“ಸಂರಕ್ಷಣೆ ಕೇವಲ ಮಾತಿಗೆ ಸೀಮಿತವಾಗಿರದಿರಲಿ’


Team Udayavani, Jun 5, 2020, 12:30 PM IST

“ಸಂರಕ್ಷಣೆ ಕೇವಲ ಮಾತಿಗೆ ಸೀಮಿತವಾಗಿರದಿರಲಿ’

ಮಾನವನ ದುರಾಸೆಯ ಫ‌ಲವಾಗಿ ಭೂಮಿ ಬಂಜರಾಗಿದೆ. ಹಸುರು ಭೂಮಿ ಕಣ್ಮರೆಯಾಗಿ ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿವೆ. ಉಸಿರಾಡಲು ಶುದ್ಧ ಗಾಳಿಯಿಲ್ಲದೆ ಮನುಷ್ಯನಿಗೆ ನಾನಾ ಕಾಯಿಲೆಗಳು ವಕ್ಕರಿಸುತ್ತಿವೆ. ಪರಿಸರದ ನಾಶವಿಂದು ಅವನ ವಿನಾಶಕ್ಕೆ ನಾಂದಿ ಹಾಡಿದೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಇಡೀ ವಿಶ್ವವೇ ಮುಂದೆ ಇನ್ನೊಂದು ಅನಾಹುತಕ್ಕೆ ಸಜ್ಜಾಗಬೇಕಿದೆ. ಈ ನಿಟ್ಟಿನಲ್ಲಾದರೂ ಕೂಡ ಪ್ರತಿವರ್ಷ ವಿಶ್ವ ಪರಿಸರ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಬೇಕು.

ಜೂನ್‌ 5ರಂದು ಮಾತ್ರ ಪರಿಸರದ ಸಂರಕ್ಷಣೆ ನಮ್ಮ ಮಾನದಂಡವಾಗಿರಬಾರದು. ಅದು ವರ್ಷವಿಡೀ ಆಗಿರಬೇಕು .ನಾಗರಿಕ ಸಮಾಜದಲ್ಲಿ ಬದುಕುವ ನಾವು ನಮ್ಮದೇ ಆದ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಬಾಯಿ ಮಾತಿಗೆ ಸೀಮಿತವಾಗಿರದೆ ನಿಜವಾದ ಅರ್ಥ ಪಡೆದುಕೊಳ್ಳಬೇಕು.ಒಂದು ವೇಳೆ ಆ ರೀತಿ ಆಗದೆ ಇದ್ದಲ್ಲಿ ಮುಂದೆ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಶುದ್ಧವಾದ ಗಾಳಿಗೆ ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ವೈರಸ್‌ ಕಾಟದಿಂದ ಜನ ತತ್ತರಿಸಿ ಹೋಗಿದ್ದಾರೆ. ಜನ ಜಾಗೃತರಾಗದೆ ಪರಿಸರ ನಾಶ ಮಾಡುತ್ತಾ ಹೋದರೆ ವೈರಸ್‌ ಗೆ ಮಿಗಿಲಾದ ದೊಡ್ಡ ಮಹಾಮಾರಿ ಬಂದು ವಕ್ಕರಿಸಬಹುದು. ಆಧುನಿಕತೆಯ ಹೆಸರಿನಲ್ಲಿ ಮರಕಡಿಯುತ್ತಾ ಹೋದಂತೆ ಮಳೆ ಬೀಳುವ ಪ್ರಮಾಣ ಕಡಿಮೆ ಆಗಲಿದೆ. ಅಂತರ್ಜಾಲ ಮಟ್ಟ ಕೂಡ ಬಹುಮಟ್ಟಿಗೆ ಕಡಿಮೆಯಾಗಲಿದೆ. ಈ ಮೂಲಕ ಮುಂದೊಂದು ದಿನ ಹನಿ ಹನಿ ನೀರಿಗೂ ಹಾಹಾಕಾರ ಶುರುವಾಗಬಹುದು. ಹಣ ಗಳಿಸುವ ದೃಷ್ಟಿಯಿಂದ ಪ್ರಕೃತಿಯ ಸೊಬಗಿಗೆ ಕೊಳ್ಳಿ ಇಟ್ಟು ಕಾರ್ಖಾನೆ ಕಟ್ಟಿದರು. ಸಾಲದು ಎನ್ನುವಂತೆ ಅಲ್ಲಿನ ವಿಷ ಗಾಳಿಯನ್ನು ವಾತಾವರಣಕ್ಕೆ ಸೇರುವಂತೆ ಮಾಡಿದರು. ಹೀಗೆ ಮುಂದುವರಿದರೆ ಪಾಪದ ಪ್ರಾಯಶ್ಚಿತವೆನ್ನುವಂತೆ ಅದೇ ವಿಷ ಗಾಳಿಯನ್ನು ಮಾನವ ಸೇವಿಸುವ ಕಾಲ ಹೆಚ್ಚು ದೂರವಿಲ್ಲ ಎನ್ನಬಹುದು.

ಹೀಗೆ ಸಾಕಷ್ಟು ಸವಾಲುಗಳು, ಹೊಣೆ, ಜವಾಬ್ದಾರಿ ನಮ್ಮ ಮೇಲಿದೆ. ಪರಿಸರ ಸಂರಕ್ಷಣೆ ಕೇವಲ ಮಾತಾಗಿರದೆ ಕಾರ್ಯ ರೂಪಕ್ಕೆ ಬರಬೇಕಿದೆ. ಮಾತಿಗಿಂತ ಕೃತಿ ಲೇಸು ಎನ್ನುವಂತೆ, ಪರಿಸರ ಸಂರಕ್ಷಣೆ ಭಾಷಣ ಕಮ್ಮಿಯಾಗಿ ಕಾರ್ಯಗಳು ಜಾಸ್ತಿಯಾಗಬೇಕು. ಸರಕಾರ ಕೂಡ ಆ ನಿಟ್ಟಿನಲ್ಲಿ ಹೊಸ ಕಾನೂನು ಕಾಯ್ದೆ ಜಾರಿಗೊಳಿಸಬೇಕು. ಸರಕಾರ ಮಾಡುತ್ತೆ ಅಂತ ಜನ ಸುಮ್ಮನೆ ಕೂರಬಾರದು. ನಮ್ಮಿಂದ ಆದಷ್ಟು ಕೆಲಸ ಮಾಡಬೇಕು. ಎಲ್ಲವನ್ನೂ ಒಬ್ಬರಿಂದ ಬದಲಾಯಿಸಲು ಸಾಧ್ಯವಿಲ್ಲ. ಆದರೆ ಒಬ್ಬೊಬ್ಬರೇ ಬದಲಾದರೆ. ಆವಾಗ ಎಲ್ಲವು ಬದಲಾಗುತ್ತದೆ. ಅರ್ಥ ಕಳೆದುಕೊಳ್ಳುತ್ತಿರುವ ಪರಿಸರ ಮತ್ತೆ ನಿಜವಾದ ಅರ್ಥವನ್ನು ಪಡೆದುಕೊಳ್ಳುತ್ತದೆ.

ನವ್ಯಶ್ರೀ ಶೆಟ್ಟಿ 
ಪ್ರಥಮ ಬಿ.ಎ ಪತ್ರಿಕೋದ್ಯಮ ವಿಭಾಗ ಎಂಜಿಎಂ ಕಾಲೇಜು ಉಡುಪಿ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.