ಭಗವಂತ ನೀಡಿದ ಶಾಪ
Team Udayavani, Jun 27, 2021, 9:47 AM IST
ಶಾಪ…
ವಾಹನದ ಸದ್ದು ಸಪ್ಪಳವಿಲ್ಲದೆ ಊರುಕೇರಿ ಹಳ್ಳಿದಿಲ್ಲಿಯೆಲ್ಲವೂ ಸ್ಥಬ್ದ
ಕೇಳಬೇಕೆನಿಸಿದರೂ ಕೇಳಲಾಗದು
ಶಾಲೆಯಲ್ಲಿನ ಮಕ್ಕಳ ಆಟ, ಪಾಠ, ತಟ್ಟೆ ಶಬ್ದ
ವಾದ್ಯ, ವಾಲಗ, ಚೆಂಡೆ, ಮದ್ದಳೆ
ಆಡಂಬರದ ಡಿಜೆ ಇಲ್ಲದೆ ಊರಿಗೆ ಊರೇ ನಿಶ್ಯಬ್ದ
ನಾನು ನನ್ನದು ಎನ್ನುವ ಅಹಂಕಾರಿ ಜನ್ಮ
ಕೊನೆಗೊಂದು ಹನಿ ನೀರಿಲ್ಲದೆಯೇ ಪರಿಶುದ್ಧ
ಹಲವು ರೂಪದಲ್ಲಿ ರಣಕೇಕೆ ಹಾಕುತಿಹುದು
ಕರುಣೆಯಿಲ್ಲದ ಮಾರಿ ಕೊರೊನಾ
ಬಡವ ಬಲ್ಲಿದ ಸಿರಿವಂತನೆನ್ನದೆ
ಹಾರಿ ಹೋಗುತ್ತಲಿಹುದು ಪ್ರಾಣ
ಎಚ್ಚರಿಕೆಯಿಲ್ಲದ ಜೀವಕ್ಕೆ ನಿರ್ಲಕ್ಷ್ಯದ
ಪಾಡಿಗೆ ತಪ್ಪದಯ್ಯ ಮರಣ
ಕ್ಷಣ ಮಾತ್ರದಲ್ಲಿ ಹಾಳುಕೆಡುಹದಿರಿ
ಹೆತ್ತಮಾತೆಯ ಗರ್ಭದ ಆ ನಿಮ್ಮ ಪುಣ್ಯ ಜನನ
ಹಚ್ಚಹಸುರಿನ ತಂಪು ಕಂಪಿನ ಸೊಬಗಿನ
ರುಂಡ ಕತ್ತರಿಸಿದ ಮಾನವಭೂಪ
ಪ್ರಕೃತಿ ಮಾತೆಯ ಮನ ಕೆಣಕಿದರೆ
ಬರದಿರುವುದೇ ಆಕೆಗೆ ಕೋಪ
ಹೆಜ್ಜೆಹೆಜ್ಜೆಗೂ ಕಜ್ಜಕಾರ್ಯದಲಿ
ದ್ವಿಗುಣವಾಯಿತು ನರಜನ್ಮದ ಪಾಪ
ಈ ಕೊರೊನಾ ಎನ್ನುವುದು ಏನಿಲ್ಲ ಮನುಜ!!!
ನೀ ಮಾಡಿದ ಪಾಪದ ಪ್ರತಿಫಲ ಭಗವಂತ
ನೀಡಿದ ಶಾಪ
-ಕಿರಣ್ ಕಕ್ಕಿಂಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.