Importance of Money: ಯೌವ್ವನದಲ್ಲಿ ಅರ್ಥವಾದ ಮನಿಮಹತ್ವ
Team Udayavani, Dec 21, 2023, 5:30 PM IST
ಅಬ್ಬಬ್ಟಾ ಎಷ್ಟೆಲ್ಲಾ ಖರ್ಚಾಯ್ತು ಎಂದು ಹೇಳಲು ಪ್ರಾರಂಭಿಸುವುದೇ ಯೌವ್ವನದಲ್ಲಿ. ಇಷ್ಟು ವರ್ಷಗಳ ಕಾಲ ಮನೆಯಲ್ಲಿ ಪೋಷಕರು ನೀಡಿರುವ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಿದ್ದೆವು. ಆದರೆ ಈಗ ಒಂದು ರೂಪಾಯಿ ಹಣವನ್ನು ಖರ್ಚು ಮಾಡುವಾಗಲೂ ಆಲೋಚಿಸುವ ಸಮಯ ಇದು.
ಎಂತಾ ಮಜಾ ಅಲ್ವಾ ಪ್ರತಿಯೊಂದು ವಿಷಯಕ್ಕೂ ಅಪ್ಪ ಅಮ್ಮನ ಬಳಿ ಹಣವನ್ನು ಕೇಳುತ್ತಿದ್ದೆವು. ಅವರ ಬಳಿ ದುಡ್ಡು ಇದೆಯೋ ಇಲ್ಲವೋ ಎಂಬ ಪರಿಜ್ಞಾನವೂ ಹಲವರಿಗೆ ಇರದ ಪರಿಸ್ಥಿತಿ ಇದೆ. ಅವರು ಒಂದೊಂದು ರೂಪಾಯಿಗಳನ್ನು ಕೊಡಿ ಇಡುವುದು ತಮ್ಮ ಮಕ್ಕಳ ಖುಷಿಗೋಸ್ಕರ ಎಷ್ಟೋ ಮನೆಯಲ್ಲಿ ಜೀವನ ಮಾಡುತ್ತಿರುತ್ತಾರೆ. ಆದರೆ ಈಗಿನ ಮಕ್ಕಳು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ.
ಆದರೆ ಈ ಯೌವ್ವನಕ್ಕೆ ಕಾಲಿಟ್ಟ ಅನಂತರ ತಮ್ಮ ಜವಾಬ್ದಾರಿಗಳನ್ನು ತಾವೇ ಹೊರುವ ಪರಿಸ್ಥಿತಿ ಬಂದಾಗ ಹಣಕಾಸಿನ ನಿರ್ವಹಣೆ ಹೇಗಿರಬೇಕು ಎಂಬುದು ತಿಳಿಯುತ್ತದೆ. ಮನೆಯಲ್ಲಿ ಹಣವನ್ನು ಕೇಳಲಾಗದ ಪರಿಸ್ಥಿತಿ ಆದರೆ ದುಡ್ಡು ಮನೆಯ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದಾಗ ಹಣದ ಮಹತ್ವ ಹಾಗೂ ಮನೆಯವರು ಮಾಡುತ್ತಿರುವ ಮಮತೆ ಬೆಳಕಿಗೆ ಬರುತ್ತದೆ.
ವಿಚಿತ್ರ ಎನಿಸುತ್ತದೆ ಇದನ್ನು ನೋಡಿದಾಗ ಮನೆಯವರ ಬಳಿ ಕೇಳಿ ಹಣವನ್ನು ಖರ್ಚು ಮಾಡುತ್ತಿದ್ದವರು ಒಂದು ವಯಸ್ಸಿಗೆ ಬಂದಾಗ ಅವರ ಬಳಿ ಹಣವನ್ನು ಕೇಳಲು ಮುಜುಗರವಾಗುತ್ತದೆ.
ಯೋಚನಾಶಕ್ತಿ, ಬುದ್ಧಿ ಶಕ್ತಿಯನ್ನು ಒಳಗೊಂಡು ಒಂದು ರೀತಿಯ ಬುದ್ಧಿ ಬಂದಿರುವ ಕಾಲವೇ ಯೌವ್ವನ. ಯೌವ್ವನದಲ್ಲಿ ಹೇಗೆ ಮನಸ್ಸು ತಲ್ಲಣಕ್ಕೆ ಒಳಗಾಗಿರುತ್ತದೆಯೋ ಅದೇ ರೀತಿ ಜೀವನ ನಡೆಸಲು ಬೇಕಾದ ಕೌಶಲ, ತಾಳ್ಮೆ, ಜಾಣ್ಮೆಯೂ ಬೇಕಾಗುತ್ತದೆ. ಈ ಯೌವ್ವನ ಎನ್ನುವುದು ಒಂದು ತರಹದ ಓಡುತ್ತಿರುವ ಕುದುರೆಯ ಹಾಗೇ ಯಾವುದೇ ಅಡ್ಡ ದಾರಿ ಬಂದರೂ ಅದನ್ನು ಸರಿಸಿ ಸರಿಯಾದ ದಾರಿಯಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿರಬೇಕು. ಯಾರೇ ಆಗಲಿ ವಯಸ್ಸಿಗೆ ಬಂದವರು ಮನೆಯಲ್ಲಿ ಕೆಲಸ ಮಾಡದೇ ಸುಮ್ಮನೆ ಕೂತಿದ್ದರೆ ಅವನ ಬೆಲೆ ಮೂರು ಕಾಸಿಗೂ ಬೆಲೆ ಬಾಳುವುದಿಲ್ಲ ಎಂಬ ಪರಿಸ್ಥಿತಿ.ಹಣಕಾಸು ಎಂಬ ವಿಷಯ ಬಂದರೆ ಸಾಕು ಮನೆಯಲ್ಲಿ ಕೆಲಸ ಮಾಡದವನ ಪರಿಸ್ಥಿತಿ ಬೇಡವೊ ಬೇಡ ಎಂಬಂತಾಗುತ್ತದೆ. ಒಬ್ಬೊಬ್ಬರ ಮಾತು ಒಂದೊಂದು ತರಹದಲ್ಲಿ ಟೀಕಿಸುವಂತೆ ಆಗುತ್ತದೆ.ಕೆಲಸದಲ್ಲಿ ಇದ್ದು ಸಾಕಷ್ಟು ಹಣಗಳಿಸಲಾಗಲಿಲ್ಲ ಎಂದರೆ ಇನ್ನೊಂದು ರೀತಿಯ ಸಂಕಷ್ಟಕ್ಕೆ ಒಳಗಾಗುತ್ತವೆ. ಒಟ್ಟಾರೆಯಾಗಿ ಯೌವ್ವನದಲ್ಲಿ ಹಲವು ವಿಷಯಗಳು ಅರಿವಾಗುವುದರ ಜತೆಗೆ ಹಣದ ಮಹತ್ವ ತಿಳಿಯುತ್ತದೆ.
–ಲಿಖೀತಾ ಹೆಗಡೆ
ಎಸ್.ಡಿ.ಎಂ., ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.