UV Fusion: ಸಹವಾಸ ದೋಷ
Team Udayavani, Oct 12, 2024, 1:10 PM IST
ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಪೋಷಕರು ತಮ್ಮ ಮಕ್ಕಳಿಗೆ ನೀಡುವ ಮೊದಲ ಎಚ್ಚರಿಕೆಯ ಪಾಠವೆಂದರೆ “ಯಾರ ಜತೆಯಾದರು ಸ್ನೇಹ ಮಾಡುವುದಾದರೆ ನೋಡಿ ಸ್ನೇಹ ಮಾಡು’ ಎಂಬುದು. ಈ ಎಚ್ಚರಿಕೆಯ ಸಂದೇಶ ಇಂದು ನೆನ್ನೆಯದಲ್ಲ ಇದು ಶತ-ಶತಮಾನಗಳಿಂದಲೂ ರೂಢಿಯಲ್ಲಿದೆ. ನಾವು ಮಾಡುವ ಸ್ನೇಹ, ಸಹವಾಸಗಳು ನಮ್ಮ ಉನ್ನತಿ ಹಾಗೂ ಅವನತಿ ಎರಡಕ್ಕೂ ಸಹ ದಾರಿ ಮಾಡಿಕೊಡಬಲ್ಲದು.
ಅಂದು ಯಾವುದೋ ಕೆಲಸದ ಮೇಲೆ ನಮ್ಮ ಪತ್ರಿಕೋದ್ಯಮ ವಿಭಾಗಕ್ಕೆ ಹೋಗಿದ್ದೆ. ಅದೇ ದಿನ ನಾನು ಪದವಿ ಓದಿದ್ದ ಕಾಲೇಜಿನಲ್ಲಿ ಯಾವುದೋ ಒಂದು ಕಾರ್ಯಕ್ರಮ ಆಯೋಜಿಸಿದ್ದರು. ಕುತೂಹಲಕ್ಕೆ ಏನಿರಬಹುದು ಎಂದು ನೋಡಲು ನನ್ನ ಜೂನಿಯರ್ ಜತೆ ಹೋದೆ. ಆದರೆ ಅಲ್ಲಿ ಕಿವಿ ಕಿತ್ತೋಗುವ ಹಾಗೆ ಡಿಜೆ ಹಾಕಲಾಗಿತ್ತು, ಹುಡುಗ ಹುಡುಗಿಯರೆಲ್ಲರೂ ಮೈಮರೆತು ಕುಣಿಯುತ್ತಿದ್ದರು. ಅದು ಎಲ್ಲ ಕಾಲೇಜುಗಳಲ್ಲಿಯು ನಡೆಯುವುದೆ, ಅದರಲ್ಲೇನು ವಿಶೇಷ ಎಂದು ನಿಮಗನ್ನಿಸಬಹುದು.
ಅಸಲಿಗೆ ಅಲ್ಲಿ ಒಂದಷ್ಟು ವಿದ್ಯಾರ್ಥಿಗಳು ಮದ್ಯ ಸೇವಿಸಿ, ತಮ್ಮ ಮೇಲೆ ತಮಗೆ ನಿಯಂತ್ರಣವಿಲ್ಲದಂತೆ ಕುಣಿಯುತ್ತಿದ್ದರು. ಇದರ ನಡುವೆ ಉತ್ತರ ಕರ್ನಾಟಕದ ವಿದ್ಯಾರ್ಥಿ, ಧೃಢಕಾಯ ದೇಹದವ ನನ್ನ ಮುಂದೆಯೇ ಎರಡು ವಿಮಲ್ ಪಾಕೆಟ್‌ಗಳನ್ನು ತೆಗೆದು ಅದಕ್ಕೆ ಮತ್ತೇನನ್ನೋ ಮಿಕ್ಸ್ ಮಾಡಿ ಬಾಯಿಗೆ ರಪ್ಪನೆ ಸುರಿದುಕೊಂಡ. ಇದರ ಮಧ್ಯೆ ಮದ್ಯದ ಅಮಲಿನಲ್ಲಿದ್ದವನೊಬ್ಬ ಬೇರೊಂದು ಕಾಲೇಜಿನ ಯುವತಿಯ ಕಪಾಳಕ್ಕೆ ಬಾರಿಸಿದ್ದ (ಆಮೇಲೆ ತಿಳಿದ್ದದ್ದು ಆಕೆ ಆತನ ಗೆಳತಿ ಎಂದು.
ಹಾಗೆ ನೋಡಿದರೆ ಕ್ಯಾಂಪಸ್ ಒಳಗೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಬರುವುದಕ್ಕೆ ಅನುಮತಿಯಿಲ್ಲ. ಆದರೆ ಆಕೆ ಕಾರ್ಯಕ್ರಮಕ್ಕೆ ಬಂದಿದ್ದು ಅಲ್ಲದೆ, ಸ್ನೇಹಿತನಿಂದ ಕಪಾಳಮೊಕ್ಷವನ್ನು ಮಾಡಿಸಿಕೊಂಡಿದ್ದಳು.) ತತ್‌ಕ್ಷಣ ಆಕೆ ತನಗೆ ಆಪ್ತ ವ್ಯಕ್ತಿಯೊಬ್ಬನನ್ನು ಕ್ಯಾಂಪಸ್ ಹೊರಗೆ ಕರೆಸಿದಳು. ಬಳಿಕ ಕಪಾಳಕ್ಕೆ ಬಾರಿಸಿದ್ದ ಹುಡುಗನನ್ನು ಸಹ ಹೊರಗಡೆ ಕರೆಸಿಕೊಂಡು ಮಾತನಾಡಲಾರಂಭಿಸಿದರು. ಆರಂಭದಲ್ಲಿ ಶಾಂತಿಯುತವಾಗಿಯೇ ಸಾಗಿದ್ದ ಮಾತುಕತೆ ಮುಂದೆ ಪೊಲೀಸರನ್ನು ಕರೆಸುವ ಹಂತಕ್ಕೆ ತಲುಪಿತು. ಈ ಎಲ್ಲ ಘಟನೆಗಳು ಆಗುವ ವೇಳೆ ಹುಡುಗಿಯ ಕಪಾಳಕ್ಕೆ ಬಾರಿಸಿದ್ದ ಹುಡುಗನ ಪರವಾಗಿ ಆತನ ಕೆಲ ಸ್ನೇಹಿತರು ವಾದಿಸುತ್ತಿದ್ದರು.
ಅವರಲ್ಲಿ ಬಹುತೇಕರು ಮದ್ಯಸೇವಿಸಿದ್ದದ್ದು ನನ್ನ ಗಮನಕ್ಕೆ ಬಂದಿತು. ಆದರೆ ಇಲ್ಲಿ ಕಪಾಳಕ್ಕೆ ಬಾರಿಸಿದ್ದ ಯುವಕ ಕ್ಷಮೆ ಕೇಳುವುದಕ್ಕೆ ಸಿದ್ಧವಿರಲಿಲ್ಲ, ಅಷ್ಟರಲ್ಲಾಗಲೇ ಕ್ಯಾಂಪಸ್ ಹೊರಗೆ ಈ ಗಲಾಟೆ ನೋಡಲು ಜನ ಜಮಾಯಿಸುತ್ತಿದ್ದರು. ಆದರೆ ಅಷ್ಟರೊಳಗೆ ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಗುಂಪನ್ನು ಚದುರಿಸುವ ಕೆಲಸ ಮಾಡಿದರು. ಆಮೇಲೆ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ತಿಳಿಯಾಯಿತು. ಆ ಬಳಿಕ ಹೇಗೋ ಆತ ಕ್ಷಮೆ ಕೇಳಿದ ಅದು ಅಲ್ಲಿಗೆ ನಿಂತಿತು. ಆದರೆ ಕ್ಷಮೆ ಕೇಳಿ ಬಂದ ಬಳಿಕ ಆತನ ಕೆಲ ಸ್ನೇಹಿತರು ನೀನು ಕ್ಷಮೆ ಕೇಳಬಾರದಿತ್ತು.
ಆತನನ್ನು ಬೇರೆಯ ಕಡೆ ಕರೆದುಕೊಂಡು ಹೋಗಿ ವಿಚಾರಿಸಿಕೊಳ್ಳಬಹುದಿತ್ತು ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು. ಆಗ ನನಗನಿಸಿದ್ದು ನಾವು ಸಹ ಇದೇ ಕಾಲೇಜಿನಲ್ಲಿಯೇ ಓದಿದ ವರು. ನನ್ನ ಜತೆ ಓದಿದ್ದ ಬಹುತೇಕ ಯಾರು ಈ ರೀತಿ ಕಾಲೇಜಿನ ಒಳಗೆ ಮದ್ಯಸೇವಿಸಿ ಬಂದು ಜಗಳ ಮಾಡಿದವರಲ್ಲ. ಆಗ ನಾವು ನಮ್ಮ ಪ್ರಾಧ್ಯಾಪಕರೆದುರು ನಿಂತು ಮಾತನಾಡುವುದಕ್ಕೂ ಹೆದುರುತ್ತಿದ್ದೆವು.
ಇವರ ವರ್ತನೆಗೆ ಈ ಮೂರು ವಿಷಯಗಳು ಕಾರಣವಿರಬಹುದು.ಆಹಾರ ಕ್ರಮ: ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಕ್ರಮ ತೀವ್ರ ಮಟ್ಟದಲ್ಲಿ ಹದಗೆಟ್ಟಿದೆ. ಸಾಮಾನ್ಯವಾಗಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳೆಲ್ಲ ಬೆಳಗ್ಗೆ ಬೇಗ ಹೊರಡಬೇಕಾಗಿರುವುದರಿಂದ ಒಂದಷ್ಟು ಮಂದಿ ಹೊಟೇಲ್ ಗಳಲ್ಲಿಯೇ ಬೆಳಗ್ಗಿನ ತಿಂಡಿಯಾಗುತ್ತದೆ. ಇನ್ನು ಬಹುತೇಕ ವಿದ್ಯಾರ್ಥಿಗಳು ಮಧ್ಯಾಹ್ನದ ಊಟ ಹೊರಗೆ ಮಾಡುವುದು. ಬಹುತೇಕ ವಿದ್ಯಾರ್ಥಿಗಳ ಮಧ್ಯಾಹ್ನದ ಊಟ ಫಾಸ್ಟ್‌ಫುಡ್. ಈ ರೀತಿ ಫಾಸ್ಟ್‌ಫುಡ್ ಸೇವಿಸುವುದು ದೇಹದಲ್ಲಿನ ಹಾರ್ಮೋನಲ್ ಬದಲಾವಣೆಗೆ ಕಾರಣವಾಗುತ್ತದೆ.
ಅತಿಯಾದ ಮೊಬೈಲ್ ಬಳಕೆ: ಇನ್ನು ಮೊಬೈಲ್ ಅದು ವರವೂ ಹೌದು ಶಾಪವೂ ಹೌದು. ಅದನ್ನು ನಮ್ಮ ಬೆಳವಣಿಗೆಗೆ ಬಳಸಿದರೆ ಅದ್ಭುತ ಯಶಸ್ಸನ್ನು ಕಾಣಬಹುದು ಹಾಗೆಯೇ ಕೆಟ್ಟ ಉದ್ದೇಶಕ್ಕೆ ಬಳಸಿದರೆ ಮತ್ತೆ ಮೇಲೇಳಲಾಗದಂತೆ ನೆಲ ಕಚ್ಚಬಹುದು. ಇತ್ತೀಚಿನ ದಿನಗಳಲ್ಲಿ ಮೊಬೈಲ್‌ನಲ್ಲಿ ಸಾಮಾಜಿಕ ಮಾಧ್ಯಮಗಳ ಅಬ್ಬರ ಹೆಚ್ಚಾಗಿದೆ. ಅವುಗಳಲ್ಲಿ ಬಹುತೇಕ ಕಸವೇ ಹೆಚ್ಚಾಗಿ ಇರುತ್ತದೆ. ಆ ಕಸದ ಮಧ್ಯೆ ಅಪರೂಪಕ್ಕೆ ಒಂದೆರಡು ಉತ್ತಮ ಕಂಟೆಂಟ್ ಸಿಗಬಹುದು ಅಷ್ಟೇ. ಇವೆಲ್ಲವೂ ಯುವಕರನ್ನು ಸಾಧ್ಯವಾದಷ್ಟು ಹಾಳುಗೆಡುವುತ್ತಿವೆ.
ಸುತ್ತಲಿನ ವಾತಾವರಣ: ಬೇರೆಲ್ಲದರಂತೆ ನಾವು ಬೆಳೆಯುವ ವಾತಾವರಣವು ನಮ್ಮ ರೂಪುಗೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಸುತ್ತಲಿನ ವಾತಾವರಣ ನಮ್ಮ ಬೆಳವಣಿಗೆಗೆ ಹಾಗೆಯೇ ನಮ್ಮ ನಾಶಕ್ಕೆ ಕಾರಣವಾಗುತ್ತದೆ. ಇವೆಲ್ಲದಕ್ಕೂ ಕಡಿವಾಣ ಹಾಕಬೇಕಾದರೆ ಪುಸ್ತಕಗಳ ಓದುವಿಕೆ ಹೆಚ್ಚಾಗಬೇಕು, ನಮ್ಮ ಸುತ್ತಲು ಆದಷ್ಟು ತಿಳಿಯಾದ ವಾತಾವರಣ ಇಟ್ಟುಕೊಳ್ಳಬೇಕು, ಅಗತ್ಯಕ್ಕಿಂತ ಹೆಚ್ಚಾಗಿ ಮೊಬೈಲ್ ಬಳಕೆ ಮಾಡಬಾರದು. ಈ ರೀತಿ ಮಾಡುವುದರಿಂದ ನಮ್ಮ ಜೀವನವನ್ನು ಉತ್ತಮವಾಗಿಸಿಕೊಳ್ಳಬಹುದು.
-ವರುಣ್ ಜಿ.ಜೆ.
ತುಮಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.