ಸೋಲು ಶಾಶ್ವತವಲ್ಲ  ಗೆಲುವು ಅಂತಿಮವೂ ಅಲ್ಲ


Team Udayavani, Feb 3, 2024, 3:36 PM IST

12-uv-fusion

ಜೀವನದಲ್ಲಿ ಪ್ರತೀ ಬಾರಿಯೂ ಸೋಲುವ ವ್ಯಕ್ತಿ ಗೆಲ್ಲುವ ನಿರೀಕ್ಷೆಯನ್ನು ಬಿಟ್ಟುಬಿಡುತ್ತಾನೆ. ಆದರೆ ಸೋಲು ಗೆಲುವು ಎರಡು ಸಮಾನ. ಎರಡನ್ನೂ ಸ್ವೀಕರಿಸಿ ಜೀವನ ನಡೆಸುವುದು ಬಹುಮುಖ್ಯ. ಸೋಲು ಶಾಶ್ವತವಲ್ಲ, ಗೆಲುವು ಅಂತಿಮವೂ ಅಲ್ಲ. ಮೊದಲು ನಮಗೆ ನಮ್ಮ ಮೇಲೆ ನಂಬಿಕೆ ಇರಬೇಕು.  ನಂಬಿಕೆ ಎನ್ನುವುದು ಜಯದ ಮೊದಲ ಮೆಟ್ಟಿಲು. ಮುಂದೊಂದು ದಿನ ನನ್ನ ದಿನವೂ ಬಂದೇ ಬರುತ್ತದೆ ಎಂದು ಬಲವಾದ ನಂಬಿಕೆ ಇಟ್ಟು ಜೀವನ ನಡೆಸಬೇಕು.

ನಮಗೆಲ್ಲ ತಿಳಿದ ಹಾಗೆ ದ್ರೋಣಾಚಾರ್ಯರು ಹಕ್ಕಿಯ ಕಣ್ಣಿಗೆ ಬಾಣ ಹೊಡೆಯಲು ಹೇಳಿದಾಗ ಅಲ್ಲಿ ಅನೇಕ ವೀರಾನುಪುರುಷರು ಇದ್ದರು. ಹಾಗೆ ಅರ್ಜುನನೂ ಇದ್ದ, ಆದರೆ ಅಲ್ಲಿ ಹಕ್ಕಿಯ ಕಣ್ಣನ್ನು ಭೇದಿಸಿದ್ದು ಮಾತ್ರ ಅರ್ಜುನ. ಯಾಕೆಂದರೆ ಆ ಗುರಿಯ ಸ್ಪಷ್ಟತೆ ಅವನಿಗೆ ಇತ್ತು. ಜೀವನದಲ್ಲಿ ಗುರಿ, ಗುರು ಎಲ್ಲವೂ ಅಗತ್ಯ. ಗುರುವಿನ ಮಾರ್ಗದರ್ಶನ ಅತ್ಯಂತ ಅಗತ್ಯ.

ದೇವನೂರು ಮಹದೇವರು ಹೇಳಿದ ಹಾಗೆ, ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ, ನಾಳೆ ಫ‌ಲ ಕೊಟ್ಟೇ ಕೊಡುತ್ತದೆ. ಭೂಮಿಗೆ ಬಿದ್ದ ಬೀಜ ತತ್‌ಕ್ಷಣಕ್ಕೆ ಫ‌ಲ ಕೊಡುವುದು ಅಸಾಧ್ಯ. ವಾರ, ತಿಂಗಳುಗಳೇ ಬೇಕು ಅದು ಮೊಳಕೆ ಬಂದು ಫ‌ಲ ಕೊಡಲು. ಹಾಗೆ ಮಾಡಿದ ಕೆಲಸ, ಶ್ರಮಕ್ಕೆ ಆಗಲೇ ಫ‌ಲ ದೊರೆಯಬೇಕು ಎಂದು ನಿರೀಕ್ಷಿಸುವುದು ಮೂರ್ಖತನ. ಮನಸ್ಸಿಟ್ಟು, ನಂಬಿಕೆ ಇಟ್ಟು ಮಾಡಿದ ಕೆಲಸಕ್ಕೆ ಫ‌ಲ ದೊರೆತೇ ದೊರೆಯುತ್ತದೆ. ಹಾಗೆ ಕಷ್ಟಪಟ್ಟು ಕಲಿತ ಅಕ್ಷರ ಕೂಡ ಮುಂದೊಂದು ದಿನ ನಮ್ಮ ಜೀವನವನ್ನೇ ಬೆಳಕಾಗಿಸಬಹುದು. ಯಾವತ್ತೂ ನಾವು ಹೊಸ ವಿಚಾರಗಳನ್ನು ಕಲಿಯುತ್ತಾ ಇರಬೇಕು. ಅಂತಿಮ ಎನ್ನುವುದು ಯಾವ ವಿದ್ಯೆಗೂ ಇಲ್ಲ.

ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೊಸತನ ಇದ್ದೇ ಇರುತ್ತದೆ. ಆ ಹೊಸತನವನ್ನು ಮೈಯೆಲ್ಲಾ ಕಣ್ಣಾಗಿ ಕಂಡುಹಿಡಿಯಬೇಕು ಮತ್ತು ಅದನ್ನು ಜೀವನದಲ್ಲಿ ಅಳವಡಿಸುವುದು ನಮ್ಮ ಜವಾಬ್ದಾರಿ. ಹಾಗಿದ್ದರೆ ಮಾತ್ರ ಬದುಕಿಗೆ ಪ್ರತಿಫ‌ಲದ ನೈಜ ಬೆಲೆ ಸಿಗುವುದು.

ಜೀವನದ ಹಾದಿಯಲ್ಲಿ ಕಷ್ಟಗಳು ಎಷ್ಟೇ ಇರಬಹುದು. ಆದರೆ ಅದನ್ನು ಹರಿಯುವ ನೀರಿನಂತೆ ಬಗೆಹರಿಸಬೇಕು. ಬದುಕಿನಲ್ಲಿ ಬಡವನಾಗಿದ್ದರೂ  ಕಲಿಕೆಯಲ್ಲಿ, ಪ್ರತಿಭೆಯಲ್ಲಿ ಎಂದಿಗೂ ಶ್ರೀಮಂತನಾಗಿರಬೇಕು. ಸಾಧಿಸುವ ಧೈರ್ಯ, ಆತ್ಮವಿಶ್ವಾಸ ನಮ್ಮಲ್ಲಿದ್ದರೆ ಜಯ ಎಂದಿಗೂ ಶಾಶ್ವತ. ಹಾಗೆ ಸೂಕ್ತ ಸಮಯ ಬೇಕು ಎಂದು ಕಾಯುವುದಕ್ಕಿಂತ ನಾವೇ ಆ ಸಮಯವನ್ನು ಸೃಷ್ಟಿಸಿಕೊಳ್ಳಬೇಕು, ನಾಳೆ ಮಾಡುವೆ ಎನ್ನುವುದನ್ನು ಬಿಟ್ಟು ಇವತ್ತೇ ಮಾಡುವೆ ಎಂದು ಸಕಲ ನಿರ್ಧಾರ ನಮ್ಮದಾಗಬೇಕು.

ಬದುಕಿನಲ್ಲಿ ಕಠಿನ ನಿರ್ಧಾರಗಳನ್ನು ಸುಲಭದಲ್ಲಿ ಯೋಚಿಸಿ ಎಲ್ಲವೂ ಸಾಧ್ಯ ಎಂದು ಗಟ್ಟಿ ಮನಸ್ಸಿನೊಂದಿಗೆ ಇರಬೇಕು. ಮೊದಲು ನಮ್ಮನ್ನು ನಾವು ಹುರಿದುಂಬಿಸಬೇಕು ಮತ್ತು ಆಗೇ ಆಗುತ್ತದೆ, ಮಾಡೇ ಮಾಡುತ್ತೇನೆ ಎಂಬ ಛಲದೊಂದಿಗಿರಬೇಕು.

ಕಳೆದು ಹೋದ ಕ್ಷಣಗಳನ್ನು ಮರೆತು, ಮುಂದಿನ ದಿನಗಳನ್ನು ಯೋಚಿಸುವುದು ಬಿಟ್ಟು ಈ ದಿನ ನಾನು ಏನು ಮಾಡಬೇಕು ಎಂದು ಯೋಚಿಸುವುದು ಮುಖ್ಯ. ಪ್ರತಿಕ್ಷಣವೂ ಹೊಸತನವನ್ನು ಯೋಚಿಸುತ್ತಾ ಹೊಸ ಭರವಸೆಯೊಂದಿಗೆ ಗೆಲುವಿನ ಹಾದಿ ಹಿಡಿಯುವ. ನಮ್ಮ ಜೀವನ ನಮ್ಮ ಕೈಯಲ್ಲಿದೆ, ನಾವೇ ನಮ್ಮ ಜೀವನದ ಶಿಲ್ಪಿ, ಮಾಲಕರು ಕೂಡ.

-ಅನಿತಾ,

ಉಜಿರೆ

ಟಾಪ್ ನ್ಯೂಸ್

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.