Deepavali: ಗುಡ್ಡದ ಮೇಲ್ಲೊಂದ್ ದೀಪಾವಳಿ
Team Udayavani, Nov 12, 2023, 7:45 AM IST
ದೀಪಾವಳಿಯೆಂದರೆ ನನಗೆ ಗೂಡುದೀಪ ನೆನಪಾಗುತ್ತದೆ. ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಪಟಾಕಿಯ ಕ್ಷಣದ ಬೆಳಕು ಎಲ್ಲರಿಗೂ ಖುಷಿಯನ್ನು ನೀಡಿದರೆ. ಊರಿನ ತುತ್ತ ತುದಿಯ ಗುಡ್ಡದ ಮೇಲೆ ಕುಳಿತು ಊರಿನವರು ಆಚರಿಸುವ ದೀಪಾವಳಿ ಹಬ್ಬದ ಸೊಬಗನ್ನು ನೋಡಲು ನಾವು ಗುಡ್ಡವನ್ನು ಹತ್ತುತಿದ್ದ ಕಾಲ ನೆನಪಾಗುತ್ತೆ. ಇಡೀ ಊರು ಕಾಣುತ್ತಿದ್ದ ಆ ಗುಡ್ಡದಿಂದ ಆರಾಮಾಗಿ ಕುಳಿತುಕೊಂಡು ದೀಪಾವಳಿ ಸೊಗಡು ಚೆಂದ.
ಸ್ನೇಹಿತರ ಬಳಗ ಜತೆ ಗುಡ್ಡ ಮೇಲೆ ಸೇರಿಕೊಂಡರೆ ಅಲ್ಲಿ ನಮ್ಮದೇ ದೀಪಾವಳಿ ಆರಂಭ ಆಗಿರುತ್ತಿತ್ತು. ಗೂಡುದೀಪ ಮಾಡಲು ಕಚ್ಚಾ ವಸ್ತುಗಳನ್ನು ತರುತ್ತಿದ್ದ ನಾವು ಅದನ್ನು ತಯಾರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದೆವು. ಗುಡ್ಡದ ಮೇಲೆ ಗೂಡುದೀಪ ತಯಾರಿಸಿ ಅದಕ್ಕೆ ಬೆಂಕಿ ಬತ್ತಿಯನ್ನು ಹಚ್ಚಿ ಮೆಲ್ಲಗೆ ಆಗಸಕ್ಕೆ ತೇಲಿಬಿಟ್ಟರೆ ಗೂಡುದೀಪದ ಬತ್ತಿಯ ಶಾಖಕ್ಕೆ ಗೂಡುದೀಪ ಮೇಲಕ್ಕೆ ಹಾರಿ ಮೋಡ ನಡುವೆ ಮರೆಯಾಗಿ ಬಿಡುತ್ತಿದ್ದ ಆ ಬಣ್ಣದ ಗೂಡು ನಮ್ಮ ದೀಪಾವಳಿಯ ಸಂಭ್ರಮಕ್ಕೆ ಹೊಸ ಅರ್ಥವನ್ನು ನೀಡುತ್ತಿತ್ತು. ಕೆಲವು ಗೂಡುದೀಪದ ಬತ್ತಿಗಳು ಅತಿಯಾಗಿ ಉರಿದು ತನ್ನನ್ನು ತಾನೇ ಅರ್ಧ ಏರು ಹಾದಿಯಲ್ಲಿ ಸುಟ್ಟ ಹೋದ ಘಟನೆಗಳು ನಡೆಯುತ್ತಿದ್ದವು. ಅದರಲ್ಲೂ ನಮ್ಮ ನಡುವೆ ನಡೆಯುತ್ತಿದ್ದ ಎತ್ತರದ ಗೂಡುದೀಪ ಹಾರಿಸುವ ಸ್ಪರ್ಧೆ ತೀವ್ರ ಪೈಪೋಟಿಯಿಂದ ಕೂಡಿರುತ್ತಿತ್ತು.
ಬಾಲ್ಯದಲ್ಲಿ ಗುಡ್ಡದ ಮೇಲೆ ಸ್ನೇಹಿತರ ಜತೆಗೆ ನಾವೇ ತಯಾರಿಸುವ ಮೂಲಕ ಹಾರಿಸುತ್ತಿದ್ದ ಗೂಡುದೀಪ. ಇಂದು ಮನೆಗಳ ಮುಂದೆಯೂ ಕಾಣದ ಹಾಗಿದೆ. ಆದರೆ ನಾನು ಮಾತ್ರ ತಪ್ಪದೆ ಇದನ್ನು ಕಟ್ಟುವ ಮೂಲಕ ದೀಪಾವಳಿ ಆಚರಿಸುತ್ತೇನೆ. ಜತೆಗೆ ನನ್ನ ಬಾಲ್ಯದ ಸ್ನೇಹಿತರು ಬಂದರೆ ಗುಡ್ಡದಲ್ಲಿ ಸೇರಿ ಕ್ಯಾಂಪ್ ಮಾಡಿ ದೀಪಾವಳಿಯ ಬಾಲ್ಯ ಮೆಲುಕು ಹಾಕುದುಂಟು.
-ನಿಶಾಲ್ ಲೋಬೋ
ಎಸ್.ಡಿ.ಎಂ., ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.