UV Fusion: ಚಮತ್ಕಾರಿ ಪಂತ್!
Team Udayavani, Jan 12, 2024, 2:28 PM IST
ಸಾಮಾನ್ಯವಾಗಿ ಕ್ರಿಕೆಟಿನಲ್ಲಿ ಒಂದು ದೊಡ್ಡ ಮೊತ್ತ ಚೇಸ್ ಅನ್ನು ಹೆಚ್ಚಾಗಿ ಟಿ – ಟ್ವೆಂಟಿ ಮಾದರಿಯಲ್ಲಿ ನೋಡಬಹುದು ಏಕದಿನ ಸರಣಿಯಲ್ಲಿ ನೋಡಬಹುದು, ಆದರೆ ಟೆಸ್ಟ್ ನಲ್ಲಿ ಸಾಧ್ಯವೇ ?
ಟೆಸ್ಟ್ ಎಂದರೆ ಕುಟುಕಿ ಆಡುವ ಆಟ ನೋಡಲು ತುಂಬಾ ಬೋರ್ ಎಂದು ಕೊಂಡು ಕತ್ತಲೆಯಲ್ಲಿ ಇದ್ದಂತ ಮಂದಿಗೆ ಭಾರತದ ಪರವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಒಂದು ಮಹತ್ತರ ಸ್ಕೋರ್ ಅನ್ನು ಚೇಸ್ ಮಾಡಿ ಬೆಳಕು ಚೆಲ್ಲಿದ ವ್ಯಕ್ತಿ ಎಂದರೆ ಅದು ರಿಷಬ್ ಪಂತ್.
ಇವೆಲ್ಲವೂ ನಡೆದಿದ್ದು 2021 ರ ಬೋಡರ್ ಗಾವಸ್ಕರ್ ಟ್ರೋಫಿಯಲ್ಲಿ. ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ರಿಸಬನೇ ನೆಲದಲ್ಲಿ ಮೊದಲು ಬ್ಯಾಟಿಂಗ್ ತೆಗೆದು ಕೊಂಡಿತು. ಆರಂಭಿಕ ಬ್ಯಾಟರ್ ಗಳನ್ನು ಪೆವಿಲಿಯನ್‌ಗೆ ಕಳಿಸಿದ ಭಾರತ ತಂಡದ ಬೌಲರ್ಸ್‌ಗೆ ಮುಳುವಾಗಿ ಕಂಡು ಬಂದಿದ್ದು, ಲಾಬುಶೇನ್ ಹಾಗೂ ಮಧ್ಯಮ ಕ್ರಮಾಂಕದ ಆಟಗಾರರು. 369 ರನ್ ಗಳಿಸಿದ ಆಸ್ಟ್ರೇಲಿಯಾ 2ನೇ ದಿನಕ್ಕೆ ಭಾರತವನ್ನು ಚಾಕುರುವಾದ ಬೌಲಿಂಗ್ ದಾಳಿಯಿಂದ ವಿಕೆಟ್ ಮುರಿದರು.
ಮೂರನೇ ದಿನ ಬ್ಯಾಟಿಂಗ್ ಆರಂಭಿಸಿದ ಆಸ್ಸಿಸ್ ತಂಡ ಹಿಗ್ಗಾ ಮುಗ್ಗ ತಳಿಸಿ 2 ದಿನಗಳ ಕಾಲ ಸತತವಾಗಿ ಬ್ಯಾಟಿಂಗ್ ಆಡಿದರು. ಭಾರತದ ವೇಗಿಯಾದ ಮೊಹಮದ್ ಸಿರಾಜ್ ಬ್ಯಾಟರ್‌ಗಳನ್ನು ತಮ್ಮ ಅತ್ಯುತ್ತಮ ಬೌಲಿಂಗ್ ದಾಳಿಯಿಂದ ಬ್ಯಾಟರ್ ಗಳನ್ನು ತಪ್ಪಾದ ಶಾಟ್ ಆಯ್ಕೆ ಮಾಡಿಕೊಂಡು ವಿಕೆಟ್ ಚೆಲ್ಲುವಂತೆ ಮಾಡಿದರು.
4 ದಿನ ಪೂರ್ತಿಯಾಗಿ ಆಡಿ ಭಾರತಕ್ಕೆ ಕೊಟ್ಟಂತಹ ಟಾರ್ಗೆಟ್ ಬೃಹತ್ 329. ಟೆಸ್ಟ್ ಕ್ರಿಕೆಟ್ ನ ಕೊನೆಯ ದಿನದಲ್ಲಿ ಇಷ್ಟು ದೊಡ್ಡ ರನ್ ಚೇಸ್ ಎಂದರೆ ಅಷ್ಟು ಸುಲಭವಲ್ಲ. ಭಾರತ ತಂಡದಲ್ಲಿ ಸ್ಥಿರತೆಗೆ ಮೂಲವೆ ನಾವು ಎಂದು ಆಡಿ ಕೊಟ್ಟಂತ ಆಟಗಾರರು ಕೇವಲ ಇಬ್ಬರು ಪೂಜಾರ ಹಾಗೂ ಗಿಲ್.
ಒಂದೆಡೆ ವಿಕೆಟ್ ಪತನ ಗೊಳ್ಳುತ್ತಿದೆ, ಟಾರ್ಗೆಟ್ ನ ಒತ್ತಡ ಏರುತ್ತಿದೆ ಇಂತಹ ಕಷ್ಟದ ಸಮಯದಲ್ಲಿ ಸಂಜೆಯಲ್ಲಿ ಅರಳಿದ ಬ್ರಹ್ಮ ಕಮಲ ಹೂವಿನಂತೆ ಹೊರಬಿದ್ದ ಪ್ರತಿಭೆಯೇ ರಿಷನ್ ಪಂತ್.
ಒಂದೆಡೆ ವಿಕೆಟ್ ಉರುಳುತ್ತ ಇದ್ದರು ತನ್ನ ಆಟ ತಾನು ಆಡುವುದು ಎಂದು ಆಡುತ್ತ ನೋಡುಗರಿಗೆ ಇದು ಟೆಷ್ಟೋ? ಅಥವಾ ಟಿ – ಟ್ವೆಂಟಿಯೋ ಎಂದು ತಿಳಿಯಲು ಗೊಂದಲದಲ್ಲಿ ಸಿಕ್ಕಿಸಿದ ಚಮತ್ಕಾರಿ ಪಂತ್.
ಒಟ್ಟು 138 ಬಾಲ್ ನಲ್ಲಿ 89 ರನ್ ಗಳಿಸಿ ಪಂದ್ಯಾವನ್ನು ಸೋಲಿನ ಸೋಪಾನದಿಂದ ಗೆಲುವಿನ ಹೂ ದಾಣಕ್ಕೆ ಎಳೆದು ಕೊಂಡು ಹೋದರು. ಇವರೊಂದಿಗೆ ಅರ್ಧಷ್ಟು ಕೈ ಜೋಡಿಸಿದ ಆಟಗಾರ ಪೂಜಾರ 211 ಬಾಲ್‌ಗೆ 56 ರನ್ ಗಳಿಸಿ ಸಾಥ್ ಕೊಟ್ಟರು ಕೊನೆಯ ತನಕ ಬೌಲರ್ ಎದುರು ನಿಲ್ಲಲು ಸಾಧ್ಯವಾಗಲಿಲ್ಲ. ಗೆಲುವಿನ ಅಸೆಯನ್ನೇ ಬಿಟ್ಟಂತಹ ತಂಡಕ್ಕೆ ಗೆಲುವಿನ ರುಚಿ ತೋರಿಸಿಕೊಟ್ಟು ಶತಕ ವಂಚಿತರದರೂ ಸಹ ತಂಡದ ಗೆಲ್ಲುವಿಗೆ ರೂವಾರಿಯಾದರು.
ಆಸ್ಟ್ರೇಲಿಯಾ ನೆಲದಲ್ಲಿ ಅವರ ಜನರ ಮಧ್ಯ ದೊಡ್ಡ ಮೊತ್ತವನ್ನು ಅಷ್ಟು ಜನರ ಮಧ್ಯೆ ಹೊಡೆದು ಬೀಗುವುದು ಅಂದರೆ ಅಷ್ಟೇ ಸುಲಭವಲ್ಲ. ಅಲ್ಲಿಂದ ಶುಭಾರಂಭ ಗೊಂಡ ಪಂಥರ್ಭಟ ಮತ್ತೂಮ್ಮೆ ಆಸ್ಟ್ರೇಲಿಯಾ ವಿರುದ್ಧವೇ 159 ರನ್ಸ್ ಭಾರಿಸಿದರು. ಆಸ್ಟ್ರೇಲಿಯಾವನ್ನು ಅವರ ಬ್ರಿಸಬನೇ ಪಿಚ್ ನಲ್ಲಿಯೇ ಹೊಡೆದು ಗಬ್ಬ ಹೀರೋ ಎಂಬ ಹೆಸರನ್ನು ಪಟ್ಟಲಂಕಾರ ಮಾಡಿದರು.
ರಕ್ಷಿತ್ ಆರ್.ಪಿ
ಹೆಬ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.