Development: ಭಾರತದ ಅಭಿವೃದ್ಧಿಯಲ್ಲಿ ಯುವ ಶಕ್ತಿಯ ಪ್ರಾಮುಖ್ಯತೆ
Team Udayavani, Nov 19, 2024, 12:40 PM IST
“ರತ್ನಾಕರ ಧೌತಪಾದಂ ಹಿಮಾಲಯ ಕಿರೀಟಿನೀಂ, ಬ್ರಹ್ಮರಾಜರ್ಸಿ ರತ್ನಾಭ್ಯಾಂ ವಂದೇ ಭಾರತ ಮಾತರಂ. ” ಸಮುದ್ರ ರಾಜನಿಂದ ತನ್ನ ಪಾದವನ್ನು ತೊಳೆಸಿಕೊಂಡು, ಹಿಮಾಲಯವೆಂಬ ಕಿರೀಟವನ್ನು ಧರಿಸಿ, ಉತ್ತಮೋತ್ತಮ ಅಸಂಖ್ಯ ಬ್ರಹ್ಮಶ್ರೀ, ರಾಜಶ್ರೀ ರಂತಹ ವಜ್ರ ವೈಢೂರ್ಯಗಳಿಂದ ಅಲಂಕೃತಲಾಗಿರುವ ತಾಯಿ ಭರತಮಾತೆಗೆ ತನ್ನ ಪ್ರಣಾಮಗಳು. ಯಾವುದೇ ಒಂದು ರಾಷ್ಟ್ರ ಸದೃಡವಾಗಿ ನಿರ್ಮಾಣವಾಗಬೇಕಾದರೆ ಭೌಗೋಳಿಕವಾಗಿ ಲಭ್ಯವಿರುವ ಖನಿಜ ಸಂಪನ್ಮೂಲಗಳಲ್ಲದೇ ಬಲಾಡ್ಯವಾದ ಮಾನವ ಸಂಪನ್ಮೂಲವೂ ಅತೀ ಅವಶ್ಯಕವಾಗಿರುತ್ತದೆ. ಅದರಲ್ಲೂ ಶಸಕ್ತ ಯುವಶಕ್ತಿಯ ರಚನಾತ್ಮಕ ಮತ್ತು ಕ್ರಿಯಾತ್ಮಕ ವಿಚಾರಧಾರೆಯಲ್ಲಿ ದೇಶದ ಸರ್ವೋತೋಮುಖ ಅಭಿವೃದ್ಧಿಯು ಅಡಗಿರುತ್ತದೆ.
ಸ್ವಾತಂತ್ರ ಸಿಕ್ಕ ನಂತರದಿಂದ ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿತ್ತಿರುವ ದೇಶವೆಂದೇ ಕರೆಯುತ್ತಾ ಬಂದಿರುತ್ತಾರೆ. ಆದರೇ ಪ್ರಸ್ತುತ ಭಾರತದ ಚಿತ್ರಣ ವಿಶ್ವದೆದುರು ಬದಲಾಗಿದೆ. ಭಾರತವು ಇಡೀ ಪ್ರಪಂಚದ ಎದುರು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮುಂಚೂಣಿಯಲ್ಲಿ ಮುನ್ನುಗ್ಗುತ್ತಿದೆ. ಇಂತಹ ಬಲಿಷ್ಠ ದೇಶವು ಆಂತರಿಕವಾಗಿ ಸದೃಡವಾಗಬೇಕೆಂದರೆ ಯುವ ಜನಾಂಗದ ಪಾತ್ರ ಅತ್ಯಮೂಲ್ಯವಾಗಿರುತ್ತದೆ. ಯುವಶಕ್ತಿಯ ಆಲೋಚನಾ ಸಾಮರ್ಥ್ಯ ಹೇಗಿರಬೇಕೆಂದರೆ ಅದು ಕ್ರಿಯಾತ್ಮಕವಾಗಿ, ತರ್ಕಬದ್ಧವಾಗಿ ಮತ್ತು ಯೋಜನಾಶೀಲವಾಗಿರಬೇಕಾಗಿರುತ್ತದೆ. ಯುವ ಶಕ್ತಿ ಎಂದಾಗ ಮೊದಲಿಗೆ ನೆನಪಿಗೆ ಬರುವ ಅದಮ್ಯ ಚೇತನವೆಂದರರೇ ಸ್ವಾಮಿ ವಿವೇಕಾನಂದರು.
ಅವರೇ ಹೇಳಿದ ಮಾತಿನಂತೆ ಭಾರತಕ್ಕೆ ಎಂತಹ ಯುವಶಕ್ತಿ ಬೇಕೆಂದರೆ “ಕಬ್ಬಿಣದಂತಹ ಮಾಂಸಖಂಡಗಳನ್ನು, ಉಕ್ಕಿನ ನರಮಂಡಲವನ್ನು, ಮಿಂಚಿಂನಂತಹ ಬುದ್ಧಿಶಕ್ತಿಯನ್ನು ಹೊಂದಿರಬೇಕು” ಇಂತಹ ಯುವಸಮೂಹ ಇದ್ದಲ್ಲಿ ದೇಶ ತನ್ನಿಂದ ತಾನೇ ಅಭಿವೃದ್ಧಿ ಹೊಂಡುತ್ತದೆ. ಆದರೇ ಇಂದಿನ ಹೆಚ್ಚಿನ ಯುವ ಸಮುದಾಯದಲ್ಲಿ ಆಲೋಚನ ಕೊರತೆ ಮತ್ತು ಹೋರಾಟ ಮನೋಭಾವದ ಕೊರತೆ ಹೆಚ್ಚಿದ್ದು, ಇವೆರಡನ್ನು ಮೈಗೂಡಿಸಿಕೊಂಡಲ್ಲಿ ವ್ಯಕ್ತಿಯ ಜೊತೆಯಲ್ಲಿ ದೇಶವು ಕೂಡ ಸರ್ವಾಂಗೀಣ ಉನ್ನತಿ ಹೊಂದುತ್ತದೆ.ಆಧುನಿಕ ಯುಗದಲ್ಲಿ ಅತೀ ವೇಗದಲ್ಲಿ ಮುನ್ನುಗ್ಗುತ್ತಿರುವ ಜಗತ್ತಿಗೆ ಭಾರತದ ಯುವಶಕ್ತಿಯ ಎಷ್ಟೋ ಆಲೋಚನೆಗಳು ಮನಸ್ಸನ್ನು ಗೆದ್ದಿವೆ ಅನ್ನುವುದಕ್ಕೆ ವಿಶ್ವದ ಅತೀ ಹೆಚ್ಚು ಉದ್ಯಮಿಗಳನ್ನು ಹೊಂದಿರುವ ರಾಷ್ಟ್ರ ಭಾರತ ಅನ್ನುವುದೇ ಸ್ಪಷ್ಟ ನಿದರ್ಷನವಾಗಿದೆ.
ಮುಂದುವರಿದು ಯುವಶಕ್ತಿಯ ಕೂಗು ಅಥವಾ ಹೋರಾಟವೆನ್ನುವುದು ದೇಶದ ಕೂಗು ಮತ್ತು ಹೋರಾಟವಾಗಿರುತ್ತದೆ. ನಮ್ಮಂತಹ ಪ್ರತಿಯೊಬ್ಬ ಯುವಕ ಯುವತಿ ಕೂಡ ತನ್ನ ಅತ್ಯಮೂಲ್ಯ ಸಮಯವನ್ನು ಅನಗತ್ಯ ವಿಷಯಗಳಿಗೆ ವ್ಯಯಿಸದೆ, ತನ್ನ ಆಸುಪಾಸಿನಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಗಮನಹರಿಸಿ ಪರಿಹಾರ ದೊರಕಿಸಿಕೊಟ್ಟಾಗ ದೇಶವು ಆಂತರಿಕವಾಗಿಯು ಸದೃಢವಾಗಿ ಬೆಳೆಯುತ್ತದೆ.
ಪ್ರತಿ ಯುವಕ ಯುವತಿಯರಲ್ಲು ತನ್ನ ದೇಶದ ಬಗ್ಗೆ ದೇಶಭಕ್ತಿ ಮತ್ತು ದೇಶಪ್ರೇಮ ಇರಬೇಕಾಗಿರುವುದು ಅತಿಮುಖ್ಯ ಕರ್ತವ್ಯವಾಗಿರುತ್ತದೆ. ದೇಶದ ಪ್ರತಿಯೊಂದು ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಸ್ಪಷ್ಟ ಮಾಹಿತಿಯಿರಬೇಕಾಗಿರುವುದು ಬಹಳ ಮುಖ್ಯವಾಗಿರುತ್ತದೆ. ಆದರೇ ದೇಶದ ಯುವ ಸಮುದಾಯದ ಎಲ್ಲೋ ಈ ವಿಷಯದಲ್ಲಿ ಎಡವುತ್ತಿದ್ದೆ ಅನ್ನುವುದಕ್ಕೆ ವಿದ್ಯಾಭ್ಯಾಸ ಮುಗಿದ ನಂತರ ಎಷ್ಟೋ ಯುವಕರು ತಮ್ಮ ಸುಖ ಜೀವನಕ್ಕಾಗಿ ದೇಶವನ್ನು ತೊರೆದು ವಿದೇಶಕ್ಕೆ ಹಾರಿ ಬಿಡುತ್ತಾರೆ. ಇಂತಹ ಘಟನೆಗಳು ಕಡಿಮೆಯಾಗಬೇಕು ಇದಕ್ಕೆ ಆಡಳಿತ ಯಂತ್ರ ಹಾಗೂ ಸರಕಾರ ಪೂರಕ ವ್ಯವಸ್ಥೆಗಳನ್ನು ದೇಶದಲ್ಲಿಯೇ ನಿರ್ಮಾಣ ಮಾಡಿಕೊಡುವುದು ಜವಾಬ್ದಾರಿಯಾಗಿರುತ್ತದೆ.
ಇನ್ನೂ ಒಂದು ದೇಶ ಜಾಗತಿಕವಾಗಿ ಎಷ್ಟೇ ಅಭಿವೃದ್ಧಿ ಹೊಂದಿದರೂ ದೇಶದ ಪ್ರಾಕೃತಿಕ ಹಾಗೂ ಭೌಗೋಳಿಕ ಅಭಿವೃದ್ಧಿ ಮತ್ತು ಸಂರಕ್ಷಣೆಯನ್ನುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ದೇಶದ ಪ್ರಾಕೃತಿಕ ಸಂಪತ್ತನ್ನು ಕಾಪಾಡುವುದರ ಜೊತೆಗೆ ಪರಿಸರ ಸಂರಕ್ಷಣೆ, ಸರ್ಕಾರಿ ಆಸ್ತಿ -ಪಾಸ್ತಿಗಳ ರಕ್ಷಣೆ ಮಾಡುವುದು ಕೂಡ ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ಹೇಗೆ ಒಂದು ಹನಿ ನೀರಿನಿಂದ ಶುರುವಾಗಿ ದೊಡ್ಡ ಸಾಗರವಾಗುತ್ತದೋ ಹಾಗೈಯೇ ನಾವು ಮೊದಲಿಗೆ ಅನ್ಯಾಯದ ವಿರುದ್ಧ ದ್ವನಿ ಎತ್ತಿದರೇ ಇಡೀ ಸಮಾಜ ಸಜ್ಜನವಾಗಿ ಬದಲಾಗುತ್ತದೆ.ಮೊದಲು ನಾನು ಬದಲಾದರೇ ದೇಶವು ಜಗತ್ತು ಕೂಡ ಬದಲಾಗುತ್ತದೆ ಎನ್ನುವ ನುಡಿಯಂತೆ ಹದಿಹರೆಯದ ಜೀವನವು ಪ್ರತಿಯೊಂದು ವ್ಯಕ್ತಿಯ ಬಹುಮುಖ್ಯ ಕಾಲಘಟ್ಟವಾಗಿದ್ದು, ಶಕ್ತಿ ಮತ್ತು ಪ್ರಜ್ಞೆ ಹೆಚ್ಚಿರುತ್ತದೆ. ಇಂತಹ ಶಕ್ತಿಗಳನ್ನು ಪ್ರತಿಯೊಂದು ಯುವಸಮೂಹ ದೇಶಕ್ಕಾಗಿ ಮುಡಿಪಿಟ್ಟರೇ ರಾಷ್ಟ್ರ ನಿರ್ಮಾಣದ ನಿರ್ಮಾಪಕರಾಗಿ ಹೊರಹೊಮ್ಮುವುದಂತೂ ಸುಳ್ಳಲ್ಲ.
“ಸರ್ವೇ ಜನ ಸುಖೀನೋ ಭವಂತು’
-ಪ್ರಸಾದ್ ಆಚಾರ್ಯ
ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.