UV Fusion: ಅಪರೂಪದ ಬಂಧದ ಬೆಸುಗೆಯೇ ಈ ರಕ್ಷಾಬಂಧನ
Team Udayavani, Aug 30, 2023, 7:00 AM IST
ಅಣ್ಣ ಅಂದರೆ ಪ್ರತಿಯೊಬ್ಬ ತಂಗಿಗೆ ಒಂದು ಧೈರ್ಯ. ಅಣ್ಣ ಅಂದರೆ ಒಂದು ರೀತಿಯ ಶಕ್ತಿ. ಅಣ್ಣ ಅಂದರೆ ತಂಗಿಗೆ ತುಂಬಾನೇ ಇಷ್ಟ. ಅಣ್ಣ ಅಂದರೆ ಒಂದು ಮುಗಿಯದ ಕಥೆ. ಅಪ್ಪನ ಇನ್ನೊಂದು ರೂಪವೇ ಅಣ್ಣ ಎಂದೂ ಹೇಳಬಹುದು.
ನನ್ನ ಜೀವನದಲ್ಲಿ ನನಗೆ ಸ್ವಂತ ಅಣ್ಣ ಅಂತ ಯಾರೂ ಇಲ್ಲ. ಆದರೆ ಚಿಕ್ಕ ವಯಸ್ಸಿನಿಂದಲೂ ಯಾರಾದರೂ ಅಣ್ಣ-ತಂಗಿಯನ್ನು ನೋಡುವಾಗ ನನಗೂ ಒಬ್ಬ ಅಣ್ಣ ಇರಬೇಕಿತ್ತು ಎಂದೆನಿಸುತ್ತಿತ್ತು. ಯಾಕೆಂದರೆ ನನಗೆ ಅಣ್ಣ ಅಂದರೆ ಅಷ್ಟು ಇಷ್ಟ. ಮರೆಯಲಾಗದ ಒಂದು ಬಂಧವೇ ಅಣ್ಣ -ತಂಗಿ ಬಾಂಧವ್ಯ. ನನಗೆ ಸ್ವಂತ ಅಣ್ಣ ಇಲ್ಲದಿದ್ದರೂ ಸ್ವಂತ ಅಣ್ಣನಿಗಿಂತ ಹೆಚ್ಚು ಪ್ರೀತಿ ನೀಡುವ ಸಹೋದರರನ್ನು ಆ ದೇವರು ನೀಡಿದ್ದಾನೆ. ಇದು ನನ್ನ ಪುಣ್ಯವೆಂದು ಹೇಳಬಹುದು.
ಎಲ್ಲ ತಂಗಿಯಂದಿರೂ ಅಣ್ಣನಿಗೆ ರಾಖಿಯನ್ನು ತುಂಬಾ ಪ್ರೀತಿಯಿಂದ ಕಟ್ಟುತ್ತಾರೆ. ಭಾವನೆಗಳ ಬಂಧವೇ ಈ ರಕ್ಷಾಬಂಧನವೆಂದು ಹೇಳಬಹುದು. ಅಣ್ಣಾ-ತಂಗಿಯರ ಬಾಳಿನಲ್ಲಿ ಮರೆಯಲಾಗದ ಒಂದು ದಿನವೇ ಈ ರಕ್ಷಾಬಂಧನ. ನಾನು ನನ್ನ ಅಣ್ಣಂದಿರಿಗೆ ಪ್ರತಿವರ್ಷವೂ ರಾಕಿ ಕಟ್ಟಲು ಆಗದಿದ್ದರೂ ರಾಕಿ ಹಬ್ಬದ ದಿನ ಮಾಡುವ ಶುಭಾಶಯಗಳು ಅಣ್ಣನವರಿಗೆ ರಾಕಿ ಕಟ್ಟಿದಷ್ಟು ಸಂಭ್ರಮವನ್ನು ನನ್ನ ಮನಸ್ಸಿಗೆ ನೀಡುತ್ತದೆ.
ಇತ್ತೀಚಿನ ದಿನಗಳಲ್ಲಿ ರಾಕಿ ಹಬ್ಬದ ಆಚರಣೆಯೆ ಬದಲಾಗಿಬಿಟ್ಟಿದೆ. ಆದರೆ ಇದರಲ್ಲಿನ ಭಾವನೆಗಳು ಬದಲಾಗಬಾರದು ಅಷ್ಟೇ. ನಾವು ಸಹೋದರರಿಗೆ ರಕ್ಷಾಬಂಧನದ ದಿನ ಕಟ್ಟುವ ಆ ರಾಕಿಗೆ ಜೀವ ಇಲ್ಲದೇ ಇರಬಹುದು. ಆದರೆ ಆ ರಕ್ಷಾಬಂಧನವನ್ನು ಕಟ್ಟುವುದರಲ್ಲಿ ಒಂದು ರೀತಿಯ ವಿಶೇಷವಾದ ಬಾಂಧವ್ಯವಿದೆ. ಪ್ರತಿಯೊಂದು ಹೆಣ್ಣು ಮಗಳು ಮೊದಲು ನೋಡುವ ಜೀವವೇ ಅಪ್ಪ. ಅಪ್ಪನ ಅನಂತರದ ಆ ಸ್ಥಾನವನ್ನು ಅಣ್ಣನೇ ನಿರ್ವಹಿಸುತ್ತಾನೆ. ಹಾಗಾಗಿ ಪ್ರತಿಯೊಬ್ಬ ತಂಗಿಗೆ ತನ್ನ ಅಣ್ಣನೇ ಹೀರೋ ಆಗಿರುತ್ತಾನೆ.
ನನಗೆ ಸಿಕ್ಕಂತಹ ಅಣ್ಣನವರು ಅಂದ್ರೆ ತುಂಬಾನೇ ಇಷ್ಟ. ಅಣ್ಣನು ಒಬ್ಬ ಒಳ್ಳೆಯ ಸ್ನೇಹಿತನಾಗಿ ಜವಾಬ್ದಾರಿಯುತ ತಂದೆಯ ಸ್ಥಾನ ನಿರ್ವಹಿಸುವ ಗುಣದವನು. ಅಣ್ಣ-ತಂಗಿ ಸಂಬಂಧ ನಿಷ್ಕಲ್ಮಶವಾದ ಬಂಧವೆನ್ನಬಹುದು.
ಅಕ್ಕ ತಂಗಿಯ ನಡುವೆ ಆಗುವ ಜಗಳಕ್ಕಿಂತ ಅಣ್ಣ- ತಂಗಿಯ ನಡುವೆ ಆಗುವ ಜಗಳವೇ ಹೆಚ್ಚು. ಅಣ್ಣ-ತಂಗಿ ಜಗಳವಾದಾಗ ಅಣ್ಣನೇ ಮೊದಲು ಮಾತಾಡಲಿ ಎಂದು ತಂಗಿ. ತಂಗಿಯೇ ಮೊದಲು ಮಾತನಾಡಲಿ ಅಂತ ಅಣ್ಣ ಅನಂತರದಲ್ಲಿ ಇಬ್ಬರು ಸಹ ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ಜತೆಗೆ ಮಾತನಾಡುವರು.
ಜೀವನದ ದಾರಿಯಲ್ಲಿ ಕಷ್ಟದಲ್ಲಿ ಸುಖದಲ್ಲಿ ಎಲ್ಲ ರೀತಿಯಿಂದಲೂ ಜತೆಯಾಗಿ ನಿಲ್ಲುವಂತಹ ನಮ್ಮ ಅಣ್ಣನವರಿಗೆ ಧನ್ಯವಾದ ತಿಳಿಸಲು ನಮಗೆ ಸಿಗುವಂತಹ ಒಂದು ಅಪರೂಪವಾದ ದಿನವೇ ಈ ರಕ್ಷಾಬಂಧನ. ಆದರೂ ನನಗೆ ನನ್ನ ಜೀವನದಲ್ಲಿ ಸಿಕ್ಕಂತಹ ಅಣ್ಣನವರನ್ನು ಯಾವುದೇ ಸಂದರ್ಭದಲ್ಲೂ ಬಿಟ್ಟುಕೊಡುವುದಿಲ್ಲ. ಪ್ರತಿಯೊಬ್ಬ ಅಣ್ಣನು ತನ್ನ ತಂಗಿಗೆ ಏನಾದರೂ ಆಯಿತೆಂದರೆ ತಡೆಯಲಾಗದ ಒಂದು ಜೀವವೇ ಅಣ್ಣಾ. ಜೀವನದಲ್ಲಿ ಅಣ್ಣನವರನ್ನು ಪಡೆದಂತಹ ಎಲ್ಲ ತಂಗಿಯವರು ಪುಣ್ಯವಂತರೇ.
ಪ್ರತೀಕ್ಷಾ ರಾವ್, ಶಿರ್ಲಾಲ್,
ಎಂ.ಪಿ.ಎಂ. ಕಾಲೇಜು, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.