Health: ಕೋಟಿಗೂ ಮಿಗಿಲು ಆರೋಗ್ಯ ಸಂಪತ್ತು!
Team Udayavani, Dec 14, 2024, 3:38 PM IST
ಒತ್ತಡದ ಬದುಕಿನ ಶೈಲಿ, ಕಳಪೆ ಹಾಗೂ ಆಹಾರ ಪದಾರ್ಥಗಳಲ್ಲಿ ನಿರ್ಜೀವ ಗುಣಮಟ್ಟದ ವಸ್ತುಗಳು ಸಿಗುವ ಈ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು ಅಂದರೆ ತಪ್ಪಿಲ್ಲ ?
ದೇಹಕ್ಕೆ ಬೇಕಾಗುವ ಸರಿ ಪ್ರಮಾಣದ ಕ್ಯಾಲರಿಗಳು, ಉತ್ತಮ ಆರೋಗ್ಯಕ್ಕಾಗಿ ಸಮತೋಲನ ಮತ್ತು ಪೌಷ್ಟಿಕ ಆಹಾರವು ದೇಹಕ್ಕೆ ಮುಖ್ಯವೇ? ಆಹಾರಗಳ ಸೇವನೆಯ ಪದ್ಧತಿಯಲ್ಲಿ ಸಮತೋಲನವಾಗಿದ್ದರೆ ಆರೋಗ್ಯಕರ ಜೀವನ ಸಾಗಿಸಬಹುದಾಗಿದೆ. ಸಮತೋಲಿತ ಆಹಾರ ಸೇವನೆಯಿಂದ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಪೋಷಕಾಂಶಗಳನ್ನು ಪೂರೈಸುತ್ತದೆ. ಸತ್ವಭರಿತ ಮತ್ತು ಗುಣಮಟ್ಟದ ಆಹಾರದ ಸೇವನೆಯಿಂದ ಮನುಷ್ಯನ ಆರೋಗ್ಯದ ಗುಣಮಟ್ಟವು ಒಳ್ಳೆಯ ಸ್ಥಿತಿಯಲ್ಲಿ ಇರಲು ಕಾರಣವಾಗುತ್ತದೆ. ಸಮತೋಲಿತ ಆಹಾರವು ನಮ್ಮ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳನ್ನು ಪೂರೈಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಸಮತೋಲಿತ ಆಹಾರವನ್ನು ಸೇವಿಸುವುದರಿಂದ ಮಾನಸಿಕ ಸ್ಥಿತಿ ಮತ್ತು ಮನಸ್ಸಿನ ಆರೋಗ್ಯವು ಸಹಜ ಸ್ಥಿತಿಯಲ್ಲಿ ಇರಲು ಸಹಾಯ ಮಾಡುತ್ತದೆ. ಆರೋಗ್ಯವಾಗಿರಲು ಸತ್ವಯುಕ್ತ ಆರೋಗ್ಯಕರವಾದ ಆಹಾರವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸಮತೋಲಿತ ಆಹಾರ ಸೇವನೆಯಿಂದ ಆತಂಕ ಮತ್ತು ಖನ್ನತೆಯು ಕೂಡ ದೂರವಾಗುತ್ತದೆ. ಮೆದುಳಿನ ಕಾರ್ಯನಿರ್ವಹಿಸಲು ಕೂಡ ಸಮತೋಲಿತ ಆಹಾರ ಅವಶ್ಯಕತೆ ಇರುವುದು. ಜೀವಕೋಶದ ಬೆಳವಣಿಗೆಗೆ ಸಹಾಯ ಮಾಡಲು ಉಪಯುಕ್ತವಾಗಿದೆ. ಜೀರ್ಣಕಾರಿ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
ಅಧ್ಯಯನಗಳ ಪ್ರಕಾರ ಸಮತೋಲನ ಆಹಾರಗಳ ಸೇವನೆಯಿಂದ ಮಧುಮೇಹ, ಪಾರ್ಶ್ವವಾಯು ಮತ್ತು ಕ್ಯಾನ್ಸರ್ ರೋಗಗಳಂತಹ ದೊಡ್ಡ ರೋಗಗಳನ್ನು ನಿವಾರಿಸಲು ಸಹಕಾರಿಯಾಗಿದೆ. ಫೈಬರ್, ಆರೋಗ್ಯಕರ ಕೊಬ್ಬುಗಳು, ಖನಿಜಗಳು, ಕಾರ್ಬೋಹೈಡ್ರೇಟ್ ಗಳು, ಪ್ರೋಟೀನ್, ವಿಟಮಿನ್ ಎ, ಸಿ, ಇ , ವಿಟಮಿನ್ ಡಿ, ಮತ್ತು ಕ್ಯಾಲ್ಸಿಯಂ, ಸೇವನೆಯಿಂದ ಸಮತೋಲಿತ ಆಹಾರವನ್ನು ಪೋಷಿಸುವಲ್ಲಿ ಸಹಾಯ ಮಾಡುತ್ತದೆ.
ಹಾಲು, ಮೊಸರು, ಅಕ್ಕಿ, ಧಾನ್ಯಗಳು, ಸೇಬು, ಬಾಳೆ ಹಣ್ಣುಗಳು, ಕಿತ್ತಳೆ, ಕಲ್ಲಂಗಡಿ ಹಣ್ಣುಗಳು ಮತ್ತು ಹಸಿರು ತರಕಾರಿಗಳು, ಬಾದಾಮಿ, ಕಡಲೆಕಾಯಿ, ಸೋಯಾಬಿನ್, ಕುಂಬಳಕಾಯಿ ಬೀಜ, ಆಲೂಗೆಡ್ಡೆ, ಮೊಟ್ಟೆ, ಆಲೀವ್ ಎಣ್ಣೆ, ಮೀನು, ಡೈರಿ ಪದಾರ್ಥಗಳು ಮತ್ತು ದ್ವಿದಳ ಧಾನ್ಯಗಳಲ್ಲಿ ಪೋಷಕಾಂಶಗಳು ಇರುವುದರಿಂದ ದೇಹವು ಸಮತೋಲನವಾಗಲು ಕಾಪಾಡುತ್ತದೆ. ಆರೋಗ್ಯಕ್ಕೆ ಅಪಾಯಕಾರಿಯಾದ ಒಂದಷ್ಟು ಆಹಾರಗಳ ಸೇವನೆಯಿಂದ ದೂರ ಇರುವುದು ಆರೋಗ್ಯಕರ ದೃಷ್ಟಿಯಲ್ಲಿ ಒಳಿತು.
ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಅನಾರೋಗ್ಯಕರ ಕೊಬ್ಬುಗಳು, ಸಕ್ಕರೆ ಮತ್ತು ಸಂರಕ್ಷಕಗಳು ಅಧಿಕವಾಗಿರುವುದರಿಂದ ಇವುಗಳು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲ್ಟ್ರಾ ಸಂಸ್ಕರಿಸಿದ ಪದಾರ್ಥಗಳು, ತಂಪು ಪಾನೀಯಗಳು, ತ್ವರಿತ ಆಹಾರಗಳು ಹೆಚ್ಚಾದ ಸೇವನೆ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಪದಾರ್ಥಗಳು ಅಂದರೆ ಬ್ರೆಡ್ ಮತ್ತು ಪೇಸ್ಟ್ರಿಗಳು, ಕರಿದ ಆಹಾರಗಳಲ್ಲಿ ಟ್ರಾನ್ಸ್ ಕೊಬ್ಬುಗಳು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಇರುವುದರಿಂದ ಆರೋಗ್ಯಕ್ಕೆ ಅಪಾಯಕಾರಿ, ಉಪ್ಪು ಮತ್ತು ಸಕ್ಕರೆ ಸೇವನೆಯ ಮಿತಿಯಲ್ಲಿ ಗಮನ ಹರಿಸಿ ಆರೋಗ್ಯದ ಕಡೆಗೆ ಗಮನ ಹರಿಸಿ. ಉಸಿರು ತುಂಬಿದ ಬಲೂನು.
ವಾಣಿ ಮೈಸೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.