ಆಕಾಶಕ್ಕೆ ಏಣಿ: ಬದುಕೆಂಬ ತಿರುವು – ಮುರುವಿನ ಹಾದಿ
ಅಂಬರದಲ್ಲಿನ ತಾರೆಗಳನ್ನು ಎಣಿಸಲಿಕ್ಕೆ ಸಮಯ ತಗಲಬಹುದು; ಆದರೆ ಎಣಿಸಬಹುದು.
Team Udayavani, Jun 1, 2020, 3:04 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಜೀವನವೇ ಹಾಗೆ, ಹಲವು ತಿರುವುಗಳ ಕಿರಿದಾದ ರಸ್ತೆ.
ಬದುಕು ಎಂದಾಕ್ಷಣ ಆದಕ್ಕೆ ಅಂದ ನೀಡಲು ಒಂದೊಳ್ಳೆಯ ಗುರಿ ಇರಬೇಕು ಎನ್ನುವುದು ಸಹಜ.
ನಾನೂ ಅಷ್ಟೇ. ಆದರೆ ಈ ಗುರಿಯನ್ನು ಪೂರೈಸಿ ಸಂತೃಪ್ತಿ ಹೊಂದಿದವರ್ಯಾರೂ ಇಲ್ಲ. ಆ ಗುರಿಯನ್ನು ಇನ್ನೇನು ತಲುಪಿಯೇ ಬಿಟ್ಟೆ ಎನ್ನುವಷ್ಟರಲ್ಲಿ ಮತ್ತೂಂದು ಗುರಿಯತ್ತ ಚಿತ್ತ ಹರಿಯುವುದಿದೆ.
ಬಹಳಷ್ಟು ಬಾರಿ ನನಗೆ ಈ ರೀತಿ ಆದ ಉದಾಹರಣೆ ಇದೆ. ಇದರಿಂದ ಈಗ ಗುರಿಗಳಿಗೆ ಒಂದು ಚೌಕಟ್ಟು ಹಾಕಿಕೊಂಡಿದ್ದೇನೆ. ದೂರದಲ್ಲೊಂದು ಅಂತಿಮ ಗುರಿಯನ್ನು ಸದ್ಯದ ಮಟ್ಟಿಗೆ ಕಾಯ್ದಿರಿಸಿಕೊಂಡಿದ್ದೇನೆ.
ಒಂದಾನೊಂದು ಕಾಲದಲ್ಲಿ ಕಂಪೌಂಡರ್ ಆಗಿ ಕೆಲಸ ನಿರ್ವಸಹಿಸಿದ್ದ ನನ್ನ ತಾತ, ನಾ ಚಿಕ್ಕವಳಿದ್ದಾಗ ಹೇಳುತ್ತಿದ್ದರು. ‘ನನ್ನ ಮೊಮ್ಮಗಳು ಡಾಕ್ಟರ್ ಆದ್ರೆ’, ಎಷ್ಟು ಚಂದ ಇರುತ್ತೆ ಜೀವನ. ಮತ್ತೆ ‘ಅವಳ ಕೈಯಲ್ಲೇ ನಾನು ಮದ್ದು ತೆಗೆದುಕೊಳ್ಳಬಹುದು’ ಎಂದು.
ನಾನು ನಾಲ್ಕನೇ ತರಗತಿಯಲ್ಲಿರುವಾಗ ತಾತನೊಂದಿಗೆ ಅವರ ಆ ಕನಸೂ ಕಣ್ಣು ಮುಚ್ಚಿತ್ತು. ಎಂಜಿನಿಯರ್ ಆಗಬೇಕು ಎಂದು ಅಮ್ಮ ಹೇಳಿದ್ರೂ ನಾನು ಅದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಂಡಿದ್ದು ಇಲ್ಲ. ಈ ನಡುವೆ ಗಣಿತದ ಶಿಕ್ಷಕಿಯಾಗಬೇಕು ಎಂಬ ಕನಸು ಮನದ ಮೂಲೆಯಲ್ಲಿ ಇಣುಕಿದ್ದೂ ಇದೆ.
ಹತ್ತನೇ ತರಗತಿಯ ಅಂಕಗಳು ಎಂಬತ್ತರ ಮೇಲೆ ಕಾಣಿಸಿಕೊಂಡ ಕಾರಣ, ನಾನು ಪಿಯುಸಿಯಲ್ಲಿ ಆರ್ಟ್ಸ್ ಆರಿಸಿಕೊಂಡದ್ದು ಸಹಪಾಠಿ ಗಳ ಪಾಲಿಗೆ ಅಚ್ಚರಿಯ ಸಂಗತಿಯೇ ಆಗಿತ್ತು. ಸಾಹಿತ್ಯ, ಪುಸ್ತಕ ಓದುವುದರ ಬಗ್ಗೆ ಸ್ವಲ್ಪ ಹಚ್ಚೇ ಆಸಕ್ತಿಯಿದ್ದ ನನಗೆ ಉಪನ್ಯಾಸಕರ ಮಾರ್ಗದರ್ಶನವೂ ಚೆನ್ನಾಗಿ ಲಭಿಸಿತ್ತು.
ಪ್ರೌಢಶಾಲೆಯಲ್ಲಿ ಬರವಣಿಗೆ ವಿಷಯಗಳಲ್ಲಿ ಸಕ್ರಿಯಳಾಗಿದ್ದ ನನಗೆ, ಪಿಯುಸಿಯಲ್ಲಿ ಕಾಲೇಜಿನ ಭಿತ್ತಿ ಪತ್ರಿಕೆಯ ನೇತೃತ್ವ ವಹಿಸಿಕೊಂಡಾಗ ಬರವಣಿಗೆಯ ಕಡೆಗಿನ ಒಲವು ಮತ್ತಷ್ಟು ಬೆಳೆಯಿತು. ಆಗಲೇ ಉಪನ್ಯಾಸಕರ ಮೂಲಕ ಪತ್ರಿಕೋದ್ಯಮ ಎಂಬ ವಿಷಯದಲ್ಲಿ ಪದವಿ ಮಾಡುವ ಅವಕಾಶದ ಕುರಿತು ತಿಳಿಯಿತು. ಅಲ್ಲಿಂದ ಶುರುವಾಗಿತ್ತು ಮಗದೊಂದು ಕನಸು ಸಾಕಾರಗೊಳಿಸುವ ಕಡೆಗಿನ ಹೆಜ್ಜೆ.
ನಾನೂ ಪತ್ರಿಕೋದ್ಯಮದಲ್ಲಿ ಪದವಿ ಮಾಡಿ ಕೊಳ್ಳಬೇಕು. ಹಾಗೆಯೇ ಕನ್ನಡದಲ್ಲಿ ಒಂದು ಸ್ನಾತಕೋತ್ತರ ಪದವಿಯೂ ಹೆಸರಿನೊಂದಿಗೆ ನಂಟಾದರೆ ಸೊಗಸಾಗಿರುತ್ತದೆ ಎಂಬ ಬಯಕೆಯೂ ಕಾಡಿತು. ಕನ್ನಡ ಸಾಹಿತ್ಯ ಹಾಗೂ ಪತ್ರಿಕೋದ್ಯಮವನ್ನು ಅರಸಿಕೊಂಡು ಹೋಗಿದ್ದ ನನಗೆ, ಪಿಯುಸಿ ಅಂಕಗಳ ಆಧಾರದಲ್ಲಿ ಐಚ್ಛಿಕ ಇಂಗ್ಲಿಷ್ ದೊರೆತಿತ್ತು. ಪಿಯುಸಿವರೆಗೂ ಇಂಗ್ಲಿಷ್ ಒಂದನ್ನು ಬಿಟ್ಟು ಬೇರೆಲ್ಲವನ್ನೂ ಕನ್ನಡದಲ್ಲೇ ಬರೆದಿದ್ದವಳಿಗೆ ಇಂಗ್ಲಿಷ್ ಪಠ್ಯ ಮಾಧ್ಯಮ ಹೊಸತು.
ಮೊದಲ ಒಂದಷ್ಟು ತರಗತಿಗಳಲ್ಲಿ ಉಪನ್ಯಾಸಕರ ಮುಖವನ್ನು ಹಾಗೂ ಪುಸ್ತಕವನ್ನು ನೋಡಿದ್ದು ಬಿಟ್ಟರೆ ತಲೆಗೆ ಹೋದದ್ದು ಅಷ್ಟರಲ್ಲೇ ಇತ್ತು. ಮೊದಲ ಕಿರುಪರೀಕ್ಷೆಯಲ್ಲಿ ಅಲ್ಲಿಂದಲ್ಲಿಗೆ ಪಾಸಾಗಿದ್ದೆ, ಇದನ್ನು ನೆನೆದು ತರಗತಿಯಲ್ಲಿ ಕಣ್ಣೀರಿಟ್ಟಿದ್ದೂ ಇದೆ. ಆಗಲೇ ಸಹಪಾಠಿಯೊಬ್ಬಳು ಅಂಕಗಳ ಕುರಿತಾಗಿ ಅವಮಾನಕರ ಮಾತೊಂದನ್ನು ಆಡಿಯೇ ಬಿಟ್ಟಿದ್ದಳು. ಮನಸ್ಸಿಗೆ ಸಹಜವಾಗಿಯೇ ನಾಟಿತ್ತು.
‘ಭಾಷೆ ಆಸಕ್ತಿಗೆ ಎಂದೂ ತೊಡರಲ್ಲ’ ಎಂದು ಅಂದೇ ನಿರ್ಧರಿಸಿಬಿಟ್ಟಿದ್ದೆ. ಹಠಕ್ಕೆ ಬಿದ್ದು ಕಾಲೇಜಿನ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡೆ. ಲಿಟರರಿ ಕ್ಲಬ್‌ನ ಪ್ರತಿ ಕಾರ್ಯಕ್ರಮದಲ್ಲೂ ಹೋಗಿ ಭಾಗವಹಿಸಿದಾಗ ಹೊಸದೊಂದು ಸಾಹಿತ್ಯ ಲೋಕದ ಪರಿಚಯವಾಗಿತ್ತು.
ಒಂದೋ ಪತ್ರಿಕೋದ್ಯಮ ವೃತ್ತಿ ಮಾಡಬೇಕು, ಇಲ್ಲ ಪತ್ರಕರ್ತರನ್ನು ತಯಾರು ಮಾಡುವ ಉಪನ್ಯಾಸಕಿಯಾಗಬೇಕೆಂಬ ಕನಸಿನೊಂದಿಗೆ ಈಗ ಸ್ನಾತಕೋತ್ತರದಲ್ಲಿ ಬೆಸೆದುಕೊಂಡಿದೆ. ಈ ನಡುವೆ ಅರಿಯದೇ ಹುಟ್ಟಿದ ಪ್ರೀತಿ ಇಂಗ್ಲಿಷ್ ಸಾಹಿತ್ಯದ ಕುರಿತಾಗಿ. ಅದರಲ್ಲೂ ಉನ್ನತ ಶಿಕ್ಷಣ ಮಾಡುವ ಆಸೆಯಿದೆ. ಆದರೆ ಅದಕ್ಕಾಗಿ ನನ್ನ ಇಂಗ್ಲಿಷ್ ಭಾಷೆ ಇನ್ನೂ ಮಾಗಬೇಕು. ಕಾಯಲೇಬೇಕು.
ಎಲ್ಲದಕ್ಕೂ ಮುಖ್ಯವಾಗಿ ಒಂದು ಉತ್ತಮ ಉದ್ಯೋಗ ಜೀವನವನ್ನು ಕಟ್ಟಿಕೊಂಡು ನನಗಾಗಿ ಮಿಡಿಯುವ-ದುಡಿಯುವ ಕುಟುಂಬಕ್ಕೆ ಸುಂದರ ವಿಶ್ರಾಂತ ಜೀವನವನ್ನು ಕಲ್ಪಿಸಿಕೊಡಬೇಕು. ಕೆರಿಯರ್ ಎಂದು ಎಷ್ಟೇ ತಲೆಕೆಡಿಸಿಕೊಂಡರೂ, ಬಿಟ್ಟರೂ ಕೊನೆಗೆ ಮನ ಹಂಬಲಿಸುವುದು ಸುಂದರವಾದ ನೆಮ್ಮದಿ ತುಂಬಿ ತುಳುಕುವ ಸುಖೀ ಕುಟುಂಬ ಅಲ್ವಾ .
– ಸೀಮಾ ಪೋನಡ್ಕ , ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!
Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ
Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.