ಪರಿಸರ ಉಳಿಸಲು ಪರಿ ಪರಿ ಪ್ರಯೋಗ

Team Udayavani, Jun 5, 2020, 3:45 PM IST

ಪರಿಸರ ಉಳಿಸಲು ಪರಿ ಪರಿ ಪ್ರಯೋಗ

ಸಾಂದರ್ಭಿಕ ಚಿತ್ರ

ಮನುಷ್ಯ ಅತ್ಯಂತ ಬುದ್ಧಿವಂತ ಜೀವಿ. ಮನುಷ್ಯನ ವಾಸಕ್ಕೆ ಯೋಗ್ಯವಾದ ಈ ಭೂಮಿಯನ್ನು ನಾವು ಪರಿಸರವೆಂದು ಹೇಳುತ್ತೇವೆ. ಇಲ್ಲಿ ಬಹು ವಿಧದ ಜೀವ ವೈವಿಧ್ಯತೆ ಕಾಣಬಹುದಾಗಿದೆ. ಇಲ್ಲಿ ಗಾಳಿ, ನೀರು, ಸದಾ ಹಸುರು ಇದು ಉಸಿರಾಗಿದೆ. ಇದನ್ನು ಕಲುಷಿತಗೊಳಿಸಿದರೆ ಮನುಷ್ಯ ತನ್ನ ಶವದ ಪೆಟ್ಟಿಗೆಗೆ ತಾನೇ ಮೊಳೆ ಹೊಡೆ ದು ಕೊಂಡಂತೆ.

ಪರಿಸರ ಸಂರಕ್ಷಣೆಗೆ ಪರಿಸರದ ದಿನದ ಆವಶ್ಯಕತೆ ಇಲ್ಲ. ದಿನದ 24 ಗಂಟೆಯೂ ಮತ್ತು ಮನುಷ್ಯ ಜೀವಿತದ ಎಲ್ಲ ಕ್ಷಣಗಳು ಪರಿಸರ ರಕ್ಷಣೆಗೆ ಮೀಸಲಾಗಿರಬೇಕು. ವಿಪರೀತ ಪ್ಲಾಸ್ಟಿಕ್‌ ಬಳಕೆ, ಕಾರ್ಖಾನೆಯಿಂದ ಹೊರ ಬರುವ ಹೊಗೆ, ತ್ಯಾಜ್ಯ ಇತ್ಯಾದಿ ಎಲ್ಲವನ್ನೂ ನಾವು ನಿಯಂತ್ರಣದಲ್ಲಿಡಬೇಕಿದೆ. ಇದನ್ನು ವಿಲೇ ಮಾಡಿ ಸಮರ್ಪಕವಾಗಿ ಮಣ್ಣಿಗೆ ಸೇರಿಸುವುದು ಉತ್ತಮ ಕ್ರಮ. ಇದು ಪರಿಸರ ಸಂರಕ್ಷಣೆಗೆ ಸಹಕಾರಿ.

ಪರಿಸರದಲ್ಲಿ ಹೆಚ್ಚು ಮಣ್ಣಿನ ವಾಸನೆ ಹರಡುತ್ತಿದೆ. ಮೊದಲಾದರೆ ಕಾರ್ಬನ್‌ ಡೈ ಆಕ್ಸೈಡ್‌,ಫ್ಯಾಕ್ಟರಿಗಳ ಹೊಗೆ, ಪ್ಲ್ರಾಸ್ಟಿಕ್‌ ಸುಟ್ಟ ವಾಸನೆ, ವಾಹನಗಳ ಹೊಗೆ ಇತ್ಯಾದಿ ಕಲ್ಮಶಗಳು ಗಾಳಿಯಲ್ಲಿ ತೇಲಿ ಬರುತ್ತಿತ್ತು. ಇಂದು ಗಾಳಿ ಬೀಸಿದರೂ ಕೂಡ ಅದು ತಂಗಾಳಿ ಪರಿಮಳವನ್ನೇ ತಂದು ನೀಡುತ್ತಿದೆ.

ಪರಿಸರ ಸಂರಕ್ಷಣೆಗೆ ಮೊದಲು ಮರಗಳನ್ನು ಬೆಳಸಬೇಕು. ಒಂದು ಮರ ಕಡಿದರೆ ಅದಕ್ಕೆ ಸಮನಾಗಿ ನಾವು ಸಾವಿರ ಮರಗಳನ್ನು ನಡೆಸ ಬೇಕು ಎಂಬ ಕಾನೂನು ಬಂದಾಗ ಪರಿಸರ ಜಾಗೃತಿ ಆಗಲು ಸಾಧ್ಯ. ಪರಿಸರ ಉಳಿದರೇ ಮಾತ್ರ ಮಾನವ ಸಂಸ್ಕೃತಿ ಉಳಿಯುತ್ತದೆ ಎಂಬುದು ನಮಗೆ ಅರಿವಿರಬೇಕು.

ಮನುಷ್ಯ ತನ್ನ ವಿಕೃತಿಯಿಂದ ಕಾಡನ್ನು ಕಡಿಯುವ ಮೂಲಕ ಉರುವಲು ಕಟ್ಟಿಗೆಗಳನ್ನು ಬಳಸುವುದು ಕೂಡ ಸದ್ಯದ ಮಟ್ಟಿಗೆ ಕಡಿಮೆಯಾಗುತ್ತಿದೆ. ಇನ್ನೂ ನಾವು ಪರಿಸರ ಸಂರಕ್ಷಣೆ ಮಾಡಬೇಕಾದರೆ ಸಂಪೂರ್ಣ ಪ್ಲಾಸ್ಟಿಕ್‌ ಬಳಕೆ ಮತ್ತು ಪೆಟ್ರೋಲ್‌ ಡಿಸೇಲ್‌ ಬಳಕೆಯನ್ನು ನಿಲ್ಲಿಸಿ ಸೋಲಾರ್‌ ವಿದ್ಯುತ್‌ ಮೂಲಕ ಹೆಚ್ಚಾಗಿ ಬಳಸಿದರೆ, ಪರಿಸರ ಸಮತೋಲನದಲ್ಲಿರುತ್ತದೆ ಎಲ್ಲಕ್ಕಿಂತ ಹೆಚ್ಚಾಗಿ ಮಾನವ ಸಮೃದ್ಧಿ ಉಜ್ವಲ ಭವಿಷ್ಯದಲ್ಲಿರುತ್ತದೆ ಎಂದರೆ ತಪ್ಪಿಲ್ಲ. ಆದಷ್ಟು ಈಗಲಾದರೂ ಪ್ರತಿಯೊಬ್ಬರು ತಮ್ಮ ಮನೆಯಲ್ಲಿಯೇ ಇರುವಷ್ಟು ಜಾಗದಲ್ಲಿ ಪುಟ್ಟ ಪುಟ್ಟ ಸಸಿಗಳನ್ನು ನೆಟ್ಟು ಪ್ರಕೃತಿಗೆ ಸಹಾಯವನ್ನು ಮಾಡುವ ಕೆಲಸ ಆಗಬೇಕು ಅದು ನಮ್ಮ ಹೊಣೆಯೂ ಕೂಡ.

ಯಶಸ್ವಿ ದೇವಾಡಿಗ,
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ

ಟಾಪ್ ನ್ಯೂಸ್

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

1-a-ccc

INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

UV Fusion: ಪ್ರಕೃತಿ ಅವಶ್ಯ ಮನುಜನಿಗೆ

13

UV Fusion: ಎತ್ತ ಕಡೆ ಸಾಗುತ್ತಿದೆ ಈಗಿನ ಯುವ ಜನತೆ ?

12-uv-fusion

UV Fusion: ತಂಡ ಕಟ್ಟಿದ, ಗೆದ್ದ…

11-

Healthy lifestyle: ಸ್ವಸ್ಥ ಆರೋಗ್ಯಕ್ಕೆ ಸ್ವಸ್ಥ ಜೀವನ ಕ್ರಮ

10

UV Fusion: ಸಂಭ್ರಮದ ಹಬ್ಬಕ್ಕೆ ಬಾಂಧವ್ಯವೇ ಬೆಸುಗೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.