Deepavali Festival: ಬೆಳಕಿನ ಹಬ್ಬಕ್ಕೆ ಪ್ರೀತಿ ಹಂಚೋಣ


Team Udayavani, Nov 3, 2024, 3:18 PM IST

10

ದೀಪಾವಳಿ ಎಂದರೆ ನೆನಪಾಗುವುದು ಆ ದೀಪಗಳ ಸಾಲು ನಕ್ಷತ್ರದಂತೆ ಸಿಡಿಯುವ ಪಟಾಕಿ ಕತ್ತಲೆಯನ್ನು ಮೀರಿದ ಬೆಳಕು ಎಲ್ಲೆಲ್ಲೂ ಜಗಮಗಿಸುವ ಬೆಳಕು. ಹೊಸತನ ಹೊಸ ಹುರುಪು ದೀಪಾವಳಿ ಎಂದರೆ ಹಾಗೇ ಅಲ್ಲವೇ. ಈ ಹಬ್ಬದ ಸಂಭ್ರಮ ದೇಶದಲ್ಲೆಡೆಯೂಆಚರಿಸುವರು ವಿದೇಶದಲ್ಲೂ ನೆಲೆಸಿರುವ ಭಾರತೀಯರು ದೀಪಾವಳಿ ವಿದೇಶದಲ್ಲೂ ಆಚರಿಸಿ ಸಂಭ್ರಮಿಸುವರು.

ದೀಪಾವಳಿ ಎಂದರೆ ಬೆಳಕಿನ ಹಬ್ಬ ಭಾರತೀಯ ಪರಂಪರೆಯ ಪ್ರಮುಖ ಹಬ್ಬಗಳಲ್ಲಿ ಒಂದು.

ಒಂದು ಹಬ್ಬ ಹಲವು ಕತೆಗಳನ್ನೊಳಗೊಂಡಿದೆ ಶ್ರೀಕೃಷ್ಣ ನರಕಾಸುರನ ಸಂಹರಿಸಿದ್ದು, ರಾವಣನ ಸಂಹಾರದ ಬಳಿಕ ಶ್ರೀರಾಮ ಸೀತಾ ಸಮೇತನಾಗಿ ಮತ್ತೆ ಅಯೋಧ್ಯೆ ಪ್ರವೇಶಿಸಿದ್ದು, ಬಲಿ ಚಕ್ರವರ್ತಿಯನ್ನು ವಾಮನ ಮೂರ್ತಿ ಪಾತಾಳಕ್ಕೆ ತುಳಿದದ್ದು, ಸಮುದ್ರ ಮಂಥನ ಕಾಲದಲ್ಲಿ ಲಕ್ಷ್ಮೀ ದೇವಿಯ ಜನನವಾಗಿದ್ದು, ಇಂದ್ರನ ಕ್ರೋಧ ರೂಪವಾದ ಮಳೆಯಿಂದ ಗೋವುಗಳನ್ನು ರಕ್ಷಿಸಲು ಶ್ರೀಕೃಷ್ಣ ಗೋವರ್ಧನಗಿರಿಯನ್ನು ಎತ್ತಿ ಹಿಡಿದದ್ದು.. ಎಲ್ಲವೂ ದೀಪಾವಳಿಯ ಜತೆಗೆ ಬೆಸೆದುಕೊಂಡ ಪೌರಾಣಿಕ ಕಥನಗಳು. ಎಲ್ಲ ಕಥೆಗಳ ಆಳದಲ್ಲಿರುವುದು ದುಷ್ಟ ಶಿಕ್ಷಣ-ಶಿಷ್ಟ ರಕ್ಷಣ; ಅಸಹಾಯಕತೆಯ ಕ್ಷಣಗಳಲ್ಲಿ ಕೈಹಿಡಿವ ದೇವರ ದಯೆ. ಎಲ್ಲ ಕಡೆ ಬೆಳಕು ಹರಿಸಿ ಸಂತೋಷ, ಆತ್ಮವಿಶ್ವಾಸ ಹೆಚ್ಚಿಸುವ, ಹೊಸತನದೆಡೆಗೆ ತುಡಿಯುವಂತೆ ಮಾಡುವ ಹಬ್ಬ.

ಬೆಳಕು ಬರೀ ಕಣ್ಣಿಗಷ್ಟೆ ಅಲ್ಲ. ಮುಚ್ಚಿದ ಮನದ ಬಾಗಿಲೊಳಗೂ ಬೆಳಕಿನ ಕಿರಣಗಳು ಸೋಕುತ್ತವೆ. ಹೊಸ ಬೆಳಕು ಚೆಲ್ಲಿ, ಹಳೆ ನೋವು ಸಂಕಟಗಳನ್ನು ಕಿತ್ತುಹಾಕಿ ಸಂಭ್ರಮಕ್ಕೆ ಅಣಿ ಮಾಡುತ್ತವೆ. ಬೆಳಗುವ ಪ್ರತಿ ದೀಪದಲ್ಲಿ, ದೀಪಗಳು ನಕ್ಷತ್ರಗಳಂತೆ ಮಿಂಚಿ ಸಡಗರ ತುಂಬಿರುವುದು ಮನೆ ಮನಗಳ ಬೆಳಗುವ ಹಬ್ಬವಿದು ಕುಟುಂಬದಲ್ಲಿ ಎಲ್ಲರೂ ಸೇರಿ ಆಚರಿಸುವ ಹಬ್ಬ ಪ್ರತಿ ಮನೆಮನೆಗಳಲ್ಲಿ ಸಂಭ್ರಮದಿಂದ ಸಂಪತ್ತಿನ ಅಧಿದೇವತೆ ಲಕ್ಷ್ಮೀಯನ್ನು ಆರಾಧಿಸುವರು.

ದೀಪಾವಳಿ ಹಬ್ಬದಂದು ಮನೆಯ ತುಂಬ ಮತ್ತು ಸುತ್ತ ಮುತ್ತಾ ಹಣತೆಗಳನ್ನು ಹಚ್ಚಿ ಅದರ ಬೆಳಕಿನಲ್ಲಿ ಎಲ್ಲರೂ ಸಂಭ್ರಮಿಸುವುದಾಗಿದೆ. ದೀಪಯತಿ ಸ್ವಂ ಪರಚ ಇತಿ ದೀಪ: ಅಂದರೆ ತಾನು ಬೆಳಗಿ ಇತರರನ್ನು ಬೆಳಗಿಸುವ ಶಕ್ತಿ ಕೇವಲ ದೀಪಕ್ಕೆ ಮಾತ್ರವಿದೆ. ತಮಸೋಮಾ ಜ್ಯೋತಿರ್ಗಮಯ ಎಂಬ ಅರ್ಥದಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪವಾಗಿದೆ.

ಬೆಳಕಿನ ಹಬ್ಬವೆಂದರೆ ನಮ್ಮೊಳಗೆ ಆವರಿಸಿರುವ ಕತ್ತಲನ್ನು ತೊಲಗಿಸಿ ಮನೆ ಮನಗಳನ್ನು ಪ್ರಕಾಶಮಯವಾಗಿಸುವುದು ಅದಕ್ಕೆ ಹೇಳುವುದು ಜ್ಯೋತಿಯನ್ನು ಬೆಳಗುವುದಷ್ಟೇ ಅಲ್ಲ ಆತ್ಮಜ್ಯೋತಿಯ ಬೆಳಗುವುದು ಹೊಸತನದ ಚಿಗುರೆಲೆಗಳಾಗಿ ಹಳೆ ಸಂಸðತಿಯ ಗಟ್ಟಿ ಬೇರುಗಳೊಂದಿಗೆ ದೀಪಾವಳಿ ಆಚರಿಸೊಣ ಮನದಲ್ಲಿ ತೃಪ್ತಿ ಎಂಬ ಪುಟ್ಟ ಹಣತೆ ಹಚ್ಚಿಟ್ಟರೆ ಬದುಕಿನಲಿ ಪ್ರತಿದಿನವೂ ದೀಪಾವಳಿ… ಮನದ ಕತ್ತಲೆಯ ಬೇಲಿ ದಾಟಿ ಬಾ ಮನವೇ ಆಚರಿಸೊಣ ದೀಪಾವಳಿ… ಮನದಲ್ಲಿ ಸತ್ಯವೆಂಬ ದೀಪವ ಬೆಳಗಲಿ ಶಾಂತಿ ನೆಮ್ಮದಿಯು ನೆಲೆಸಲಿ. ಬೆಳಗುತಿವೆ ಮನೆ ಮುಂದೆ ದೀಪದ ಸಾಲು ಬೆಳಗಲಿ ಮನದಲ್ಲಿ ಜ್ಞಾನದ ಮಿಂಚಿನ ಸಾಲು.

-ಅಂಜಲಿ ಶ್ರೀನಿವಾಸ, ಬೆಂಗಳೂರು

ಟಾಪ್ ನ್ಯೂಸ್

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.