UV Fusion: ಈ ನಿಸ್ವಾರ್ಥ ಪ್ರೀತಿಗೆ ಸೋಲದಿರಲು ಹೇಗೆ ಸಾಧ್ಯ ?
Team Udayavani, Sep 19, 2023, 4:00 PM IST
ಉದರದಲ್ಲಿರುವ ಮಗು ಹೆಣ್ಣೋ ಅಥವಾ ಗಂಡೋ ತಿಳಿದಿಲ್ಲ,ಹುಟ್ಟುವ ಮಗು ಕಪ್ಪಾಗಿರುವುದೋ ಅಥವಾ ಬೆಳ್ಳಗಿರುವುದೋ ಅದು ಕೂಡ ತಿಳಿದಿಲ್ಲ.ಆದರೆ ಅವಳ ಉದರದಲ್ಲಿ ನಮ್ಮ ಜನನವಾದಾಗಿನಿಂದಲೂ ನಿಸ್ವಾರ್ಥವಾಗಿ ಪ್ರೀತಿಯನ್ನ ಧಾರೆ ಎರೆದ ಎರಡು ಜೀವಗಳೆಂದರೆ ಅದು ತಾಯಿ-ತಂದೆ. ಇವರ ಈ ನಿಸ್ವಾರ್ಥ ಪ್ರೀತಿಗೆ ಅದು ಹೇಗೆ ನಾವು ಸೋಲದೇ ಇರಲು ಸಾಧ್ಯ?
ಅಪ್ಪ ಅಂದ್ರೆ ಎಂದ ಕೂಡಲೇ ಸಾಹಿತ್ಯ ಪ್ರೇಮಿಗಳಿಗೆ ಎ. ಆರ್. ಮಣಿಕಾಂತ್ ಅವರು ಹಾಗೂ ಅವರ ಕೃತಿ ಅಪ್ಪಾ ಅಂದ್ರೆ ಆಕಾಶದ ನೆನಪಾಗುವುದು ಸಹಜವಾಗಿರಬಹುದು. ನನ್ನ ಪಾಲಿಗೂ ನನ್ನ ತಂದೆ ಎಂದರೆ ಆಕಾಶವೇ ಸರಿ. ಎಂದಿಗೂ ಅವರು ನನಗೆ ಕೈಗೆಟಕುವ ಆಕಾಶ. ಯಾಕೆಂದರೆ ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರುವ ಅನೇಕ ತಂದೆ-ತಾಯಿಯರನ್ನು ನಾನು ಕಂಡಿದ್ದೇನೆ.ಆದರೆ ಅವರೆಲ್ಲರ ಮಧ್ಯೆ ಮಗಳ ಆಸೆ-ಕನಸು-ಗುರಿಯೊಂದಿಗೆ ನಿಂತು ಪೂರ್ಣ ಬೆಂಬಲ ನೀಡಿರುವ ಅಪ್ಪನೆಂದರೆ ನನ್ನ ಪಾಲಿಗೆ ನಿಜವಾಗಲೂ ಆಕಾಶವೇ ಸರಿ.
ತಾಯಿಯೇ ಮೊದಲ ಗುರು ಮನೆಯೆಂಬ ಮೊದಲ ಪಾಠಶಾಲೆಯಲ್ಲಿ ಮೊದಲ ಗುರು ಏನಿದ್ದರೂ ತಾಯಿಯೇ.ಇಂದಿಗೆ ನಾವು ಎಷ್ಟೇ ಓದಿರಬಹುದು, ಬರೆಯಬಹುದು. ಆದರೆ ಬಾಲ್ಯದಲ್ಲಿ ಮೊದಲ ಅಕ್ಷರ ಕಲಿಸಿದ ಅಮ್ಮನ ವಿಧ್ಯಾಭ್ಯಾಸವೇನು ಎಂಬುವುದು ಅಂದಿಗೆ ತಿಳಿದಿರಲಿಲ್ಲ. ಆದರೆ ಎಂದು ನಾವು ಓದುತ್ತಿರುವುದು ಬಹುಶಃ ಅವರಿಗಿಂತ ಹೆಚ್ಚಿನ ವಿದ್ಯಾಭ್ಯಾಸ! ತಮಗೆ ಗೊತ್ತಿರುವುದನ್ನು ನಮಗೆ ಕಲಿಸಿಕೊಟ್ಟ,ಅವರಿಗೆ ತಿಳಿದಿಲ್ಲವಾದ್ದನ್ನೂ ಮಕ್ಕಳು ತಿಳಿಯಲಿ ಎಂಬ ಆಶಯದಿಂದ ಊರು ಬಿಟ್ಟು ದೂರದ ಊರಿಗೆ ಮಕ್ಕಳನ್ನು ಕಳುಹಿಸಿ ಕೊಟ್ಟು ಸದಾ ಮಕ್ಕಳ ಖುಷಿಯನ್ನು ಬಯಸುವ ನಿಸ್ವಾರ್ಥ ಜೀವಗಳನ್ನು ವರ್ಣಿಸಲು ಇನ್ನೂ ಪದಗಳಿಲ್ಲ.
ಬೆಳೆಯುತ್ತಾ ಬಂದಂತೆ ಸೇರಿಕೊಳ್ಳುವ ಪ್ರತಿಯೊಂದು ಸಂಬಂಧಕ್ಕೂ ಪ್ರತಿಯೊಂದು ಕಾರಣ ಅಥವಾ ಸ್ವರ್ಥವಂತೂ ಇದ್ದೇ ಇರುತ್ತದೆ. ವಯೋ ಸಹಜವಾಗಿ ಉಂಟಾಗುವ ಆಕರ್ಷಣೆ, ಪ್ರೀತಿ, ಪ್ರೇಮದಲ್ಲಿ ಯಾವ ಮಟ್ಟಿಗೆ ಸ್ವಾರ್ಥತೆ, ನಿಸ್ವಾರ್ಥತೆ ಇದೆಯೋ ನನಗೆ ತಿಳಿದಿಲ್ಲ. ಆದರೆ ನಾವು ಹುಟ್ಟುತ್ತಾ ಪಡೆದುಕೊಂಡ ನಮ್ಮ ತಂದೆ, ತಾಯಿಯ ಪ್ರೀತಿಯಂತೂ ಮೊದಲ ಪ್ರೀತಿ ಹಾಗೂ ಕೊನೆಯವರೆಗೂ ನಮ್ಮ ಜತೆಯಲ್ಲಿ ಉಳಿಯುವ ನಿಸ್ವಾರ್ಥ ಪ್ರೀತಿ.
ಒಟ್ಟಿನಲ್ಲಿ ಹೇಳುವುದಾದರೆ,ತಮ್ಮ ಸರ್ವಸ್ವವನ್ನೂ ಮಕ್ಕಳಿಗೋಸ್ಕರ ಧಾರೆ ಎರೆಯುವ ತಂದೆ ತಾಯಿಯ ಪ್ರೀತಿಗೆ ತಲೇತೂಗದೇ ಇರಲು ಸಾಧ್ಯವೇ ಇಲ್ಲ. ಒಂದು ವೇಳೆ ಪ್ರಪಂಚದಲ್ಲಿ ಕೆಟ್ಟ ಮಕ್ಕಳೆನದರು ಇರಬಹುದು. ಆದರೆ ಕೆಟ್ಟ ತಂದೆ ತಾಯಿಯರಂತೂ ಇರಲು ಖಂಡಿತಾ ಸಾಧ್ಯವಿಲ್ಲ. ಎಂಥಹಾ ಮಕ್ಕಳೇ ಆಗಲಿ, ಇಷ್ಟು ಆಳವಾಗಿ ನಮ್ಮನ್ನು ಪ್ರೀತಿಸುವ,ಸರ್ವಸ್ವವನ್ನೂ ನಮಗಾಗಿ ಮುಡಿಪಾಗಿಡುವ ತಂದೆ ತಾಯಿಯರ ನಿಸ್ವಾರ್ಥ ಪ್ರೀತಿಗೆ ನಾನಂತೂ ಸೋಲದೇ ಇರಲು ಸಾಧ್ಯವಾಗಲಿಲ್ಲ.
-ಶ್ರೇಯಾ ಮಿಂಚಿನಡ್ಕ
ಎಸ್‌ಡಿಎಂ ಕಾಲೇಜು ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.