UV Fusion: ಅಪ್ಪ ಅಂದ್ರೆ ಆಕಾಶ
Team Udayavani, Dec 17, 2023, 8:00 AM IST
ಅಪ್ಪ ಅಂದ್ರೆ ನಿಷ್ಕಲ್ಮಶ ಪ್ರೀತಿಯನ್ನು ಧಾರೆಯೆರೆದು ಕೊಡುವವನು. ಅಪ್ಪ ಅಂದ್ರೆ ಕೇಳಿದ್ದನ್ನೆಲ್ಲ ಕೈಲಾದಷ್ಟು ಕೊಡಿಸುವವನು… ಅಪ್ಪ ಅಂದ್ರೆ ಕುಟುಂಬದ ಶಕ್ತಿ… ಮಕ್ಕಳಿಗೆ ಮೊದಲ ಹೀರೋ… ಅಪ್ಪ ಅಂದ್ರೆ ಆಕಾಶ…
ಆದರೆ ಸಣ್ಣ ವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡ ನನಗೆ ಅದು ತುಂಬಲಾರದ ನಷ್ಟ ಎಂಬ ವಾಸ್ತವ ಅರಿವಾದದ್ದು ಗೆಳೆಯರು ಹರಟೆ ಹೊಡೆಯುವ ಮಧ್ಯೆ ಅವರು ಹೇಳುತ್ತಿದ್ದ ಅಪ್ಪಂದಿರ ಕಥೆಗಳನ್ನು ಕೇಳಿದಾಗ!
ಗೆಳೆಯರು ನನ್ನಪ್ಪ ಅದು ತೆಗೆದುಕೊಟ್ಟರು, ನನ್ನಪ್ಪ ಅಲ್ಲಿಗೆ ಕರೆದುಕೊಂಡು ಹೋದರು ಎಂದೆಲ್ಲಾ ಖುಷಿಯಿಂದ ಹೇಳುವಾಗ ನನಗೆ ಮನಸ್ಸಿನ ಮೂಲೆಯಲ್ಲಿ ಮೂಡಿದ ಪ್ರಶ್ನೆಯೊಂದೇ – ನನ್ನಪ್ಪನನ್ನು ಆ ವಿಧಿ ಯಾಕೆ ನನ್ನಿಂದ ದೂರ ಮಾಡಿತು?’
ಪ್ರಶ್ನೆ ಮೂಡಿದ ವೇಳೆಯಲ್ಲಿ ಕಣ್ಣುಗಳು ಒದ್ದೆಯಾಗಿತ್ತವೆಯೇ ಹೊರತು ಉತ್ತರ ಸಿಗಲಾರದು.
ಅಮ್ಮ ನನಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡರೂ, ಅಪ್ಪನ ಹಿಡಿಪ್ರೀತಿಯ ಬಯಕೆ ಸಹಜವಾಗಿ ಆಗುತ್ತದೆ. ಯಾರೇ ಹೊಸದಾಗಿ ಭೇಟಿಯಾದಾಗಲೂ ಅಪ್ಪ ಏನು ಮಾಡುತ್ತಾರೆ ? ಎಂಬ ಪ್ರಶ್ನೆ ನನ್ನ ಮುಂದೆ ಇಟ್ಟಾಗ ಮನಸ್ಸು ಭಾರವಾಗುತ್ತದೆ. ಅಪ್ಪನ ಪ್ರೀತಿಯನ್ನು ಅನುಭವಿಸುವ ಭಾಗ್ಯವೇ ಇಲ್ಲದಾಯಿತಲ್ಲ ಎಂದು.
ಅಪ್ಪ, ಮರಳಿ ಬಾರದ ಲೋಕಕ್ಕೆ ನೀನು ಅದಾಗಲೇ ಹೋಗಿ ಆಗಿದೆ. ನಿನ್ನನ್ನು ನೆನೆಯದ ದಿನಗಳಿಲ್ಲ…
ಕನಸಲ್ಲಿ ದಿನವೂ ಬರುವ ನಿನ್ನ ಇರುವಿಕೆಯನ್ನು ಬಯಸದ ರಾತ್ರಿಗಳಿಲ್ಲ… ಬಯಸಿದರೂ ಬರುವುದಿಲ್ಲ ಎಂದು ತಿಳಿದಿದ್ದರೂ ಮತ್ತೆ ಮತ್ತೆ ನೀನು ಬಂದು ನಮ್ಮನ್ನು ಸೇರುವ ಕನಸನ್ನು ಕಾಣುತ್ತೇನೆ.
ನನಗೆ ಗೊತ್ತು… ನಾನೆಷ್ಟೇ ಎತ್ತರಕ್ಕೆ ಬೆಳೆದರೂ ನೀನು ನನ್ನ ಕೈಗೆಟಕದುವುದಿಲ್ಲ… ಯಾಕೆಂದರೆ ನೀನು ದೂರದಲ್ಲಿರುವ ಆಕಾಶ….
ಹೌದು! ಅಪ್ಪ ಅಂದ್ರೆ ಆಕಾಶ…
-ಕಮಲಾಕ್ಷ
ವಿವೇಕಾನಂದ ಕಾಲೇಜು ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.