ಸ್ವಾತಂತ್ರ್ಯ ಜೀವನದ ಅವಿಭಾಜ್ಯ ಅಂಗ
Team Udayavani, Aug 15, 2020, 8:35 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಪ್ರಪಂಚದಲ್ಲಿ ವಾಸಿಸುವ ಪ್ರತಿ ಜೀವ ಸಂಕುಲಕ್ಕೆ ಆವಶ್ಯಕ ವಾಗಿರುವುದು ಸ್ವಾತಂತ್ರ್ಯ.
ಸ್ವಾತಂತ್ರ್ಯ ವಿಲ್ಲದೆ ಉತ್ತಮ ಬದುಕು ನಡೆಸುವುದು ಅಸಾಧ್ಯ.
ವ್ಯಕ್ತಿಗೆ ಸ್ವತಂತ್ರವಾಗಿ ಬದುಕುವು ದಕ್ಕಿಂತ ಮಿಗಿಲಾದ ಹಕ್ಕು ಬೇರೊಂದಿಲ್ಲ. ಅದಕ್ಕೆ ಪೂರಕವಾಗಿ ಹಕ್ಕಿಯ ಕಥೆಯೊಂದು ಇಲ್ಲಿದೆ.
ಒಬ್ಬ ರಾಜ ಕಾಡಿನಲ್ಲಿ ಬೇಟೆಯಾಡುವಾಗ ಒಂದು ಪಕ್ಷಿ ಸಿಗುತ್ತದೆ. ಅದನ್ನು ತಂದು ಸಾಕಲು ಒಂದು ಪಂಜರದೊಳಗೆ ಕೂಡಿ ಹಾಕುತ್ತಾನೆ.
ಅರಮನೆಯ ಊಟೋಪಹಾರ ಎಂದರೆ ಕೇಳಬೇಕೆ? ಅದಕ್ಕೆ ನಿತ್ಯ ಚಿನ್ನದ ತಟ್ಟೆಯಲ್ಲಿ ಆಹಾರ, ಬೆಳ್ಳಿಯ ಬಟ್ಟಲಿನಲ್ಲಿ ನೀರು ಇಡುತ್ತಿದ್ದ.
ಆದರೆ ಆ ಪಕ್ಷಿಯ ಮುಖ ಸದಾ ಬಾಡಿರುತ್ತಿತ್ತು. ಲವಲವಿಕೆಯಿಂದ ಇರುತ್ತಿರಲಿಲ್ಲ. ಪಕ್ಷಿಗೆ ಏನೋ ಕೊರತೆ ಕಾಡುತ್ತಿರು ವುದನ್ನು ಪ್ರತಿದಿನ ರಾಜ ಗಮನಿಸುತ್ತಲೇ ಇದ್ದ.
ನಾನು ಇಷ್ಟು ಪ್ರೀತಿಯಿಂದ ನೋಡಿಕೊಂಡರೂ ಇದು ಮೌನವಾಗಿಯೇ ಇದೆಯಲ್ಲ ಎಂದು ಯೋಚಿಸತೊಡಗಿದ.
ಕೊನೆಗೊಂದು ದಿನ ಪಕ್ಷಿ ಸತ್ತೇ ಹೋಯಿತು. ಈ ಸಾವಿನ ಹಿಂದಿನ ಸತ್ಯ ಏನೆಂದರೆ ಪಕ್ಷಿಗೆ ಸ್ವಾತಂತ್ರ್ಯ ದೊರೆಯದಿರುವುದು.
ಜೀವ ಸಂಕುಲಗಳು ಎಲ್ಲೆಲ್ಲಿ ಯಾವ ರೀತಿ ವಾಸಿಸಬೇಕೆಂಬುದು ಪ್ರಕೃತಿಯ ನಿಯಮ. ಅದರಂತೆ ಜೀವಿಸಿದಾಗಲೇ ಜೀವನ ಸ್ವರ್ಗ. ಸ್ವತಂತ್ರವಾಗಿ, ಸ್ವತ್ಛಂದವಾಗಿ ಹಣ್ಣು ಹಂಪಲು ತಿನ್ನುತ್ತ ವಿಶಾಲ ನೀಲಾಕಾಶದಲ್ಲಿ ಹಾರಾಡುತ್ತಾ, ಬೆಚ್ಚನೆಯ ಗೂಡಿನಲ್ಲಿ ವಾಸಿಸಬೇಕಿದ್ದ ಹಕ್ಕಿ ಸ್ವಾತಂತ್ರ್ಯ ಕಳೆದುಕೊಂಡು ರಾಜನ ಕೈ ಸೆರೆ ಯಾಗಿ ಬದುಕಲಾಗದೆ ಸತ್ತೇ ಹೋಯಿತು. ರಾಜನಿಗೆ ತುಂಬಾ ದುಃಖವಾಯಿತು. ಜತೆಗೆ ಸ್ವಾತಂತ್ರ್ಯದ ಮಹತ್ವವನ್ನು ಅರಿತ. ಹಾಗೆಯೇ ಮನುಷ್ಯನಿಗೂ ಸ್ವಾತಂತ್ರ್ಯ ವಿಲ್ಲದ ಬದುಕು ವ್ಯರ್ಥ ಮತ್ತು ನರಕ.
ಎಪ್ಪತ್ನಾಲ್ಕು ವರ್ಷಗಳ ಹಿಂದೆ ಆ ಪಕ್ಷಿಯ ರೀತಿಯೇ ನಮ್ಮ ದೇಶದ ಜನತೆ ಶತಮಾನಗಳ ಕಾಲ ಸ್ವಾತಂತ್ರ್ಯ ಕಳೆದುಕೊಂಡು ಬ್ರಿಟಿಷರ ಕೈ ಸೆರೆಯಾಗಿ ಒದ್ದಾಡಿದ್ದರು. ವ್ಯಾಪಾರಕ್ಕೆಂದು ಬಂದು ಇಡೀ ದೇಶವನ್ನೇ ಆಕ್ರಮಿಸಿ ಜನರನ್ನು ತಮ್ಮ ಕೈಯಾಳಾಗಿ ಮಾಡಿಕೊಂಡಿದ್ದರು. ಸ್ವಾತಂತ್ರ್ಯವಿಲ್ಲದ ಬದುಕು ಭಾರತೀಯರಿಗೆ ನರಕ ಸಮಾನವಾಗಿತ್ತು. ಬ್ರಿಟಿಷರು ತಯಾರಿ ಸಿದ ವಸ್ತುಗಳನ್ನೇ ಬಳಸಬೇಕಿತ್ತು. ನಮ್ಮ ದೇಶದಲ್ಲಿ ಉತ್ಪಾದಿಸಲು ಅವಕಾಶ ಇರುತ್ತಿರಲಿಲ್ಲ. ತಮ್ಮವರ ಕಷ್ಟ ಅರಿತ ಗಾಂಧೀಜಿ ವಕೀಲಿ ವೃತ್ತಿ ಬಿಟ್ಟು ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ಮುಂದಾದರು.
ಅಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆಯುವುದು ಅವರ ಧ್ಯೇಯವಾಗಿದ್ದು, ಅದರಂತೆ ನಡೆದುಕೊಂಡರು. ಬ್ರಿಟಿಷರ ಬಟ್ಟೆಗಳನ್ನು ನಿರಾಕರಿಸಿ ಸ್ವತಃ ಚರಕದಲ್ಲಿ ಬಟ್ಟೆಗಳನ್ನು ತಯಾರಿಸಲು ಪ್ರಾರಂಭಿಸಿದರು. ಜನರಲ್ಲಿ ಜಾಗೃತಿ ಮೂಡಿಸಿದರು. ಅನೇಕ ಸತ್ಯಾಗ್ರಹ, ಚಳವಳಿಗಳ ಮೂಲಕ 1947ರ ಆಗಸ್ಟ್ 15ರಂದು ದೇಶವನ್ನು ಬ್ರಿಟಿಷರ ಕೈ ಸೆರೆಯಿಂದ ಬಿಡುಗಡೆ ಮಾಡಿದರು. ಇವರ ಜತೆಗೆ ಅನೇಕ ವ್ಯಕ್ತಿಗಳು ಸ್ವಾತಂತ್ರÂಕ್ಕೆ ಹೋರಾಡಿ ಪ್ರಾಣ ತೆತ್ತರು. ಈ ಪವಿತ್ರವಾದ ದಿನದಂದು ಎಲ್ಲರಿಗೂ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಲೇಬೇಕು. ಇಲ್ಲವಾಗಿದ್ದರೆ ಇಂದಿಗೆ ನಾವು ಸ್ವತಂತ್ರವಾಗಿರಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ದೇಶಾದ್ಯಂತ ಆಗಸ್ಟ್ 15ರಂದು ಎಲ್ಲರೂ ಸ್ವತಂತ್ರ ಹಕ್ಕಿಗಳಂತೆ ಹಾರಾಡುತ್ತಾ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತಾರೆ.
ಎಲ್ಲೆಲ್ಲೂ ಕೇಸರಿ, ಬಿಳಿ, ಹಸುರು ಬಣ್ಣಗಳ ಬಾವುಟ ಹಾರಾಡುತ್ತಾ ಕಣ್ತುಂಬುತ್ತದೆೆ. ಒಟ್ಟಾರೆ ಸ್ವಾತಂತ್ರ್ಯ ನಮ್ಮ ಜೀವನದ ಅವಿಭಾಜ್ಯ ಅಂಗ. ಸ್ವಾತಂತ್ರ್ಯ ಇಲ್ಲದೇ ಎಷ್ಟು ವರ್ಷ ಬದುಕಿದರೂ ಅಂತ ಬದುಕು ಸಾರ್ಥಕ ಬದುಕಾಗಲು ಸಾಧ್ಯವೇ ಇಲ್ಲ.
ಸಂಗೀತಾ, ತುಮಕೂರು ವಿಶ್ವ ವಿದ್ಯಾನಿಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.