![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Aug 30, 2020, 4:45 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸಾಧಿಸುವ ಛಲವಿದ್ದರೂ ಮುಂದುವರಿಯಲಾಗದ ಕೀಳರಿಮೆ, ಹಿಂಜರಿಕೆ. ಪ್ರತಿಭೆ ಇದ್ದರೂ ಅನಾವರಣಗೊಳಿಸಲಾಗದ ಅಪಮಾನಗಳು ಮನುಷ್ಯನನ್ನ ಕಟ್ಟಿಹಾಕುತ್ತವೆ.
ಇಂತಹ ಸನ್ನಿವೇಶದಲ್ಲಿ ನಾವು ಆತ್ಮವಿಶ್ವಾಸವನ್ನು ತಡಕಾಡಲು ಶುರು ಮಾಡುತ್ತೇವೆ.
ಅಸಲಿಗೆ ಆತ್ಮವಿಶ್ವಾಸವನ್ನು ಪಡೆದುಕೊಳ್ಳಬೇಕೆನ್ನುವ ಹಂಬಲವನ್ನು ಯಾವ ವ್ಯಕ್ತಿ ಹೊಂದುತ್ತಾನೆ. ಅವನಿಗೆ ಜೀವನದಲ್ಲಿ ಆತ್ಮವಿಶ್ವಾಸವೇ ಆಧಾರ ಸ್ತಂಭವಾಗಿ ನಿಲ್ಲುತ್ತದೆ.
“ಎಷ್ಟು ದೇವರನ್ನ ನಂಬಿದರೇನು ನೀನು ಮೊದಲು ನಿನ್ನ ನೀ ನಂಬು’ ಎಂಬ ಕುವೆಂಪುರವರ ವಾಣಿ ಆತ್ಮವಿಶ್ವಾಸಕ್ಕೆ ಮದ್ದಿನಂತಿದೆ. ಮನುಷ್ಯನ ಮೊದಲನೆಯ ಶತ್ರು ತನ್ನಲ್ಲಿರುವ ಅವಿಶ್ವಾಸ, ಅಪನಂಬಿಕೆ. ಬಹಳಷ್ಟು ಮಂದಿಗೆ ತನ್ನಲ್ಲಿರುವ ಶಕ್ತಿಯ ಬಗ್ಗೆ ಅರಿವಿರುವುದಿಲ್ಲ.
ಏಕೆಂದರೆ ತಮ್ಮನ್ನ ತಾವು ಎಂದು ಪರೀಕ್ಷಿಸಿ ಕೊಂಡಿರುವುದಿಲ್ಲ. ಯಾವುದೇ ಸೃಜನಾತ್ಮಕತೆಗೆ ಪ್ರಯತ್ನಿಸದೆ ಕೇವಲ ಯಾಂತ್ರಿಕವಾದ ಜೀವನವನ್ನು ಸಾಗಿಸುತ್ತಿರುತ್ತಾರೆ. ಪ್ರಪಂಚದಲ್ಲಿ ಸೃಷ್ಟಿಯಾಗುವ ಪ್ರತಿಯೊಂದು ಜೀವಿಗೂ ತನ್ನದೇ ಆದ ವಿಭಿನ್ನ ಅವಲೋಕನ, ಆಲೋಚನೆ, ವಿಮರ್ಶೆ ಶಕ್ತಿ ಇರುತ್ತದೆ. ಆದರೆ ನಾವು ನಮ್ಮನ್ನು ಆತ್ಮಾವಲೋಕನ ಮಾಡಿಕೊಂಡಿರುವುದಿಲ್ಲ. ಬೇರೆಯವರು ಸಾಧಿಸುವುದನ್ನು ನೋಡಿ ಹಾಗೆಯೇ ಇದ್ದು ಬಿಡುತ್ತೇವೆ. ಬೇರೆಯವರನ್ನು ನೋಡಿದ ಮೇಲಾದರೂ ಹೊಸ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ. ಅದೇ ನಾವು ಮಾಡುವ ದೊಡ್ಡ ತಪ್ಪು.
ಬಿಲ್ವಿದ್ಯೆಯನ್ನು ಕಲಿಯಲು ಹೊರಟ ಏಕಲವ್ಯನಿಗೆ ಗುರುಗಳು ಅವಕಾಶ ನೀಡದಿದ್ದಾಗ ತನ್ನ ವಿಶ್ವಾಸವನ್ನೇ ಪರೀಕ್ಷೆ ಮಾಡಿ ನೋಡುತ್ತಾನೆ ಆಗ ಆತ್ಮವಿಶ್ವಾಸವೇ ಅವನನ್ನು ಸಕಲ ಪಾರಂಗತನಾಗಿ ಮಾಡುತ್ತದೆ. ಆದ್ದರಿಂದ ನಾವು ನಮ್ಮಲ್ಲಿರುವ ಹಿಂಜರಿಕೆ, ಋಣಾತ್ಮಕ ಭಾವನೆ ಬಿಟ್ಟು ಸಕರಾತ್ಮಕ ಚಿಂತನೆಗಳ ಬಗ್ಗೆ ಆಲೋಚಿಸುತ್ತಾ ಹೋದರೆ ಗೆಲುವು ತನ್ನಿಂದತಾನಾಗಿಯೇ ಒಲಿಯುತ್ತದೆ. ಹೀಗಾಗಿ ನಾವು ಭೂತ- ಭವಿಷ್ಯತ್ ಕಾಲದ ಚಿಂತನೆ ಬಿಟ್ಟು ವರ್ತಮಾನದಲ್ಲಿ ಪ್ರಯತ್ನ ಪಟ್ಟರೆ ಕನಸು ನನಸಾಗುತ್ತದೆ. ಗೆಲುವು ನಿಶ್ಚಿತ.
ಸಂಪತ್ ಶೈವ, ಸಂತ ಫಿಲೋಮಿನಾ ಕಾಲೇಜು, ಮೈಸೂರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.