UV Fusion: ಕೇವಲ ಪರಿಮಳಕ್ಕಲ್ಲದೇ ಅನೇಕ ರೀತಿಯ ಔಷಧಿ ಗುಣಗಳ “ದೇವಪುಷ್ಪ”
ಕ್ಷೀರ ಸಮುದ್ರದಿಂದ ಹುಟ್ಟಿದ ಐದು ಕಲ್ಪ ವೃಕ್ಷಗಳಲ್ಲಿ ಇದು ಒಂದು
Team Udayavani, Nov 4, 2023, 7:15 AM IST
ಪಾರಿಜಾತ ಅಂದ ಕೂಡಲೇ ನೆನಪಾಗುವುದೇ ಶ್ರೀಕೃಷ್ಣ. ಏಕೆಂದರೆ ಪಾರಿಜಾತದ ಸೃಷ್ಟಿಕರ್ತನೇ ಇತ. ಮೊದಲು ಪಾರಿಜಾತ ಎಂದರೇನು, ಇದರಲ್ಲಿ ಎಷ್ಟು ವಿಧಗಳಿವೆ, ಇದರ ಸೃಷ್ಟಿ ಹೇಗಾಯಿತು ಎಲ್ಲವನ್ನು ತಿಳಿದುಕೊಳ್ಳೋಣ.
ಪಾರಿಜಾತ ಎಂದರೇ ಒಂದು ಬಗೆಯ ಸುಗಂಧ ಪುಷ್ಪ. ಇದನ್ನು ಪುರಾಣದಲ್ಲಿ ದೇವ ಪುಷ್ಪಾ ಎಂದು ಕರೆಯುತ್ತಿದ್ದರು. ಇದರಲ್ಲಿ ನಾವು ಎರಡು ರೀತಿಯ ಹೂವನ್ನು ಕಾಣಬಹುದು. ಆರು ದಳ ಬಿಡಿ ಬಿಡಿ ಇದ್ದು ಹಿಂದಕ್ಕೆ ಮುದುಡಿರುವುದು ಒಂದಾದರೆ, ಇನ್ನೊಂದು ದಳ ಅಗಲವಿದ್ದು ಒಂದಕ್ಕೊಂದು ಸೇರಿದಂತೆ ಇರುತ್ತದೆ ಹಾಗೂ ಎಲೆಗಳಲ್ಲಿನ ವ್ಯತ್ಯಾಸವನ್ನೂ ನೋಡಬಹುದು. ಆದರೆ ಎರಡು ಬಗೆಯ ಹೂವಿನಲೂ ತೊಟ್ಟು ಕೇಸರಿ ಬಣ್ಣದಲ್ಲೇ ಇರುತ್ತದೆ.
ಪಾರಿಜಾತ ಅಂದರೇ ಯಾರು?
ಪಾರಿಜಾತ ಎಂದು ಈ ಹೂವಿಗೆ ಹೇಗೆ ಹೆಸರು ಬಂತು. ಪಾರಿಜಾತ ಎಂಬ ಹೆಸರು ಬರಲು ಒಂದು ಸುಂದರ ಕಥೆಯಿದೆ. ಅದೇನೆಂದರೇ ಪಾರಿಜಾತಕ ಎಂಬ ಒಬ್ಬ ರಾಜಕುಮಾರಿ ಯೊಬ್ಬಳು ಸೂರ್ಯನನ್ನು ಪ್ರೀತಿಸಿದ್ದಳಂತೆ. ಆಕೆ ಸೂರ್ಯದೇವನ ಬಳಿ ತನ್ನ ಆಸೆಯನ್ನು ಹೇಳಿಕೊಂಡಾಗ ಸೂರ್ಯದೇವನು ಆಕೆಯನ್ನು ನಿರಾಕರಿಸಿದನಂತೆ ಅದಕ್ಕೆ ಪಾರಿಜಾತಕ ಕೋಪಗೊಂಡು ತನ್ನ ಪ್ರಾಣವನ್ನು ತ್ಯಜಿಸುತ್ತಾಳಂತೆ. ಆಕೆಯ ಚಿತಾಭಸ್ಮದಿಂದ ಸಸ್ಯವೊಂದು ಚಿಗುರೊಡೆದು ತಾನು ಸೂರ್ಯನನ್ನು ನೋಡುವುದಿಲ್ಲ. ರಾತ್ರಿಯಲ್ಲಿ ನಾನು ಸುಗಂಧ ಭರಿತ ಸುಂದರವಾದ ಹೂವುಗಳನ್ನು ಕೊಟ್ಟು, ಸೂರ್ಯ ಮೂಡುತ್ತಿದ್ದಂತೆ ಮರೆಯಾಗುತ್ತೇನೆಂದು ತನಗೆ ತಾನೇ ಶಪಥವನ್ನು ಮಾಡಿಕೊಂಡಳಂತೆ.
ಆದ್ದರಿಂದ ಪಾರಿಜಾತ ಹೂವು ಸೂರ್ಯಾಸ್ತದ ಅನಂತರ ಹೂ ಬಿಟ್ಟು, ಸೂರ್ಯೋದಯಕ್ಕೂ ಮುನ್ನ ನೆಲವನ್ನು ಸೇರುತ್ತದೆ.
ಸಮುದ್ರ ಮಂಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ಅನಂತರ ಜನಿಸಿದ್ದು ಪಾರಿಜಾತ. ಕ್ಷೀರ ಸಮುದ್ರದಿಂದ ಹುಟ್ಟಿದ ಐದು ಕಲ್ಪ ವೃಕ್ಷಗಳಲ್ಲಿ ಇದು ಒಂದು. ಕೃಷ್ಣಾವತಾರ ಕಾಲದಲ್ಲಿ ಕೃಷ್ಣನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಒಂದು ಕಥೆ ಆದರೆ ಇನ್ನೊಂದು ಕಥೆಯ ಪ್ರಕಾರ ಒಮ್ಮೆ ರುಕ್ಮಿಣಿಗೆ ಪಾರಿಜಾತದ ಹೂವು ಮುಡಿಯಬೇಕೆಂಬ ಆಸೆಯಾಗಿ, ಕೃಷ್ಣನ ಒಲಿಸಿ, ಪಾರಿಜಾತ ತಂದುಕೊಡಲು ದೇವಲೋಕಕ್ಕೆ ಕಳುಹಿಸುತ್ತಾಳೆ. ಇಂದ್ರನ ಜೊತೆ ಜಗಳ ಮಾಡಿಕೊಂಡು ಪಾರಿಜಾತ ಹೂವು ತಂದು ರುಕ್ಮಿಣಿಗೆ ಕೊಡುತ್ತಾನೆ. ಆಗ ಇಂದ್ರ ಹೂವಿಗೆ ಸೂರ್ಯಾಸ್ತದ ಅನಂತರ ಅರಳಲಿ, ಬೆಳಗಿನ ಜಾವ ನೆಲಕ್ಕೆ ಬೀಳಲಿ ಎಂಬ ಶಾಪ ಹಾಕುತ್ತಾನೆ. ಇದರಿಂದ ಪಾರಿಜಾತ ಮರಕ್ಕೆ ಸೊರಗಿದ ಮರ ಎಂದು ಕರೆಯುತ್ತಾರೆ.
ಈ ಎರಡೂ ಕಥೆಗಳನ್ನು ನೋಡಿದಾಗ ಪಾರಿಜಾತ ಈ ಹೂವು ಶಾಪಗ್ರಸ್ತ ಎಂದಾದರೂ ಪಾರಿಜಾತದ ಸೌಂದರ್ಯದಷ್ಟೇ ಅದರ ಸುಂಗಂಧವು ಎಲ್ಲರನ್ನೂ ಆಕರ್ಷಿಸುವ ಸಾಮರ್ಥ್ಯ ಹೊಂದಿದೆ.
ನಿಕ್ಟಾಂತಸ್ ಆರ್ಬೋ-ಟ್ರಿಸ್ಟಿಸ್ ಎಂಬದು ಪಾರಿಜಾತದ ವೈಜ್ಞಾನಿಕ ಹೆಸರು. ಇದು ಕೇವಲ ಪರಿಮಳಕ್ಕಲ್ಲ ಇದರಲ್ಲಿ ಅನೇಕ ರೀತಿಯ ಔಷಧಿ ಗುಣಗಳು ಇದೆ ಎಂದು ಸಂಶೋಧನೆಗಳು ಹೇಳುತ್ತವೆ. ಅಸ್ತಮಾ, ಒಣ ಕೆಮ್ಮು, ಶೀತ, ಮಂಡಿ ನೋವು, ಅಜೀರ್ಣ ಇನ್ನೂ ಅನೇಕ ಔಷಧಿ ಗುಣಗಳನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿದೆ.
ಪ್ರಜ್ಞಾ ಹೆಗಡೆ
ಎಂ.ಎಂ. ಕಾಲೇಜು, ಶಿರಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.