ಫ್ಯೂಷನ್ ಡ್ರಾಪ್ ಬಾಕ್ಸ್ ಅಂಕಣ: ಪೆನ್, ಫೋಟೋಗ್ರಫಿ ಕಥೆ, ಖುಷಿ ಕುರಿತಾದ ಲೇಖನ
Team Udayavani, Sep 25, 2020, 8:23 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕಾಲೇಜ್ ಲೈಫ್ನಲ್ಲಿ ಯಾವುದಾದರೂ ಉಡುಗೊರೆ ಕೊಡುವುದಕ್ಕೆ ಹುಡುಗ, ಹುಡುಗಿಯರ ಪರದಾಡುತ್ತಾರೆ.
ಗಿಫ್ಟ್ ಕೊಡುವ ಸಮಯ ಬಹಳ ಅಪರೂಪ. ಅದೇ ಬರ್ತಡೇ ಗಿಫ್ಟ್ ಅಥವಾ ಯಾವುದಾದರೂ ವಿಶೇಷ ಸಂಗತಿಗಳಲ್ಲಿ ಮಾತ್ರ ಗಿಫ್ಟ್ಫ್ ನೀಡುತ್ತೇವೆ.
ಆದರೆ ನಮ್ಮ ಸರ್ ಅವರು ಒಂದು ಪೆನ್ ಗಿಫ್ಟ್ ಕೊಡಬೇಕಾಗಿ ಬಂದಾಗ ಅವರು ಪರದಾಡಿದ ಸ್ಥಿತಿ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಕಾಲೇಜಿನಲ್ಲಿ ನ್ಯಾಕ್ ಕಮಿಟಿ ಸದಸ್ಯರು ಪರಿಶೀಲನೆಗೆ ಬರುವರು ಎಂದು ಆಡಳಿತ ಮಂಡಳಿ ಸುತ್ತೋಲೆ ಹೊರಡಿಸಿದ ಹಿನ್ನೆಲೆಯಲ್ಲಿ ಎಲ್ಲ ವಿಭಾಗಗಳ ಉಪನ್ಯಾಸಕರೂ ಕಾರ್ಯೋನ್ಮುಖರಾದರು. ನಮ್ಮ ಪತ್ರಿಕೋದ್ಯಮ ವಿಭಾಗದ ಸರ್ ನ್ಯಾಕ್ ಕಮಿಟಿಯರವನ್ನು ಗಿಫ್ಟ್ ನೀಡಿ ಸ್ವಾಗತಿಸುವ ಯೋಚನೆಯಿಂದ ನನ್ನನ್ನು ಕರೆದು ಒಳ್ಳೆಯ ಪೆನ್ ಅನ್ನು ಗಿಫ್ಟ್ ಪ್ಯಾಕ್ ಮಾಡಿಕೊಂಡು ಬಾ ಎಂದು ಎಟಿಎಂ ಕಾರ್ಡ್ ತೆಗೆದುಕೊಟ್ಟರು.
ಅಂದು ಬಿರು ಬಿಸಿನಲ್ಲಿ ಓಡಾಡಿ ಒಂದು ಒಳ್ಳೆಯ ಪೆನ್, ಅದಕ್ಕೆ ಗಿಫ್ಟ್ ಪ್ಯಾಕ್ ಮಾಡಿ ಅದರ ಮೇಲೆ ಹೆಸರು ಬರೆಯದೆ ತಂದು ನಮ್ಮ ಸರ್ ಟೇಬಲ್ ಮೇಲೆ ಇಟ್ಟು ಕ್ಲಾಸ್ ರೂಮ್‌ನಲ್ಲಿ ಬಂದು ಕೂತೆ. ನ್ಯಾಕ್ ಕಮಿಟಿ ಮೊದಲ ದಿನ ಮೊದಲ ಸುತ್ತಿನ ಪರಿಶೀಲನೆಗೆ ನಮ್ಮ ವಿಭಾಗಕ್ಕೆ ಬಂದು ಹೋದರು. ನಾನಂದುಕೊಂಡೆ, ಸರ್ ಅವರಿಗೆ ಗಿಫ್ಟ್ ನೀಡಿ ಅವರು ಖುಷಿ ಪಟ್ಟಿರಬಹುದೆಂದು.
ನಾನು ಮತ್ತೆ ಸಂಜೆ ವಿಭಾಗಕ್ಕೆ ಹೋದಾಗ ಗಿಫ್ಟ್ ಟೇಬಲ್ ಮೇಲೆ ಹಾಗೇ ಇತ್ತು. ನ್ಯಾಕ್ ಕಮಿಟಿಯವರು ಇನ್ನೂ ಕೆಲವು ದಿನ ಇರುತ್ತಾರಲ್ಲ. ಸರ್ ಆಗ ಕೊಡಬಹುದೆಂದು ಭಾವಿಸಿದ್ದೆ. 3 ದಿನಗಳ ಕಾಲ ವಿವಿಧ ವಿಭಾಗಗಳಿಗೆ ಹೋಗಿ ಪರಿಶೀಲನೆ ನಡೆಸಿದ ನ್ಯಾಕ್‌ನವರು ಹೊರಟು ಹೋದರು. ಈ ಬಾರಿ ಗಿಫ್ಟ್ ಎಲ್ಲೂ ಕಾಣಿಸಲಿಲ್ಲ. ಅಬ್ಟಾ ಕಡೆಗೆ ಸರ್ ನೀಡಿದ್ದಾರೆ ಎಂದುಕೊಂಡೆ.
ಇದಾದ 2 ತಿಂಗಳ ಬಳಿಕ ನನ್ನ ಪ್ರಾಜೆಕ್ಟ್ ವರ್ಕ್‌ಗೆ ಸರ್ ಕಪಾಟ್‌ನಲ್ಲಿ ಇದ್ದ ಹಳೆಯ ಕಡತಗಳ ಹುಡುಕಾಟದಲ್ಲಿ ತೊಡಗಿದ್ದಾಗ ಹಸುರು ಪ್ಯಾಕ್‌ನ ಗಿಫ್ಟ್ ಕಣ್ಣಿಗೆ ಕಾಣಿಸಿತು. ಇದನ್ನು ನೋಡಿದಾಗ ಹಲವು ಪ್ರಶ್ನೆಗಳು ನನ್ನಲ್ಲಿ ಹುಟ್ಟಿಕೊಂಡವು. ಆ ಗಿಫ್ಟ್ ಪ್ಯಾಕ್ ಸರ್ ಏಕೆ ಅವರಿಗೆ ಕೊಡಲಿಲ್ಲ? ಅದನ್ನು ಅವರು ಬೇಡ ಅಂದರೇ ಅಥವಾ ಅದು ಇಷ್ಟವಾಗಿಲ್ಲವೇ? ಅನ್ನುವ ಹಲವು ಪ್ರಶ್ನೆಗಳು ಕಾಡಿದವು. ಆದರೆ ಸರ್‌ನನ್ನು ಕೇಳಲು ಮನಸ್ಸು ಬರಲಿಲ್ಲ. ಅದು ಪ್ರಶ್ನೆಯಾಗಿ ಉಳಿಯಿತು.
ಎಸ್. ಎರಿಸ್ವಾಮಿ, ವಿಜಯನಗರ ಶ್ರೀ ಕೃಷ್ಣದೇವರಾಯ ವಿ.ವಿ., ಬಳ್ಳಾರಿ
ರಂಗಿನ ಬಟ್ಟೆಯಿದ್ದರೂ ಸಿಗದ ಖುಷಿ
ಸರಿಯಾಗಿ ವರ್ಷದ ಹಿಂದೆ ನನ್ನ ಸೀನಿಯರ್‌ಗಳ ಬೀಳ್ಕೂಡುವಾಗ ಕಣ್ಣಂಚಲಿ ತುಂಬಿತ್ತು. ಆಗ ನಾನಂದುಕೊಂಡಿದ್ದು ನನ್ನ ವಿದ್ಯಾರ್ಥಿ ಜೀವನ ಕೂಡ ಇರುವುದು 1 ವರ್ಷ ಸಂತೋಷದಿಂದ ಕಳೆಯಬೇಕು ಎಂದುಕೊಂಡಿದ್ದೆ.
ವಾರ್ಷಿಕೋತ್ಸವಕ್ಕೆ ರಂಗು ರಂಗಿನ ಉಡುಗೆ ತೊಟ್ಟು ಹಾಡಬೇಕು, ಕುಣಿಯಬೇಕು ಎಂದುಕೊಂಡಿದ್ದೆ. ಆದರೆ ಇಂದು ಅವೆಲ್ಲವೂ ಪದವಿ ವಿದ್ಯಾರ್ಥಿ ಜೀವನದಲ್ಲಿ ನನಸಾಗದ ಕನಸಿನ ಗುಂಪಿಗೆ ಸೇರಿಬಿಟ್ಟಿದೆ. ಕೊರೊನಾವು ನಮ್ಮ ಸಂತಸದ ಕ್ಷಣವನ್ನು ಮಾತ್ರ ಕಸಿದುಕೊಳ್ಳದೇ ಕ್ಯಾಂಪಸ್ ಸೆಲೆಕ್ಷನ್, ಉದ್ಯೋಗ ಮೇಳವನ್ನು ಕಸಿದುಕೊಂಡಿದೆ.
ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ನಲಿವಿಗೆ ಬ್ರೇಕ್ ಬಿದ್ದಿದ್ದು ಜೀವನ ರೂಪಿಸಿಕೊಳ್ಳುವ ಹಂಬಲದಿಂದ ಸಿಕ್ಕ ಸಣ್ಣ ಪುಟ್ಟ ಖುಷಿಯಲ್ಲೇ ತೃಪ್ತಿಪಡಬೇಕಾಗಿದೆ. ಇನ್ನೂ ಮುಂದಿನ ವರ್ಷ ಮನೋರಂಜನೆ ಸಿಗಬಹುದು. ಆದರೆ ನಾವೆಲ್ಲರೂ ಒಟ್ಟಾಗಿ ಸೇರುವ ಘಳಿಗೆ ವಿರಳ.
ಕ್ಯಾಂಪಸ್‌ನೊಳಗೆ ಕಡ್ಡಾಯ ಐಡಿ, ಸಮವಸ್ತ್ರ ಧರಿಸುವ ನಿಯಮವಿದ್ದಾಗ ಬಣ್ಣದ ಬಟ್ಟೆ ಧರಿಸುವ ಒಂದು ದಿನಕ್ಕಾಗಿ ನಾವೆಲ್ಲರೂ ಹಂಬಲಿಸುತ್ತಿದ್ದೆವು. ಈಗ ವರ್ಷವಿಡೀ ರಂಗಿನ ಬಟ್ಟೆಯಿದ್ದರೂ ನಮಗೆ ಆ ಖುಷಿ ಸಿಗುತ್ತಿಲ್ಲ.
ಕಾವ್ಯಾ, ಶ್ರೀ ಶಾರದಾ ಕಾಲೇಜು ಬಸ್ರೂರು
ಗುರಿ ಬದಲಾಯಿಸಿದ ಫೋಟೋಗ್ರಾಫಿ
ಫೋಟೋಗ್ರಾಫಿ ಅಂದ್ರೆ ನನಗೆ ತುಂಬಾನೇ ಇಷ್ಟ. ಜತೆಗೆ ಫೋಟೋಗ್ರಾಫರ್ ಆಗುವ ಆಸೆ ಕೂಡ ನನ್ನದಾಗಿತ್ತು. ಮನಸ್ಸಿನ ಮಾತು ಮೀರುವುದುಂಟೇ ?
ಚಿಕ್ಕನಿಂದಲೂ ಪತ್ರಿಕೆ ಓದುವಾಗ ಪತ್ರಿಕೆಯಲ್ಲಿನ ವಿಷಯಕ್ಕಿಂತ ಚಿತ್ರಗಳನ್ನೇ ಜಾಸ್ತಿ ನೋಡುತ್ತಿದ್ದೆ. ಅದೇ ರೀತಿ ಫೋಟೋ ತೆಗೆಯಬೇಕೆಂಬ ಆಸೆ ಬರುತ್ತಿತ್ತು. ಬಿ.ಎ. ಪದವಿಯ ಜತೆಗೆ ಒಂದು ಡಿಜಿಟಲ್ ಫೋಟೋ ಸ್ಟುಡಿಯೋಗೆ ಸೇರಿಕೊಂಡೆ. ಅಂತೆಯೇ ನಾನಿಷ್ಟಪಟ್ಟಿದ್ದ ಫೋಟೋಗ್ರಾಫರ್ ಕೆಲಸ ಆರಂಭಿಸಿದೆ. ಬಿ.ಎ. ಮುಗಿದ ಮೇಲೆ ಸ್ವಂತ ಸ್ಟುಡಿಯೋ ಆರಂಭಿಸೋಣಾ ಎಂದರೆ ಹಣಕಾಸಿನ ಕೊರತೆ ಉಂಟಾಯಿತು.
ಮರುದಿನ ಮಂತ್ರಿಯೋರ್ವರ ಕಾರ್ಯಕ್ರಮಕ್ಕೆ ಹೋಗುವ ಅವಕಾಶ ಒದಗಿತು. ನಾನು ಅಂಜಿಕೆಯಿಂದಲೇ ಒಳ ಹೋದೆ. ನನ್ನ ಕೆಮರಾದಿಂದ ಒಂದ್ ಪೋಟೋ ಕ್ಲಿಕ್ ಮಾಡಿ ಒಂದ್ ಗೋಡೆಯ ಬದಿ ನಿಂತಿದ್ದೆ. ಸಭೆ ಮುಗಿದ ಮೇಲೆ ನನಗೆ ಪರಿಚಯವಿದ್ದ ವ್ಯಕ್ತಿಯೊಬ್ಬರು ಭೇಟಿಯಾದರು. ಯಾವ ಚಾನೆಲ್ ನಲ್ಲಿ ಕೆಲಸ ಮಾಡತ್ತೀದ್ದೀಯಾ ಅಂತ ಕೇಳಿದರು. ನಾನು ಫೋಟೋಗ್ರಾಫರ್ ಎಂದಾಗ ಹೌದಾ ಸರಿ ನಾನು ಮೀಡಿಯಾದಲ್ಲಿ ಇದ್ದಿಯಾ ಅಂತ ತಿಳಿದುಕೊಂಡಿದ್ದೆ ಎಂದರು. ನನಗೆ ತುಂಬಾ ಬೇಜಾರವಾಯ್ತು.
ಅನಂತರ ನನಗೆ ಸ್ಟುಡಿಯೋ ಮೇಲೆ ಆಸೆ ಮಾಯವಾಗಿ, ಪತ್ರಕರ್ತ ಆಗಬೇಕು ಎಂದೆನಿಸಿತು. ಹಿಡಿದ ಹಠ ಬಿಡಲಾರದೆ ಗುಲಬರ್ಗಾ ವಿವಿಯಲ್ಲಿ ಪತ್ರಿಕೋದ್ಯಮ ಓದುತ್ತಿದ್ದೇನೆ. ನಾನು ಅಂದು ಕೊಂಡಿದ್ದು ಬೇರೆ. ಆಗುತ್ತಿರುವುದು ಬೇರೆ. ಒಟ್ಟಿನಲ್ಲಿ ಮನಸ್ಸಿದ್ದರೆ ಮಾರ್ಗ. ಮನಸ್ಸಿನ ಮಾತು ಮೀರುವುದುಂಟೇ.
ಶರಬು ಬಿ. ನಾಟೇಕಾರ್, ಯಾದಗಿರಿ, ಗುಲ್ಬರ್ಗಾ ವಿ.ವಿ.ಪತ್ರಿಕೋದ್ಯಮ
ನನ್ನೂರು ವೈಭೋಗದ ಅಮರಾವತಿಯಂತೆ
ಬಿಟ್ಟು ಬಿಡದೇ ಸುರಿಯುತ್ತಿದ್ದ ಮಳೆಯಿಂದ ನಮ್ಮೂರು ಮಲೆನಾಡಂತಾಗಿದೆ. ನಮ್ಮದೇನು ದೊಡ್ಡ ಅಂತಸ್ತಿನ ಮನೆಯೇನಲ್ಲ ಪುಟ್ಟ ಗುಡಿಸಲು ಮನೆ. ಅಪ್ಪ,ಅಮ್ಮ, ತಮ್ಮ ಹಾಗೂ ಊರಿನ ಆತ್ಮೀಯ ಸ್ನೇಹಿತರು. ಜತೆಗೆ ಬದುಕಿಗೆ ಒಂದಿಷ್ಟು ಜಮೀನು.
ಕೆಲವು ತಿಂಗಳಿನಿಂದ ಬೇರೆ ಊರಲ್ಲಿ ಇದ್ದು ಈಗ ಊರಿಗೆ ಬಂದು 2 ತಿಂಗಳುಗಳಾಗಿವೆ. ಅಪ್ಪ-ಅಮ್ಮನ ಪ್ರೀತಿ ಸಿಕ್ಕಿದೆ. ತಮ್ಮನ ಸಹವಾಸ ಇನ್ನಷ್ಟು ಆತ್ಮೀಯನನ್ನಾಗಿಸಿದೆ. ಇದಕ್ಕೂ ಹೆಚ್ಚು ಎಂಬಂತೆ ಹೊಲದ ಸಹವಾಸ ನನ್ನನ್ನು ನಗರಕ್ಕೆ ಹೋಗಬೇಡ, ಇಲ್ಲೇ ಇದ್ದು ಏನಾದರೂ ಸಾಧಿಸು ಎನ್ನುತ್ತಿದೆ. ಈ ಎಲ್ಲವನ್ನೂ ಸೂಕ್ಷ್ಮಗಣ್ಣಿನಿಂದ ನೋಡುತ್ತಿರುವ ನನಗೆ ನನ್ನೂರು ಅಮರಾವತಿಯಂತೆ ಕಾಣುತ್ತಿದೆ.
ರಾಜಧಾನಿ ಅಮರಾವತಿಯಲ್ಲಿ ಹೇಗೆ ವೈಭೋಗದ ಜೀವನದ ಕಥೆಗಳನ್ನು ಕೇಳಿದ್ದೆವು, ಹಾಗೆಯೇ ನನ್ನೂರು ಎಂಬ ಅಮರಾವತಿಯಲ್ಲಿ ಕೂಡ ನನ್ನದು ವೈಭವ ಜೀವನ. ಸುಃಖ, ಶಾಂತಿ ನೆಮ್ಮದಿಯ ಜೀವನ. ಇದಕ್ಕೆ ಯಾವುದೇ ದುಡ್ಡು ಸುರಿಯುತ್ತಿಲ್ಲ. ಬದಲಾಗಿ ಪ್ರಕೃತಿಯ ತಂಪಾದ ಗಾಳಿ, ಬಿಟ್ಟು ಬಿಡದ ಮಳೆ. ಹೊಲದ ಜೋಳದ ತೆನೆಗಳಲ್ಲಿ ಅಣಕಿಕೊಂಡಿರುವ ಗುಬ್ಬಚ್ಚಿಗಳು ಹೀಗೆ ಎಲ್ಲವೂ ನನ್ನನ್ನು ರಾಜನಂತೆ ನೋಡುತ್ತಿವೆ.
ಇದೇ ನನ್ನ ಅಮರಾವತಿಯ ಜೀವನ. ಕಳೆದ ವರ್ಷದಿಂದ ನಮ್ಮೂರು ಕೂಡ ಮಲೆನಾಡಿನ ಹಾಗೆ ಕಾಣಾ¤ಯಿದೆ. ಮಳೆಗಾಲದಲ್ಲಿ ಪ್ರತಿ ದಿನ ಮಳೆ ಸುರಿಯುತ್ತೆ. ಜಮೀನಿನಲ್ಲಿ ಒಂದಷ್ಟು ಕಾಯಕ, ಸ್ನೇಹಿತರ ಜತೆಗೆ ಸ್ವಲ್ಪ ಹರಟೆ, ಸಮಯ ಸಿಕ್ಕಾಗ ಕ್ರಿಕೆಟ್ ಆಟ ಹೀಗೆ ಜೀವನದ ಪ್ರತಿಕ್ಷಣವನ್ನು ನಾನೀಗ ಅನುಭವಿಸುತ್ತಿದ್ದೇನೆ. ಪ್ರತಿ ಸಲ ಊರಿಗೆ ಹೋದಾಗ ಒಂದಲ್ಲ ಒಂದು ಹೊಸ ಅನುಭವಗಳು, ವಿಷಯಗಳು ತಿಳಿಯುತ್ತವೆ. ಈ ಮಳೆಗಾಲದ ಒಂದೆರೆಡು ದಿನ ಊರಲ್ಲಿ ಕಳೆದಿದ್ದು ಮನಸ್ಸಲ್ಲಿ ಅಚ್ಚಳಿಯದೇ ಉಳಿ ಯುವುದಂತೂ ಪಕ್ಕ ಆಗಿದೆ.
ಮೈಲಾರಿ ಸಿಂಧುವಾಳ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು
ಯಶಸ್ಸಿನ ಯಜ್ಞಕ್ಕೆ ಆತ್ಮವಿಶ್ವಾಸವೇ ಹವಿಸ್ಸು
ಜೀವನವೆಂಬ ಪಯಣದಲ್ಲಿ ಆತ್ಮವಿಶ್ವಾಸವೇ ಬಲ. ಈ ಆತ್ಮವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳಬಾರದು. ಜೀವನದ ಯಶಸ್ಸಿನ ಎಲ್ಲ ಹಂತಗಳಿಗೂ ಆತ್ಮವಿಶ್ವಾಸವೇ ಪ್ರೇರಣೆ.
ಜೀವನದಲ್ಲಿ ಎಷ್ಟೇ ಕಠಿನ ಪರಿಸ್ಥಿತಿ ಅಥವಾ ಸನ್ನಿವೇಶಗಳು ಎದುರಾದರೂ ಅದಕ್ಕೆ ಹೆದರದೆ ಮುನ್ನಡೆದಾಗ ಯಶಸ್ಸು ಖಂಡಿತ. ಯಾವುದೇ ಒಂದು ಕೆಲಸ ನಮ್ಮಿಂದಾಗದು ಎಂದು ಕೈಬಿಟ್ಟರೆ ಎಂದಿಗೂ ಕಾರ್ಯ ಸಾಧಿಸಲು ಸಾಧ್ಯವಿಲ್ಲ.
ನಮ್ಮ ಯೋಚನ ಶಕ್ತಿ, ನಮ್ಮ ಗುರಿ, ನಮ್ಮ ಮೇಲೆ ಆತ್ಮವಿಶ್ವಾಸ ಇದ್ದಾಗ ಅಸಾಧ್ಯ ಎನಿಸಿದ ಕಾರ್ಯ ಕೈಗೂಡಲು ಸಾಧ್ಯ. ಜೀವನದಲ್ಲಿ ಸಂತೃಪ್ತಿ ಮತ್ತು ನೆಮ್ಮದಿ ಇದ್ದಾಗ ಸಂತಸವೂ ತಾನಾಗೇ ಬಂದು ನೆಲೆಸುತ್ತದೆ. ಉಲ್ಲಾಸ ಭರಿತ ಜೀವನದಲ್ಲಿ ಹೊಸದನ್ನು ಸಾಧಿಸಬೇಕೆಂಬ ಉತ್ಸಾಹವೂ ಚಿಗುರುತ್ತದೆ. ಜೀವನೋತ್ಸಾಹವನ್ನು ಎಂದಿಗೂ ಕಳೆದುಕೊಳ್ಳಬಾರದು. ಜೀವನದಲ್ಲಿ ಕ್ರಿಯಾಶೀಲವಾಗಿ ಕೆಲಸ ಕಾರ್ಯಗಳನ್ನು ಮಾಡಬೇಕು. ಜೀವನೋತ್ಸಾಹ ಕಳೆದುಕೊಂಡವನು ಏನನ್ನೂ ಸಾಧಿಸಲಾರ.
ಜೀವನದಲ್ಲಿ ಯಶಸ್ಸು ಸಾಧಿಸಲು ಈ ಆತ್ಮ ವಿಶ್ವಾಸ ಎಂಬುದು ಒಂದು ಸ್ಫೂರ್ತಿ. ಆದರೆ ಅತಿಯಾದ ಆತ್ಮವಿಶ್ವಾಸವು ಅಧಃಫತನಕ್ಕೂ ಕಾರಣವಾಗಬಹುದು. ನಮ್ಮ ಪ್ರಯತ್ನಗಳೂ ಯಶಸ್ಸಿಗೆ ಬೇಕಾಗುತ್ತವೆ. ಜೀವನದಲ್ಲಿ ಶ್ರೀಮಂತಿಕೆ ಬುದ್ಧಿವಂತಿಕೆ ಎಲ್ಲವೂ ಇದ್ದು ಕೆಲವರಿಗೆ ತೃಪ್ತಿ ಇರುವುದಿಲ್ಲ. ಅಲ್ಲದೆ ಸಣ್ಣ ಸೋಲಿಗೆ ಅಥವಾ ವಿಫಲತೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದೇ ಇನ್ನೂ ಕೆಲವರು ಇರುದರಲ್ಲೇ ತೃಪ್ತಿಯಿಂದ ಬದುಕುವ ಛಲ ಇಟ್ಟು ಮುಂದೆ ಒಳ್ಳೆಯ ದಿನಗಳು ತಮ್ಮ ಬಾಳಿನಲ್ಲಿ ಬರಬಹುದು ಎಂದು ಇರುವಷ್ಟು ದಿನ ಇದ್ದದ್ದರಲ್ಲೇ ಸಂತಸ ಪಡುತ್ತಾರೆ.
ಪ್ರತಿ ನಿತ್ಯವೂ ಹೊಸ ಹುರುಪು, ಹೊಸ ಉತ್ಸಾಹ ದಿಂದ ಇದ್ದಾಗ ಭವಿಷ್ಯದಲ್ಲಿ ಗುರಿ ಸಾಧನೆಯತ್ತ ಗಮನ ಹರಿಸಲು ಸಾಧ್ಯ.
ಯಾವುದೇ ಕ್ಷಣದಲ್ಲೂ ಸೋಲಿಗೆ ಹೆದರಬಾರದು. ಸೋಲನ್ನೂ ಸೋಲಿಸುವ ಸಾಮರ್ಥ್ಯ ಬೆಳೆಸಿಕೂಳ್ಳಬೇಕು. ಕೆಟ್ಟ ಯೋಚನೆಗಳನ್ನು ಕಡಿಮೆ ಮಾಡಿಕೊಳ್ಳುತ್ತಾ ಬಂದಂತೆ ಒಳ್ಳೊಳ್ಳೆ ವಿಚಾರ ಬರಲು ಸಾಧ್ಯ. ಸೋಲು ಎಂಬುದು ಆತ್ಮವಿಶ್ವಾಸವನ್ನು ಕುಗ್ಗಿಸಬಾರದು. ಬದಲಾಗಿ ಆತ್ಮವಿಮರ್ಶೆಗೆ ಕಾರಣವಾಗಬೇಕು. ಆತ್ಮವಿಮರ್ಷೆ ಮಾಡಿಕೊಳ್ಳುವುದು ಜೀವನಕ್ಕೆ ಉತ್ತಮವಾದುದಾಗಿದೆ.
ನಿಂದಕರ ಮಾತಿಗೆ ಕುಗ್ಗದಿರಿ
ಬಂದ ಕಷ್ಟಗಳನ್ನು ಸವಾಲಾಗಿ, ಧನಾತ್ಮಕವಾಗಿ ಸ್ವೀಕರಿಸಬೇಕು. ಸೋಲನ್ನು ಸವಾಲಾಗಿ ಸ್ವೀಕರಿಸಬೇಕು. ಸೋತಾಗಲೇ ಗೆಲುವಿನ ಬೆಲೆ ಅರ್ಥವಾಗುತ್ತದೆ. ಜೀವನದಲ್ಲಿ ಎಷ್ಟೋ ಬಾರಿ ಸೋತರೂ ಮುಂದೆ ಗೆಲ್ಲಬಹುದೆಂಬ ನಂಬಿಕೆ ಇರಬೇಕು. ಆಗ ಗೆಲುವು ಸಾಧಿಸಿದಾಗ ಆಗುವ ಸಂತಸವೇ ಬೇರೆ. ಒಮ್ಮೆ ನಡೆದ ಕಹಿ ಘಟನೆಗಳಿಂದ ಉತ್ಸಾಹ ಕಳೆದುಕೂಳ್ಳದೆ ಮರಳಿ ಯತ್ನವ ಮಾಡು ಎಂಬ ಮಾತಿನಂತೆ ಪ್ರಯತ್ನ ನಿರಂತರವಾಗಿರಬೇಕು.
ಅದು ನಿಂತ ನೀರಿನಂತಾಗಬಾರದು. ಗಿಡ- ಮರ ಪದೇ ಪದೇ ಚಿಗುರುವಂತೆ ನಮ್ಮನ್ನು ನಿಂದಿಸುವರಿಂದ ಕುಗ್ಗಿ ಹೋಗದೆ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಸಾಗಬೇಕು. ಬಹಳ ಸಣ್ಣ ವಯಸ್ಸಿಗೇ ಕೆಲವರು ನಿರೀಕ್ಷೆಗೂ ಮೀರಿ ಸಾಧಿಸುತ್ತಾರೆ. ಇದೆಲ್ಲ ಸಾಧ್ಯವಾಗಲು ಅವರಲ್ಲಿನ ಆತ್ಮವಿಶ್ವಾಸವೂ ಪ್ರಮುಖ ಕಾರಣವಾಗಬಹುದು. ಅದೆಷ್ಟೋ ಅಂಗ ವೈಕಲ್ಯ ಹೊಂದಿರುವವರೂ ಯಾವುದೇ ಕ್ಷೇತ್ರದಲ್ಲೂ ಹಿಂದೆ ಬೀಳದೆ ಕ್ರೀಡಾರಂಗದಲ್ಲೂ ಸಹ ಸಾಧನೆ ಮಾಡಿದ್ದಾರೆ. ಇದಕ್ಕೆಲ್ಲ ಕಾರಣವಾದ ಬಲ ಅಥವಾ ಶಕ್ತಿಯೆಂದರೆ ಆತ್ಮ ವಿಶ್ವಾಸ ಮತ್ತು ಸಿಕ್ಕಂತಹ ಪ್ರೋತ್ಸಾಹಗಳೇ ಆಗಿವೆ.
ಶಿಲ್ಪಾ ಸುಬ್ರಾಯ ಗಾಂವ್ಕರ, (ಉ.ಕ.), ಸ.ಪ್ರ.ದ.ಕಾ. ಯಲ್ಲಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.