ದೇಶಕ್ಕೊಬ್ಬನೇ ಮುಖ್ಯ ದಂಡನಾಯಕ


Team Udayavani, May 30, 2020, 6:05 PM IST

ದೇಶಕ್ಕೊಬ್ಬನೇ ಮುಖ್ಯ ದಂಡನಾಯಕ

ದೇಶದ ಮೊದಲ ಸಿಡಿಎಸ್‌ ಆಗಿ ನೇಮಕಗೊಂಡಿರುವ ಜನರಲ್‌ ಬಿಪಿನ್‌ ರಾವತ್‌,

ಭಾರತದ ಸೇನಾರಂಗದಲ್ಲಿ ಹೊಸ ಬೆಳವಣಿಗೆಗಳ ಸಾಲಿನಲ್ಲಿ ಚೀಫ್ ಆಫ್ ದ ಡಿಫೆನ್ಸ್‌ ಸ್ಟಾಫ್ (ಸಿಡಿಎಸ್‌) ಹುದ್ದೆಯ ಸೃಜನೆಯಾಗಿದೆ. ಮೂರೂ ಸೇನೆಗಳ ನಡುವೆ ಸಮನ್ವಯ ಸಾಧಿಸುವುದಕ್ಕಾಗಿ ಈ ಹುದ್ದೆಯನ್ನು ಹುಟ್ಟುಹಾಕಲಾಗಿದೆ.

ಅಗತ್ಯವೇನು?
ಸ್ವಾತಂತ್ರ್ಯಾನಂತರ ದೇಶ ಕಂಡ ಇದುವರೆಗಿನ ಯುದ್ಧಗಳಲ್ಲಿ (1962, 1971, 1999) ಮೂರೂ ಪಡೆಗಳ ನಡುವೆ ಸಮನ್ವಯದ ಕೊರತೆಯಿಂದ ಕೆಲವೊಂದು ಆಡಳಿತಾತ್ಮಕ ತೊಡಕುಗಳು ಕಂಡು ಬಂದಿದ್ದವು.

ಸೈನ್ಯದ ಕಾರ್ಯತಂತ್ರಗಳ ಕುರಿತಂತೆ ರಕ್ಷಣಾ ಸಚಿವರು, ಪ್ರಧಾನಿಗೆ ಸಿಂಗಲ್‌ – ಪಾಯಿಂಟ್‌ ಮಿಲಿಟರಿ ಸಲಹೆಗಾರರಾಗಿ ಸಿಡಿಎಸ್‌ ಕಾರ್ಯನಿರ್ವಹಿಸುತ್ತಾರೆ. ಮೂರು ಪಡೆಗಳ ನಡುವೆ ಕೊಂಡಿಯಾಗಿ ದೀರ್ಘ‌ಕಾಲಿಕ ಯೋಜನೆಗಳು, ತರಬೇತಿ, ಇತ್ಯಾದಿ ಎಲ್ಲಾ ವಿಧದಲ್ಲೂ ಸಿಡಿಎಸ್‌ ಹುದ್ದೆ ಪ್ರಯೋಜನಕ್ಕೆ ಬರುತ್ತದೆ.

ಮಹಾ ದಂಡನಾಯಕರಾಗಿ ರಾಷ್ಟ್ರಪತಿ ಇದ್ದರೂ, ಅವರು ಸಾಂವಿಧಾನಿಕ ಮುಖ್ಯಸ್ಥರು. ಸ್ವತಃ ಸೈನ್ಯದಲ್ಲಿ ಕಾರ್ಯನಿರ್ವಹಿಸಿದ ಅನುಭವವ ಇರುವುದರಿಂದ ಅದರ ಆಧಾರದಲ್ಲಿ ‘ಕಾರ್ಯಕಾರಿ ಮುಖ್ಯಸ್ಥರು’ ಎಂಬ ನೆಲೆಯಲ್ಲಿ ಸಿಡಿಎಸ್‌ ಪ್ರಮುಖರಾಗುತ್ತಾರೆ.

ಸಿಡಿಎಸ್‌ ಇಲ್ಲದ ಹಿಂದಿನ ವ್ಯವಸ್ಥೆ ಹೇಗಿತ್ತು?
ಈ ಹಿಂದೆ ಭಾರತದಲ್ಲಿ ಎಲ್ಲ ರಕ್ಷಣಾ ಪಡೆಗಳಿಗೆ ಪ್ರಧಾನ ಮುಖ್ಯಸ್ಥರು ಚೇರ್‌ಮ್ಯಾನ್‌ ಆಫ್ ಚೀಪ್ಸ್ ಆಫ್ ಸ್ಟಾಫ್ ಕಮಿಟಿ (ಸಿಒಎಸ್‌ಸಿ). ವಾಯುಪಡೆಯ ಮುಖ್ಯಸ್ಥ ಏರ್‌ ಚೀಫ್ ಮಾರ್ಷಲ್‌ ಬಿರೇಂದರ್‌ ಸಿಂಗ್‌ ಧನೋವಾ ಅವರು ಸಿಒಎಸ್‌ಸಿ ಆಗಿದ್ದರು (ಈಗ ನಿವೃತ್ತರಾಗಿದ್ದಾರೆ) ಅತಿ ಹಿರಿಯ ಅಧಿಕಾರಿ ಸಿಒಎಸ್‌ಸಿ ಆಗುತ್ತಾರೆ (ನಿವೃತ್ತಿವರೆಗೆ).

ಆದರೆ ಇದೊಂದು ಹೆಚ್ಚುವರಿ ಜವಾಬ್ದಾರಿಯಾಗಿದ್ದು, ಅವಧಿಯೂ ಅಲ್ಪವಾಗಿರುತ್ತದೆ. 2012ರಲ್ಲಿ ನರೇಶ್‌ ಚಂದ್ರ ಟಾಸ್ಕ್ಫೋರ್ಸ್‌ ಕಮಿಟಿ ಶಾಶ್ವತ ಸಿಒಎಸ್‌ಸಿ ನೇಮಕಕ್ಕೆ ಶಿಫಾರಸು ಮಾಡಿತ್ತಾದರೂ, ಅದು ಕಾರ್ಯಗತಗೊಂಡಿರಲಿಲ್ಲ.

ಏನಿದು ಸಿಡಿಎಸ್‌?
ದೇಶದ ರಕ್ಷಣೆಗಾಗಿ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಎಂಬ ಮೂರು ಪ್ರಮುಖ ಪಡೆಗಳಿವೆ. ಭೂಸೇನೆಗೆ ಜನರಲ್‌, ವಾಯುಸೇನೆಗೆ ಏರ್‌ ಚೀಫ್ ಮಾರ್ಷಲ್‌ ಮತ್ತು ನೌಕಾಸೇನೆಗೆ ಅಡ್ಮಿರಲ್‌ ಮುಖ್ಯಸ್ಥರು. ಈ ಮೂರೂ ಸೇನೆಗಳ ಮಹಾದಂಡನಾಯಕರಾಗಿ ರಾಷ್ಟ್ರಪತಿಗಳು ಕಾರ್ಯನಿರ್ವಹಿಸುತ್ತಾರೆ.

ಮಹಾದಂಡನಾಯಕರ ಹೊರತಾಗಿ ಸೇನೆಗಳ ನಡುವೆ ಉತ್ತಮ ಸಂವಹನ, ಸಮನ್ವಯ ಸಾಧಿಸಿ ಅವನ್ನು ಮುನ್ನಡೆಸಲು ಓರ್ವ ‘ಮುಖ್ಯ ದಂಡನಾಯಕ’ರ ಅಗತ್ಯ ಇದೆ ಎಂಬ ಆಲೋಚನೆ ಸರಕಾರದ್ದಾಗಿತ್ತು. ಸಿಡಿಎಸ್‌ ನೇಮಕದ ಮೂಲಕ ಅದು ಈಗ ಸಾಕಾರಗೊಂಡಿದೆ.

ಯಾವೆಲ್ಲ ದೇಶದಲ್ಲಿ ಸಿಡಿಎಸ್‌ ಇದೆ?
ಯುನೈಟೆಡ್‌ ಕಿಂಗ್‌ಡಮ್‌, ಕೆನಡಾ, ಫ್ರಾನ್ಸ್‌, ಇಟಲಿ ಇತ್ಯಾದಿ ದೇಶಗಳಲ್ಲಿ ಸಿಡಿಎಸ್‌ ಇದೆ. ಕೆಲವೆಡೆ ಹೆಸರು ಬೇರೆಯಾದರೂ ಕಾರ್ಯ ಒಂದೇ. ಇಟಲಿ, ಸ್ಪೇನ್‌, ಯು.ಕೆ., ಕೆನಡಾದಲ್ಲಿ ಚೀಫ್ ಆಫ್ ದ ಡಿಫೆನ್ಸ್‌ ಸ್ಟಾಫ್, ಫ್ರಾನ್ಸ್‌ನಲ್ಲಿ ಚೀಫ್ ಆಫ್ ಸ್ಟಾಫ್ ಆಫ್ ದ ಆರ್ಮೀಸ್‌, ಚೀನದಲ್ಲಿ ಚೀಫ್ ಆಫ್ ದ ಜನರಲ್‌ ಸ್ಟಾಫ್, ಜಪಾನ್‌ನಲ್ಲಿ ಚೀಫ್ ಆಫ್ ಸ್ಟಾಫ್, ಜಾಯಿಂಟ್‌ ಸ್ಟಾಫ್ ಎಂದು ಸಿಡಿಎಸ್‌ ಹುದ್ದೆಯನ್ನು ಕರೆಯಲಾಗುತ್ತದೆ. ಪಾಕಿಸ್ಥಾನದಲ್ಲೂ ಈ ಹುದ್ದೆ ಇದೆ ಎಂಬುದು ಗಮನಾರ್ಹ.

20 ವರ್ಷಗಳ ಪ್ರಸ್ತಾವನೆ
1999ರ ಯುದ್ಧಾನಂತರ ಉನ್ನತ ಸೇನಾ ಸುಧಾರಣೆಗಳಿಗಾಗಿ ರಚಿಸಿದ ಕಾರ್ಗಿಲ್‌ ರಿವ್ಯೂ ಕಮಿಟಿಯು ಮಾಡಿದ ಪ್ರಮುಖ ಶಿಫಾರಸುಗಳಲ್ಲಿ ಸಿಡಿಎಸ್‌ ಹುದ್ದೆಯೂ ಒಂದು. 2016ರ ಡಿಸೆಂಬರ್‌ನಲ್ಲಿ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಡಿ.ಬಿ. ಶೇಕತ್ಕರ್‌ ಕಮಿಟಿ ಮಾಡಿದ 99 ಶಿಫಾರಸುಗಳಲ್ಲೂ ಇದು ಇತ್ತು. ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಕಾಲದಲ್ಲಿ ಈ ಬಗ್ಗೆ ಪ್ರಸ್ತಾವ ಇಡಲಾಗಿತ್ತು. ಆಗಿನ ಉಪಪ್ರಧಾನಿ ಎಲ್‌.ಕೆ. ಅಡ್ವಾಣಿ ಅವರ ನೇತೃತ್ವದ ಸಚಿವರ ಸಮಿತಿ ಇದನ್ನು ಶಿಫಾರಸು ಮಾಡಿತ್ತು.

ಹಿಂದೆ ಇತ್ತು 5 ಸ್ಟಾರ್‌ ಹುದ್ದೆ
ಭೂಸೇನೆಯಲ್ಲಿ ಫೀಲ್ಡ್‌ ಮಾರ್ಷಲ್‌, ವಾಯುಸೇನೆಯಲ್ಲಿ ಮಾರ್ಷಲ್‌ ಆಫ್ ದ ಏರ್‌ಫೋರ್ಸ್‌, ನೌಕಾಸೇನೆಯಲ್ಲಿ ಅಡ್ಮಿರಲ್‌ ಆಫ್ ದ ಫ್ಲೀಟ್‌: ಈ ಮೂರೂ 5 ಸ್ಟಾರ್‌ ರ್‍ಯಾಂಕ್‌ಗಳು. ಇವರಿಗೆ ನಿವೃತ್ತಿ, ಪಿಂಚಣಿ ಇಲ್ಲ. ಆಜೀವ ಪರ್ಯಂತ ಸೇವಾವಧಿ ಇದ್ದು, ಇತರ ಅಧಿಕಾರಿಗಳಂತೆಯೇ ಅಧಿಕೃತ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಸಮವಸ್ತ್ರಧಾರಿಗಳಾಗಿರಬೇಕು.

ಇದುವರೆಗೆ ಈರ್ವರು ಫೀಲ್ಡ್‌ ಮಾರ್ಷಲ್‌ಗ‌ಳು ಆಗಿ ಹೋಗಿದ್ದಾರೆ (ಸ್ಯಾಮ್‌ ಮಾಣೆಕ್‌ ಷಾ, ಕೆ.ಎಂ. ಕಾರ್ಯಪ್ಪ). ಓರ್ವ ಮಾರ್ಷಲ್‌ ಆಫ್ ದ ಏರ್‌ಫೋರ್ಸ್‌ (ಅರ್ಜನ್‌ ಸಿಂಗ್‌) 2017ರಲ್ಲಿ ನಿಧನರಾಗಿದ್ದಾರೆ. ಅಡ್ಮಿರಲ್‌ ಆಫ್ ದ ಫ್ಲೀಟ್‌ ಹುದ್ದೆಗೆ ಯಾರೂ ಏರಿಲ್ಲ. ಈಗ ಈ ಮೂರೂ ಹುದ್ದೆಗಳು ಚಾಲ್ತಿಯಲ್ಲಿಲ್ಲ. ಇವರ ಅನಂತರದ 4 ಸ್ಟಾರ್‌ ರ್‍ಯಾಂಕ್‌ಗಳು ಈಗ ಸರ್ವೋಚ್ಚ. ಈ ಸ್ಟಾರ್‌ಗಳು ಅಧಿಕಾರಿಯ ಸಮವಸ್ತ್ರದ ಕೊರಳ ಪಟ್ಟಿಯಲ್ಲಿ ಇರುತ್ತವೆ.

ಬಿಪಿನ್‌ ರಾವತ್‌
ಭೂಸೇನಾ ಮುಖ್ಯಸ್ಥರಾಗಿದ್ದ ಜನರಲ್‌ ಬಿಪಿನ್‌ ರಾವತ್‌ ಅವರನ್ನು ನಿವೃತ್ತಿಗೂ ಮೊದಲೇ ದೇಶದ ಮೊದಲ ಸಿಡಿಎಸ್‌ ಆಗಿ ನೇಮಕ ಮಾಡಲಾಯಿತು. ಬಿಪಿನ್‌ ರಾವತ್‌ ಅವರು 2016ರ ಡಿಸೆಂಬರ್‌ 31ರಂದು ಭೂಸೇನೆಯ 27ನೇ ಮುಖ್ಯಸ್ಥರಾಗಿ (ಜನರಲ್) ನೇಮಕವಾಗಿದ್ದರು. ಜನರಲ್‌ ಆಗಿ ನೇಮಕಗೊಳ್ಳುವ ಮೊದಲು ಅಂದರೆ, 2016ರ ಸೆಪ್ಟೆಂಬರ್‌ 1ರಿಂದ ಉಪಮುಖ್ಯಸ್ಥರಾಗಿದ್ದರು.

1978ರಲ್ಲಿ ಭೂಸೇನೆಯ 11ನೇ ಗೂರ್ಖಾ ರೈಫ‌ಲ್ಸ್‌ನ 5ನೇ ಬೆಟಾಲಿಯನ್‌ಗೆ ಸೇರುವ ಮೂಲಕ ಭಾರತೀಯ ಸೇನೆಗೆ ಪದಾರ್ಪಣೆ ಮಾಡಿದ್ದರು. ಭಾರತ-ಚೀನಾ ನಡುವಿನ ‘ಲೈನ್‌ ಆಫ್ ಆಕ್ಚ್ಯುವಲ್‌ ಕಂಟ್ರೋಲ್‌’ (ಎಲ್‌ಎಸಿ)  ಪೂರ್ವ ವಲಯದಲ್ಲಿ ಇನ್ಫಾಂಟ್ರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

— ಕುದ್ಯಾಡಿ ಸಂದೇಶ್‌ ಸಾಲ್ಯಾನ್‌

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.