ಕಷ್ಟದಲ್ಲೂ ಖುಷಿ ಕಂಡುಕೊಂಡ ಎಲ್ಕೆ ವೋಗೆಲ್ಸಾಂಗ್‌


Team Udayavani, Jun 1, 2020, 7:47 PM IST

ಕಷ್ಟದಲ್ಲೂ ಖುಷಿ ಕಂಡುಕೊಂಡ ಎಲ್ಕೆ ವೋಗೆಲ್ಸಾಂಗ್‌

ನಿಯತ್ತು ಮತ್ತು ಮಾನವನೊಂದಿಗೆ ಆಪ್ತ ಒಡನಾಟದ ಪ್ರಾಣಿಗಳ ಸಾಲಿನಲ್ಲಿ ಶ್ವಾನಗಳು ಮೊದಲಿಗೆ ನಿಲ್ಲುತ್ತವೆ. ಹೌದು ಶ್ವಾನಗಳು ಎಲ್ಲರಿಗೂ ಗೊತ್ತಿರುವಂತೆಯೇ ನಿಯತ್ತಿಗೆ ಹೆಸರಾದವುಗಳು. ಇನ್ನೂ ಹೆಚ್ಚಾಗಿ ಹೇಳುವುದಾದರೆ ಅನೇಕ ವ್ಯಕ್ತಿಗಳು ಮನುಷ್ಯರಿಗಿಂತಲೂ ಶ್ವಾನಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಮನುಷ್ಯರೊಂದಿಗಿನ ಅನ್ಯೂನ್ಯತೆಯಿಂದಾಗಿ ಜಗತ್ತಿನಾದ್ಯಂತ ಅವುಗಳ ಜನಪ್ರೀಯತೆಯನ್ನು ಹೆಚ್ಚಿಸಿದೆ. ಶ್ವಾನಗಳಿದ್ದರೆ ಯಾವುದೇ ವ್ಯಕ್ತಿಗೂ ಏಕತಾನತೆ ಕಾಡುವುದಿಲ್ಲ. ಅಲ್ಲದೇ ಇವುಗಳನ್ನು ಮಾನಸಿಕ ಒತ್ತಡ ನಿಗ್ರಹಿಗಳೆಂದರೆ ತಪ್ಪಾಗಲಿಕ್ಕಿಲ್ಲ. ಇದೇ ಕಾರಣಕ್ಕೆ ಕೋವಿಡ್-19 ಮಾಹಾಮಾರಿಯ ಲಾಕ್‌ಡೌನ್‌ ಸಮಯದಲ್ಲಿ ಶ್ವಾನಗಳನ್ನು ಸಾಕುವುದು ತೀವ್ರಗತಿಯಲ್ಲಿ ಹೆಚ್ಚಾಗಿದೆಯಂತೆ.

ಹಾಗೆಯೇ ಅವುಗಳು ಛಾಯಾಚಿತ್ರ ಕ್ಷೇತ್ರದಲ್ಲೂ ಬೇಡಿಕೆ ಪಡೆದುಕೊಂಡಿವೆ. ನಡೆದುಕೊಂಡು ಹೋಗುವಾಗ ಮುದ್ದಾದ ನಾಯಿ ಮರಿಯೊಂದು ಎದುರಿಗೆ ಓಡಿಬಂದರೆ ಅದರ ಛಾಯಾಚಿತ್ರ ಸೆರೆಹಿಡಿಯಲು ಯಾರು ತಾನೆ ಮುಂದಾಗುವುದಿಲ್ಲ ಹೇಳಿ. ಹೀಗೆ ಶ್ವಾನಗಳ ವಿಭಿನ್ನ ಸುಂದರ ಮತ್ತು ವಿನೋದಮಯ ಛಾಯಚಿತ್ರಗಳನ್ನು ಸೆರೆಹಿಡಿದು ಜನಪ್ರೀಯತೆ ಪಡೆದಿರುವ ಮಹಿಳೆಯ ಬಗ್ಗೆ ನಾವಿಲ್ಲಿ ಹೇಳಲಿದ್ದೇವೆ.

ಎಲ್ಕೆ ವೋಗೆಲ್ಸಾಂಗ್‌
ಛಾಯಾಚಿತ್ರಗಾರ್ತಿ ಎಲ್ಕೆ ವೋಗೆಲ್ಸಾಂಗ್‌ ಅವರ‌ಲ್ಲಿನ ಶ್ವಾನಗಳ ಬಗೆಗಿನ ವ್ಯಾಮೋಹ, ಪ್ರೀತಿ ಮತ್ತು ಜೀವನದಲ್ಲಿ ಎದುರಾದ ಕಷ್ಟಗಳು ಇಂದು ಅವರನ್ನು ಅತ್ಯುತ್ತಮ ಛಾಯಾಚಿತ್ರಗಾರ್ತಿಯನ್ನಾಗಿ ಮಾಡಿವೆ. ಅಲ್ಲದೇ ಪ್ರಸಿದ್ಧ ಪೆಟ್‌ ಕಂಪೆನಿಗಳಾದ ಪೆಡಿಗ್ರಿ ಮತ್ತು ಫ್ಲಫ್ ಆ್ಯಂಡ್‌ ಟಫ್ ಕಂಪೆನಿಗಳ್ಳೋಂದಿಗೆ ಸೇರಿ ಕಾರ್ಯನಿರ್ವಹಿಸುತ್ತದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇವರಿಗೆ 1.5 ಲಕ್ಷ ಹಿಂಬಾಲಕರಿದ್ದಾರೆ.

ಕಷ್ಟ ಕಾಲದಲ್ಲಿ ಮನೋಬಲ
ಮನೆಯಲ್ಲಿ ಅತ್ತೆ ಬುದ್ದಿಮಾಂದ್ಯ ಕಾಯಿಲೆಯಿಂದ ಬಳಲುತಿದ್ದರು. ಎರಡು ವರ್ಷಗಳ ಅನಂತರ ಪತಿ ಕೂಡ ಮಿದುಳಿನ ರಕ್ತಸ್ರಾವ (ಬ್ರೈನ್‌ ಹ್ಯಾಮರೇಜ್‌) ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರುತ್ತಾರೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಆಕೆಯ ಮನೋಬಲ ಹೆಚ್ಚಿಸಿದ್ದು ಮನೆಯಲ್ಲಿದ ಮುದ್ದಾದ ಶ್ವಾನಗಳು. ಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವಾಗ ಮನೆಯಲ್ಲಿದ್ದ ಶ್ವಾನಗಳು ಛಾಯಾಚಿತ್ರಗಳಾಗಿ ಆಗಾಗ ನನ್ನ ಮೊಬೈಲ್‌ನಲ್ಲಿ ಸೆರೆಯಾಗುತ್ತಿದ್ದವು. ಆದರೆ ಪತಿ ಸಂಪೂರ್ಣವಾಗಿ ಗುಣಮುಖವಾದ ಅನಂತರ ಶ್ವಾನಗಳ ಛಾಯಾ ಚಿತ್ರಗ್ರಹಣವೇ ನನ್ನ ಧ್ಯೇಯವಾಯಿತು ಎನ್ನುತ್ತಾರೆ ವೋಗೆಲ್ಸಾಂಗ್‌.

ಮೊದಲಿಗೆ ತಮ್ಮ ಮನೆ ನಾಯಿಗಳ ಫೋಟೋ ತೆಗೆಯುತ್ತಿದ್ದ ಇವರು ಅನಂತರ ಬೀದಿ ನಾಯಿ, ಹಾಗೂ ಇನ್ನಿತರೆ ಕಡೆಗೆ ಹೊದಾಗಲೆಲ್ಲ ಅವುಗಳ ಮುಗ್ಧ, ಹಾಸ್ಯಾಸ್ಪದವಾದ ಕ್ಯಾಂಡಿಡ್‌ ಫೋಟೋಗಳನ್ನು ಹೆಚ್ಚು ಸೆರೆ ಹಿಡಿಯಲಾರಂಭಿಸಿದರು. ಇದರಿಂದಲೇ ಇಂದು ಪೋಟೋಗ್ರಫಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರತಿಯೊಂದು ಶ್ವಾನದಲ್ಲೂ ಒಂದೊಂದು ವಿಶೇಷತೆ ಇದ್ದು, ಪ್ರತಿಯೊಂದರಿಂದ ಒಂದೊಂದು ಟ್ರಿಕ್ಸ್‌ ಕಲಿಯಲು ಸಾಧ್ಯ.

ಶ್ವಾನಗಳ ಫೋಟೋ ತೆಗೆಯುವಾಗ ಉಂಟಾಗುವ ಯಾವುದೇ ರೀತಿಯ ಮುಜುಗರಗಳಿಗೂ ನಾನು ಅಂಜುವುದಿಲ್ಲ ಎನ್ನುತ್ತಾರೆ ವೋಗೆಲ್ಸಾಂಗ್‌. ಶ್ವಾನಗಳ ಉತ್ತಮ ಫೋಟೊ ಸೆರೆಹಿಡಿಯಬೇಕಾದರೆ ತಾಳ್ಮೆ, ನಂಬಿಕೆ, ಪುನರಾವರ್ತನೆ ಮತ್ತು ಆಹಾರ, ತಿಂಡಿಯ ರೂಪದಲ್ಲಿ ಅವುಗಳಿಗೆ ಲಂಚವನ್ನೂ ನೀಡಬೇಕಾಗುತ್ತದೆ. ಅಲ್ಲದೇ ಈಗಿನ ಕೋವಿಡ್-19 ಲಾಕ್‌ಡೌನ್‌ ಸಮಯದಲ್ಲಿ ನನ್ನ ಏಕಾಂಗಿತನ್ನವನ್ನು ದೂರ ಮಾಡಿದ್ದು, ನಾನು ಇಷ್ಟು ಖುಷಿಯಿಂದಿರಲು ನಮ್ಮ ಮನೆಲ್ಲಿರುವ ನಾಯಿಗಳೇ ಕಾರಣ ಎಂದು ಶ್ವಾನಗಳ ಕೆಲವೊಂದಿಷ್ಟು ಫೋಟೊಗಳನ್ನು ವೋಗೆಲ್ಸಾಂಗ್‌ ಇತ್ತೀಚೆಗೆ ಹಂಚಿಕೊಂಡಿದ್ದರು.

ಇದೆಲ್ಲದಕ್ಕೂ ಹೆಚ್ಚಾಗಿ ಶ್ವಾನಗಳಲ್ಲಿನ ತುಂಟತನ, ಚಾಕಚಕ್ಯತೆ ಮತ್ತು ಹಾಸ್ಯ ಪ್ರವೃತ್ತಿ ಎಂತಹ ಪರಿಸ್ಥಿತಿಯಲ್ಲೂ ನಿಮ್ಮ ಮುಖದಲ್ಲಿ ಮಂದಹಾಸ ಮೂಡಿಸುತ್ತವೆ. ಅಲ್ಲದೇ ಇವುಗಳು ಒಂದು ರೀತಿ ಸಹಜ ಹಾಸ್ಯಗಾರರಿದ್ದಂತೆ. ಹಾಗಾಗಿ ಶ್ವಾನಗಳು ಮನುಷ್ಯರ ಆಪ್ತ ಗೆಳೆಯನ ಸ್ಥಾನ ಪಡೆದುಕೊಂಡಿವೆ.

-ಶಿವಾನಂದ್‌ ಎಚ್‌.

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.