Japan Movie: ಚಿತ್ರ ಸಂತೆ: ಕುರಸೋವಾರ ಡ್ರೀಮ್ಸ್ ನೋಡಿದ್ದೀರಾ?
Team Udayavani, Jun 1, 2024, 4:45 PM IST
ಒಂದು ಚಲನಚಿತ್ರವನ್ನು ನೂರು ಭಾಗಗಳಾಗಿ ಮಾಡಿದರೆ ಹೇಗಿರಬಹುದು? ಎಲ್ಲವೂ ಚೂರು ಚೂರು ಎನ್ನಿಸಬಹುದು. ಹಾಗಾದರೆ ಒಂದು ಕಲ್ಲಂಗಡಿ ಹಣ್ಣನ್ನು ನೂರು ಹೋಳುಗಳನ್ನಾಗಿ ಮಾಡಿದಾಗ ಏನನ್ನಿಸಬಹುದು?
ಅವೂ ಚೂರುಗಳೇ. ಆದರೆ ಪ್ರತಿ ಹೋಳೂ ಹಣ್ಣಿನದ್ದೇ. ಅದರಲ್ಲಿ ರಸವಿದೆ, ಸಿಹಿಯಿದೆ, ಸ್ವಾದವಿದೆ..ಎಲ್ಲವೂ..
ಈಗ ನಾವು ಚಲನಚಿತ್ರವನ್ನೂ ಹಾಗೆಯೇ ನೋಡಬಹುದಲ್ಲವೇ? ಭಾವಿಸಬಹುದಲ್ಲವೇ? ಸಾಧ್ಯವಿದೆಯೇ?
ಸಾಧ್ಯವಿದೆ. ಹಾಗೆ ಖಂಡಿತಾ ಭಾವಿಸಬಹುದು, ಭಾವಿಸಲೂ ಬೇಕು. ಹೇಗೆ ನಾವು ಪ್ರತಿ ಹೋಳನ್ನು ಕಲ್ಲಂಗಡಿ ಎಂಬ ಭಾವದೊಂದಿಗೆ ಸ್ವೀಕರಿಸುತ್ತೇವೆಯೋ ಅದೇ ಭಾವದಲ್ಲಿ ಚಲನಚಿತ್ರವನ್ನೂ ಸ್ವೀಕರಿಸಬೇಕು. ಆದರೆ ನಾವು ಕಥೆಯ ದಾರ ಹಿಡಿದುಕೊಂಡು ಪೋಣಿಸಲು ಹೊರಡುತ್ತೇವೆ. ಆಗ ಪ್ರತಿ ಭಾಗಗಳಲ್ಲಿನ ಚಿತ್ರ ಕಾಣಿಸುವುದಿಲ್ಲ.
ಅಕಿರಾ ಕುರಸೋವಾ ಜಪಾನಿನ ಅತ್ಯಂತ ಖ್ಯಾತ ಚಲನಚಿತ್ರ ನಿರ್ದೇಶಕ. ವಾಸ್ತವವಾಗಿ ಕುರಸೋವಾ ಬರೀ ಜಪಾನಿಗೆ ಸೀಮಿತವಲ್ಲ, ವಿಶ್ವ ಚಿತ್ರ ಜಗತ್ತಿಗೆ ಸೇರಿದವರು.
ಅವರು 1990 ರಲ್ಲಿ ಒಂದು ಹೂಗುಚ್ಛದಂತೆ ಸಿನಿಮಾ ಗುಚ್ಛವನ್ನು ನಿರ್ಮಿಸಿದರು. ಅದರ ಹೆಸರು ಡ್ರೀಮ್ಸ್. ಹೇಗೆ ನವರಸಗಳಿವೆಯೋ ಅದರಂತೆ ಎಂಟು ಹೂವುಗಳ ಒಂದು ಗುಚ್ಛವಿದು. ಒಂದೊಂದಕ್ಕೆ ಒಂದೊಂದು ಬಣ್ಣ, ಒಂದೊಂದು ಭಾವ, ಒಂದೊಂದು ರಸ.
ನೀವು ಒಮ್ಮೆಲೆ ಎಂಟೂ ಹೂಗಳನ್ನು ಒಟ್ಟಿಗೆ ಹಿಡಿದುಕೊಂಡರೆ ಒಂದು ಹೂಗುಚ್ಛ. ಅದು ಬೇಡವೆಂದೆನಿಸಿ ಒಂದೊಂದಾಗಿ ಬಿಡಿ ಬಿಡಿಯಾಗಿಟ್ಟು ನೋಡಿದಾಗಲೂ ಹೂವಿನ ಸೌಂದರ್ಯಕ್ಕಾಗಲೀ, ಬಣ್ಣಕ್ಕಾಗಲೀ ಯಾವುದೇ ಧಕ್ಕೆ ಬಾರದು.
ಒಂದೊಂದು ಹೂವೂ ಸಹ ತನ್ನದೇ ಆದ ಕಥೆಯನ್ನು ಹೇಳಬಲ್ಲದು.
ಸಿನಿಮಾ ಎಂದರೆ ಹಾಗೆಯೇ. ಪ್ರತಿ ದೃಶ್ಯಕ್ಕೂ ಸ್ವತಂತ್ರ ಅಸ್ತಿತ್ವವೂ ಇರುತ್ತದೆ. ಒಟ್ಟೂ ಅಸ್ತಿತ್ವ-ರೂಪವೂ ಇರುತ್ತದೆ. ಆಗಲೇ ಅದರ ಸೊಗಸು ಹೆಚ್ಚು, ಹೂ ಗುಚ್ಛದಲ್ಲಿನ ಪ್ರತಿ ಹೂವಿನ ಹಾಗೆಯೇ.
ನೀವು ಡ್ರೀಮ್ಸ್ ನೋಡಿಲ್ಲವಾದರೆ ತಪ್ಪದೇ ನೋಡಿ. ಯೂ ಟ್ಯೂಬ್ ನಲ್ಲೂ ಲಭ್ಯವಿದೆ.
ಋತುಮಿತ್ರ,
ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು
Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.