ಮಾನವ ಇನ್ನೂ ಪಾಠ ಕಲಿತಿಲ್ಲ
Team Udayavani, Jun 5, 2020, 4:35 PM IST
ಹಚ್ಚಹಸಿರಿನ ಎಲೆ ನಡುವೆ ನಮ್ಮ ಹೆಜ್ಜೆ ಇಡಲು ಬಯಸುತ್ತೇವೆ. ಬರೀ ಹಸಿರನ್ನು ನೋಡಿ ಖುಷಿಪಡುವ ನಾವು, ಅದನ್ನು ನಮ್ಮ ಬಯಲಲ್ಲಿ ನೆಟ್ಟು ಪೋಷಿಸಿ ಸದಾ ಹಸಿರು ಕಂಗೊಳಿಸುವಂತೆ ಮಾಡಬೇಕೆಂದು ನಾವು ಯೋಚಿಸುವುದಿಲ್ಲ. ಮರವನ್ನು ಮಕ್ಕಳಂತೆ ಪೋಷಿಸಿದ ತಿಮ್ಮಕ್ಕನ ಹಾಡಿ ಹೊಗಳಿ ಹಲವಾರು ಪ್ರಶಸ್ತಿಗಳನ್ನು ಕೊಟ್ಟು ಸನ್ಮಾನಿಸುವ ನಾವು ಅದೇ ಸನ್ಮಾರ್ಗದ ಹಾದಿಯನ್ನು ಹಿಡಿಯುವುದಿಲ್ಲ. ಉಸಿರಾಡಲು ಗಾಳಿ ಎಷ್ಟು ಅವಶ್ಯಕ ಎಂದು ತಿಳಿದಿದ್ದರೂ ನಮಗೆ ನಿರ್ಲಕ್ಷ.
ಯಾಕೆಂದರೆ ಮಾನವನ ದೃಷ್ಟಿ ಸಂಪೂರ್ಣ ಹಣ ಮಾಡುವುದರತ್ತ. ಗಿಡ ಬೆಳೆಸುವುದರಿಂದ ಅವನಿಗೆ ಹಣ ಸಿಗುವುದಿಲ್ಲ. ತನ್ನ ಲಾಬಿಗಾಗಿ ಮತ್ತೂಂದು ಜೀವಸಂಕುಲದ ಬಗ್ಗೆ ಯೋಚಿಸದ ಮಾನವ, ಇನ್ನು ಗಿಡ ಮರಗಳ ಬಗ್ಗೆ ಯೋಚಿಸುವುದು ಅಪೇಕ್ಷನೀಯ ಅಲ್ಲ. ಮೊನ್ನೆ ಮೊನ್ನೆ ತಾನೇ ನ್ಪೋಟಕ ವಸ್ತುಗಳಿಂದ ಗರ್ಭಿಣಿ ಆನೆಯನು ಹಿಂಸಿಸಿದವರು ಇನ್ನೇನು ಗಿಡಮರಗಳನ್ನು ಪಾಲನೆ ಮಾಡುತ್ತಾರಾ? ಇತ್ತೀಚಿಗಂತೂ ಮಾನವ ವಿಕೃತ ರೂಪವನ್ನು ತಾಳಿದ್ದಾನೆ. ಎಲ್ಲ ತಪ್ಪಿಗೆ ಶಿಕ್ಷೆ ಎಂಬಂತೆ ಕೋವಿಡ್ ಜನರನ್ನು ಭಯದ ಕೂಪಕ್ಕೆ ತಳ್ಳಿಬಿಟ್ಟಿದೆ. ಹಿಂದಿನ ಔಷಧೀಯ ಸಸ್ಯಗಳು ಉಳಿಯುತ್ತಿದ್ದರೆ, ಇಂತಹ ಅದೆಷ್ಟೋ ರೋಗರುಜಿನಗಳಿಂದ ನಾವು ಮುಕ್ತಿ ಪಡೆಯುತ್ತಿದ್ದೆವು.
ದೇವರು ಎಲ್ಲವನ್ನೂ ನಿಗದಿತ ಪ್ರಮಾಣದಲ್ಲಿ ಸೃಷ್ಟಿ ಮಾಡಿರುವ. ಗಿಡಮರಗಳು, ಪ್ರಾಣಿ ಪಕ್ಷಿಗಳು, ಜೀವ ಸಂಕುಲಗಳು ಎಷ್ಟು ನಿಗದಿತ ಪ್ರಮಾಣದಲ್ಲಿ ಇರಬೇಕೆಂದು ಆ ದೇವ ನಿಶ್ಚಯಿಸಿದ್ದನೋ ಅದೇ ಪ್ರಮಾಣದಲ್ಲಿ ಇರಬೇಕು. ಆ ಸಂಖ್ಯೆಯನ್ನು ಯಾರು ಮುಟ್ಟುಗೋಲು ಹಾಕಬಾರದು. ಮಾನವನು ಸರ್ವಾಧಿಕಾರಿಯಂತೆ ವರ್ತಿಸಿ ಗಿಡಮರಗಳನ್ನು ನಾಶ ಮಾಡಿದರೆ ಮುಂದೊಂದು ದಿನ ಆತನೇ ನಾಶವಾಗಿ ಹೋಗುತ್ತಾನೆ. ನಮಗೆ ಪ್ರಕೃತಿ ನೀರು ಗಾಳಿ ಎಲ್ಲವನ್ನು ನೀಡಿ ಸಲುಹಿದ್ದಾಳೆ. ಪರಿಸರ ದಿನಾಚರಣೆಯಂದು ಪ್ರಕೃತಿ ಮಾತೆಗೆ ಧನ್ಯವಾದ ಸಮರ್ಪಿಸುತ್ತಾ ಮತ್ತಷ್ಟು ಪ್ರೀತಿ ಸಂರಕ್ಷಣೆಯ ದೃಢಸಂಕಲ್ಪದೊಂದಿಗೆ ಈ ದಿನವನ್ನು ಆಚರಿಸೋಣ.
ಅಪೂರ್ವ ಕಾರಂತ್, ದರ್ಬೆ, ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.