UV Fusion: ಹಟ್ಟಿ ಹಬ್ಬ ಗ್ರಾಮೀಣ ಸೊಗಡಿನ ಸಂಸ್ಕೃತಿಯ ಕೊಂಡಿ


Team Udayavani, Nov 6, 2024, 6:05 PM IST

13-uv-fusion

ದೀಪಾವಳಿ ಹಬ್ಬದ ಶುಭಾಶಯಗಳು ಎಂದು ತರಹೇವಾರಿ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದನ್ನು ನಾವು ಗಮನಿಸಿರಬಹುದು. ಸಂಸ್ಕೃತಿ ಮತ್ತು ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಹೊಂದಿಕೊಂಡು ಹೋಗುತ್ತಿರುವುದು ಶ್ಲಾಘನೀಯವಾದರೂ, ನಮ್ಮ ಹಿರಿಯರ ರೀತಿಯಲ್ಲಿ ದೀಪಾವಳಿ ಹಬ್ಬವನ್ನು ತಮ್ಮ ಎಲ್ಲ ಕುಟುಂಬದ ಸದಸ್ಯರ ಜತೆಗೆ ಸಂತೋಷದಿಂದ ಆಚರಿಸುತ್ತಿರುವುದು ಬಹಳ ವಿರಳವಾಗಿದೆ. ಆದಾಗ್ಯೂ ಸಹ ಗ್ರಾಮೀಣ ಪ್ರದೇಶದಲ್ಲಿ ಈ ರೀತಿಯ ಆಚರಣೆ ಅಲ್ಪ ಸ್ವಲ್ಪ ಕಾಣುತ್ತಿರುವುದು ಸಂತಸದ ಸಂಗತಿಯಾಗಿದೆ.

ನರಕಚತುರ್ದಶಿಯ ಮುಂಚಿನ ದಿನ ಸಂಜೆ ಹಂಡೆಯನ್ನು ಸ್ವತ್ಛಗೊಳಿಸಿ ಸಿಂಗಾರ ಮಾಡಿ ನೀರು ತುಂಬಿಸಿ ಮರುದಿನ ಮುಂಜಾನೆ ಎಣ್ಣೆಯನ್ನು ಮೈಗೆ ಹಚ್ಚಿ ಸ್ನಾನ ಮಾಡುವ ಮೂಲಕ ಹಬ್ಬ ಆರಂಭವಾಗುತ್ತದೆ. ನರಕಚತುರ್ದಶಿಯಂದು ಎದ್ದು ಅಭ್ಯಂಗಸ್ನಾನ ಮಾಡಿದರೆ ಒಳಿತಾಗುತ್ತದೆ ಎಂಬುದು ನಂಬಿಕೆ. ಹೀಗೆ ಲಕ್ಷ್ಮೀಪೂಜೆ, ಬಲಿಪಾಡ್ಯಮಿ ದಿನ ಬಲೀಂದ್ರನ ಆರಾಧನೆಯೊಂದಿಗೆ ಹಬ್ಬದ ಸಂಭ್ರಮ ಎÇÉೆಲ್ಲೂ ಮನೆ ಮಾಡಿರುತ್ತದೆ. ಹೊಸಬಟ್ಟೆ ತೊಟ್ಟು, ದೀಪಗಳನ್ನಿಟ್ಟು ಈ ಹಬ್ಬ ಆಚರಿಸುವ ಖುಷಿಯೇ ಬೇರೆ.

ಬುಡಕಟ್ಟುಗಳಿಂದ ಬಂದ ಹಬ್ಬ

ಹಟ್ಟೆವ್ವನ ಮರೆತು ಹೆಂಗ ದೀಪಾವಳಿ ಆಚರಿಸಲಿ ಎನ್ನುವ ಗ್ರಾಮೀಣ ಜನರ ಜನಪದದಲ್ಲಿ ಒಂದು ಮಾತಿದೆ. ಅದರಂತೆ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಹಬ್ಬಕ್ಕೆ “ಹಟ್ಟಿ ಹಬ್ಬ’ ಎಂದೂ ಕರೆಯುತ್ತಾರೆ. ಈ ಸಂದರ್ಭದಲ್ಲಿ “ಹಟ್ಟೆವ್ವನ ಪೂಜೆ’ ಎಂಬ ವಿಶಿಷ್ಟ ಆಚರಣೆ ಇರುತ್ತದೆ. ದೀಪಾವಳಿ ಅಮಾವಾಸ್ಯೆಯ ಮರುದಿನ ಪಾಡ್ಯದಂದು(ಬಲಿಪ್ರತಿಪದ) ಹಟ್ಟಿ ಹಬ್ಬ ಅಥವಾ ಗೂಳವ್ವನ ಹಬ್ಬವೆಂದು ಆಚರಿಸುವುದನ್ನು ಅಲ್ಲಿ ಕಾಣುತ್ತೇವೆ. ಹಟ್ಟಿ ಎಂದರೆ ದನಕರುಗಳನ್ನು ಕಟ್ಟುವ ಸ್ಥಳ ಅಥವಾ ಕೊಟ್ಟಿಗೆ. ಇದನ್ನು ಕಾಯುವ ದೇವತೆಯೇ ಹಟ್ಟೆವ್ವ. ಹಟ್ಟೆವ್ವನ ಸಾಂಕೇತಿಕ ಪ್ರತಿಮೆಗಳನ್ನು ತಯಾರಿಸಲು ಸೆಗಣಿಯನ್ನು ಬಳಸುತ್ತಾರೆ.

ಹೊಟ್ಟಿ ಲೆಕ್ಕವ್ವ, ಹಟ್ಟಿ ಲೆಕ್ಕವ್ವ

ಪಟ್ಟಿ ಬೇಡಿ ಅಳತಾಳ, ಪಟ್ಟಿ ಬೇಡಿ ಅಳತಾಳ ಒಂದೂರಲ್ಲ ಎರಡೂರಲ್ಲ

ಊರೂರ ಸುತ್ತಾಳ…

ಜುಮುಕಿ ಬೇಡಿ ಅಳತಾಳ

ಕಾಲುಂಗುರ ಬೇಡಿ ಅಳತಾಳ…

ಈ ರೀತಿಯ ಹಾಡು ಹಿಂದೆ ಹೇಳುತ್ತಿದ್ದರು ಎಂದು ನಮ್ಮ ಅಜ್ಜ ಅಜ್ಜಿ ಹೇಳುತ್ತಾರೆ. ಇಲ್ಲಿ ಹೊಟ್ಟಿ ಎನ್ನುವ ಪದದ ಮೂಲ ಹಟ್ಟಿ ಎಂಬುದಾಗಿದೆ. ಹಟ್ಟಿಯ ಲಕ್ಕವ್ವ ಪಟ್ಟಿ ಬೇಡುತ್ತಾಳೆ ಎಂಬ ಅರ್ಥ ನೀಡುತ್ತದೆ. ಅಂದಿನಿಂದ ಕಾಲ ಎಷ್ಟೇ ಬದಲಾದರೂ ಆಚರಣೆಗಳು ಇಂದಿಗೂ ಬದುಕಿವೆ. ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಒಂದು ದಿನ ದನಗಳನ್ನು ಕಿಚ್ಚು ಹಾಯಿಸಿ ಮಾರನೇ ದಿನ ಹೋರಿ ಬೆದರಿಸುವ ಸ್ಫರ್ಧೆಗಳಿರುತ್ತವೆ. ಈ ಎಲ್ಲವನ್ನೂ ಅವಲೋಕಿಸಿದಾಗ ಇದೊಂದು ಪುರಾತನ ಬುಡಕಟ್ಟುಗಳಿಂದ ಬಂದಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಹಟ್ಟಿ ಹಬ್ಬದ ಹಿನ್ನೆಲೆ: ಈ ಹಬ್ಬಕ್ಕೂ ಮಹಾಭಾರತದಲ್ಲಿ ಜರುಗಿದ ಘಟನೆಗೂ ಹೋಲಿಕೆಯಿದೆ. ವಿರಾಟರಾಜನ ಆಸ್ಥಾನದಲ್ಲಿ ಅಜ್ಞಾತವಾಸ ಕಳೆಯುತ್ತಿದ್ದ ಪಾಂಡವರು ವಿರಾಟನ ಗೋವುಗಳನ್ನು ಕೌರವರಿಂದ ಬಿಡಿಸಿಕೊಂಡು ಬಂದಿರುವ ನೆನಪಿನಲ್ಲಿ ಅಂದರೆ ಪಾಂಡವರು ಇದೇ ದಿನ ತಮ್ಮ ಅಜ್ಞಾತವಾಸ ಮುಗಿಸಿ ತಮ್ಮ ಗೋವುಗಳೊಂದಿಗೆ ಪುರಪ್ರವೇಶ ಮಾಡಿದರೆಂಬ ನಂಬಿಕೆಯಿಂದಾಗಿ ಈ ದಿನ ಹಟ್ಟೆವ್ವ ಇಡುವ ಸಂಪ್ರದಾಯವಿದೆ.

ಕುರುಬರಿಗೆ, ಗೊಲ್ಲರಿಗೆ ವಿಶೇಷ ಹಬ್ಬ: ದೀಪಾವಳಿ ಇದರ ಮೂಲ ಹೆಸರು ಮತ್ತು ನಮ್ಮ ಪ್ರಾದೇಶಿಕವಾಗಿ ಕರೆಯುವ ಹೆಸರು ಹಟ್ಟಿ ಹಬ್ಬ. ಪುರಾತನ ಕಾಲದಿಂದ ಪಶುಪಾಲಕರಾದ ಹಟ್ಟಿಕಾರರಿಂದ ಈ ಹಬ್ಬ ಬಂದಿರುವುದರಿಂದ ಈ ಹೆಸರು ಬಂದಿದೆ. ಹಟ್ಟಿ ಎಂದರೆ ಕುರಿಯ ದೊಡ್ಡಿ ಅಂದರೆ ಕುರಿ ಮತ್ತು ಇತರ ಪಶುಪಾಲನೆ ಮಾಡುತ್ತಾ ಒಂದು ಕಡೆ ನಿಂತರೆ ಅದೇ ಹಟ್ಟಿ. ನಾಗರೀಕತೆಯ ಮೊದಲ ಹಂತವೇ ಈ ಹಟ್ಟಿಗಳು.

ಹಟ್ಟಿಗಳೇ ಮುಂದೆ ಗ್ರಾಮಗಳಾಗಿ ಗ್ರಾಮಗಳು ಮುಂದುವರೆದು ನಗರಗಳಾಗಿವೆ. ಹಟ್ಟಿಗಳ ಗುಂಪಿಗೆ ನಾಯಕನಾದವನೇ ಮುಂದೆ ನಾಯಕ, ಗೌಡ, ರಾಜ, ಹಲವು ಹಟ್ಟಿಗಳ ನಾಯಕ ಮಹಾರಾಜ ಈ ರೀತಿಯಾಗಿ ಸಂಸ್ಕೃತಿ ವಿಕಸನಗೊಳ್ಳುತ್ತಾ ಹೋಗಿದೆ. ಪ್ರಾಚೀನ ನಾಗರಿಕತೆಯ ನಾಯಕರೆಲ್ಲರೂ ಪಶುಪಾಲಕರೇ ಆಗಿದ್ದು ಇಲ್ಲಿ ಕೃಷ್ಣನನ್ನು ಉದಾಹರಿಸಬಹುದು. ಈ ರೀತಿಯ ಆಚರಣೆಗಳಲ್ಲಿ ಪಶುಪಾಲಕರಾದ ಕುರುಬರು ಗೊಲ್ಲರದು ವಿಶಿಷ್ಟ ಆಚರಣೆಗಳಿವೆ ಎನ್ನುವ ಪ್ರತೀತಿ ಇದೆ.

ಹಟ್ಟಿ ಹಬ್ಬದಾಚರಣೆ ಹೇಗೆ? : ಈ ಕಾರ್ಯಕ್ಕಾಗಿ ಹಟ್ಟಿಯನ್ನು ಸ್ವಚ್ಚಗೊಳಿಸುವ ಜತೆಗೆ ದಿನವಿಡೀ ತಮ್ಮ ದನಕರುಗಳು ಹಾಕಿದ ಸಗಣಿಯನ್ನು ತಿಪ್ಪೆಗುಂಡಿಗೆ ಹಾಕದೇ ಹಟ್ಟಿ ಲೆಕ್ಕವ್ವ ಮೂರ್ತಿ ಹಾಗೂ ಪಾಂಡವರ ಮೂರ್ತಿಗಳನ್ನು ಮಾಡಲು ಬೇಕಾಗುವ ಸೆಗಣಿಯನ್ನು ಮಡಿಯಿಂದ ಒಂದೆಡೆ ತಗೆದಿಟ್ಟಿರುತ್ತಾರೆ. ಈ ಸೆಗಣಿಯಿಂದ ಎರಡು ದೊಡ್ಡ ಹಾಗೂ 40ರಿಂದ 50 ಸಣ್ಣ ಹಟ್ಟೆವ್ವಗಳನ್ನು ತಯಾರಿಸುತ್ತಾರೆ. ಸಣ್ಣ ಸಣ್ಣ “ಹಟ್ಟೆವ್ವ’ಗಳನ್ನು ವರ್ತುಲಾಕಾರದಲ್ಲಿ ಅಥವಾ ಚೌಕಾಕಾರದಲ್ಲಿ ಎರಡು ಸಾಲುಗಳಲ್ಲಿ ಇಡುತ್ತಾರೆ. ನಡುವೆ ದಾರಿಯ ರೀತಿಯಲ್ಲಿ ಜಾಗ ಬಿಡುತ್ತಾರೆ. ವರ್ತುಲದ ನಡುವೆ ದೊಡ್ಡ ಹಟ್ಟೆವ್ವಗಳನ್ನು ಇಡುತ್ತಾರೆ. ದೊಡ್ಡ ಹಟ್ಟೆವ್ವನನ್ನು “ಹಿರೇ ಹಟ್ಟೆವ್ವ’ ಎಂದು ಕರೆಯುತ್ತಾರೆ. ಹಿರೇ ಹಟ್ಟೆವ್ವನ ನೆತ್ತಿಯಲ್ಲಿ ಅರಳಿನ ಜೋಳದ ತೆನೆ, ಉತ್ತರಾಣಿ ಕಡ್ಡಿ ಹಾಗೂ ಮೂಗಿಗೆ ಮೂಗುತಿಯಾಗಿ ಮೆಣಸಿನಕಾಯಿ ಮತ್ತು ಮಾನಿ ಹುಲ್ಲಿನಲ್ಲಿ ಕಡ್ಡಿಗಳಿಂದ ಹೆಣೆದು ತಯಾರಿಸಿದ ನಾಗರ ಹೆಡೆಯನ್ನು ಚುಚ್ಚಿ ಇರಿಸುತ್ತಾರೆ.ಅದೇ ರೀತಿ ಈ ಹಟ್ಟೆವ್ವಗಳನ್ನು ಅಡುಗೆಮನೆಯ ಬಾಗಿಲಿಗೆ, ದೇವರಮನೆ ಬಾಗಿಲಿಗೆ, ಹಿತ್ತಲ ಬಾಗಿಲಿಗೆ ಮತ್ತು “ಮುಚ್ಚಿ’ ಬಾಗಿಲಿಗೆ (ತ್ರಿಕೋನಾಕಾರದಲ್ಲಿ) ಮೂರು ಮೂರರಂತೆ ಇರಿಸುತ್ತಾರೆ. ಹೀಗೆ ಸಗಣಿಯಿಂದ ಹಟ್ಟೆವ್ವನನ್ನು ಮತ್ತು ಪಾಂಡವರನ್ನು ಮಾಡಿ, ಹಟ್ಟೆವ್ವನನ್ನು ಇಟ್ಟಿರುವ ಸ್ಥಳದವರೆಗೂ ಆಕಳ ಹೆಜ್ಜೆಗಳನ್ನು ತಮ್ಮ ಕೈ ಮುಟಗೀ ಮಾಡಿ ಅದಕ್ಕೆ ಕೆಮ್ಮಣ್ಣು ಮತ್ತು ಬಿಳಿ ಸುಣ್ಣವನ್ನು ಬಳಸಿ ಹೆಜ್ಜೆ ಮೂಡಿಸುತ್ತಾರೆ.

ದೇವರ ಜಗಲಿ, ಮುಂದಿನ ಹಿಂದಿನ ಬಾಗಿಲು ಕುಂಟಿ, ರಂಟಿ, ಚಕ್ಕಡಿ ಮೇಲೆ,ಹಗೇವು, ಒಲೆ ಮೇಲೆ, ಬಿಸಿಕಲ್ಲು, ಒಳ್ಳು(ಒರಳು)ಮೇಲೆ ಹಾಗೂ ಹಿತ್ತಲದಾಗ ಕುಂಬಳ ಬಳ್ಳಿ ಹತ್ತಿರ ಹಟ್ಟೆವ್ವನನ್ನು ಅಂದರೆ ಲಕ್ಷ್ಮೀ ಮೂರ್ತಿಮಾಡಿ ಇಡುತ್ತಾರೆ. ಅವುಗಳಿಗೆ ಉತ್ತರಾಣಿ ಕಡ್ಡಿ, ಹೊನ್ನಾರಿಕೆ ಹೂವು, ಪುಂಡಿ ಹೂ, ಚೆಂಡು ಹೂ, ಗುರೆಳ್ಳು ಹೂ, ಕೋಲಾಣಿ ಹಾಗೂ ಇನ್ನಿತರ ಹಲವು ವಿಧದ ಹೂವುಗಳಿಂದ ಅಲಂಕರಿಸಿ, ಶೃಂಗರಿಸಿ ಎಲ್ಲ ಹಟ್ಟೆವ್ವಗಳಿಗೂ ಕುಂಕುಮ, ಮೊಸರು, ಹೂವುಗಳನ್ನು ಮುಡಿಸಿ ಪೂಜಿಸುತ್ತಾರೆ.

ಅಂದು ಶ್ಯಾವಿಗೆ ಹಾಗೂ ಅನ್ನವನ್ನು ಮಾಡಿ ಎಡೆ ಹಿಡಿಯುವರು. ಈ ದಿನಗಳಲ್ಲಿ ಶ್ಯಾವಿಗೆ ಊಟ ಮಾಡುವರು. ಸಕ್ಕರೆ ಶ್ಯಾವಿಗೆ ಬೆಲ್ಲದ ಶ್ಯಾವಿಗೆ ಹಾಲು ಹಾಕಿ ಊಟಕ್ಕೆ ಹೆಚ್ಚು ಬಳಕೆ ಮಾಡುವರು. ಇದನ್ನು ಹಟ್ಟಿ ಹಬ್ಬದ ವಿಶೇಷ ಸಿಹಿ ಅಡುಗೆ ಎಂದು ಪರಿಗಣಿಸಲಾಗುತ್ತದೆ ಅದೆ ರೀತಿ ಹೋಳಿಗೆ, ಅನ್ನ, ಸಾರು, ತುಪ್ಪ ಇತ್ಯಾದಿಗಳನ್ನು ಅರ್ಪಿಸಿ ತೆಂಗಿನಕಾಯಿ ಒಡೆದು ಹಿರೇ ಹಟ್ಟೆವ್ವನ ಮುಂದೆ ಇಡುತ್ತಾರೆ.

ಸಂಜೆಯ ವೇಳೆಗೆ ಈ ಹಟ್ಟೆವ್ವಗಳನ್ನು ಮನೆಯ ಮಾಳಿಗೆ ಕುಂಬಿಯ ಮೇಲೆ ಹಿತ್ತಲ ಬಾಗಿಲ ಮತ್ತು “ಮುಚ್ಚಿ’ ಬಾಗಿಲ ಮೇಲೆ ಸಾಲಾಗಿ ಇರಿಸುತ್ತಾರೆ. ಹಿರೇ ಹಟ್ಟೆವ್ವಗಳನ್ನು ಬಾಗಿಲ ಮೇಲೆ, ಸಣ್ಣ ಹಟ್ಟೆವ್ವಗಳ ನಡುವೆ ಇರಿಸುತ್ತಾರೆ. ಮತ್ತೂಮ್ಮೆ ಹೂವುಗಳಿಂದ ಅಲಂಕರಿಸುತ್ತಾರೆ.

ಮಹಿಳೆಯರಿಂದ ಪೂಜೆ: ನಮ್ಮ ಗ್ರಾಮೀಣ ಭಾಗದ ಜನರು ವಿದೇಶಿ ಸಂಸ್ಕೃತಿ ಆಕ್ರಮಣದ ನಡುವೆಯೂ ಹಟ್ಟೆವ್ವನ ಪೂಜೆಯನ್ನು ಪ್ರತಿ ವರ್ಷವೂ ಆಚರಿಸುತ್ತ ಬಂದಿ¨ªಾರೆ. ಈ ಹಟ್ಟೆವ್ವನ ಪೂಜೆ ಮಾಡುವವರು ಮಹಿಳೆಯರೇ. ಹಳ್ಳಿಯ ಮನೆ ಮನೆಯ ಹಟ್ಟಿ ಕೊಟ್ಟಿಗೆಗಳಲ್ಲಿ ಹಟ್ಟೆವ್ವ ಪೂಜೆಗೊಂಡು ಮನೆ ಮಾಳಿಗೆ ಶೃಂಗಾರಗೊಳ್ಳುತ್ತಿರುವುದು ಕೇವಲ ಅಂಧಾನುಕರಣೆ ಎಂದು ಮೂಗು ಮುರಿಯುವವರು ಇಂದು ಅನೇಕರಿರಬಹುದು. ಆದರೆ ದನಕರುಗಳ ಸೆಗಣಿಯ ಮಹತ್ವವನ್ನು ಸಾರುವ ಮತ್ತು ಸೆಗಣಿಯ ಗೊಬ್ಬರದ ಶ್ರೇಷ್ಠತೆಯನ್ನು ಗೌರವಿಸುವ ರೀತಿಯಲ್ಲಿ ಸೆಗಣಿಯ ಹಟ್ಟೆವ್ವ ದೇವತೆಯಾಗಿ ಪೂಜೆಗೊಳ್ಳುತ್ತಿದ್ದಾಳೆ ಎನ್ನುವುದು ನಮ್ಮ ಕೃಷಿ ಸಂಸ್ಕೃತಿಯ ಹಿರಿಮೆಯ ಸಂಕೇತ. ಇದೆ ಸಂದರ್ಭದಲ್ಲಿ ಹಟ್ಟಿ ಹಬ್ಬದ ಅಂಗವಾಗಿ ನಮ್ಮ ಲಕ್ಷೆ¾àಶ್ವರ ತಾಲ್ಲೂಕಿನ ರಾಮಗೇರಿ, ಶಿಗ್ಲಿ, ಗೊಜನೂರ, ಫ‌ು ಬಡ್ನಿ ಹಾಗೂ ಇನ್ನಿತರ ಊರಗಳ ಮನೆಯಲ್ಲಿ ಹಟ್ಟೆವ್ವನ ಪೂಜೆ ಸಲ್ಲಿಸಿ, ಮನೆಯವರೆಲ್ಲರೂ ಭಾವಚಿತ್ರ ತೆಗೆಯಿಸುವ ಮೂಲಕ ಯಶಸ್ವಿಯಾಗಿ ಶ್ರದ್ಧೆಯಿಂದ ಆಚರಿಸುವ ವಾಡಿಕೆಯಿದೆ.

ಒಟ್ಟಾರೆಯಾಗಿ ಕಾಲ ಎಷ್ಟೇ ಬದಲಾದರೂ ಆಚರಣೆಗಳು ಇಂದಿಗೂ ಬದುಕಿವೆ. ಮಹಾನಗರಗಳಲ್ಲಿ ಈ ಪದ್ಧತಿ ಮರೆತಿರಬಹುದು ಆದರೆ ಹಳ್ಳಿಗಳಲ್ಲಿ ಈ ಪದ್ಧತಿ ಈಗಲೂ ರೂಢಿಯಲ್ಲಿದೆ. ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಈ ದಿನ ಭೂ ತಾಯಿಗೆ ನಮಿಸಿ, ಸುಂದರ ಸುಖವಾಗಿ ಜೀವನ ನಡೆಸಲು ಆ ದೇವರಲ್ಲಿ ಪ್ರಾರ್ಥಿಸಲಾಗುತ್ತದೆ. ನಮ್ಮೊಡನೆ ನಮಗೆ ಆಧಾರಸ್ಥಂಭವಾಗಿರುವ ಗೋವುಗಳ ರಕ್ಷಣೆಯ ಮಾಡುವುದು. ಇವುಗಳನ್ನು ಹಬ್ಬಗಳ ಆಚರಣೆಯ ಮೂಲಕ ನಮ್ಮ ಸಂಪ್ರದಾಯವನ್ನು ಪಾಲಿಸಿಕೊಂಡು ಬರುವ ಮೂಲಕ ಹಬ್ಬಗಳು ಇಂದಿಗೂ ಮನೆಮನೆಗಳಲ್ಲಿ ಜರುಗಿ, ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವುದು ಸಂತಸದ ವಿಷಯವೇ ಸರಿ.

-ಬಸವರಾಜ ಯರಗುಪ್ಪಿ

ಗದಗ

ಟಾಪ್ ನ್ಯೂಸ್

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.