ಮಹಾಭಾರತಕ್ಕೆ ಮನಸೋತ ಯುವಜನತೆ
ಲಾಕ್‌ಡೌನ್ ಸಂದರ್ಭ ಮರುಪ್ರಸಾರಗೊಂಡ ಧಾರಾವಾಹಿಗೆ ಜನ ಮೆಚ್ಚುಗೆ
Team Udayavani, Jul 24, 2020, 3:30 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ. Representative Image Used
ಮಹಾಭಾರತ ಹೆಸರು ಕೇಳಿದರೆ ಸಾಕು ರೋಮಾಂಚನಗೊಳ್ಳುತ್ತೇವೆ. ವಿಶ್ವದ ಶ್ರೇಷ್ಠ ಮಹಾ ಕಾ ವ್ಯಗಳಲ್ಲೊಂದು. ಸ್ವತಃ ಭಗ ವಂತನೇ ಧರೆಗಿಳಿದು ಧರ್ಮದ ಸಾರವನ್ನು, ಜೀವನ ಪಾಠವನ್ನು ಸಾರಿದ ಕಥನವಿದು.
ಲಾಕ್‌ಡೌನ್ ಸಂದರ್ಭ ಕಾಲ ಕಳೆಯಲು ಗ್ರಾಮೀಣ ಒಳಾಂಗಣ ಕ್ರೀಡೆ, ಪುಸ್ತಕ, ಮೊಬೈಲ್ ಹೀಗೆ ಮೊರೆಹೋದೆವು. ಏತನ್ಮಧ್ಯೆ ಕನ್ನಡ ವಾಹಿನಿಯಲ್ಲಿ ಮಹಾ ಭಾರತ ಪ್ರಸಾರ ಗೊಂಡಿತು. ಇದನ್ನು ಕಣ್ತುಂಬಿ ಕೊಳ್ಳಲು ಪ್ರಾರಂಭಿಸಿದೆವು. ಮಹಾ ಭಾರತ ಧಾರಾವಾಹಿ ಎಲ್ಲ ಬಗೆಯ ನೋಡುಗರನ್ನು ಸೆಳೆಯಿತು.
ಧರ್ಮ, ಅಧರ್ಮದ ಅರ್ಥ
ಸತ್ಯ, ನ್ಯಾಯ, ಪರಮಾರ್ಥದ ಸಂದೇಶ ಮಹಾಭಾರತದಲ್ಲಿದೆ. ಧರ್ಮದ ದಾರಿಯಲ್ಲಿ ನಡೆಯು ವವನಿಗೆ ಅನೇಕ ಕಷ್ಟಗಳನ್ನು ಬಂದರೂ ಭಗವಂತ ಕೊನೆಗೆ ಕೈ ಹಿಡಿಯುತ್ತಾನೆ ಎಂಬ ದೃಢ ಸತ್ಯವಿತ್ತು.
ಶ್ರೀ ಕೃಷ್ಣನ ಅಭಯ ಪಾಂಡವರಂತಹ ಧರ್ಮಾತ್ಮರಿಗೆ ದೊರೆತದ್ದನ್ನು ಕಾಣಬಹುದು. ಅಧರ್ಮದಲ್ಲಿ ಸಾಗಿದ ಕೌರವರು ಶಕುನಿಯಂತಹ ಅಧರ್ಮಿಯೊಂದಿಗೆ ಸೇರಿ ತಮ್ಮ ನಾಶವನ್ನು ಬಯಸಿದರು.
ಪಾಂಡವರು ಒಂದೇ ಆತ್ಮದಂತೆ ಬದುಕಿ ದರು. ಶ್ರೀ ಕೃಷ್ಣ- ಅರ್ಜುನರು ಸ್ನೇಹದ ಗಟ್ಟಿ ತನ ವಿಶ್ವಕ್ಕೆ ಸಾರಿದರು. ಕರ್ಣ ತನ್ನ ಮಿತ್ರ ದುರ್ಯೋಧನನಿಗಾಗಿ ತನ್ನ ಪ್ರಾಣವನ್ನೆ ಮುಡಿ ಪಾಗಿಟ್ಟನು. ಆವಶ್ಯಕತೆಗೆ ತಕ್ಕಂತೆ ಬದಲಾಗುವ ಇಂದಿನ ಆಧುನಿಕ ಜನರ ಸ್ವಾರ್ಥ ಸ್ನೇಹಕ್ಕೆ ಅದ್ಭುತ ಪಾಠ.
ಪಾಂಡುರಾಜನ ಪತ್ನಿ ಕುಂತಿದೇವಿ ತನ್ನ ಐವರು ಮಕ್ಕಳಿಗೆ ಎಂಥ ಸಂದರ್ಭದಲ್ಲೂ ಧರ್ಮವನ್ನು ಬಿಡಬೇಡಿ ಎಂದಿದ್ದ ಳು. ವಿಶ್ವದ ಮಹಾಸತಿ ದ್ರೌಪದಿ ಐವರು ಪಾಂಡವರ ಪತ್ನಿಯಾಗಿ ಅವರ ಶ್ರೇಯಸ್ಸನ್ನು ಬಯಸಿದವಳು. ತಂದೆ ಶಾಂತನು ಮಹಾರಾಜರ ಗೌರವಕ್ಕಾಗಿ, ಸಾಮ್ರಾಜ್ಯದ ಉಳಿವಿಗೆ ಜೀವನವನ್ನೇ ಮುಡಿ ಪಾಗಿಟ್ಟ ಮಹಾನ್ ಚೇತನ ಭೀಷ್ಮ. ಅಜೀವ ಬ್ರಹ್ಮಚಾರಿಯಾಗಿ, ಸಾಮ್ರಾಜ್ಯದ ಅಧಿಕಾರದ ಮೇಲೆ ಆಸೆ ಪಡದೆ ಒಬ್ಬ ಸೇವಕನಾಗಿ, ಸಾಮ್ರಾಜ್ಯದ ರಕ್ಷಣೆ ಮಾಡುವೆ ಎಂದು ಪ್ರತಿಜ್ಞೆ ಮಾಡಿ ಇತಿಹಾಸ ದಲ್ಲಿ ಚಿರಸ್ಥಾಯಿಯಾದ ವ್ಯಕ್ತಿತ್ವ.
ಕೃಷ್ಣನ ಭಗವದ್ಗೀತೆ
ಭಗವದ್ಗೀತೆ ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರ, ಆತ್ಮ ಮತ್ತು ಪರ ಮಾತ್ಮನ ಸಮ್ಮಿಲನ. ಈ ಜೀವನ, ದೃಢತೆ, ಸ್ಥಿರ ಪ್ರಜ್ಞೆ, ಧ್ಯಾನ, ಧರ್ಮ ಪಾಲನೆ, ನಿಸ್ವಾರ್ಥ ಮನೋಭಾವ ಇವೆಲ್ಲವೂ ಭಗವದ್ಗೀತೆಯ ಕೊಡುಗೆ. ಇಡೀ ಮಹಾಭಾರತ ಯುದ್ಧದ ಕೇಂದ್ರ ಬಿಂದುವಾಗಿ ಅರ್ಜುನನ ಕೀರ್ತಿಯನ್ನು ಆಕಾಶದೆತ್ತರಕ್ಕೆರಿಸಿದ ಅದ್ಭುತ ಈ ಗೀತೆಯದ್ದು.
-ಮೋನಿ ತಿಮ್ಮಯ್ಯ, ಸೋಮವಾರಪೇಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.