ಕೋವಿಡ್ ನಿಂದ ಶಿಕ್ಷಣಕ್ಕೆ ಕುತ್ತು
Team Udayavani, Jun 21, 2021, 5:43 PM IST
ಜೀವನ ಎಂದರೆ ಕನಸನ್ನು ನನಸು ಮಾಡುವುದು. ಎಲ್ಲರಿಗೂ ಒಂದಿಲ್ಲೊಂದು ಆಸೆಗಳಿರುತ್ತವೆ. ಅಲ್ಲದೆ ಒಳ್ಳೆ ರೀತಿಯ ಶಿಕ್ಷಣ ಪಡೆದುಕೊಳ್ಳಬೇಕೆಂಬ ಹಂಬಲವಿರುತ್ತದೆ.
ಅದಲ್ಲದೆ ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದ ಪಾತ್ರ ಅತೀ ಮಹತ್ವದ್ದು. ಈ ಮಹಾಮಾರಿ ಕೊರೊನಾದಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಅಲ್ಲೋಲಕಲ್ಲೋಲವಾಗಿದೆ. ಸರಕಾರ ಶಾಲಾ-ಕಾಲೇಜುಗಳು ಮತ್ತು ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳನ್ನು ಬಂದ್ ಮಾಡಿ, ಆನ್‌ಲೈನ್ ಮೂಲಕ ಪಾಠ ಮಾಡಲು ಹೇಳಿದೆ. ಆದರೆ ಕೆಲವು ವಿದ್ಯಾರ್ಥಿಗಳಿಗೆ ಮೊಬೈಲ್ ಇಲ್ಲ, ಹಳ್ಳಿಗಳಲ್ಲಿ ನೆಟ್‌ವರ್ಕ್ ಸರಿಯಾಗಿಲ್ಲ.ಜತೆಗೆ ಅಷ್ಟೊಂದು ಪರಿಣಾಮಕಾರಿಯೂ ಇಲ್ಲ. ಬಡತನದಲ್ಲಿ ನೊಂದು-ಬೆಂದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ತರಬೇತಿ ಪಡೆದು ಏನನ್ನಾದರೂ ಸಾಧಿಸಬೇಕೆಂಬ ಛಲದಿಂದ ಪಟ್ಟಣಕ್ಕೆ ಬಂದು ಮನೆಗೆ ನಿರಾಸೆಯಿಂದ ಮರಳಿದ್ದಾರೆ.
ಈ ಕೋವಿಡ್ ಅಲೆಯಲ್ಲಿ ಎಷ್ಟೋ ವಿದ್ಯಾರ್ಥಿಗಳ ಸರಕಾರಿ ನೌಕರಿ, ಪೊಲೀಸ್ ಹಾಗೂ ಇನ್ನಿತರ ಸರಕಾರಿ ಹುದ್ದೆಗಳು ಪಡೆಯುವ ವಯೋಮಿತಿ ಮೀರಿದೆ. ಎಷ್ಟೋ ವಿದ್ಯಾರ್ಥಿಗಳು ತಂದೆ-ತಾಯಿಗಳ ಕನಸುಗಳನ್ನು ನುಚ್ಚುನೂರು ಮಾಡಿದೆ. ಆದ್ದರಿಂದ ಸರಕಾರವು ಈ ಹುದ್ದೆಗಳ ವಯೋಮಿತಿಯನ್ನು ಹೆಚ್ಚಿಸಬೇಕಿದೆ. ಕೂಲಿಕಾರ್ಮಿಕರ ಪರದಾಟ, ಬಡವರ ಹಸಿವಿನ ಕೂಗು, ಚಿಕ್ಕ-ಚಿಕ್ಕ ಮಕ್ಕಳ ಹಸಿವಿನ ನರಳಾಟದ ಮಧ್ಯೆ ವಿದ್ಯಾರ್ಥಿಗಳು ಭವಿಷ್ಯದ ಚಿಂತೆಯಲ್ಲಿ ಮೌನಿಯಾಗಿದ್ದಾರೆ. ಸರಕಾರ ಸರಿಯಾದ ಕ್ರಮ ತೆಗೆದುಕೊಂಡು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುವ ಜತೆಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡುವುದು ಸರಕಾರದ ಜವಾಬ್ದಾರಿಯಾಗಿದೆ.
ಮಲ್ಲಿಕಾರ್ಜುನ ಗಾಯಕವಾಡ
ವಿಜಯಅದ್ಯಾಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.