UV Fusion: ವಿಮರ್ಶೆಗಳ ಪರಾಮರ್ಶೆಯಾಗಲಿ


Team Udayavani, Feb 20, 2024, 3:41 PM IST

13-film

ಪ್ರೇಕ್ಷಕರ ಮನ ಗೆದ್ದ ಸಿನೆಮಾ, ಗಲ್ಲಪಟ್ಟೆಯಲ್ಲಿ ಸದ್ದಿಲ್ಲದೆ ಹೋದ ಸಿನೆಮಾ, ಸಿನಿ ಪ್ರೇಕ್ಷಕರಿಂದ ಫ‌ುಲ್‌ ಮಾಕ್ಸ್‌, ಕತಾವಸ್ತುವಿಗೆ ತಲೆದೂಗಿದ ಪ್ರೇಕ್ಷಕ ಹೀಗೆ ಬಣ್ಣದ ಬಣ್ಣದ ಹೆಡ್‌ ಲೈನ್‌ಗಳಿಂದ ಶುಕ್ರವಾರದ ಪತ್ರಿಕೆಗಳು ತುಂಬಿರುತ್ತಿತ್ತು. ವಾರವೆಲ್ಲಾ ಕಪ್ಪು ಬಿಳುಪಿನಲ್ಲಿಯೇ ಮುಗಿದು ಹೋಗುವ ಪೇಪರ್‌ ಶುಕ್ರವಾರ ಮಾತ್ರ ಕಾಮನಬಿಲ್ಲು ತೊಟ್ಟಿರುತ್ತಿದ್ದಳು. ವಾರದ ಸಿನಿಮಾ ಕತೆಗಳು, ರಾಜ್ಯಾದ್ಯಂತ ಬಿಡುಗಡೆ ಎಂಬ ಜಾಹೀರಾತು, ಸಿನಿಮಾವಿಮರ್ಶೆ, ಸಂದರ್ಶನ ಒಂದೇ ಎರಡೇ.. ವಾರವಿಡಿ ಪತ್ರಿಕೆಯಿಂದ ದೂರವಿರುತ್ತಿದ್ದವರನ್ನೂ ಹತ್ತಿರ ಸೆಳೆಯುತಿತ್ತು. ಕಾಲಕ್ಕೆ ತಕ್ಕಂತೆ ಸಿನಿಮಾ ಸುದ್ದಿಗಳು ಹಲವಾರು ಆಯಾಮಗಳನ್ನು, ಪ್ರಾಮುಖ್ಯತೆಯನ್ನು ಪಡೆದುಕೊಂಡು, ತನ್ನ ಛಾಪನ್ನು ಮೂಡಿಸಲು ಶಕ್ತವಾಯಿತು.

ಆದರೆ, ಕ್ಷಣ ಕ್ಷಣದ ಸುದ್ದಿಗಳ ಭರದಲ್ಲಿ, ಎಲ್ಲವೂ ತನ್ನಿಂದಲೇ ಮೊದಲು ಬರಬೇಕೆಂಬ ಅವಸರದಲ್ಲಿ ಸಿನಿಮಾ ವಿಮರ್ಶೆಗಳು ತನ್ನ ಛಾಪನ್ನು ಕಳೆದುಕೊಂಡಿತಾ ಎಂಬ ಸಂದೇಹ ಮೂಡುತ್ತಿದೆ. ಶುಕ್ರವಾರದಂದು ಬರುವ ಸಿನಿ ವಿಮರ್ಶೆಗಳಿಗೂ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ಗೂ ನೇರ ಸಂಬಧ ಹೊಂದಿತ್ತು. ವಿಮರ್ಶಕರು ಪ್ರತಿ ಹಂತದಲ್ಲಿಯೂ ಪೈಪೂಟಿಯಿಂದ ವಿಮರ್ಶೆಯನ್ನು ನೀಡುತ್ತಿದ್ದರೇ, ಪ್ರೇಕ್ಷಕರಷ್ಟೇ ಅಲ್ಲ ನಟ ನಟಿಯರೂ ಅದರಿಂದ ತಮ್ಮ ಓರೆಕೋರೆಗಳನ್ನು ತಿದ್ದಿಕೊಳ್ಳುತ್ತಿದ್ದರು.

ಇತ್ತೀಚಿಗೆ ಬರುತ್ತಿರುವ ಸಿನಿಮಾ ವಿಮರ್ಶೆಗಳನ್ನು ನೋಡಿದರೆ ವಿಮರ್ಶೆಗಳೇ ಇನ್ನೊಮ್ಮೆ ಪರಾಮರ್ಶೆಗೆ ಒಳಗಾಗಬೇಕೆನೋ ಎಂಬ ಸಂಶಯ ಮೂಡುತ್ತದೆ. ಸಿನಿಮಾ ವಿಮರ್ಶಿಸುವ ನೆಪದಲ್ಲಿ ಕತೆಯ ಎಲ್ಲಾ ಮಜಲುಗಲನ್ನು ಬಿಟ್ಟುಕೊಟ್ಟು ಒಮ್ಮೆ ನೋಡಬಹುದಾದ ಸಿನಿಮಾ ಎಂಬ ತೆಲೆಬರಹವನ್ನಿತ್ತರೆ ಉತ್ತಮ ವಿಮರ್ಶೆ ಎಂಬ ಪದವಿ ಪಡೆದುಕೊಳ್ಳುತ್ತಿದೆ.

ಚಿತ್ರ ಬಗ್ಗೆ ಆಸಕ್ತಿ ಹುಟ್ಟಿಸುವ ಭರದಲ್ಲಿ ಸಿನಿಮಾದ ಮೂಲ ಕತೆಯನ್ನೇ ಪ್ರೇಕ್ಷಕರೆದುರಿಗಿಟ್ಟ ಅನೇಕ ಬರಹಗಳನ್ನು ದಿನನಿತ್ಯ ನೋಡಬಹುದು. ಸರಳ ಕತೆಗಳಲ್ಲಿನ ಮುಖ್ಯ ವಿಷಯವೇ ಪ್ರೇಕ್ಷಕನಿಗೆ ಗೊತ್ತಾದರೆ ಸಿನಿಮಾ ನೋಡುವ ಕುತೂಹಲವೂ ಕಳೆದು ಹೋಗುತ್ತದೆ. ಇನ್ನೂ ವಿಮರ್ಶೆಯತ್ತ ಅಭಿಮಾನಿಗಳನ್ನು ಸೆಳೆಯಬೇಕೆಂಬ ದೃಷ್ಟಿಯಿಂದ ಚಿತ್ರದ ನಾಯಕನ ಹೆಸರು, ನಾಯಕಿ ಹೆಸರನ್ನು ಸೇರಿಸಿ ಬರೆಯುವುದು ಉಂಟು, ಆ ಹೆಸರಲ್ಲಿಯೇ ಕತೆಯ ತಿರುವು ಅಡಗಿದ್ದರೆ ಬರೆದ ವಿಮರ್ಶೆಯಲ್ಲವೂ ಒಂದೇ ಶಬ್ಧದಲ್ಲಿ ಭಸ್ಮ.

ಬಹುತೇಕ ಬಾರಿ ಸಿನಿಮಾಗಳ ತಾಂತ್ರಿಕ ಅಂಶಗಳನ್ನು ಕೇವಲ ಪಟ್ಟಿ ಮಾಡುವುದರಲ್ಲಿಯೇ ಬರಹವನ್ನು ಮುಗಿಸುವ ಬದಲು, ಆಗಬೇಕಾಗಿರುವ ಬದಲಾವಣೆಗಳ ಕುರಿತು ಚರ್ಚಿಸಿದರೆ ಹಿತವೆನಿಸುತಿತ್ತು. ಈ ಅಂಶ ಕನ್ನಡದ ಡಬ್ಬಿಂಗ್‌ ವಿಷಯದಲ್ಲಿ ಸಾಬೀತಾಗಿದೆ. ಇನ್ನೂ ನಟ-ನಟಿಯರ ನಟನೆಯ ಬಗ್ಗೆ ಕೆಲವು ಪದ ಹೆಚ್ಚೆಂದರೆ ಒಂದು ಸಾಲಿನಲ್ಲಿ ಮುಗಿಸುವವರೇ ಹೆಚ್ಚು ಅದನ್ನೂ ಹೊರತಾಗಿಯೂ ತಿಳಿಸಿದರೆ ಇನ್ನಷ್ಟು ತೂಕ ಸಿಗಬಹುದೇನೋ.

ಇನ್ನೂ ಸಿನಿಮಾ ಪ್ರೀ ಬುಕ್ಕಿಂಗ್‌ನಲ್ಲಿ ಸದ್ದು ಮಾಡುತ್ತಿದೆ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್‌ ಪಡೆಯುತ್ತಿದೆ, ಬಹುತೇಕ ವಿಮರ್ಶೆಗಳೆಲ್ಲವೂ ಸಕಾರಾತ್ಮಕವಾಗಿಯೇ, ಹೆಚ್ಚು ಜಾಹೀರಾತು ನೀಡುತ್ತಿದೆ ಇದೆ ಎನ್ನುವ ಎಲ್ಲೆಗಳನ್ನೆಲ್ಲವನ್ನೂ ವಿಮರ್ಶೆಗಳು ಮೀರಿದರೆ ಸಿನಿ ಪ್ರೇಕ್ಷಕರಿಗೆ ಇನ್ನೂ ಸಿಹಿ ಸಿಗಬಹುದೇನೋ.

ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾದ ಬಹು ತುಣುಕುಗಳೇ ಬಂದಿರಬಹುದು, ಸುದೀರ್ಘ‌ ಚಿತ್ರ ವಿಮರ್ಶೆಗಳೇ ನಡೆದಿರಬಹುದು, ಅಥವಾ ದಿನಪತ್ರಿಕೆಯಲ್ಲಿ ಬರುವ ವಿಮರ್ಶೆಗಳು ಸಿನಿಮಾದ ಮೇಲೆ ಕಡಿಮೆ ಪರಿಣಾವನ್ನೇ ಬೀರುತ್ತಿರಬಹುದು. ಆದರೂ ಇಂದೂ ಸಿನಿಮಾ ವಿಮರ್ಶೆಗಳು ಸಿನಿ ಪ್ರಿಯರ ಗಮನಸೆಳೆಯುತ್ತವೆ. ಚಿತ್ರದ ಬಗ್ಗೆ ಆಸಕ್ತಿ ಹೆಚ್ಚಿಸುತ್ತವೆ. ವಿಮರ್ಶೆಗಳು ತನ್ನ ಛಾಪನ್ನು ಮರಳಿ ಪಡೆಯಲಿ ಎಂಬುದೇ ಆಶಯ.

-ಸುಚೇತಾ ಹೆಗಡೆ

ಎಸ್‌.ಡಿ.ಎಂ.ಕಾಲೇಜು ಉಜಿರೆ

ಟಾಪ್ ನ್ಯೂಸ್

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Tragedy: KTM ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಯುವಕರು ಸ್ಥಳದಲ್ಲೇ ಮೃತ್ಯು

Tragedy: ಭೀಕರ ಬೈಕ್‌ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

UV Fusion: ಹಟ್ಟಿ ಹಬ್ಬ ಗ್ರಾಮೀಣ ಸೊಗಡಿನ ಸಂಸ್ಕೃತಿಯ ಕೊಂಡಿ

12-uv-fusion

Mobile Phones: ಸಂಬಂಧ ಕಳಚುತ್ತಿರುವ ಮೊಬೈಲ್‌ ಬಾಂಧವ್ಯ

11-uv-fusion

Teacher: ಟೀ ಫಾರ್‌ ಟೀಚರ್‌

21

UV Fusion: ಅನುಭವಗಳ ಜಗತ್ತಿನಲ್ಲಿ ಕಾಲೇಜು ದಿನಗಳು

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

12(2)

Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ

11

Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

23-bng

Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?

10

Kaup ಒಳಚರಂಡಿ ಸಮಸ್ಯೆ ಪರಿಹಾರಕ್ಕೆ ವಿಶೇಷ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.