ಭಾರತ ವಿಶ್ವಕ್ಕೆ ದೊಡ್ಡಣ್ಣನಾಗುವ ನಿರೀಕ್ಷೆ
Team Udayavani, Aug 15, 2020, 8:55 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭಾರತದಲ್ಲಿ ಯಾವಾಗ ಧರ್ಮ, ಜಾತಿ ಕಲಹ ವಿನಾಶವಾಗುವುದೋ ಅಂದು ನಮ್ಮ ಭವ್ಯ ಭಾರತದ ಕನಸು ನನಸಾಗುವುದು, ಸ್ವಾತಂತ್ರ್ಯ ದೊರೆತ 74 ವರ್ಷಗಳಲ್ಲಿ ಭಾರತ ಸಾಗಿದ ದಾರಿ, ತಲುಪಬೇಕಾದ ಗುರಿ ಇವುಗಳನ್ನು ತುಲನೆ ಮಾಡಿದರೆ ನಾವು ಸಾಧಿಸಿರುವುದು ಕೈ ಅಗಲದಷ್ಟು ಮಾತ್ರ. ಆದರೆ ಸಾಧಿಸಬೇಕಾಗಿರುವುದು ಕಡಲಿನಷ್ಟು.
2025ನೇ ಇಸವಿ ವೇಳೆಗೆ ಇಡೀ ವಿಶ್ವಕ್ಕೆ ನಮ್ಮ ದೇಶ ದೊಡ್ಡಣ್ಣನಾಗಬೇಕೆಂಬುದು ನಮ್ಮೆಲ್ಲರ ನಿರೀಕ್ಷೆಯಾಗಿದೆ.
ದೊಡ್ಡಣ್ಣನಾಗುವುದು ಯಾವುದರಲ್ಲಿ ಎಂದು ಕೇಳಿದರೆ ಜನಸಂಖ್ಯೆಯಲ್ಲಂತೂ ಅಲ್ಲವೇ ಅಲ್ಲ.
ಬದಲಾಗಿ ಅಭಿವೃದ್ಧಿಯಲ್ಲಿ. ಇದು ಸಾಧ್ಯವಾಗ ಬೇಕಾದರೆ ನಾವು 100ಕ್ಕೆ 100ರಷ್ಟು ಸಾಕ್ಷರತೆ ಮತ್ತು ಸ್ವಾವಲಂಬನೆಯನ್ನು ಸಾಧಿಸಬೇಕಿದೆ.
ಭಾರತ ಎಂಬ ಹೆಸರಿನಲ್ಲಿ ಇರುವಂತೆ ಭಾವ, ರಾಗ, ತಾಳಗಳಿಗೆ ನಾವೆಲ್ಲರೂ ಒಂದೇ ಎನ್ನುವ ಏಕ ಭಾವ ಬೆಳೆಸಿಕೊಳ್ಳಬೇಕು.
ಧರ್ಮದ ಕಾರಣದಿಂದ ರಾಗ, ದ್ವೇಷಗಳಿಗೆ ಒಳಗಾಗದೆ ದೇಶಾಭಿವೃದ್ಧಿಯ ತಾಳ ತಪ್ಪದಂತೆ ಲಯಬದ್ಧವಾಗಿ ದೇಶವನ್ನು ಕಟ್ಟಬೇಕು. ಜಾತಿ, ಮತ, ಧರ್ಮ, ಕುಲ ಇವುಗಳನ್ನು ಕಿತ್ತೆಸೆದು ನಾವು ಭಾರತೀಯರು ಎಂಬ ಪ್ರಜ್ಞೆ ಮೂಡಬೇಕು.
ಬುದ್ಧ, ಗಾಂಧೀಜಿ, ಅಂಬೇಡ್ಕರ್, ಬಸವಣ್ಣನವರ ಜೀವನವನ್ನು ಮಾದರಿಯಾಗಿಟ್ಟುಕೊಂಡು ಅವರ ವ್ಯಕ್ತಿಪೂಜೆಗಿಂತ ಅವರು ದೇಶಕ್ಕೆ ಸಲ್ಲಿಸಿದ ಸೇವೆ, ಸಂದೇಶವನ್ನು ಸಾರುತ್ತ ಯೋಗ್ಯ ಶಿಕ್ಷಣ, ನೈಜ ಶಿಕ್ಷಣವನ್ನು ಜಾರಿಗೆ ತರಬೇಕು. ಮಹಾತ್ಮರ ಕಲ್ಲಿನ ಮೂರ್ತಿಗಿಂತ ಅವರ ಜೀವನವೇ ನಮಗೆ ಸ್ಫೂರ್ತಿಯಾಗಬೇಕು. ಮಹಿಳೆಯರನ್ನು ಗೌರವಿಸಬೇಕು. ಮಹಿಳೆಯರ ಮೇಲಿನ ಶೋಷಣೆಗಳಿಗೆ ಕಠಿನ ಶಿಕ್ಷೆ ವಿಧಿಸುವ ಕಾನೂನು ಜಾರಿಯಾಗಬೇಕಾಗಿದೆ. ಭಾರತದ ಕನಸು ಕೇವಲ ಯುವ ಜನತೆಗೆ ಮಾತ್ರ ಸೀಮಿತವಾಗಿರಬಾರದು. ಭಾರತದ ಪ್ರತಿಯೋರ್ವ ಪ್ರಜೆಯೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸುವಂತಾಗಬೇಕು.
ತುಳಸಿ. ಎಂ. ಮುಂಡುಗಾರು, ತೃತೀಯ ಬಿ.ಎ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.