UV Fusion: ಬನ್ನಿ ಅಡುಗೆ ಮಾಡೋಣ!
Team Udayavani, Dec 22, 2023, 7:45 AM IST
ಇತ್ತೀಚಿಗೆ ಜಗತ್ತು ಸುಗಮ ಜೀವನಕ್ಕಾಗಿ ಹೊಸ ಹೊಸ ದಾರಿಗಳನ್ನು ಹಿಡಿಯುತ್ತಿದೆ. ಅದು ತಂತ್ರಜ್ಞಾನವೇ ಆಗಿರಬಹುದು ಅಥವಾ ಇನ್ಯಾವುದೋ. ಆದರೆ ಸುಗಮ ಜೀವನಕ್ಕಾಗಿ ಹಿಂದಿನ ಜೀವನದಲ್ಲಿದ್ದ ಕೆಲವೊಂದು ಖುಷಿ ಬಾಂಧವ್ಯವನ್ನು ನಾವು ಎಲ್ಲೋ ಮರೆಯುತ್ತಿದ್ದೇವೆ. ಇದಕ್ಕೆ ಉದಾಹರಣೆ ಸಾವಿರ ಇರಬಹುದು. ನನ್ನ ಅನುಭವ ಮತ್ತು ನಾನು ಕಂಡ ಒಂದು ವಿಷಯ ಅಂದರೆ ಅದು ಮದುವೆ ಮನೆಯ ಅಡುಗೆ!
ಒಂದು ಮನೆಯಲ್ಲಿ ಮದುವೆ ಅಂದರೆ ಊರಿಗೆ ಊರೇ ಸಂಭ್ರಮದಲ್ಲಿರುತ್ತಿತ್ತು. ಗೆಳೆಯರು, ಸಂಬಂಧಿಕರು ಎಲ್ಲರೂ ಕೈ ಜೋಡಿಸಿ ತಯಾರಿ ನಡೆಯುತ್ತಿತ್ತು. ಇನ್ನು ಮದುವೆ ಮನೆಯವರ ಸಂಭ್ರಮ ಹೇಳಿ ಮುಗಿಯುವಂಥದ್ದಲ್ಲ ಬಿಡಿ. ಅದರಲ್ಲೂ ಮಧ್ಯಮ ವರ್ಗದ ಜನರಿಗೆ ಮದುವೆ ಕಾರ್ಯಕ್ರಮ ನಡೆಸುವುದು ಎಂದರೆ ಸಣ್ಣ ವಿಚಾರ ಅಲ್ವೇ ಅಲ್ಲ. ಆರು ತಿಂಗಳ ಹಿಂದೆಯೇ ತಯಾರಿ ಶುರು. ಇನ್ನು ಮದುವೆಯ ದಿನ ಮನೆಯೊಳಗಡೆ ಹುಡುಗಿಯರೆಲ್ಲಾ ಒಂದು ದಿನಕ್ಕೆ ಕನ್ನಡಿ ಪ್ರೇಮಿಗಳಾಗಿರುತ್ತಾರೆ. ಹೊರಗಿನ ಜವಾಬ್ದಾರಿಯೆಲ್ಲಾ ಹುಡುಗರದ್ದೇ. ಎಲ್ಲ ಜವಾಬ್ದಾರಿಗಳಲ್ಲೂ ದೊಡ್ಡ ಜವಾಬ್ದಾರಿ ಎಂದರೆ ಅದು ಅಡುಗೆ. ಉಳಿದ ದಿನಗಳೆಲ್ಲಾ ಹೆಂಗಸರೇ ಅಡುಗೆ ಮಾಡಿದರೆ ಆ ಒಂದು ದಿನ ಮಾತ್ರ ಸಂಭ್ರಮದ ಅಡುಗೆ ಹುಡುಗರದ್ದು.
ಮುಂಜಾನೆ ನಾಲ್ಕು ಗಂಟೆಗೆ ಎದ್ದು ಶುಚಿಯಾಗಿ ಬಂದು ಗಣಪನಿಗೆ ಅಕ್ಕಿ ತೆಂಗಿನಕಾಯಿ ಇಟ್ಟು ಭಕ್ತಿಯಿಂದ ಪ್ರಾರ್ಥಿಸಿ ಒಲೆಗೆ ಬೆಂಕಿ ಹಚ್ಚಿದ ಅನಂತರ ಶುರು ಮಾಡಿದರೆ ಮತ್ತೆ ಆ ದಿನದ ಸಂಧ್ಯಾ ಸಮಯದವರೆಗೂ ಪಾತ್ರೆ ಸದ್ದೇ ಡೋಲು ವಾದ್ಯ, ಅಡುಗೆ ಪರಿಮಳವೇ ಸುಗಂಧ ದ್ರವ್ಯ, ಅಡುಗೆ ಮಾಡುವಾಗ ಆದ ಮಸಿಯೇ ಆ ದಿನದ ಬಟ್ಟೆಯ ಚಂದ. ತರಕಾರಿ ತುಂಡರಿಸುವವರು ಒಂದು ಗುಂಪಾದರೆ ಮಸಾಲೆ ಅರೆಯುವವರು ಇನ್ನೊಂದು ಗುಂಪು.
ಹೀಗೆ ಪ್ರತಿಯೊಂದಕ್ಕೂ ಒಂದೊಂದು ಗುಂಪು. ಇದರ ನಡುವೆ ತಿನ್ನಲು ಏನಾದರು ಸಿಗುವುದಾ ಎಂದು ಬಾಯಿ ಚಪ್ಪರಿಸುತ್ತಾ ಬಿಸಿ ಪಾತ್ರೆಯ ನಡುವೆ ಬರುವ ಮಕ್ಕಳ ಗುಂಪು. ಮಕ್ಕಳಿಗೆ ಕೋಲು ಹಿಡಿದು ಗದರಿಸಲು ಹಿರಿಯರಲ್ಲೊಂದು ಗುಂಪು. ಅಡುಗೆ ರುಚಿಯಾದಾಗ ಸಿಗುವ ಖುಷಿ, ಒಂಚೂರು ತಪ್ಪಾದಾಗ ಬರುವ ಸಿಟ್ಟು, ಕೆಲಸ ತಡವಾದಾಗ ಕೆಲಸ ಕೇಳುವ ಹಾಸ್ಯ ಬೈಗುಳ, ಹೊರಗಿನ ನೆಂಟರು ಬಂದು ಮಾಡುವ ತಮಾಷೆಗೆ ಬರುವ ನಗು ಎಲ್ಲವೂ ಆ ದಿನ ಮನೆಯ ಹಿಂಬದಿಯಲ್ಲಿ ಸಿಗುತ್ತದೆ.
ಹುಡುಗರೆಂದರೆ ಹಾಗೆ ತಾನೆ. ಸಾವಿರ ತಲೆನೋವಿದ್ದರೂ ಸಂಭ್ರಮ ಬಂದಾಗ ಎಲ್ಲವನ್ನೂ ಮರೆತು ಬಿಡುತ್ತಾರೆ. ಇಷ್ಟೇ ಅಲ್ಲ ಅಡುಗೆ ಮಾಡಿದ ಮೇಲೆ ಬಡಿಸುವವರಾರು? ಅದೂ ಹುಡುಗರೇ!ಅರ್ಧ ದಿನ ಮನೆ ಹಿಂಭಾಗದಲ್ಲಿ ಕಳೆದ ನಮಗೆ ಅನ್ನ ಬಡಿಸಲು ನಿಲ್ಲುವಾಗಲೇ ಹೊಸ ಸಂಬಂಧಿಕರ ಪರಿಚಯವಾಗುವುದು. ಅದರಲ್ಲೂ ಕೆಲವೊಂದು ಹಿರಿಯರ ತಮಾಷೆ ಇರುತ್ತೆ. ಎಲ್ಲರದ್ದಾಯ್ತು ನಿಂದ್ಯಾವಾಗ ಮದುವೆ. ಅವರ ಮಾತಿಗೆ ಉತ್ತರ ಕೊಡೋದ ಬೇಡ್ವಾ ಎನ್ನೋ ಉಪ ಪ್ರಶ್ನೆ ನಮ್ಮಲ್ಲಿ. ಎಲ್ಲ ಮುಗಿದ ಅನಂತರ ಮಗಳನ್ನು ಇನ್ನೊಂದು ಮನೆಗೆ ಕಳುಹಿಸುವಾಗ ತಾಯಿಗೆ ಎಷ್ಟು ನೋವಾಗುತ್ತೋ ಅಷ್ಟೇ ನೋವು ನಮಗೆ ಅಡುಗೆ ಪಾತ್ರೆ ತೊಳೆಯಬೇಕು ಅಂದಾಗ ಆಗುವುದು. ಅದಾದ ನಂತರ ಅಡುಗೆ ಮನೆಯ ಕಸ ಗುಡಿಸೋದು ಇನ್ನೊಂದು ತಲೆನೋವು.
ಎಲ್ಲ ಮುಗಿದು ಊಟ ಮಾಡೋವಾಗ ಸೂರ್ಯನಿಗೂ ಸುಸ್ತಾಗಿರುತ್ತೆ. ಎಲ್ಲ ಆದ ಮೇಲೆ ರಾತ್ರಿ ಮಲಗಲು ಹುಡುಗರೆಲ್ಲರೂ ಅಂಗಳದಲ್ಲಿ ಚಾಪೆ ಹಾಕಿ ಮಲಗೋವಾಗ ಆ ದಿನದ ತಮಾಷೆ ಸಂದರ್ಭ ಹೇಳಿ ನಕ್ಕು ನಕ್ಕು ಹೊಟ್ಟೆ ನೋವು ಶುರುವಾಗಿಬಿಡುತ್ತೆ. ಈ ಎಲ್ಲ ಅಡುಗೆ ಸಂಭ್ರಮ ಈಗ ಕ್ಯಾಟರಿಂಗ್ ಎಂಬ ಆಧುನಿಕತೆಯ ಪಾಲಾಗಿದೆ. ಹಾಗಂತ ಕ್ಯಾಟರಿಂಗ್ ತಪ್ಪು ಅಂತ ಹೇಳ್ಳೋದಲ್ಲ. ಒತ್ತಡ ಸುಧಾರಿಸಲು ಈ ರೀತಿ ಮಾಡುವುದೆಲ್ಲಾ ಅಗತ್ಯವೇ. ಆದರೆ ನಾವು ಎಲ್ಲೋ ಒಂದು ಕಡೆ ನಮ್ಮ ಹಿಂದಿನ ಸಂಸ್ಕೃತಿ ಅಡಗಿದ ಮನೆ ಅಡುಗೆಯನ್ನು ಮರೆಯುತ್ತಿದ್ದೇವೋ ಅನಿಸುತ್ತಿದೆ. ನಾವು ಸಣ್ಣ ವಯಸ್ಸಿನಲ್ಲಿ ಅಡುಗೆ ಎಂದಾಗ ಓಡೋಡಿ ಬರುತ್ತಿದ್ದ ಕಾಲ ನಿಧಾನವಾಗಿ ಇತಿಹಾಸ ಸೇರುತ್ತಿದೆ.
-ದೀಪಕ್
ವಿವಿ ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.