Cinema: ತಂದೆಯ ಪ್ರೀತಿಯ ಉತ್ಕರ್ಷ- ಅನಿಮಲ್
Team Udayavani, Jan 6, 2024, 3:04 PM IST
ಹಿಂಸೆಯ ವೈಭವೀಕರಣ, ಪ್ರೀತಿ, ಕುಟುಂಬಗಳ ನಡುವಿನ ಸಂಬಂಧ, ಉತ್ತಮ ಸಂಗೀತ ಮತ್ತು ಇವುಗಳನ್ನು ಮೀರಿ ತಂದೆಯ ಮೇಲಿನ ಪ್ರೀತಿಯನ್ನು ಕಟ್ಟಿಕೊಡುವ ಸಿನೆಮಾ “ಅನಿಮಲ್’.
ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಕಂಡ ಈ ಸಿನೆಮಾದಲ್ಲಿ ಇಂದಿನ ಯುವಜನಾಂಗಕ್ಕೆ ಬೇಕಾದ ಎಲ್ಲ ರೀತಿಯ ಮಸಾಲೆ ಅಂಶಗಳನ್ನು ಒಳಗೊಂಡಿದೆ ಎನ್ನಬಹುದು.
ಚಾಕ್ಲೇಟ್ ಬಾಯ್ ಎಂದು ಹೆಸರುವಾಸಿಯಾದ ರಣಬೀರ್ ಕಪೂರ್ ಅವರು ಅನಿಮಲ್ ಚಿತ್ರದಲ್ಲಿ ಆ್ಯಕ್ಷನ್ ಹೀರೊ ಆಗಿ ಹೊರಹೊಮ್ಮಿರುವುದು ಅವರ ನಟನಗೆ ಹೊಸ ಗರಿ ಮೂಡುವಂತೆ ಮಾಡಿದೆ. ಈ ಚಿತ್ರದ ಮತ್ತೂಂದು ವಿಶಿಷ್ಟéವೆಂದರೆ ಬಹುತೇಕ ಎಲ್ಲ ಚಿತ್ರಗಳಲ್ಲಿ ತಾಯಿ ಬಗೆಗಿನ ಭಾವನೆಗಳಿಗೆ ಪ್ರಾಮುಖ್ಯತೆ ನೀಡಿರುವುದನ್ನು ಕಂಡಿರುತ್ತೇವೆ. ಆದರೆ ಅನಿಮಲ್ ಚಿತ್ರವು ತಂದೆ ಮಗನ ನಡುವಿನ ಪ್ರೀತಿಯ ಪ್ರತಿರೂಪದಂತೆ ಚಿತ್ರಿತವಾಗಿರುವುದರಿಂದ ಪ್ರೇಕ್ಷಕರಿಗೆ ಹೊಸ ದೃಶ್ಯ ಕಾವ್ಯವನ್ನು ಕಟ್ಟಿಕೊಡುತ್ತದೆ.
ತಂದೆಯ ಪಾತ್ರದಲ್ಲಿ ಹಿರಿಯ ನಟ ಅನಿಲ್ ಕಪೂರ್ ಅವರ ಅಭಿನಯ ತುಂಬಾ ಮನೋಜ್ಞವಾಗಿದ್ದು, ಅಪ್ಪ ಮಗನ ದೃಶ್ಯಗಳು ನೋಡಿದ ಎಲ್ಲ ಪ್ರೇಕ್ಷಕರಿಗೆ ಅವರ ತಂದೆಯ ನೆನಪಾಗುವಂತೆ ಮಡುವುದು ಖಚಿತ.
ನಿದೇರ್ಶಕ ಸಂದೀಪ್ ರೆಡ್ಡಿ ವಂಗಾ ಸಿನೆಮಾದಲ್ಲಿ ಸಾಹಸ ದೃಶ್ಯಗಳಿಗೆ ಹೆಚ್ಚು ಒತ್ತು ನೀಡಿದ್ದು, ಹೊಸ ರೀತಿಯ ಸಾಹಸ ದೃಶ್ಯಗಳನ್ನು ತೆರೆಯ ಮೇಲೆ ಸೃಷ್ಟಿಸಿದ್ದಾರೆ. ಆಂಧ್ರಪ್ರದೇಶ ಮೂಲದ ನಿದೇರ್ಶಕರಾಗಿರುವ ಕಾರಣ ತೆಲಗು ಚಿತ್ರಗಳ ಪ್ರಭಾವವನ್ನು ಅನಿಮಲ್ ಚಿತ್ರದಲ್ಲೂ ಗಮನಿಸಬಹುದಾಗಿದೆ. ಚಿತ್ರದ ನಾಯಕಿಯರಾದ ರಶ್ಮಿಕಾ ಮಂದಣ್ಣ ಮತ್ತು ತೃಪ್ತಿ ದಿಮರಿ ಅವರು ಉತ್ತಮ ನಟನೆಯಿಂದ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಸಫಲರಾಗಿದ್ದಾರೆ.
ಚಿತ್ರದ ಸಂಗೀತಕ್ಕೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದು, ರಣಬೀರ್‌ಕರ್ಪೂರ್ ಅವರ ಪಾತ್ರವನ್ನು ಪರಿಚಯಿಸುವ ಸೀನ್‌ನಲ್ಲಿ ಬಳಸಿರುವ ರೋಜಾ ಚಿತ್ರದ ಹಿನ್ನೆಲೆ ಸಂಗೀತ ಈಗಲೂ ಸುಮಧುರವಾಗಿದೆ. ಇದರಲ್ಲಿ ಬರುವ “ಪಾಪಾ ಮೇರಿಜಾನ್’ ಹಾಡು ಕೇಳಿದ ಪ್ರತಿಯೊಬ್ಬರಿಗೂ ತಮ್ಮ ತಂದೆಯ ಜತೆ ಕಳೆದ ಮಧುರ ಕ್ಷಣಗಳು ನೆನಪಾಗುವುದು ಖಂಡಿತ.
ಅನಿಮಲ್ ಹೆಸರಿಗೆ ತಕ್ಕಂತೆ ಚಿತ್ರದ ಖಳನಟ “ಬಾಬಿ ಡಿಯೋಲ್’ ತಮ್ಮ ನಟನೆಯಲ್ಲಿನ ಕ್ರೂರತೆಯನ್ನು ಮಾಡಲು ಪ್ರಾಣಿಯೆ ಅವರ ಮೈಯಲ್ಲಿ ಪರಕಾಯ ಪ್ರವೇಶ ಮಾಡಿದಂತೆ ನಟನೆ ಮಾಡಿದ್ದಾರೆ. ಮೂರುವರೆ ಗಂಟೆಯ ಅನಿಮಲ್ ಸಿನೆಮಾದಲ್ಲಿ ಕೊನೆಯ 15 ನಿಮಿಷ ಮಾತ್ರ ಕಾಣುವ ಖಳನಟ ಬಾಬಿ ಡಿಯೋಲ್ ಸಂಪೂರ್ಣ ಚಿತ್ರವನ್ನೇ ವ್ಯಾಪಿಸುವಂತಹ ನಟನೆಯನ್ನು ಮಾಡಿದ್ದಾರೆ.
ಕಳೆದ ಕೆಲವು ದಶಕಗಳಿಂದ ಆರಕ್ಕೆ ಏರದೆ ಮೂರಕ್ಕೂ ಇಳಿಯದೆ ನಟನೆ ಮಾಡುತ್ತಿದ್ದ ಬಾಬಿ ಡಿಯೋಲ್‌ಗೆ ಈ ಚಿತ್ರದ ಮೂಲಕ ಮತ್ತೂಂದು ಹೊಸ ಜೀವನ ಸಿಕ್ಕಿಂತಾಗಿದೆ. ಆದರೆ ಇಂದಿನ ಯುವಜನಾಂಗಕ್ಕೆ ಬೇಕಾದ ಎಲ್ಲ ಅಂಶಗಳು ಇದರಲ್ಲಿದ್ದು ಮೂರುವರೆ ಗಂಟೆ ಪ್ರೇಕ್ಷಕರಿಗೆ ಮೋಸವಿಲ್ಲದಂತೆ ಮನರಂಜನೆ ನೀಡುವ ಚಿತ್ರವಾಗಿದೆ.
-ರಾಸುಮ ಭಟ್
ಕುವೆಂಪು ವಿವಿ, ಶಿವಮೊಗ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.