ನೋವನ್ನುಂಡು  ಜಗವ ನಗಿಸಿದ ಚಾರ್ಲಿ ಚಾಪ್ಲಿನ್‌


Team Udayavani, Sep 16, 2020, 7:44 PM IST

Charlie-Chaplin-Little-Tramp

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ತಾನು ಕಷ್ಟ ಅನುಭವಿಸುತ್ತಲೇ ಇತರರ ಮೊಗದಲ್ಲಿ ನಗು ಮೂಡಿಸಿದಾತ ಯಾರೆಂದರೆ ನಮಗೆಲ್ಲರಿಗೂ ತಟ್ಟನೆ ನೆನಪಾಗುವುದು ಚಾರ್ಲಿ ಚಾಪ್ಲಿನ್‌.

ಕುಂತರೂ, ಹೋದರೂ, ನಡೆದ್ದದು, ನಿಂತಿದ್ದು ಮನುಷ್ಯನ ಜೀವನದ ಸಾಮಾನ್ಯ ಸಂಗತಿಗಳೆಲ್ಲವನ್ನೂ ಹಾಸ್ಯವಾಗಿ, ರಸವತ್ತಾಗಿ ಬಿಂಬಿಸುವುದರಲ್ಲಿ ಈತ ಎತ್ತಿದ ಕೈ.

ಉದ್ದನೆಯ ಕೋಲು, ಗುಂಗುರು ಕೂದಲಿಗೊಂದು ಟೊಪ್ಪಿ, ಸೊಟ್ಟ ಸೊಟ್ಟ ನಡೆ, ನಕದ ಕೆಳಗೆ ಚಿಕ್ಕ ಮೀಸೆ, ಜೋತು ಬೀಳುವ ಕೋಟು, ಪ್ಯಾಂಟ್‌ ಧರಿಸಿ ಚಟಪಟ ಓಡುತ್ತಾ, ಹಾರುತ್ತಾ ಹೀಗೆ ವಿವಿಧ ಆಯಾಮಗಳನ್ನು ಮಾಡುತ್ತಲೇ ಹಾಸ್ಯಲೋಕದಲ್ಲಿ ಎಂದಿಗೂ ಮರೆಯಲಾಗದ ಚಹರೆ ಇಟ್ಟ ವ್ಯಕ್ತಿ ಚಾರ್ಲಿ ಚಾಪ್ಲಿನ್‌. ಈತ 1889 ಎಪ್ರಿಲ್‌ 16ರಂದು ಲಂಡನ್‌ನಲ್ಲಿ ಚಾರ್ಲಸ್‌ ಚಾಪ್ಲಿನ್‌, ಹುನ್ನಾ ದಂಪತಿಯ 2ನೇ ಪುತ್ರನಾಗಿ ಜನಿಸಿದರು. ಮೂಕಿ ಚಿತ್ರದಿಂದ ಟಾಕಿವರೆಗೆ ಈತನಿಗೆ ವಯೋವೃದ್ಧ ಅಭಿಮಾನಿಗಳಿದ್ದಾರೆ.

ಅಸಾಧಾರಣ ಪ್ರತಿಭೆಯ ಹೊನ್ನು
ಚಾರ್ಲಿ ಹೆತ್ತವರೂ ಕಲಾವಿದರಾದ ಕಾರಣ ಚಿಕ್ಕಂದಿನಿಂದಲೇ ಕಲಾ ಪ್ರತಿಭೆ ಇವರಲ್ಲಿ ಚಿಗುರೊಡೆದಿತ್ತು. ಹೂ ಮಾರುವುದು, ಡಾಕ್ಟರ್‌ನೊಂದಿಗೆ ಕ್ಲರ್ಕ್‌, ಹಾಡುಗಾರನಾಗಿ, ನಾಟಕ ಕಲಾವಿದ ಹೀಗೆ ಮಾಡಿದ ಕಾಯಕಗಳೆಲ್ಲದರಲ್ಲೂ ನಿಸ್ಸಿಮರಾಗಿದ್ದರು. ಸಮಾಜದ ನೈಜತೆಯನ್ನು ಎತ್ತಿ ಹಿಡಿದು ತನ್ನ ನಟನಾ ಕೌಶಲದಿಂದಲೇ ಜನಪ್ರಿಯತೆ ಪಡೆದನು. “ನನಗೆ ಮಳೆಯಲ್ಲಿ ನೆನೆಯುವುದು ಇಷ್ಟ ಯಾಕೆಂದರೆ ನಾನು ಮಳೆಯಲ್ಲಿ ಅಳುವುದು ಯಾರಿಗೂ ಕಾಣದು’ ಎಂಬ ಅವರ ನುಡಿಮುತ್ತಿನಿಂದಲೇ ಜೀವನವನ್ನು ಅವರು ಸ್ವೀಕರಿಸಿದ ರೀತಿ ನಮಗೆ ಅರಿವಾಗುತ್ತದೆ.

ಯಾವುದೂ  ಯಾರೂ ಶಾಶ್ವತವಲ್ಲ  ಎಂದು ಜಗಕೆ ಹೇಳಿದಾತ
ಜಗತ್ತಿನಲ್ಲಿ ಯಾವುದು, ಯಾರು ಕೂಡ ಶಾಶ್ವತವಲ್ಲ. ಎಲ್ಲವೂ ಕ್ಷಣಿಕ. ಅಂತೆಯೇ ಈ ವಿಚಾರವಾಗಿ ಚಾರ್ಲಿ ಚಾಪ್ಲಿನ್‌ ಹೇಳುವಂತೆ ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ, ನಿಮ್ಮ ಸಮಸ್ಯೆಗಳು ಕೂಡ. ಅದಕ್ಕೆ ಒಂದು ದಿನ ಪರಿಹಾರ ಸಿಕ್ಕೆ ಸಿಗುತ್ತದೆ. ಅದನ್ನು ನೀವು ಹುಡುಕಬೇಕು ಎಂದು ಹೇಳಿದ್ದರು.

ಪ್ರತಿಭೆಯ ಕುಲುಮೆ
ಚಾರ್ಲಿ ತನ್ನ ಸ್ವಂತ ನಿರ್ದೇಶನವನ್ನು ಮಾಡುವ ಮುನ್ನ ಬೇರೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಜಗತ್ತಿಗೆ ಪರಿಚಿತರಾಗಿದ್ದಾನೆಂದರೆ ಅದಕ್ಕೆ ಫೋರ್ಡ್‌ ಸ್ಟೆರ್ಲಿಂಗ್‌ನ ಪ್ರಭಾವವು ಇರುವುದನ್ನು ಕಾಣಬಹುದು. ಫೋರ್ಡ್‌ ಸ್ಟೆರ್ಲಿಂಗ್‌ ಆಂಗಿಕ ಅಭಿನಯದ ಮೂಲಕವೇ ಪ್ರಸಿದ್ಧ ನಟರೆಂದು ಗುರುತಿಸಿಕೊಂಡಿದ್ದರು. ಅವರಿದ್ದ ಕಂಪನಿಯನ್ನು ತೊರೆದ ಬಳಿಕ ಅವರ ಅನುಪಸ್ಥಿತಿಯನ್ನು ಚಾರ್ಲಿ ತುಂಬಬೇಕೆಂದು ಸ್ಟೆರ್ಲಿಂಗ್‌ನನ್ನು ಅನುಕರಣೆ ಮಾಡುವಂತೆ ಕಂಪನಿಯೂ ತಿಳಿಸುತ್ತದೆ. ಇಂತಹ ಪಾತ್ರ ತನ್ನಿಂದ ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತಲೇ ಇರುತ್ತಿತಂತೆ. ನಿರ್ದೇಶಕ ಸೆನೆಟ್‌ ಸಾಮಾನ್ಯ ಚಿತ್ರವೊಂದಕ್ಕೆ ಚಾರ್ಲಿಯನ್ನು ಹಾಸ್ಯನಟನಾಗಿ ಆಯ್ಕೆ ಮಾಡಿದ ಬಳಿಕ ಚಾರ್ಲಿಗೆ ತೋಚಿದಂತೆ ಮೇಕ್‌ ಮಾಡಿ ಬಂದು ಹಾಸ್ಯಮಾಡಲು ಹೇಳುತ್ತಾನೆ. ಈ ಸ್ವಂತಿಕೆ ಆತನಿಗೆ ಸಿಕ್ಕಿದ್ದೆ ತಡ ಹಲವು ವರ್ಷಗಳಿಂದ ಬಚ್ಚಿಟ್ಟ ತನ್ನ ವಿಶೇಷ ಪ್ರತಿಭೆಗೆ ಪ್ರೋತ್ಸಾಹ ದೊರೆತಂತಾಯಿತು. ಆ ದಿನ ಆತ ತೊಟ್ಟ ಉಡುಗೆ ತೊಡುಗೆ ಆಂಗಿಕ ಅಭಿನಯವೇ ಇಂದಿಗೂ ಚಾರ್ಲಿಯ ಅನುಪಸ್ಥಿತಿಯನ್ನು ಮರೆಮಾಚುವಂತೆ ಮಾಡಿದೆ.

ನಕ್ಕು-ನಗಿಸಿದ ದೈತ್ಯ ಪ್ರತಿಭೆ
ಚಾರ್ಲಿ ಚಾಪ್ಲಿನ್‌ ಅವರು ತಮ್ಮ ಹಾವಭಂಗಿಯಿಂದಲೇ ಇಡೀ ಜನಸಮೂಹವನ್ನು ಹೊಟ್ಟೆ ಹುಣ್ಣಾಗುವಷ್ಟು ನಗುಸುತ್ತಿದ್ದರು. ಇದರಿಂದ ನಾನು ನೋವು ಮರೆತೆ ಎಂದು ಅವರೇ ಹೇಳಿಕೊಂಡಿದ್ದಾರೆ. ಇನ್ನು ಅವರೇ ಹೇಳುವಂತೆ “ಬದುಕಿನಲ್ಲಿ ನಗದ ದಿನ ವ್ಯರ್ಥ’ ಎಂದಿದ್ದಾರೆ. ನಗು ಎಂಬುದು ಜೀವಾನುಮೃತ ಇದ್ದಂತೆ. ಅದನ್ನು ಎಷ್ಟು ಪಸರಿಸುತ್ತೇವೆಯೋ ಅಷ್ಟು ಆರೋಗ್ಯವಾಗಿರುತ್ತೇವೆ ಎಂಬುದು ಚಾರ್ಲಿಯ ಬದುಕಿನ ತಿರುಳು.

ಆಸ್ಕರ್‌ ಪ್ರಶಸ್ತಿ ಮತ್ತು ಭಾವನಾತ್ಮಕ ಭಾಷಣ
ಚಾರ್ಲಿ ಚಾಪ್ಲಿನ್‌ ಅವರಿಗೆ “ದಿ ಸರ್ಕಸ್‌’ ಎಂಬ ಚಿತ್ರಕ್ಕೆ ಅವರಿಗೆ ಆಸ್ಕರ್‌ ಪ್ರಶಸ್ತಿ ದೊರೆಯುತ್ತದೆ. 1972ರಲ್ಲಿ ಅವರು ಆಸ್ಕರ್‌ ಪ್ರಶಸ್ತಿ ಪಡೆಯಲು ಸಭಾಂಗಣಕ್ಕೆ ಬಂದು ಆಸ್ಕರ್‌ ಪ್ರಶಸ್ತಿ ಸ್ವೀಕರಿಸಿ ಕೇವಲ 45 ಸೆಕೆಂಡ್‌ಗಳಲ್ಲಿ ತಮ್ಮ ಭಾಷಣವನ್ನು ಮುಗಿಸಿದ್ದರು. ಆದರೆ ಸುಮಾರು 40 ನಿಮಿಷಗಳ ಕಾಲ ಇವರ ಭಾಷಣಕ್ಕೆ ಕರತಾಡನ ಹಾಕಲಾಗಿತ್ತು. ಇವರ ಸಾಧನೆಗೆ ಜನರ ಕರತಾಡನ ಸಭಾಂಗಣದಿಂದ ಮುಗಿಲು ಮುಟ್ಟಿತ್ತು. ಆ ಭಾಷಣದ ಭಾವನುವಾದ ಹೀಗಿದೆ. “ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು. ಇಂದು ನಾನು ಅತ್ಯಂತ ಹೆಮ್ಮೆಯ, ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದ್ದೇನೆ. ಈ ಘಳಿಗೆಯನ್ನು ವರ್ಣಿಸಲು ಪದಗಳು ಕೂಡ ಸೋಲುತ್ತೀವೆ. ನಾನು ಧನ್ಯವಾದ ಅಂತ ಮಾತ್ರ ಹೇಳಬಲ್ಲೇ. ಥ್ಯಾಂಕ್ಯೂ, ಥ್ಯಾಂಕ್ಯೂ..!

ಇಂಗ್ಲೆಡ್‌ನ‌ ಕಡು ಬಡತನದ ಕುಟುಂಬದಲ್ಲಿ ಜನಿಸಿ ಅಮೆರಿಕದಲ್ಲಿ ಅಗ್ರಗಣ್ಯ ಶ್ರೀಮಂತನೆನೆಸಿದ ಚಾರ್ಲಿ ಡಿಸೆಂಬರ್‌ 25, 1977ರಂದು ನಿಧನ ಹೊಂದಿದನು. ಫೋಲ್ಯಾಂಡ್‌, ಐರ್ಲ್ಯಾಂಡ್‌, ಸಿಟ್ಜರ್‌ಲ್ಯಾಂಡ್‌, ಭಾರತ ಕೂಡ ಸೇರಿ ಹತ್ತು ಹಲವು ರಾಷ್ಟ್ರಗಳು ಆತನ ಪ್ರತಿಮೆಯನ್ನು ನಿರ್ಮಿಸಿದ್ದು ಆತನ ಮೇಲಿನ ಅಭಿಮಾನವನ್ನು ಪ್ರತಿಬಿಂಬಿಸುತ್ತದೆ.

ಸಿನೆಮಾಗಳು
ಸಿಟಿ ಲೈಟ್ಸ್‌, ದಿ ಟ್ರಾಂಪ್‌, ಪೊಲೀಸ್‌, ಟ್ರಿಪಲ್‌ ಟ್ರಬಲ್‌, ದಿ ಗ್ರೇಟ್‌ ಡಿಕ್ಟೆಟರ್‌, ದಿ ಕಿಂಗ್‌ ಆಫ್ ನ್ಯೂಯಾರ್ಕ್‌, ದಿ ಸರ್ಕಸ್‌, ದಿ ಫೈರ್‌ ಮ್ಯಾನ್‌, ಸೋಲ್ಡರ್‌ ಆಮ್ಸ್‌ì, 1922 ಪೇ ಪೇ, ದಿ ಬಂಡ್‌, ದಿ ಕ್ಯುರ್‌, ದಿ ಅಡ್ವೆಂಚರ್‌ ಸಹಿತ ನೂರಕ್ಕೂ ಹೆಚ್ಚು ಸಿನೆಮಾಗಳಲ್ಲಿ ಆತ ನಟಿಸಿದ್ದು ಅಂದಿನ ಹಾಸ್ಯನಟರಾದ ಹೆರಾಲ್ಡ್‌, ಬೂಸ್ಟನ್‌ ಕಿಟನ್‌ ಇವರಿಬ್ಬರಿಗಿಂತ ಒಂದು ಕೈ ಮೇಲೆಂದೆ ಜನಮನ್ನಣೆ ಪಡೆದಿದ್ದಾರೆ.

 ರಾಧಿಕಾ, ಕುಂದಾಪುರ 

ಟಾಪ್ ನ್ಯೂಸ್

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.