Hasta Shilpa Heritage Village Museum ಬಲು ಸುಂದರ ಹೆರಿಟೇಜ್‌ ವಿಲೇಜ್‌


Team Udayavani, Sep 27, 2023, 8:00 AM IST

14–fusion-hasthashilpa

ಉಡುಪಿ ಜಿಲ್ಲೆಯ ಮಣಿಪಾಲದಲ್ಲಿರುವ ಹಸ್ತಶಿಲ್ಪ ಹೆರಿಟೇಜ್‌ ವಿಲೇಜ್‌ ಮ್ಯೂಸಿಯಂ ಕುರಿತು ಸಾಮಾಜಿಕ ಜಾಲತಾಣ, ಸ್ನೇಹಿತರು ಹೀಗೆ ಹಲವರಿಂದ ಕೇಲ್ಪಟ್ಟಿರುವುದರಿಂದ ಇಲ್ಲಿಗೆ ಒಮ್ಮೆ ಭೇಟಿ ನೀಡಬೇಕು ಎಂಬ ಇಂಗಿತವಿತ್ತು.

ಉಡುಪಿಯಿಂದ ಸುಮಾರು ಐದಾರು ಕಿ.ಮೀ. ದೂರದಲ್ಲಿರುವ ಈ ಸ್ಥಳಕ್ಕೆ ಊರನ್ನು ಸುತ್ತಾಡಿಕೊಂಡು 10-15 ಕಿ.ಮೀ. ಮಾಡಿಕೊಂಡು ತಲುಪಿದೆವು. ಪ್ರವೇಶ ದ್ವಾರದಲ್ಲೇ ಟಿಕೆಟ್‌ ಕೌಂಟರ್‌ ಇದ್ದು, ಟಿಕೆಟ್‌ ಪಡೆದು ಮುಂದೆ ಸಾಗಬೇಕು. ಸ್ಥಳದ ಕುರಿತು ಸ್ವಲ್ಪ ಮಾಹಿತಿಯನ್ನು ಟಿಕೆಟ್‌ ನೀಡುವವರೆ ನೀಡುತ್ತಾರೆ ಮತ್ತು ಇನ್ನಷ್ಟು ಮಾಹಿತಿ ಪಡೆಯಲು ಅಲ್ಲೆ ಇರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಲು ಹೇಳುತ್ತಾರೆ. ಸ್ಕ್ಯಾನ್‌ ಮಾಡಿದರೆ ಆ ಸ್ಥಳದಲ್ಲಿರುವ 24 ಕಟ್ಟಡಗಳ ಸಂಕ್ಷಿಪ್ತ ಮಾಹಿತಿ, ಅದರ ವಿಶೇಷತೆಗಳಿರುವ ಕೈಪಿಡಿ ನಮ್ಮ ಮೊಬೈಲ್‌ನಲ್ಲಿ ಲಭ್ಯವಾಗುತ್ತದೆ.

1997ರಲ್ಲಿ ಆರಂಭವಾದ ಈ ಮ್ಯೂಸಿಯಂನ ರೂವಾರಿ ದಿ| ವಿಜಯನಾಥ ಶೆಣೈ ಅವರು. ಹಸ್ತಶಿಲ್ಪ ಹೆರಿಟೇಜ್‌ ಹೌಸ್‌ ನಿರ್ಮಿಸಲು ಹೋಗಿ ಹಸ್ತಶಿಲ್ಪ ಹೆರಿಟೇಜ್‌ ವಿಲೇಜ್‌ ಮ್ಯೂಸಿಯಂ ಆಗಿದ್ದು ಈಗ ಇತಿಹಾಸ. ಹಳೆಯ, ಸಾಂಪ್ರದಾಯಿಕ, ಐತಿಹಾಸಿಕ ಕಟ್ಟಡಗಳು, ಅವಶೇಷಗಳು, ಕರಕುಶಲ ವಸ್ತುಗಳು, ವಿವಿಧ ಶೈಲಿಯ ಉಪಕರಣಗಳನ್ನು ಸಂಗ್ರಹಿಸಿ ಮುಂದಿನ ತಲೆಮಾರಿಗೆ ಪರಿಚಯಿಸುವ, ಪ್ರೇರೇಪಿಸುವ ದೃಷ್ಟಿಯಿಂದ ಎಲ್ಲ ವಸ್ತುಗಳನ್ನು ಜತನವಾಗಿರಿಸಿದ್ದಾರೆ. ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಸಂಗ್ರಹಿಸಿದ ಅನೇಕ ಕಟ್ಟಡಗಳನ್ನು, ಕಟ್ಟಡಗಳ ಭಾಗಗಳನ್ನು ತಂದು ಇಲ್ಲಿರುವ ಐದಾರು ಎಕರೆ ಜಾಗದಲ್ಲಿ ಪುನರ್‌ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಇದನ್ನು  ಹಸ್ತ ಶಿಲ್ಪ ಟ್ರಸ್ಟ್‌  ಮುನ್ನಡೆಸಿಕೊಂಡು ಹೋಗುತ್ತಿದೆ.

ಪ್ರವೇಶ ದ್ವಾರದಿಂದ ಒಳ ಹೊಕ್ಕರೆ ಹೊಸದೊಂದು ಪ್ರದೇಶಕ್ಕೆ ಕಾಲಿಟ್ಟ ಅನುಭವ. ಹತ್ತಾರು ಗ್ರಾಮಗಳನ್ನು ಒಂದೇ ಕಡೆ ನೋಡುವ ಭಾಗ್ಯ. 1856ರ ಮಿಯಾರು ಮನೆ ಹಾಗೂ ಶೃಂಗೇರಿ ಮನೆ, 1816ರ ಮುಧೋಳ ಪ್ಯಾಲೇಸ್‌ ದರ್ಬಾರ್‌ ಹಾಲ್‌ ಹಾಗೂ ಕುಂಜೂರು ಚೌಕಿ ಮನೆ, 1341ರ ಕುಕನೂರಿನ ಕಮಲ್‌ ಮಹಲ್, 18ನೇ ಶತಮಾನದ ವಿಷ್ಣುಮಂದಿರ, 16ನೇ ಶತಮಾನದ ವೀರಶೈವ ಜಂಗಮ ಮಠ ಸೇರಿದಂತೆ ಒಟ್ಟು 24 ಕಟ್ಟಡಗಳು ಇಲ್ಲಿ ನೋಡಲು ಸಿಗುತ್ತದೆ. ಅದರಲ್ಲಿ ಬುಡಕಟ್ಟು ಜನಾಂಗದ ಕಲೆಗಾರಿಕೆ, ಜಾನಪದ ದೈವಗಳ ಗುಡಿಗಳು, ಗತಕಾಲದ ಬೀದಿಯ ಮರುಸೃಷ್ಟಿ, ಅಂಗಡಿ ಮುಂಗಟ್ಟುಗಳು, ಸಾಂಸ್ಕೃತಿಕ ಕಲಾಕೃತಿಗಳು… ಅಬ್ಬಬ್ಟಾ ಕಣ್ಣಿಗೆ, ಮನಸ್ಸಿಗೆ ಹಬ್ಬವೇ ಸರಿ. ಹಿಂದೆ ನೋಡಿದ್ದ ವಸ್ತುಗಳು ಕೆಲವಾದರೆ, ನೋಡಿರದ ವಸ್ತುಗಳು ಹಲವು. ಗೋಡೆಯ ಮೇಲೆ ತೂಗುಹಾಕಿದ ವಿವಿಧ ಬಗೆಯ ಚಿತ್ರಕಲೆಗಳು, ಗೋಡೆಯ ಮೇಲೆ ಚಿತ್ರಿಸಿದ ಚಿತ್ತಾರಗಳು ಇವುಗಳೆಲ್ಲಾ ಮನಸೂರೆಗೊಳಿಸುತ್ತವೆ. ಅಲ್ಲಿರುವ ಕೆತ್ತನೆಗಳು, ಶಿಲ್ಪಗಳು, ಕಂಬಗಳು ಆಕರ್ಷಣೀಯವಾಗಿದೆ. ಕಟ್ಟಡಗಳೊಳಗೆ ಹಾಕಿರುವ ಹಾಡುಗಳು ಅಲ್ಲೇ ಮೈಮರೆತು ತಲ್ಲೀನವಾಗುವಂತೆ ಮಾಡುತ್ತದೆ. ಒಮ್ಮೆ ಒಳಹೊಕ್ಕು ವೀಕ್ಷಿಸಿ ಹೊರಬರಲು 1ರಿಂದ 2 ಗಂಟೆಯಾದರೂ ಬೇಕಾಗುತ್ತದೆ. ಈ ಎಲ್ಲ ವಸ್ತುಗಳನ್ನು ಎಲ್ಲ ಕಾಲಕ್ಕೂ, ಹವಾಮಾನಕ್ಕೂ ಒಗ್ಗುವಂತೆ ರಕ್ಷಿಸುವುದು ನಿಜಕ್ಕೂ ಸವಾಲೇ ಸರಿ. ಇದರಲ್ಲಿ ಹಸ್ತ ಶಿಲ್ಪ ಟ್ರಸ್ಟ್‌ ನ ಕಾರ್ಯಮೆಚ್ಚುವಂಥದ್ದು.

ಇದು ಹಿಂದಿನ ಕಾಲದ ಜನರ ಜೀವನದ ಭಾಗವಾಗಿದ್ದ, ಇಂದು ಕಣ್ಮರೆಯಾಗಿರುವ, ಕಣ್ಮರೆಯಾಗುತ್ತಿರುವ ವಸ್ತುಗಳನ್ನು ಕಣ್ತುಂಬಿಕೊಳ್ಳಲು, ಇಂದಿನ ಮುಂದಿನ ಪೀಳಿಗೆಗೆ ಪರಿಚಯಿಸಲು ಭೇಟಿ ನೀಡಬಹುದಾದ ಜಾಗವೆಂದರೆ ತಪ್ಪಾಗಲಾರದು.

ವಿ.ಸೂ: ಪ್ರವೇಶ ದರ 300ರೂ. ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ 50% ರಿಯಾಯಿತಿ ಇದೆ.

-ಅರುಂಧತಿ ಮಧ್ಯಸ್ಥ

ಸಾಲಿಗ್ರಾಮ

ಟಾಪ್ ನ್ಯೂಸ್

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

15-dk

Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ

Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.