ಜನರೇಷನ್ ಗ್ಯಾಪ್


Team Udayavani, Jul 4, 2021, 3:14 PM IST

ಜನರೇಷನ್ ಗ್ಯಾಪ್

ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲ ಅಂತ ಆಗಾಗ ಮನೆಯ ಹಿರಿಯರು ಗೊಣಗುತ್ತಿರುವುದು ಕೇಳಿಯೇ ಇರುತ್ತೇವೆ. ಇದೊಂದು ಪ್ರತಿ ಮನೆಯ ಸಾಮಾನ್ಯ ಡೈಲಾಗ್‌. ಆದರೆ ನಾವಿದನ್ನು ಸಂಪೂರ್ಣವಾಗಿ ಅಸಡ್ಡೆ ಮಾಡುವಂತಿಲ್ಲ. ಎಷ್ಟೋ ಕುಟುಂಬಗಳಲ್ಲಿ ಬಿರುಕು ಮೂಡಿ, ಮನಸ್ಸು ಹಾಳಾಗಲು ಇದೇ ಒಂದು ರೀತಿಯ ಮುಖ್ಯ ಕಾರಣ ಎನ್ನುವುದು ಕೂಡ ಅಷ್ಟೇ ನಿಜ. ಮೊದಲಿಗೆ ತಂದೆ-ತಾಯಿ ಹಾಗೂ ಮಕ್ಕಳ ಕುರಿತು ಹೇಳುವುದಾದರೆ ಬಹುಶಃ ಸ್ವಲ್ಪ ಗ್ರಾಮೀಣ ಭಾಗದಲ್ಲಿದ್ದುಕೊಂಡು ಶಿಕ್ಷಣವನ್ನು ಸರಿಯಾಗಿ ಪೂರೈಸದ ತಂದೆ ತಾಯಿಯರಿದ್ದಲ್ಲಿ ಅವರೊಂದು ರೀತಿಯ ಬಾವಿಯೊಳಗಿನ ಕಪ್ಪೆಯಂತೆ. ಹೊರ ಪ್ರಪಂಚದ ಪರಿವಿಲ್ಲದ ಇಂತಹ ಹೆತ್ತವರು ಹಾಗೂ ಅವರ ಮಕ್ಕಳ ನಡುವೆ ಮನೆಯ ಆಚಾರಗಳು, ಅಳವಡಿಸಿಕೊಂಡ ತಂತ್ರಜ್ಞಾನಗಳು, ಅಲ್ಲದೇ ಅವರ ಜೀವನ ಶೈಲಿಯ ತದ್ವಿರುದ್ಧ ಸಿದ್ಧಾಂತಗಳಿರುತ್ತವೆ.

ಸಮಯ ಹೆಚ್ಚು ವ್ಯಯವಾಗಿ ದೇಹಕ್ಕೆ ಆಯಾಸವಾದರೂ ಸರಿ ಇಂದಿನ ತಂತ್ರಜ್ಞಾನಗಳಿಗೆ ಸರ್ವತಾ ಒಗ್ಗುವ ಜಾಯಮಾನದವರಂತೂ ಅವರಲ್ಲ. ಮಕ್ಕಳಿಗೆ ಸುಲಭದಲ್ಲಿ ಆಗುವ ಕಾರ್ಯಗಳನ್ನು ಕಾಂಪ್ಲಿಕೇಟೆಡ್‌ ಮಾಡಲು ಸುತರಾಂ ಇಷ್ಟವಿರುವುದಿಲ್ಲ. ಜತೆಗೆ ಅಷ್ಟೊಂದು ತಾಳ್ಮೆ ಮತ್ತು ಸೂಕ್ಷ್ಮ ಮನಃಸ್ಥಿತಿಯ ಕೊರತೆಯೂ ಇರಬಹುದು. ಇದನ್ನೇ ಜನರೇಷನ್‌ ಗ್ಯಾಪ್‌ ಅನ್ನುವುದು. ಎಷ್ಟೋ ಹಿರಿ ಜೀವಗಳು ಈ ವಿಷಯದಿಂದ ಮಕ್ಕಳೊಂದಿಗೆ ಸರಿಯಾಗದೇ ಖನ್ನತೆಗೆ ಒಳಗಾದ ಸನ್ನಿವೇಶಗಳೂ ಇದೆ. ಇನ್ನು ತಂದೆ ತಾಯಿಯರ ರೀತಿ ರಿವಾಜುಗಳನ್ನು ಒಪ್ಪಿ ಕೊಳ್ಳಲಾಗದೆ ಅವರನ್ನು ಮಕ್ಕಳು ಬಿಟ್ಟು ಹೋದ ಪ್ರಸಂಗಗಳು ಸಾಕಷ್ಟು ಇವೆ. ಇನ್ನು ಕೆಲವೊಂದು ವಿವಾಹವಾದ ಅನಂತರ ಉಂಟಾಗುವ ಮನಸ್ತಾಪಗಳಿಗೂ ಇದೂ ಒಂದು ರೀತಿಯ ಕಾರಣವಿರಬಹುದು. ಬಂದ ಸೊಸೆಯ ಮೇಲೆ ಹೇರುವ ಸಂಪ್ರದಾಯಗಳು ಆಕೆಗೆ ಉಸಿರು ಗಟ್ಟಿಸುವಂತಾಗಿಸಬಹುದು.

ಸೊಸೆಗೆ ಆ ಮನೆಯ ಹಿರಿ ತಲೆಗಳ ಮನಃಸ್ಥಿತಿಯನ್ನು ಅರಿಯುವುದು ಕಷ್ಟ ಸಾಧ್ಯ. ಆಕೆ ಬೆಳೆದು ಬಂದ ರೀತಿ, ಪಡೆದ ಶಿಕ್ಷಣ ತಂತ್ರಜ್ಞಾನಗಳಿಗೆ ಒಗ್ಗಿಕೊಂಡ ರೀತಿ ಇವೆಲ್ಲವೂ ಹಿಂದಿನ ಜನರೇಷನ್‌ ನವರಿಗೆ ಸಹಿಸಲು ಸಾಧ್ಯವಾಗದೇ ಇರಬಹುದು. ಹೀಗಾಗಿ ಈ ಅಂತರ ಸಂಸಾರದೊಳಗೆ ಒಡಕ್ಕನ್ನುಂಟು ಮಾಡಬಹುದು. ಕಾಲ್ನಡಿಗೆಯಿಂದ ಬಸ್‌, ಕಾರಿನವರೆಗೆ, ಪುಸ್ತಕದಿಂದ ಇ-ಬುಕ್‌, ಇ-ಪೇಪರ್‌ವರೆಗೆ, ಅರೆಯುವ ಕಲ್ಲಿನಿಂದ ಮಿಕ್ಸಿ ಗ್ರೆಯಿಂಡರ್‌ವರೆಗೆ, ಉಳುವ ಎತ್ತಿನಿಂದ ಟ್ರ್ಯಾಕ್ಟರ್‌, ಮಣ್ಣಿನ ಮಡಕೆಯಿಂದ ಸ್ಟೀಲ್‌ ಕುಕ್ಕರ್‌ಹೀಗೆ ಒಂದೇ ಎರಡೇ ಜನರೇಷನ್‌ಗೆ ತಕ್ಕಂತೆ ಕಾಲವೂ ತಂತ್ರಜ್ಞಾನವೂ ಬದಲಾಗುತ್ತಾ ಇದೆ. ಈಗ ಇದ್ದಂತೆ ಮುಂದೆ ನಮ್ಮ ಮಕ್ಕಳು ಮರಿಮಕ್ಕಳ ಕಾಲದಲ್ಲಿ ಇರಲಿಕ್ಕಿಲ್ಲ. ಅದಕ್ಕನುಗುಣವಾಗಿ ಹಿಂದಿನ ಸಂಸ್ಕೃತಿಗೆ ಧಕ್ಕೆ ಬಾರದ ರೀತಿಯಲ್ಲಿ ಈಗಿನ ಜನರೇಷನ್‌ಗೆ ಒಗ್ಗಿಕೊಂಡರೆ ಮಾತ್ರ ಎಲ್ಲವೂ ಸರಿಯಾಗಿ ಸಾಗುತ್ತದೆ. ಇಲ್ಲದೇ ಹೋದಲ್ಲಿ ಜನರೇಷನ್‌ ಗ್ಯಾಪ್‌ ಗಂಭೀರ ಸಮಸ್ಯೆಯಾಗುವುದು ಖಂಡಿತಾ!

 

ಚೈತನ್ಯಾ ಪ್ರಕಾಶ್‌

ಶ್ರೀರಾಮ ಪ.ಪೂ. ಕಾಲೇಜು, ಕಲ್ಲಡ್ಕ

ಟಾಪ್ ನ್ಯೂಸ್

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.