UV Fusion: ಆಗದು ಎಂದು ಕೈ ಕಟ್ಟಿ ಕುಳಿತರೆ…
Team Udayavani, Dec 5, 2024, 3:18 PM IST
ಕಷ್ಟ – ಸುಖ ಜೀವನದ ಅವಿಭಾಜ್ಯ ಅಂಗ. ಯಾರಿಗೂ ಕೂಡ ಬದುಕಿನಲ್ಲಿ ಸಂಪೂರ್ಣ ಕಷ್ಟವೇ ಅಥವ ಸುಖವೇ ಇರುವುದಿಲ್ಲ. ಎಲ್ಲರಿಗು ಬದುಕು ಶೂನ್ಯದಿಂದಲೇ ಪ್ರಾರಂಭವಾಗುತ್ತದೆ. ನಮಗೆ ಒದಗಿ ಬಂದ ಅವಕಾಶಗಳ ಸದುಪಯೋಗ ಪಡಿಸಿಕೊಂಡಾಗ ಮಾತ್ರ ಸುಖ, ಯಶಸ್ಸು ದೊರೆಯುತ್ತದೆ.
ಯಶಸ್ಸಿನ ಹಂಬಲದಲ್ಲಿರುವ ವ್ಯಕ್ತಿಗಳು ಯಾವತ್ತೂ ಕೈ ಕಟ್ಟಿ ಕೂರುವುದಿಲ್ಲ. ಯಾವುದಾದರೊಂದು ರಂಗವನ್ನು ಆಯ್ಕೆ ಮಾಡಿ ನಿರಂತರ ಪರಿಶ್ರಮದಲ್ಲಿ ತೊಡಗುತ್ತಾರೆ. ಒಂದು ಪಕ್ಷಿ ತಾನು ಗೂಡೊಂದನ್ನು ಕಟ್ಟಿ ಅದರಲ್ಲಿ ಮೊಟ್ಟೆ ಇಟ್ಟು, ಕಾವು ಕೊಟ್ಟು, ಮರಿ ಮಾಡಿ, ಅವುಗಳನ್ನು ಬದುಕಲು ಶಕ್ತರನ್ನಾಗಿ ಮಾಡುವಂತಹ ಪ್ರಯತ್ನ ಅಷ್ಟು ಸುಲಭವಿಲ್ಲ. ಅಯ್ಯೋ ಅಷ್ಟೊಂದು ಕಷ್ಟ ನನಗ್ಯಾಕೆ ಎಂದು ಪಕ್ಷಿ ಯಾವತ್ತೂ ಸುಮ್ಮನೆ ಕೂರುವುದಿಲ್ಲ. ಗೂಡು ಕಟ್ಟಲು ಸೂಕ್ತವಾದ ಸ್ಥಳ ಹುಡುಕುವುದೇ ಅದರ ಮುಂದಿರುವ ಅತೀ ದೊಡ್ಡ ಸವಾಲು. ಸಮಯ ವ್ಯರ್ಥ ಮಾಡದೇ ಅಂತಹ ಸ್ಥಳವನ್ನು ಹುಡುಕುತ್ತದೆ. ತನ್ನ ಶ್ರಮ ಮುಂದಿನ ದಿನಗಳಲ್ಲಿ ವ್ಯರ್ಥ ಆಗಬಾರದು ಎಂಬುದು ಅದರ ಉದ್ದೇಶ.
ಹಕ್ಕಿಯ ಬದುಕಿನಲ್ಲೇ ಇಷ್ಟೊಂದು ಕಷ್ಟಗಳಿವೆ ಎಂದಾದ ಮೇಲೆ ಮನುಷ್ಯನ ಬದುಕಿನಲ್ಲಿ ಕಷ್ಟಗಳಿರದಿರುವುದೆ. ಮಾಡಬೇಕಾದ ಕೆಲಸ ಕಾರ್ಯ ಸಾಧ್ಯವಿಲ್ಲ ಎಂದು ಕುಳಿತರೆ ಜೀವನ ಸಾರ್ಥಕವಾಗುವುದಾದರೂ ಹೇಗೆ? ಬದುಕನ್ನು ಬದುಕಿ, ಬದುಕಿ ಸಾಧಿಸಿ, ಸಾಧಿಸಿ ಬದುಕನ್ನು ಗೆಲ್ಲಿಸಿ.
ವೆಂಕಟೇಶ ಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?
Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್ ರಾಡಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.