ಕಾವ್ಯ ಮಲ್ಲಿಗೆ: ಸ್ವತಂತ್ರ ಭಾರತ
Team Udayavani, Jul 27, 2021, 9:00 AM IST
![ಕಾವ್ಯ ಮಲ್ಲಿಗೆ: ಸ್ವತಂತ್ರ ಭಾರತ](https://www.udayavani.com/wp-content/uploads/2021/07/Untitled-3-21-620x372.jpg)
![ಕಾವ್ಯ ಮಲ್ಲಿಗೆ: ಸ್ವತಂತ್ರ ಭಾರತ](https://www.udayavani.com/wp-content/uploads/2021/07/Untitled-3-21-620x372.jpg)
ಸ್ವತಂತ್ರ ಭಾರತ
ಭಗತ್ ಎಂಬ ಪ್ರಚಂಡ,
ಚಂಡಾಡಿದ ಕೆಂಪು ಕೋತಿಗಳ ರುಂಡ,
ಇದನ್ನು ಕಂಡು ಬೆರಗಾಯಿತು ಆಂಗ್ಲರ ದಂಡ.
ಪಂಜಾಬಿನ ಪುರುಷ ಸಿಂಹ ಎಂಬ ಬಿರುದನ್ನು ಪಡೆದನು,
ಸ್ವತಂತ್ರ ಭಾರತದ ಪರಿಕಲ್ಪನೆಯ ಕನಸನ್ನು ಕಂಡನು,
ಬ್ರಿಟಿಷರಿಗೆ ನುಂಗಲಾರದ ತುತ್ತಾಗಿ ಉಳಿದನು,
ದೇಶಕ್ಕೆ ಪ್ರಾಣ ಕೊಡಲು ಸದಾ ಸಿದ್ಧನಾದನು.
ರೈಲಿನಲ್ಲಿ ವೇಷ ಬದಲಾಯಿಸಿ ತಿರುಗಿದನು ಈತ,
ಕಂಡುಹಿಡಿಯಲು ಬ್ರಿಟಿಷರ ವಿಶ್ವಾಸ ಘಾತಕ ಮಾತ,
ಕಟ್ಟಿಕೊಂಡನು ಒಂದು ಕ್ರಾಂತಿಕಾರಿಗಳ ಪಂಥ,
ಅದರ ಮೂಲಕ ಭಾರತೀಯರಿಗೆ ತೋರಿದನು ನಂಬಿಕೆಯ ಪಥ.
ದೇಶವಾಸಿಗಳಿಗೆ ಹೇಳಿದನು ಆತ್ಮವಿಶ್ವಾಸ,
ಕುಂದದಿರಲಿ ಸ್ವಾತಂತ್ರ್ಯದ ಆ ಶ್ವಾಸ,
ಇಂದಿಗೂ ಆದರ್ಶನಾದನು ಎಲ್ಲರ ಮನ ಮನದಲ್ಲಿ
ಅಮರನಾದನು ಭಾರತ ಮಾತೆಯ ಮಡಿಲಲ್ಲಿ…..
ಅಂಬರೀಷ್ ನಾೖಕೋಡಿ
ಎಸ್.ಬಿ. ಆ್ಯಂಡ್ ಕೆಸಿಪಿ ಸೈನ್ಸ್ ಕಾಲೇಜ್
ವಿಜಯಪುರ