Exams: ಪರೀಕ್ಷೆ ಸವಾಲುಗಳು ಮಾತ್ರ ಬದುಕು ಅಲ್ಲ
Team Udayavani, May 23, 2024, 3:45 PM IST
ಪರೀಕ್ಷೆಗಳು ಜೀವನದ ಮೆಟ್ಟಿಲುಗಳು ವಿನಃ, ಜೀವನದ ಗತಿ ಅಲ್ಲ ಅನ್ನುವುದನ್ನು ಸಾಂದರ್ಭಿಕವಾಗಿ ಅರಿಯುವುದು ಆವಶ್ಯಕವಾದ ವಿಚಾರ ಧಾರೆಯೇ ಸರಿ.
ಬದುಕಿನ ಓಟದಲ್ಲಿ ಪರೀಕ್ಷೆಗಳು ಸವಾಲುಗಳಾಗಿ ರೂಪುಗೊಂಡಿವೆ, ಅನಿಶ್ಚಿತ ಬದುಕಿನಲ್ಲಿ ನಿಶ್ಚಿತ ಹೋರಾಟ ಎಂಬಂತೆ ಮಾರ್ಮಿಕವಾಗಿ ಪರಿಣಮಿಸಿವೆ. ಪ್ರಸ್ತುತ ದಿನಗಳಲ್ಲಿ ಪರೀಕ್ಷೆಗಳು ಜೀವನದ ಸಂಕೋಲೆಯನ್ನು ಕಸಿದುಕೊಳ್ಳುತ್ತಿವೆ, ಪರೀಕ್ಷೆಗಳೇ ಜೀವನವನ್ನು ರೂಪಿಸುತ್ತವೆ, ಇದರಿಂದಲೇ ಜೀವನ ಅನ್ನುವ ಹಾಗೆ ಇತ್ತೀಚಿನ ದಿನಗಳು ಬೆಳೆದು ಹೋಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.
ವೈಜ್ಞಾನಿಕ ತಳಹದಿಯ ಮೇಲೆ ಇರಬೇಕಾದ ಆಧುನಿಕ ಜನರು ಅವೈಜ್ಞಾನಿಕ ಪದ್ಧತಿ ಹಾಗೆ ವರ್ತಿಸುತ್ತಿರುವುದು ಬೇಸರದ ಸಂಗತಿಯಾಗಿದೆ.ಸಣ್ಣಸಣ್ಣ ಮಕ್ಕಳ ಮೇಲೆ ಭಾರದ ಪಾಟಿಚೀಲವನ್ನು ಹೆಗಲಿಗೇರಿಸಿ ಶಾಲೆಗೆ ಕಳಿಸುವ ಪರಿಪಾಠ ತಂದೆ-ತಾಯಿಗಳಿಗೆ ಗೀಳಾಗಿ ಪರಿಣಮಿಸಿವೆ. ಮಕ್ಕಳು ಸಹ ಇದೆ ನಮ್ಮ ಕೆಲಸವಾಗಿದೆ, ಎಂದುಕೊಂಡು ಶಿರಸಾವಹಿಸಿ ಪರಿಪಾಲಿಸುತ್ತಿವೆ.
ಶಿಕ್ಷಣದ ವ್ಯವಸ್ಥೆಯು ಕೂಡ ಇದಕ್ಕೆ ಮುಂಚೂಣಿಯಲ್ಲಿ ಇದ್ದಂತೆ ಸಾಕಷ್ಟು ಶಿಕ್ಷಣ ಕ್ಷೇತ್ರಗಳು ಮೊಸಳೆ ಬಾಯಿಯಂತೆ ಎಲ್ಲ ಕಡೆಗಳಲ್ಲಿಯೂ ತೆರೆದುಕೊಂಡಿರುವುದು ಸೋಜಿಗ. ಹೆಚ್ಚುಹೆಚ್ಚು ಅಂಕ ಗಳಿಸಲೆಂದು ಪಾಲನೆ ಪೋಷಣೆ ಮಾಡಬೇಕಾದ ಪಾಲಕರು ಅಧಿಕಾರ ವಹಿಸಿದವರಂತೆ ಮಕ್ಕಳಿಗೆ ಆಜ್ಞೆ ಮಾಡುತ್ತಿರುವುದು ಸಹಜ ಸ್ಥಿತಿಗತಿಗಳಾಗಿವೆ ಇದು ಸತ್ಯ. ಎಲ್ಲವನ್ನೂ ಹಸುಳೆಯಿಂದಲೇ ಕಲಿಯಲು ಶುರುಮಾಡಿದ್ದು ಕಾರಣ, ಕಲಿಯುಗದ ಆರಂಭ ಈಗ ಶುರುವಾಗಿದೆ ಎಂದು ಭಾಸವಾಗುತ್ತಿದೆ.
ಮಕ್ಕಳ ಮೇಲೆ ಅತಿಯಾದ ಒತ್ತಡ ಉಂಟಾಗುತ್ತದೆ ಎನ್ನುವ ಮನೋಭಾವನೆ ಸಹ ಇಲ್ಲ, ಮುಗ್ಧ ಮನಸ್ಸುಗಳು ಆ ತುಂಟಾಟ, ನಗು ಎಲ್ಲವನ್ನೂ ಪರೀಕ್ಷೆಗಳ ಅಂಕಗಳ ಕೇಂದ್ರದಲ್ಲಿ ಲೀನವಾಗಿವಿ ಹೋಗಿವೆ. ಬದಲಾವಣೆ ಜಗದ ನಿಯಮ ಅದಕ್ಕಾಗಿ ಇದೆÇÉಾ ನಡೆಯುತ್ತಿರಬಹುದು. ಪರೀಕ್ಷೆಯ ಅಂಕಗಳ ಸಲುವಾಗಿ ನೂರಾರು ಸಣ್ಣಸಣ್ಣ ವಯಸ್ಸಿನ ಮುಗª ಮನಸ್ಸಿನ ಮಕ್ಕಳ ಪ್ರಾಣಗಳು ಹಾರಿಹೋಗುತ್ತಿರುವುದು ನಿರಂತರವಾಗಿರುವುದು ಅನ್ನುವುದು ಕೂಡ ಕಟುಸತ್ಯ.
ಏಕೆಂದರೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ನಾವುನೀವೆಲ್ಲರೂ ಸಹಜವಾಗಿ ನೋಡುತ್ತೇವೆ. ಹಾಗಾಗಿ ಅಂಕಗಳಿಗಾಗಿ ಪ್ರಾಣ ಬಿಡುವ ಮುನ್ನ ಜೀವನ ಎಂಬ ಪರೀಕ್ಷೆ ಎದುರಿಸಲು ನಾವೆಲ್ಲರೂ ಸಿದ್ಧರಿರಬೇಕಾಗಿದ್ದು ಬಹಳ ಅಗತ್ಯವಾಗಿ ಇದೆ.
-ಸುನೀಲ ತೇಗೂರ
ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.