Hostel life: ಹಾಸ್ಟೆಲ್‌ ಜೀವನ ಮಧುರ ನೆನಪುಗಳ ಸಮ್ಮಿಲನ


Team Udayavani, May 14, 2024, 6:20 PM IST

8-hostel-life

ಅ ಬ್ಬಬ್ಟಾ! ಆ ದಿನ ಮರೆಯಲಾಗದ ದಿನ, ತಂದೆ – ತಾಯಿಯನ್ನು ತಬ್ಬಿಟ್ಟು ಕಣ್ಣಂಚಿನಲ್ಲಿ ನೀರು ತುಂಬಿಕೊಂಡ ದಿನ, ಅಪ್ಪ ,ಅಮ್ಮ, ಮನೆ ಎಲ್ಲಾ ಬಿಟ್ಟು ಇನ್ನೊಂದು ಸುಂದರ ಕುಟುಂಬವನ್ನ ಸೇರೋದು, ಆ ಸುಂದರ ಕುಟುಂಬವೇ ಹಾಸ್ಟೆಲ್‌ ಕಂಡ್ರಿ, ಮನೆಯೇ ಪ್ರಪಂಚ ಅಂತ ಬೆಳೆದ ನಮಗೆ ಹಾಸ್ಟೆಲ್‌ ಅನ್ನೋದು ಒಂದು ಹೊಸದಾದ ಜಗತ್ತು.

ಬಂದ ಮೊದಲ ದಿನ ಯಾರು ಪರಿಚಯವಿಲ್ಲವೇ, ಎಲ್ಲರೂ ಅಪರಿಚಿತರು ನಿಜವಾಗಿಯೂ ಆಗ ನೆನಪಾಗೋದು ಅಮ್ಮನ ಕೈ ರುಚಿ ಮತ್ತೆ ಅಪ್ಪನ ಕಾಳಜಿ. ಹಾಸ್ಟೆಲಿನ ಕೆಲವು ನಿಯಮ ಗೊತ್ತಿಲ್ಲದೇ ಮೊದಲ ದಿನವೇ ಮಾಡಿದ ಅನೇಕ ತಪ್ಪುಗಳು, ಈ ನಿಯಮಗಳಿಗೆ ಹೊಂದಿಕೊಂಡು ಹೋದರೆ ನಿಜವಾಗಿಯೂ ಹಾಸ್ಟೆಲ್‌ ಒಂದು ಅದ್ಬುತ ಜೀವನ. ನನ್ನ ಜೀವನದ ಪಠ್ಯದಲ್ಲಿ ಹಾಸ್ಟೆಲ್‌ ಅನುಭವ ಒಂದು ಹೊಸ ಅಧ್ಯಯವೇ ಸರಿ.

ಸೀನಿಯರ್‌ ನೋಡಿದ್ರೆ ಭಯ ಆದ್ರೆ ನಿಜವಾಗಿಯೂ ಕಳೆದುಕೊಂಡ ಅಪ್ಪ ಅಮ್ಮನ ಪ್ರೀತಿಯನ್ನ ತುಂಬೋದು ಅವರೇ. ಆದ್ರೆ ಏನು ಮಾಡೋದು ಇದೆಲ್ಲದರ ನಡುವೆ ಯಾರೋ ಒಬ್ರು ಸೀನಿಯರ್‌ ಮೇಲೆ ಕ್ರಶ್‌ ಆಗತ್ತೆ, ಅವ್ರು ಕೂಡ ಹುಡುಗಿನೇ ಆದ್ರೂ ನೀವು ತುಂಬಾ ಚೆನ್ನಾಗಿದೀರಾ ಅಂತ ಹೇಳ್ಳೋಕೆ ಒಂದು ತಿಂಗಳು ಬೇಕಾಗತ್ತೆ.

ಅವರ ಜತೆ ಹೊಂದಿಕೊಂಡ ಮೇಲೆ ಪ್ರತಿಯೊಂದು ಕ್ಷಣಗಳು ಬದುಕಿನ ಸವಿ ಸವಿ ನೆನಪುಗಳೇ, ಅವರ ಜತೆ ಮುಗಿಯದ ಮಾತುಗಳು, ಹಾಸ್ಯ ಪಟಾಕಿಗಳು, ಎಕ್ಸಾಂ ಎದುರಿಗೆ ಬಂದರೂ ತೆರೆಯದ ಪುಸ್ತಕಗಳು, ಗಂಟೆ ಏಳಾದರೂ ಹೊಡೆಯದ ಅಲಾರಾಂಗಳು.

ಈ ಹೊಸ ಅಧ್ಯಯದಲ್ಲಿ ಮೂಡಿದ ನೋವು ನಲಿವಿನ ಮಿಶ್ರಣ, ನಮ್ಮದೇ ಗ್ಯಾಂಗ್‌ಳು, ಸರ್ಪ್ರೈಸ್‌ ಬರ್ಥ್ಡ್‌ಗಳು, ಕ್ಯಾಂಡಲ್‌ ಅಲ್ಲಿ ಮಾಡಿದ ಮ್ಯಾಗಿ, ಕದ್ದಿಟ್ಟುಕೊಂಡ ಕ್ಯಾರೆಟ್, ಮುಗಿಯದ ಸೆಲ್ಫಿಗಳು, ವಾರ್ಡ್‌ನ್‌ ಬೈಗುಳಗಳು, ಇಷ್ಟ ಇಲ್ಲದೇ ಇದ್ದರೂ ಮಾಡಿದ ಊಟಗಳು, ಹುಷಾರಿಲ್ಲದೆ ಇ‌ದ್ದಾಗ ರೂಮಿನ ಜತೆಗಾರರು ಮಾಡಿದ ಆರೈಕೆಗಳು, ಮನೆಯ ನೆನಪನ್ನು ತಂದೋಡ್ಡುತ್ತದೆ.

ಅಷ್ಟೇ ಅಲ್ಲದೆ, ಹಾಸ್ಟೆಲ್‌ ನಲ್ಲಿ ಆಚರಿಸುವ ಕೆಲವೊಂದು ಹಬ್ಬಗಳು, ಅಲ್ಲಿ ನಾವು ಸೇರಿಕೊಂಡು ಮಾಡಿದ ಕಿತಾಪತಿಗಳು, ತರ್ಲೆಯಿಂದ ಮಾಡಿದ ಆಯೋಜನೆಗಳು ಎಲ್ಲವೂ ಒಂದು ರೀತಿಯ ಅವಿಸ್ಮರಣೀಯ ನೆನಪುಗಳು, ಸಿಹಿತಿಂಡಿ ಯನ್ನು ಹಂಚಿ ತಿಂದು ಕೊಂಡು ಖುಷಿಯಿಂದ ಕಳೆಯುತ್ತಿದ್ದ ದಿನ. ಮನೆಯೆಂಬ ಒಂದೇ ಸೂರಿನಡಿ ಎಲ್ಲಾ ಪಾತ್ರಗಳು ಮನಸ್ಸಿಗೆ ಸನಿಹ .

ಇದು ಹಾಸ್ಟೆಲ್‌ ಅಂತ ತಿಳಿದಿದ್ದರೂ ನಾವೆಲ್ಲರೂ ಒಂದೇ, ಎಲ್ಲರೂ ನಮ್ಮವರೇ ಎನ್ನುವ ಅರಿವು. ಕಷ್ಟನೋ, ಸುಖಾನೋ ದಿನ ಬೆಳಗಾದರೆ ಒಬ್ಬರನ್ನು ಒಬ್ಬರು ನೋಡಿಕೊಂಡು ದಿನನಿತ್ಯದ ಕೆಲಸದಲ್ಲಿ ತೊಡಗಿಕೊಂಡು ತಾನು ಕಂಡಂತಹ ಹಾಗೂ ಮನೆಯವರು ಹೆಗಲೇರಿಸಿ ಕೊಟ್ಟಂತಹ ಕನಸಿಗೆ ಪ್ರತಿದಿನವೂ ಹಿಡಿಯಷ್ಟು ಪ್ರಯತ್ನ ಹಾಕಿ ಜೀವನದ ಗುರಿಯ ಮೆರೆಯನ್ನು ದಾಟುವ ತವಕ ಒಂದೆಡೆಯಾದರೆ ತನ್ನದಲ್ಲದ ಊರಿನಲ್ಲಿ ತನ್ನತನವನ್ನು ಕಾಪಾಡಿಕೊಂಡು ತನ್ನವರಿಗಾಗಿ ನಿತ್ಯವೂ ಹಂಬಲಿಸಿದೆ ಮನ.

ಹಾಗೆಂದ ಮಾತ್ರಕ್ಕೆ ಹಾಸ್ಟೆಲ್‌ ಜೀವನವೆಂದರೆ ಕೇವಲ ಭಾವನೆಯನ್ನ ವ್ಯಕ್ತಪಡಿಸುವುದಲ್ಲ ಬದಲಾಗಿ ಇಂಚಿಂಚು ಭಾವನೆಗಳನ್ನು ನಾಲ್ಕು ಗೋಡೆಯ ಮಧ್ಯದಲ್ಲಿ ಇದ್ದುಕೊಂಡು ಯಾರಿಗೂ ಗೊತ್ತಾಗದ ಹಾಗೇ ಅನುಭವಿಸುವುದು.

ಅಷ್ಟೇ ಅಲ್ಲದೇ ಹಾಸ್ಟೆಲ್‌ ಜೀವನ ಎಂದರೆ ಅಲ್ಲಿ ಬರುವುದು ಹೋಗುವುದು ಇದ್ದಿದ್ದೆ. ಏನು ಮಾಡುವುದು ಜೀವನವೆಂಬುವುದು ಮತ್ತು ಸಮಯವೆಂಬುವುದು ಯಾರಿಗಾಗಿಯೂ ಕಾಯುವುದಿಲ್ಲ.

ಜೀವನ ಎಂಬುದು ಒಂದು ಬಸ್‌ ಪ್ರಯಾಣ ಇದ್ದಂತೆ ನಾವು ತಲುಪುವ ನಿಲ್ದಾಣ ಬಂದಂತೆ ಯಾರಿಗೂ ಕಾಯದೇ ಇಳಿದು ಹೋಗುತ್ತಾ ಇರಬೇಕು ಹಾಗೆಯೇ ಹಾಸ್ಟೆಲ್‌ ಜೀವನ ಯಾರನ್ನೂ ಎಷ್ಟು ಹಚ್ಚಿಕೊಂಡಿದ್ದರೂ, ಮುದ್ದು ಮಾಡಿ ನೋಡಿಕೊಂಡಿದ್ದರು ನಾವು ಹೋಗುವ ಸಮಯ ಬಂದಾಗ ಎದೆಯಲ್ಲಿ ನೋವಿನ ಬಾರವನ್ನು ಹೊತ್ತುಕೊಂಡು ಕಣ್ಣಲ್ಲಿ ನೀರನ್ನು ತುಂಬಿಕೊಂಡು ಭಾರವಾದ ಮನಸ್ಸಿನಿಂದ ಹೋಗಲೇಬೇಕು.

ಏಕೆಂದರೆ, ಅಗಲಿಕೆ ಎಂಬುದು ಅನಿವಾರ್ಯ ಹಾಗಾಗಿ ಯಾವ ವಿಶ್ವವಿದ್ಯಾನಿಲಯವು ಕಲಿಸಿಕೊಡದಂತಹ ಪಾಠ ಹಾಸ್ಟೆಲ್‌ ಕಲಿಸಿಕೊಡುತ್ತದೆ ಹೆಮ್ಮೆಯಿಂದ ಹೇಳುತ್ತೇನೆ ಗರ್ವದಿಂದ ಬೀಗುತ್ತೇನೆ.ಮತ್ತೂಮ್ಮೆ ಈ ಹಾಸ್ಟೆಲ್‌ ಜೀವನದ ಪಯಣಕ್ಕೆ ನಾನೆಂದೂ ಚಿರಋಣಿ.

-ನಾಗಮಣಿ ಈ.

 ಎಂಜಿಎಂ ಕಾಲೇಜು ಉಡುಪಿ

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.