ಕಷ್ಟಗಳನ್ನು ಎದುರಿಸೋಣ; “ಓಡಬೇಡಿ ತಿರುಗಿ ನಿಂತು ಎದುರಿಸಿರಿ’ ಎಂಬುದು ಜೀವನೋತ್ಸಾಹದ ಮಂತ್ರ


Team Udayavani, Mar 26, 2021, 4:04 PM IST

FD01

ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ಪರ್ಯಟನೆ ಮಾಡುತ್ತಿದ್ದ ಸಂದರ್ಭವದು. ಒಂದು ದಿನ ಕಾಶಿಯ ದೇವಾಲಯವೊಂದರ ಪ್ರಾಂಗಣದಿಂದ ಹೊರಟಿದ್ದರು.

ತುಂಟ ಕೋತಿಗಳ ಹಿಂಡೊಂದು ಅವರನ್ನು ಅಟ್ಟಿಸಿಕೊಂಡು ಬಂದಿತು. ಅವರು ಆದಷ್ಟು ವೇಗವಾಗಿ ಓಡಿದರು.

ಕೋತಿಗಳೂ ಸಹ ವೇಗವಾಗಿ ಸ್ವಾಮೀಜಿಯವರ ಬೆನ್ನು ಬಿಡದೇ ಅವರ ಹಿಂದೆಯೇ ಓಡಿಸಿಕೊಂಡು ಹೋದವು. ಸ್ವಾಮೀಜಿ ವೇಗವಾಗಿ ಓಡಿದಂತೆಲ್ಲ, ಕೋತಿಗಳೂ ವೇಗವಾಗಿ ಅವರನ್ನು ಬೆನ್ನಟ್ಟಿದವು. ಅವರಿಗೆ ಸುಸ್ತಾಯಿತು. ಏನು ಮಾಡಬೇಕೆಂದು ತೋಚಲಿಲ್ಲ.

ಆಗ ಆ ಕಡೆ ಹೋಗುತ್ತಿದ್ದ ವೃದ್ಧ ಸನ್ಯಾಸಿಯೊಬ್ಬರು ಕೂಗಿ, ಓಡಬೇಡಿರಿ, ತಿರುಗಿ ನಿಂತು ಎದುರಿಸಿರಿ’ ಎಂದು ಹೇಳಿದರು. ಆ ಕೂಗನ್ನು ಕೇಳಿದೊಡನೆ ಸ್ವಾಮೀಜಿಗೆ ಮಿಂಚಿನ ಸಂಚಲನವಾದಂತಾಯಿತು. ತತ್‌ಕ್ಷಣ ತಿರುಗಿ ನಿಂತರು. ಆಗ ಕೋತಿಗಳು ಕಕ್ಕಾಬಿಕ್ಕಿಯಾಗಿ, ಹೆದರಿ ಪಲಾಯನ ಮಾಡಿದವು.ಆಗ ಸ್ವಾಮೀಜಿ ಜೋರಾಗಿ ನಕ್ಕರು.

ಇದೊಂದು ಘಟನೆ ಮಾತ್ರವಲ್ಲ. ಪ್ರತಿಯೊಬ್ಬರ ಬದುಕಿಗೆ ಒಂದು ರೀತಿಯಲ್ಲಿ ಪ್ರೇರಣಾ ಬಿಂದು, ಜೀವನ ಸ್ಫೂರ್ತಿ ಎಂದರೆ ತಪ್ಪಾಗಲಾರದು. ಓಡಬೇಡಿ, ಎದುರಿಸಿ’ ಎಂಬುದು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾದ ಜೀವನ ಸೆಲೆ.

ಪ್ರಕೃತಿಯೂ ಕೂಡ ಇಂತಹ ಅನೇಕ ಜೀವನ ಪಾಠವನ್ನು,ಚೈತನ್ಯ ಶಕ್ತಿಯನ್ನು ನಮಗೆ ನೀಡುತ್ತಲೇ ಇರುತ್ತದೆ. ಹರಿಯುವ ನದಿ ಸಲಿಲವಾಗಿ ಶರಧಿಯನ್ನು ಸೇರಲು ಸಾಧ್ಯವೇ ಇಲ್ಲ. ನಡುವೆ ಅನೇಕ ಬಂಡೆಗಳನ್ನು ಹಾದು, ಗಿಡಗಂಟಿಗಳನ್ನು ಸೀಳಿಕೊಂಡು, ಅಡ್ಡಬಂದಿರುವ ಅಡೆತಡೆಗಳನ್ನು ಹಿಮ್ಮೆಟ್ಟಿ,ಅಂಕುಡೊಂಕಾಗಿ ಹೊಸ ಮಾರ್ಗದಲ್ಲಿ ಹರಿದ ಅನಂತರವೇ ಶರಧಿಯನ್ನು ಸೇರುವುದು. ತನ್ನ ಹರಿವಿಗೆ ಅರ್ಥ ಕಂಡುಕೊಳ್ಳುವುದು. ನದಿ ಹೊಸ ಮಾರ್ಗದ ಹರಿವಿನಿಂದ ಯಶಸ್ವಿಯಾಗಿ ಕಡಲನ್ನು ಸೇರುವಂತೆಯೇ, ನಾವೂ ಕೂಡ ಜೀವನವೆಂಬ ನದಿಯ ಹರಿವಿನಲ್ಲಿ ನಮ್ಮನ್ನು ಬೆಂಬತ್ತಿದ ಸಮಸ್ಯೆಗಳನ್ನು ಎದುರಿಸಿ,ಧೃತಿಗೆಡದೆ ಮುನ್ನುಗ್ಗಿ, ಕಷ್ಟಗಳಿಗೆ ತಿರುಗಿ ನಿಂತು ಸುಖ, ನೆಮ್ಮದಿಯೆಂಬ ಸಾಗರವನ್ನು ತಲುಪಬೇಕು.

ಜೀವನದ ಪಯಣದಲಿ ಅನೇಕ ಸಮಸ್ಯೆಗಳು ನಮ್ಮ ಬೆನ್ನಟ್ಟುತ್ತವೆ. ಕಷ್ಟ ಕಾರ್ಪಣ್ಯಗಳು ನಮ್ಮನ್ನು ಸದಾ ಅಟ್ಟಿಸಿಕೊಂಡು ಬರುತ್ತವೆ. ಅವುಗಳಿಂದ ತಪ್ಪಿಸಿಕೊಳ್ಳಲು ನಾವು ವೇಗವಾಗಿ ಓಡಲು ಪ್ರಾರಂಭಿಸುತ್ತೇವೆ. ಅವು ಬೆಂಬಿಡದೆ ಕಾಡಿದಾಗ ಜೀವನ’ ಎಂಬ ಓಟದಲ್ಲಿ ಬಳಲಿ ಬೆಂಡಾಗುತ್ತೇವೆ. ಬೆನ್ನಟ್ಟಿದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ದಾರಿ ಕಾಣದಷ್ಟು ಬಸವಳಿಯುತ್ತೇವೆ. ಆಗ ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ’ ಎಂಬಂತೆ, ನಮ್ಮನ್ನು ಬೆಂಬತ್ತಿರುವ ಸಮಸ್ಯೆಯನ್ನು ಎದುರಿಸಲೆಂದೇ ಏನಾದರೂ ಒಂದು ಸಕಾರಾತ್ಮಕ ಶಕ್ತಿ ಮಿಂಚಿನಂತೆ ಬರಲೂಬಹುದು.

ಮಿಂಚಂತೆ ಬಂದ ಸಮಸ್ಯಾ ಪರಿಹಾರ ಸೂತ್ರಗಳನ್ನು ಬಿಗಿದಪ್ಪಿಕೊಳ್ಳಬೇಕು. ಸಮಸ್ಯೆಗೆ ಬೆನ್ನು ಹಾಕಿ ಓಡದೆ, ಸೆಡ್ಡು ಹೊಡೆದು ನಿಲ್ಲಬೇಕು. ಬಂದಿರುವ ಅಡೆತಡೆಗಳ ನಿವಾರಣೆಗಾಗಿ ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.ಆಗ ಮಾತ್ರ ಕತ್ತಲಾಗಿ ಬೆದರಿಸಿದ ಕಷ್ಟಗಳು ಮಾಯವಾಗಿ, ಭರವಸೆ ಎಂಬ ಬೆಳಕು ಮೂಡುತ್ತದೆ.

ಕಷ್ಟಗಳಿಂದ ಅತೀ ಹೆಚ್ಚು ಪೆಟ್ಟು ತಿಂದು, ಅದಕ್ಕೆ ಹೆದರಿ ಕಂಗಾಲಾಗದೆ, ಎದುರಿಸಿ ಮುನ್ನಡೆದವರು ಸಮಾಜದಲ್ಲಿ ಮುಂದೆ ಕುಗ್ಗದೇ ಯಶಸ್ವಿ ವ್ಯಕ್ತಿಯಾಗಬಲ್ಲರಲ್ಲದೆ, ಇತರರಿಗೆ ಮಾದರಿಯಾಗಬಲ್ಲರು. “ಓಡಬೇಡಿ ತಿರುಗಿ ನಿಂತು ಎದುರಿಸಿರಿ’ ಎಂಬುದು ನಮಗೆ ಜೀವನೋತ್ಸಾಹದ ಮಂತ್ರವಾಗಿ ಯಶದ ನಗೆ ಬೀರುವಂತಾಗಬೇಕು.

ಭಾರತಿ ಎ., ಕೊಪ್ಪ, ಸಹಶಿಕ್ಷಕಿ, ಸ.ಕಿ.ಪ್ರಾ. ಶಾಲೆ, ಸಣ್ಣಕೆರೆ, ಕೊಪ್ಪ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.