ಅಪ್ಪನ ಮುಖ ಗಡುಸಾದರು ಮನಸ್ಸು ಬೆಣ್ಣೆ

Team Udayavani, Jul 21, 2020, 2:48 PM IST

Dad-Spl

ಮಕ್ಕಳ ಜೀವನದಲ್ಲಿ ಅಮ್ಮ ದೇವರಾದರೆ, ಅಪ್ಪ ಗುಮ್ಮನಾಗುತ್ತಾನೆ. ಅಪ್ಪ ಹೊಡೆಯದಿದ್ದರೂ, ಗದರದಿದ್ದರೂ “ಅಪ್ಪನಿಗೆ ಹೇಳುತ್ತೇನೆ’ ಎಂದು ಅಮ್ಮ ಹೆದರಿಸುವ ಮೂಲಕ ಮಗುವಿನೊಂದಿಗಿನ ಆ ಸಲುಗೆಯನ್ನು ಪ್ರಥಮ ಹಂತದಲ್ಲೆ ಕಿತ್ತುಕೊಳ್ಳುತ್ತಾಳೆ. ಇದೇನೂ ಅವಳ ಸ್ವಾರ್ಥವಲ್ಲ, ಮಗುವಿನ ಏಳಿಗೆಗೆಂದು ನಾವು ಅರಿಯಬೇಕು. ಮಮತೆಯ ಆಗರ ಅಪ್ಪ ತನ್ನ ಬದುಕನ್ನು ಮಗುವಿನ ಏಳ್ಗೆಗಾಗಿ ಮುಡಿಪಾಗಿಟ್ಟು ಜೀವನದುದ್ದಕ್ಕೂ ತೆರೆಮರೆಯ
ಹೋರಾಟಗಾರನಂತೆ ಇರುತ್ತಾನೆ.  ಅಪ್ಪನ ಪ್ರೀತಿ ಅರಿಯದ ವಯಸ್ಸಿಗೆ ಭಯ; ಅರಿತ ವಯಸ್ಸಿಗೆ ಪ್ರೀತಿ. ನುರಿತ ಮೇಲೆ ನಂಬಿಕೆ. ಒಂದು ಬಗೆಯಲ್ಲಿ ನಮ್ಮ ಸಾಧನೆ ಮೊದಲ ಮೆಟ್ಟಿಲು ಅಪ್ಪ.

ಅಪ್ಪ ಎನ್ನುವಾಗ ನನ್ನಲ್ಲೊಂದು ಶಕ್ತಿ ಎಚ್ಚರಗೊಳ್ಳುತ್ತದೆ.  ಬದುಕಿನ ಬವಣೆಗಳನ್ನು ಅಪ್ಪ ಕ್ಷಣಾರ್ಧದಲ್ಲಿ ದೂರ ಮಾಡಿ ಸಾಧನೆಗೆ ಮಾರ್ಗವಾಗುತ್ತಾನೆ. ಅಪ್ಪನ ಜತೆ ನಾನು ಮಾತನಾಡಿದ್ದು ಕಡಿಮೆಯೇ, ಆದರೆ ನಮ್ಮಿಬ್ಬರಿಗೂ ಸೇತುವೆಯಾದವರು ಅಮ್ಮ. ನನ್ನೆಲ್ಲ ಬೇಕು ಬೇಡಗಳನ್ನು ಅಮ್ಮನ ಮೂಲಕವೇ ಅಪ್ಪನಿಂದ ಈಡೇರಿಸಿಕೊಳ್ಳುತ್ತಿದ್ದೆ. ಒಂದು ಬಗೆಯಲ್ಲಿ ಅಮ್ಮ ಸೂತ್ರಧಾರಿ, ಅಪ್ಪ ಪಾತ್ರಧಾರಿ. ನಾನು ಚಿಕ್ಕವನಿದ್ದಾಗ ಕಾಲು ಎಡವಿ ರಕ್ತ ಬಂದಿರುವುದನ್ನ ಕಂಡ ಅಪ್ಪ ಔಷಧಕ್ಕಾಗಿ ತಡಕಾಡುತಿದ್ದ ಆ ಘಟನೆ ನೆನೆದರೆ ಕಣ್ಣಂಚಲಿ ನೀರು ಜಾರುತ್ತದೆ. ಆದರೂ ಅವರ ವ್ಯಕ್ತಿತ್ವ, ಪ್ರೀತಿ ಮಮತೆಯನ್ನು ಅರಿಯಲು ನನಗೆ ಇಷ್ಟು ವರ್ಷಗಳು ಬೇಕಾದವು. ಅಂದು ಶತ್ರುವಿನಂತಿದ್ದ ಅಪ್ಪ ಇಂದು ನನ್ನ ಜೀವನದ ಮಿತ್ರನಾಗಿದ್ದಾನೆ. ತಂದೆ ಸದಾ ಕಾಲ ಕುಟಂಬದ ನೇಕಾರನಂತೆ ದುಡಿಮೆಯಲ್ಲೇ ತನ್ನ ಜೀವನದ ಸುಖ -ದುಃಖಗಳನ್ನ ದೂರವಿರಿಸಿ ಮಕ್ಕಳ ಏಳಿಗೆಗಾಗಿ ಹಪಹಪಿಸುತ್ತಾನೆ. ಪ್ರತಿಯೊಬ್ಬ ತಂದೆ ಮಗುವಿನ ಜೀವನ ರೂಪಿಸುವಲ್ಲಿ ಹಿಂಜರಿಯಲಾರ. ಅಪ್ಪ ಗಡುಸು ಮುಖವುಳ್ಳ ಮಮತೆಯ ಮನಸ್ಸು. ತಂದೆ ತಾಯಿಯರ ಮುಪ್ಪಿನ ಕಾಲದಲ್ಲಿ ಅವರಿಗೆ ಸದಾ ಚಿರಋಣಿಯಾಗಿರೋಣ. ಅವರನ್ನು ಯಾವತ್ತೂ ದೂರ ಮಾಡದಿರೋಣ. ವೃದ್ಧಾಶ್ರಮದಂತಹ ಕೇಂದ್ರಗಳತ್ತ ನಮ್ಮ ತಂದೆ ತಾಯಿಯರನ್ನ ಕೊಂಡೊಯ್ಯದಿರೋಣ.

ವಿರೇಶ ಹಾರೊಗೇರಿ , ಧಾರವಾಡ ವಿಶ್ವವಿದ್ಯಾನಿಲಯ

ಟಾಪ್ ನ್ಯೂಸ್

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

1-urmila

Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು

Yadgiri: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ

Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ

Qatar: ಕತಾರ್‌ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ

Qatar: ಕತಾರ್‌ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ

priyank-kharge

Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್‌…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ

1-geeta

Udupi; ಬೃಹತ್ ಗೀತೋತ್ಸವ: ಭಗವದ್ಗೀತಾ ಯಜ್ಞ ಸಂಪನ್ನ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ

Court-1

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರ ಕೊ*ಲೆ ಪ್ರಕರಣ

1-urmila

Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.