತಮ್ಮೊಳಗೆ ಗೊಂದಲ ಪಡ್ತಾರೆ. ಹಬ್ಬ ಅಂದ್ರೆನೇ ಹಾಗೆ, ಎಲ್ಲ ಭಾವನೆಗಳ ಒಡನಾಟ. ಪ್ರತಿ ಹಬ್ಬದ ನೆನಪು ಬೇರೆ ಬೇರೆ ಗೌರಿ ಗಣೇಶ ಹಬ್ಬದಲ್ಲಿ ಮನೆಯಲ್ಲಿ, ನಮ್ಮ ಏರಿಯಾದಲ್ಲಿ ಕೂರಿಸಿರೋ ಗಣೇಶ ಇರಬಹುದು. ದೀಪಾವಳಿಯಲ್ಲಿ ಪಟಾಕಿ ಇರಬಹುದು, ವರಮಹಾಲಕ್ಷ್ಮೀ ಹಬ್ಬದ ಅಲಂಕಾರ ಇರಬಹುದು, ಹೇಳ್ತಾ ಹೋದ್ರೆ ಎಲ್ಲ ಹಬ್ಬಕ್ಕೂ ಅದರದ್ದೇ ಆದ ಸವಿನೆನಪುಗಳು.
ಈಗಿನ ಹಬ್ಬ ಎಷ್ಟೇ ಫ್ಯಾನ್ಸಿ ಆಗಿದ್ದರೂ ಮನೆಯವರೆಲ್ಲ ಒಟ್ಟಿಗೆ ಹೋಗಿ ಹಬ್ಬಕ್ಕೆ ಹೊಸ ಬಟ್ಟೆ ತಂದು, ಅದನ್ನ ಮರುದಿನ ಧರಿಸಿ ಮನೆಯಲ್ಲ ಓಡಾಡೋದೇ ದೊಡ್ಡ ಸಂಭ್ರಮ. ಮನೆ ಮಂದಿಯೆಲ್ಲ ಒಟ್ಟಾರೆ ಅಡುಗೆ ಮನೆಗೆ ಸೇರಿ ಹಬ್ಬದ ಅಡುಗೆ ತಯಾರಿ ಮಾಡೋದು.
ಮತ್ತೆ ಅದನ್ನ ಒಟ್ಟಿಗೆ ಸೇರಿ ತಿಂದು ಹಬ್ಬ ಆಚರಣೆ ಮಾಡೋದು ಇವಾಗ ಇದನ್ನೆಲ್ಲ ವಿಶೇಷ ಎನ್ನಬಹುದು ಆದರೆ ಒಟ್ಟು ಕುಟುಂಬದಲ್ಲಿ ಇದು ದಿನಚರಿಯೇ ಆಗಿರುತ್ತದೆ. ಕೆಲವರಿಗೆ ಹಬ್ಬ ಆಚರಣೆ ಅಷ್ಟೇ ಇರಬಹುದು, ಇನ್ನು ಕೆಲವರಿಗೆ ನೆನಪಿಟ್ಟಿಕೊಳ್ಳುವಂತಹ ಬಾಲ್ಯದ ನೆನಪುಗಳಿರಬಹುದು. ಈಗ ಅದನ್ನ ತಮ್ಮ ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾ ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಅನ್ನೋ ಡೈಲಾಗ್ ಹೊಡೀತಾರೆ.
ನನ್ನ ಪ್ರಕಾರ ಹಬ್ಬ ಭಾವನೆಗಳನ್ನ ಅಂಚುವಂತದ್ದು, ಭಾವನೆಗಳನ್ನ ಸಂಭ್ರಮಿಸೋದು. ಈಗಿನ ಕಾಲದಲ್ಲಿ ಭಾವನೆಗಳಿಗೆ ಬೆಲೆ ಇಲ್ಲದಿರಬಹುದು ಆದರೆ ಸಂಪ್ರದಾಯ ಪದ್ಧತಿಗೆ ತುಂಬಾ ಬೆಲೆ ಇದೆ, ಅದನ್ನ ಉಳಿಸುವಲ್ಲಿ ಹಬ್ಬ ಒಂದು ಮುಖ್ಯ ಪಾತ್ರಧರಿಸಿದೆ ಅನ್ನೋದರಲ್ಲಿ ಸಂಶಯವಿಲ್ಲ.
-ವರ್ಷಾ ಟಿಎಂ
ತಲಕಾಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BBK11: ಮಂಜು ನಡುವೆ ಗೌತಮಿ ಮಧ್ಯಸ್ಥಿಕೆ.. ಕಿಚ್ಚನಿಂದ ತರಾಟೆ
KDP ಸಭೆಯಲ್ಲಿ ದಿಢೀರ್ ಅಸ್ವಸ್ಥರಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ
BJP ; ವಿಜಯೇಂದ್ರ ಬಣದಿಂದ ಚಾಮುಂಡೇಶ್ವರಿ ದರ್ಶನ: ದುಷ್ಟ ಸಂಹಾರವಾಗಲೇಬೇಕು!
Shivamogga: ದುಷ್ಕರ್ಮಿಗಳಿಂದ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ
Bantwal: 5ನೇ ಮದುವೆಗೆ ಸಿದ್ಧತೆ.. 4ನೇ ಪತ್ನಿಯ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ ಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.