ಪ್ರತಿದಿನವೂ ನಮ್ಮಲ್ಲಿ ಮೂಡಲಿ ಪರಿಸರ ಕಾಳಜಿ

Team Udayavani, Jun 5, 2020, 2:45 PM IST

ಪ್ರತಿದಿನವೂ ನಮ್ಮಲ್ಲಿ ಮೂಡಲಿ ಪರಿಸರ ಕಾಳಜಿ

ಸಾಂದರ್ಭಿಕ ಚಿತ್ರ

ಪ್ರತಿವರ್ಷವೂ ಜೂನ್‌ 5ರಂದು ಆಚರಿಸುವ ಪರಿಸರ ದಿನದಂದು ಪರಿಸರದ ಮಹತ್ವವನ್ನು ತಿಳಿಸಲಾಗುತ್ತದೆ. ಜತೆಗೆ ಕೃಷಿ, ಸ್ವಚ್ಛತೆ ಕಾಪಾಡುವ ಬಗ್ಗೆ ಕೂಡ ಅರಿವು ಮೂಡಿಸಲು ಈ ದಿನವನ್ನು ಮೀಸಲಿಡುತ್ತೇವೆ. ಆದರೆ ಈ ಒಂದು ದಿನ ಮಾತ್ರ ಪರಿಸರ ಸಂರಕ್ಷಣೆಯ ಮೀಸಲಿಡುವ ಬದಲಿ ಪ್ರತಿದಿನವನ್ನೂ ಕೂಡ ಪರಿಸರ ದಿನವನ್ನಾಗಿ ಆಚರಿಸಿದಾಗ ಮಾತ್ರ ಈ ದಿನದ ಮಹತ್ವ ಅರ್ಥಪೂರ್ಣವಾಗುತ್ತದೆ. ಈ ಬಗ್ಗೆ ಯೋಜನೆ, ಯೋಚನೆಯ ಮೂಲಕ ನಾವು ಮುಂದಾಗಬೇಕಿದೆ.

ಆಧುನಿಕತೆಯ ವಿಜ್ಞಾನ, ತಂತ್ರಜ್ಞಾನ, ಸಹಿತ ಎಲ್ಲ ಕ್ಷೇತ್ರಗಳಲ್ಲಿ ಮಾನವ ವಿಕಾಸವಾದ ಅನಂತರ ಮನುಷ್ಯ ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ಏನಾಗುತ್ತಿದೆ ಎಂಬ ಕನಿಷ್ಠ ಅರಿವು ಇಲ್ಲದಂತಾಗಿದ್ದಾನೆ. ಅಷ್ಟರ ಮಟ್ಟಿಗೆ ಆಧುನಿಕ ತಂತ್ರಜ್ಞಾನಗಳಿಗೆ ಅಂಟಿಕೊಡಿದ್ದಾನೆ. ಅಂತವರಿಗೆ ಇಂತಹ ದಿನಗಳು, ಜಾಲತಾಣದ ಪರದೆಯ ಮೇಲೆ ಕಂಡಾಗ ಮಾತ್ರ ಆ ದಿನಗಳ ಬಗ್ಗೆ ಸ್ಟೇಟಸ್‌ ಹಾಕುತ್ತಾರೆ. ಹೀಗಿದ್ದಾಗ ಕೇವಲ ಒಂದು ದಿನದ ಮಟ್ಟಿಗೆ ಪರಿಸರ ಪ್ರಜ್ಞೆ ಮೆರದರೆ ಪರಿಸರ ಸಂರಕ್ಷಣೆ ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಪರಿಸರ ಸಂರಕ್ಷಣೆಯ ಅಗತ್ಯ ಅರಿಯಿರಿ
ನಾವು ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳುವುದು, ಹಸುರಿನ ಸಂರಕ್ಷಿಸಬೇಕಾದ ತುರ್ತಿನ ಸಂಗತಿಯಾಗಿದೆ. ಕುಟುಂಬ, ನೆರೆಹೊರೆ, ಸ್ನೇಹಿತರಲ್ಲಿ ಈ ವಿಚಾರ ವಿನಿಮಯಗೊಂಡು ಕಾರ್ಯರೂಪಕ್ಕೆ ಬರಬೇಕಿದೆ. ಸರಕಾರ ಮತ್ತು ಸಾರ್ವಜನಿಕರು ಸಮನ್ವಯದಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಿದೆ.
ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶ ಮಾಡುತ್ತಿರುವುದು ಕೂಡ ಸಲ್ಲದು. ಶುದ್ಧಗಾಳಿ, ನೀರು, ಪರಿಸರದಿಂದ ನಾವು ಆರೋಗ್ಯವಂತರಾಗಿರಲು ಸಾಧ್ಯ. ನಾವು ಅರಣ್ಯ ಸಂರಕ್ಷಿಸಿದರೆ, ನಮ್ಮ ಭವಿಷ್ಯ ಹಸನನಾಗಿರುತ್ತದೆ.

ಪರಿಸರ ಸ್ನೇಹಿ ಜೀವನ ಕ್ರಮ ಅಳವಡಿಸಿಕೊಳ್ಳಿ
ನಾವು ಬಳಸುವ ಯಾವುದೇ ವಸ್ತುಗಳಿಂದ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು, ಮನೆಯಲ್ಲಿ ಒಣತ್ಯಾಜ್ಯ-ಹಸಿತ್ಯಾಜ್ಯ ವಿಂಗಡಣೆ ಮಾಡಿ ಸಾವಯವ ಗೊಬ್ಬರ ತಯಾರಿಸುವುದು ಉತ್ತಮ ಪರಿಸರ ನಡೆಯಾಗಿದೆ.

ಕಾರ್ಬನ್‌ ಮುಕ್ತ ಪರಿಸರವನ್ನಾಗಿಸಿ
ವಾಹನಗಳ ವಿಪರೀತವಾಗಿ ಬಿಡುವ ಹೊಗೆಯಿಂದಾಗಿ ಇಂದು ವಾಯು ಮಾಲಿನ್ಯ ಅಧಿಕವಾಗಿದೆ. ಇದರಿಂದಾಗಿ ಈ ಹಿಂದೆ ಹೊಸದಿಲ್ಲಿ ಸರಕಾರ ಜಾರಿಗೊಳಿಸಿದ್ದ ಸಮ-ಬೆಸ ಸಂಖ್ಯೆ ವಾಹನಗಳು ಓಡಾಟದ ಯೋಜನೆಯೂ ಜಾರಿಗೊಳಿಸುವುದಕ್ಕೆ ಇದು ಸಕಾಲ. ಅಲ್ಲದೇ ಕಾರ್ಖಾನೆಗಳ ತ್ಯಾಜ್ಯ, ಹೊಗೆಗಳಿಗೆ ಸರಕಾರ ನಿರ್ಬಂಧಕ್ಕೆ ಅಗತ್ಯ ಕ್ರಮ ವಹಿಸಿದಾಗ ಕಾರ್ಬನ್‌ ಮುಕ್ತ ಪರಿಸರ ಸಾಧ್ಯ.  ನಮ್ಮ ಸುತ್ತಮುತ್ತಲಿನ ಪರಿಸರ ದೇವತೆಗೆ ಹೆತ್ತ ತಾಯಿಗೆ ನೀಡುವ ಸ್ಥಾನಮಾನವನ್ನು ಪರಿಸರಕ್ಕೂ ನೀಡಬೇಕಿದೆ. ಸಕಲ ಜೀವಸಂಕುಲಗಳಿಗೆ ಇರುವುದೊಂದೇ ಭೂಮಿ. ಅದರ ರಕ್ಷಣೆ ,ಸಂರಕ್ಷಣೆ ಹೊಣೆಯಲ್ಲಿ ಪ್ರತಿಯೊಬ್ಬರು ಪಾಲುದಾರರೆ ಆಗಿದ್ದಾರೆ. ಪರಿಸರ ಸಂರಕ್ಷಣೆಗೆ ಎಲ್ಲರ ಕೈಗಳು ಜತೆಗೂಡಬೇಕಿದೆ.

– ಶಿವರಾಜ್‌ ಎಂ.ಕೆ., ಮಾಚೇನಹಳ್ಳಿ

ಟಾಪ್ ನ್ಯೂಸ್

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

5-madikeri

ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.