UV Fusion: ಬದ್ಧತೆಯೇ ಯಶಸ್ಸಿನ ಮೂಲ ಮಂತ್ರ
Team Udayavani, Dec 22, 2023, 7:30 AM IST
ವಿದ್ಯಾರ್ಥಿಯೊಬ್ಬ ಒಂದು ದಿನದಲ್ಲಿ ತಾನು ಏನೆಲ್ಲಾ ಕೆಲಸಗಳನ್ನು ಮಾಡಬೇಕು ಎಂದು, ಹಿಂದಿನ ದಿನ ಅಂದುಕೊಂಡ. ಆದರೆ ಅಂದುಕೊಂಡ ಕೆಲಸಗಳಲ್ಲಿ ಒಂದನ್ನೂ ಮುಗಿಸಲಾಗಲಿಲ್ಲ. ಇಡೀ ದಿನ ಅರಿವಿಲ್ಲದೇ ಶೂನ್ಯವಾಗಿ ಕಳೆದು ಹೋಯಿತಲ್ಲಾ ಎಂದು ಪಶ್ಚಾತಾಪ ಪಟ್ಟನು.
ಹೀಗೆ ನಾವು ನೀವೆಲ್ಲರೂ ಸಮಯವನ್ನು ಹೇಗೆ ಬಳಸಬೇಕು ಎಂಬುದರ ಅರಿವಿಲ್ಲದೇ ಸಮಯವನ್ನು ವ್ಯರ್ಥ ಮಾಡುತ್ತಿದ್ದೇವೆ. ಕೆಲವರಂತೂ ನನಗೆ ಸಮಯವೇ ಸಿಗುತ್ತಿಲ್ಲವೆಂದು ಹೇಳುವುದುಂಟು. ಸಮಯವನ್ನು ಸೂಕ್ತವಾಗಿ ಬಳಸಿಕೊಳ್ಳುವುದೂ ಒಂದು ಕಲೆ. ಆ ಕಲೆಯನ್ನು ಕರಗತ ಮಾಡಿಕೊಂಡವರು ಅಸಾಮಾನ್ಯ ವ್ಯಕ್ತಿಗಳಾಗಿದ್ದಾರೆ. ಸಮಯ ಯಾರಿಗೂ ಕಾಯುವುದಿಲ್ಲ. ಹೋದ ಕಾಲ ಮತ್ತೆ ಬಾರದು. ಇರುವ ಸಮಯವನ್ನು ಸದ್ಬಳಕೆ ಮಾಡಿಕೊಳ್ಳುವುದು ಆವಶ್ಯಕವಾದುದು.
ಸಮಯದ ಪರಿಪಾಲನೆ ಮಾಡುವುದು ಹೇಗೆ
ನೀವು ಪ್ರತಿದಿನ ಮಾಡಬೇಕಿರುವ ಕೆಲಸಗಳನ್ನು ನಿರ್ವಹಿಸಲು ಠಿಟ ಛಟ lಜಿsಠಿ ಮಾಡುವುದು ಒಳ್ಳೆಯದು. ಮಾಡಬೇಕಾದ ಕೆಲಸಗಳ ಒಂದು ಪುಟ್ಟದಾದ ಲಿಸ್ಟ… ತಯಾರಿಸಿ. ಅದರಲ್ಲಿ ಕೆಲಸದ ಆದ್ಯತೆಯ ಮೇರೆಗೆ ಮಾಡಬೇಕಾದ ಕೆಲಸವನ್ನು ಬರೆದಿಡಿ. ಅವುಗಳನ್ನು ಒಂದೊಂದಾಗಿ ಮುಗಿಸುತ್ತ ಬನ್ನಿ. ಒಂದು ಕೆಲಸ ಮುಗಿಯದ ಹೊರತೂ ಮತ್ತೂಂದಕ್ಕೆ ಹೋಗುವುದು ನಿಷೇಧ.
ಹೀಗೆ ಒಂದು ಪಟ್ಟಿಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವುದು ಒಳ್ಳೆಯದು. ಬೇಗ ಎದ್ದ ಹಕ್ಕಿ ಹೆಚ್ಚು ಆಹಾರವನ್ನು ಮುಕ್ಕುತ್ತದೆ ಎಂಬ ಗಾದೆ ಮಾತೊಂದಿದೆ. ಬೆಳಗ್ಗೆ ಬೇಗ ಏಳುವುದು ಲಾಭದಾಯಕವಾದದ್ದು. ಇದು ನಮಗೆ ದೈಹಿಕವಾಗಿಯೂ ಮಾನಸಿವಾಗಿಯೂ ಆರೋಗ್ಯವನ್ನು ಒದಗಿಸುತ್ತದೆ. ಬೆಳ್ಳಂಬೆಳಗ್ಗೆ ನಮ್ಮ ಮನಸ್ಸು ನಿರ್ಮಲವಾಗಿರುವುದರಿಂದ ಹೆಚ್ಚು ಏಕಾಗ್ರತೆಯನ್ನು ಪಡೆಯಬಹುದು. ಈ ಸಮಯದಲ್ಲಿ ಎರಡು ಗಂಟೆ ಅಭ್ಯಾಸ ಮಾಡುವುದು ದಿನದ 22 ಗಂಟೆಗೆ ಸಮನಾದದ್ದು.
ಮನುಷ್ಯನಿಗೆ ಒಂದು ಕೆಟ್ಟ ಸ್ವಭಾವವಿದೆ. ಮಾಡಬೇಕಾದ ಕೆಲಸವೂ ಕುತ್ತಿಗೆಗೆ ಬರುವ ವರೆಗೂ ಮಾಡುವುದಿಲ್ಲ. ಇದು ಸಾಕಷ್ಟು ಒತ್ತಡವನ್ನು ನೀಡುತ್ತದೆ. ಅಂದಿನ ಕೆಲಸವನ್ನು ಅಂದೇ ಮುಗಿಸುವುದು ಒಳ್ಳೆಯದು. ಒಂದು ಕೆಲಸವನ್ನು ಇಂತಿಷ್ಟು ದಿನಗಳಲ್ಲಿ ಮುಗಿಸುತ್ತೇನೆ ಎಂದು ಗಡುವು ಹಾಕಿಕೊಳ್ಳಿ. ಆ ಅವಧಿಯಲ್ಲಿ ನೀವು ನಿಮ್ಮ ಕೆಲಸವನ್ನು ಮುಗಿಸುತ್ತೀರಿ.
ನಿಮ್ಮ ಬಳಿ ಸದಾ ಇರುವಂತೆ ಚಿಕ್ಕ ಕಾಗದದ ತುಂಡು ಹಾಗೂ ಪೆನ್ನನ್ನು ಇಟ್ಟುಕೊಳ್ಳಿ. ನಿಮ್ಮಲ್ಲಿ ಬರುವ ಹೊಸ ಆಲೋಚನೆಗಳನ್ನು ಆಗಿಂದಾಗ್ಗೆ ಬರೆದಿಡಿ. ಕೇಳಿಸಿಕೊಳ್ಳುವುದು ಒಂದು ಕಲೆ. ಆ ಕಲೆಯನ್ನು ಕರಗತ ಮಾಡಿಕೊಳ್ಳಿ. ನೀವು ನಿರ್ವಹಿಸುವ ಪ್ರತಿ ಕೆಲಸದಲ್ಲಿ ಸಮಯವನ್ನು ಉಳಿಸಲು ಪ್ರಯತ್ನಿಸಿ. ನೀವು ಅಭ್ಯಸಿಸುವ ಕೊಠಡಿ ಹಾಗೂ ಟೇಬಲ್ ಸ್ವಚ್ಛವಾಗಿರಲಿ. ಬೇಡವಾದ ಕಡತಗಳನ್ನು ಆಗಿಂದಾಗ್ಗೆ ವಿಲೇವಾರಿ ಮಾಡುತ್ತಿರಿ.
ನಿಮ್ಮ ಕೆಲಸಗಳಲ್ಲಿ ಬದ್ಧತೆ ಇರಲಿ. ಮೊಬೈಲ್ ಹಾಗೂ ನಿಮ್ಮನ್ನು ಋಣಾತ್ಮಕವಾಗಿ ಪ್ರಚೋದಿಸುವ ಗೆಳೆಯರಿಂದ ಆದಷ್ಟು ದೂರವಿರುವುದು ಸೂಕ್ತ. ಮಾಡಬೇಕಾದ ಕೆಲಸವನ್ನು ಒಂದು ಚಿಕ್ಕ ಕಾಗದದ ಮೇಲೆ ಬರೆದು ಆಗಾಗ ಅದನ್ನು ಗಮನಿಸುತ್ತಿದ್ದರೆ ತಾನಾಗಿಯೇ ಕೆಲಸ ಮುಗಿಸುವ ಹುಮ್ಮಸ್ಸು ಬರುತ್ತದೆ. ನಮ್ಮ ಕೆಲಸದಲ್ಲಿ ಬದ್ಧತೆ ಬಹಳ ಮುಖ್ಯ. ಸೂಕ್ತ ಯೋಜನೆಯನ್ನು ಮಾಡಿಕೊಂಡ ಕಾರ್ಯ ಪ್ರವೃತ್ತರಾದರೆ ಯಶಸ್ಸಿಗೆ ಹತ್ತಿರವಾಗುತ್ತೀರಿ.
ಸಂತೋಷ್ ಇರಕಸಂದ್ರ
ವಿ.ವಿ., ತುಮಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.