ಭಾರತದ ಫುಟ್‌ಬಾಲ್ ದಂತಕಥೆ ಸುನಿಲ್ ಚೆಟ್ರಿ!
Team Udayavani, Nov 6, 2020, 4:41 PM IST
ಭಾರತದ ಕ್ರೀಡಾಲೋಕದಲ್ಲಿ ಕ್ರಿಕೆಟ್‌ಗೆ ಸಿಗುವ ಮನ್ನಣೆ ಫುಟ್‌ಬಾಲ್ ಗೆ ಸಿಗುತ್ತಿಲ್ಲ ಆದರೂ ಕೂಡ ಫುಟ್‌ಬಾಲ್ ಆಟದಲ್ಲಿ ತನ್ನದೇ ಆದಂತ ಛಾಪು ಮೂಡಿಸಿ ವಿಶ್ವದ ಗಮನ ಸೆಳೆದ ಆಟಗಾರ ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ. ಅವರು ದೇಶದ ಫುಟ್‌ಬಾಲ್ ದಂತಕಥೆಯೇ ಸರಿ.
ವಿಶ್ವ ಪ್ರಸಿದ್ಧ ಆಟಗಾರರಾಗಿ ಹೊರಹೊಮ್ಮಿದ್ದ ಸುನಿಲ್ ಚೆಟ್ರಿ ಆಗಸ್ಟ್ 3, 1984 ರಲ್ಲಿ ಕೆ.ಬಿ. ಚೆಟ್ರಿ ಹಾಗೂ ತಾಯಿ ಸುಶೀಲಾ ಚೆಟ್ರಿಯ ಪುತ್ರನಾಗಿ ಆಂಧ್ರಪ್ರದೇಶದ ಸಿಕಂದರ್‌ಬಾದ್‌ನಲ್ಲಿ ಜನಿಸಿದರು. ತಂದೆ ಇಂಡಿಯನ್ ಆರ್ಮಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ತಾಯಿ ನೇಪಾಲ ಮಹಿಳಾ ಫುಟ್‌ಬಾಲ್ ತಂಡದ ಆಟಗಾರ್ತಿ. ಕುಟುಂಬದಲ್ಲಿ ಫುಟ್‌ಬಾಲ್ ವಾತಾವರಣ ಇದ್ದು, ಇದೇ ಮುಂದೆ ಇವರನ್ನು ಫುಟ್‌ಬಾಲ್‌ನತ್ತ ಸೆಳೆಯಿತು.
ಬೆಳೆಯುವ ಸಿರಿ
ಸುನಿಲ್ ಚೆಟ್ರಿ ಅವರು ತಮ್ಮ ಅಸಾಧರಣ ಪ್ರತಿಭೆ, ಕೌಶಲ, ತಂತ್ರಗಾರಿಕೆಯಿಂದ ಫುಟ್‌ಬಾಲ್‌ನಲ್ಲಿ ಪ್ರಸಿದ್ಧರಾದವರು. ಆರಂಭದಲ್ಲಿ ಇವರು ಹೊಸದಿಲ್ಲಿಯ ಸಿಟಿ ಡೊಮೆಸ್ಟಿಕ್ ಲೆವೆಲ್‌ನಲ್ಲಿ ಆಡುವ ಮೂಲಕ ಫುಟ್‌ಬಾಲ್ ಮೈದಾನಕ್ಕಿಳಿದರು. ಆದರೆ ಇವರ ಪ್ರತಿಭೆ ಹೊರಗಡೆ ಬಂದಿದ್ದು 2002ರ ಕೊಲ್ಕತ್ತಾದ ಮಹುನಾ ಬಗಾನ್ ಫುಟ್‌ಬಾಲ್ ಕ್ಲಬ್‌ನಿಂದ. 2002ರಿಂದ 2005ರ ವರೆಗೆ ಆಡಿದ ಒಟ್ಟು 18 ಪಂದ್ಯದಲ್ಲಿ 8 ಗೋಲ್ ಗಳಿಸಿದ್ದರು. ಈ ಅದ್ಭುತ ಪ್ರದರ್ಶನದಿಂದ ಗಮನಸೆಳೆದ ಇವರನ್ನು ಭಾರತದ ಅಂಡರ್-20 ತಂಡಕ್ಕೆ 2004ರಲ್ಲಿ ಆಯ್ಕೆ ಮಾಡಲಾಯಿತು.
ದಿಗ್ಗಜರ ಅಚ್ಚುಮೆಚ್ಚಿನ ಆಟಗಾರ
ಸುನಿಲ್ ಚೆಟ್ರಿ ಅವರು ಜಗತ್ತಿನ ಮೋಸ್ಟ್ ಆ್ಯಕ್ಟಿವ್ ಗೋಲ್ ಸ್ಕೋರರ್ ಪಟ್ಟಿಯಲ್ಲಿ 2 ಸ್ಥಾನದಲ್ಲಿದ್ದು ಅಷ್ಟೇ ಅಲ್ಲದೆ ಲಿಯೊನೋ ಮೆಸ್ಸಿಯನ್ನು ಈ ಪಟ್ಟಿಯಲ್ಲಿ ಹಿಂದಿಕ್ಕುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ್ದಾರೆ.ಒಂದೊಮ್ಮೆ ಸುನಿಲ್ ಚೆಟ್ರಿ ಅವರು ಮನನೊಂದು ನನ್ನ ಬಗ್ಗೆ ಟೀಕೆ ಮಾಡಿ ಪರವಾಗಿಲ್ಲ. ಆದರೆ ಮೊದಲು ಕ್ರೀಡಾಂಗಣಕ್ಕೆ ಬಂದು ಫುಟ್‌ಬಾಲ್ ನೋಡಿ ಎಂದು ಪೋಸ್ಟ್ ಹಾಕಿದ್ದು ಅನಂತರದ ದಿನಗಳಲ್ಲಿ ದೇಶದ ಜನರು ಫುಟ್‌ಬಾಲ್ ಆಟವನ್ನು ಕೂಡ ನೋಡಿ ಮೆಚ್ಚುವಂತಾಯಿತು.
ಅಷ್ಟೇ ಅಲ್ಲದೆ ಕ್ರಿಕೆಟ್ ದಿಗ್ಗಜರಾದ ಸಚಿನ್, ಕೊಹ್ಲಿ ಕೂಡ ಸುನಿಲ್ ಆಟ ನೋಡಿ ಸಂತೋಷಪಟ್ಟಿದ್ದರು. ಸುನಿಲ್ ರವರು ಪದ್ಮಶ್ರೀ ಪಡೆದ ಆರನೇ ಫುಟ್‌ಬಾಲ್ ಆಟಗಾರ ಹಾಗೂ ಫುಟ್‌ಬಾಲ್ ರತ್ನ ಪ್ರಶಸ್ತಿ ಪಡೆದ ಮೊದಲ ಆಟಗಾರನೆಂಬ ಹೆಗ್ಗಳಿಕೆ ಅವರಿಗಿದೆ. ಫುಟ್‌ಬಾಲ್‌ನಲ್ಲಿ ಭಾರತ ತಂಡ ಉತ್ತಮವಾದ ಆಟಗಾರನ ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಭಾರತ ಫುಟ್‌ಬಾಲ್ ತಂಡ ವಿಶ್ವಶ್ರೇಷ್ಠ ತಂಡವಾಗಿ ಹೊರಹೊಮ್ಮಲಿ ಎನ್ನುವುದು ನಮ್ಮ ಆಶಯ.
ರಾಷ್ಟ್ರೀಯ ತಂಡಕ್ಕೆ ಆಯ್ಕೆ
ಚೆಟ್ರಿ ಅವರಲ್ಲಿನ ಅಸಾಧರಣ ಪ್ರತಿಭೆ ಗುರುತಿಸಿದ ಆಯ್ಕೆ ಸಮಿತಿಯೂ ಇವರನ್ನು 2005ರಲ್ಲಿ ಭಾರತದ ಫುಟ್‌ಬಾಲ್ ತಂಡಕ್ಕೆ ಆಯ್ಕೆ ಮಾಡಿತು. ಪಾಕಿಸ್ಥಾನದ ವಿರುದ್ಧ ಇವರು ತಮ್ಮ ಮೊದಲ ಅಂತಾರಾಷ್ಟ್ರೀಯ ಗೋಲ್‌ನ್ನು ಗಳಿಸಿದರು. ಅನಂತರ ಜೆಸಿಇಟಿ ಫುಟ್‌ಬಾಲ್ ತಂಡ, ಈಸ್ಟ್ ಬೆಂಗಾಲ್ ಫುಟ್‌ಬಾಲ್ ಕ್ಲಬ್, ಡೆಂಪೋ ನ್ಪೋರ್ಟ್ಸ್, ಬೆಂಗಳೂರು ಎಫ್ಸಿ, ಮುಂಬಯಿ ಸಿಟಿ ಎಫ್ಸಿ ತಂಡಗಳನ್ನು ಪ್ರತಿನಿಧಿಸಿದ್ದರು. ಅವರ ಉತ್ತಮ ಪ್ರದರ್ಶನಕ್ಕಾಗಿ 2007 ರಲ್ಲಿ ಅಐಊಊ ವರ್ಷದ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅನಂತರ 2012ರಲ್ಲಿ ಭಾರತದ ರಾಷ್ಟ್ರೀಯ ಫುಟ್‌ಬಾಲ್ ತಂಡದ ನಾಯಕನಾಗಿ ಆಯ್ಕೆ ಮಾಡಲಾಗುತ್ತದೆ.
ದುಬಾರಿ ಆಟಗಾರ
2015ರಲ್ಲಿ ಸುನಿಲ್ ಚೆಟ್ರಿ ಅವರನ್ನು ಮುಂಬಯಿ ಸಿಟಿ ತಂಡವು 1.2 ಕೋ. ರೂ. ಗೆ ಖರೀದಿ ಮಾಡಿತ್ತು. ಅತೀ ದುಬಾರಿ ಮೊತ್ತಕ್ಕೆ ಖರೀದಿಯಾದ ಭಾರತೀಯ ಫುಟ್‌ಬಾಲ್ ಆಟಗಾರನೆಂಬ ಹೆಗ್ಗಳಿಕೆ ಇವರಿಗಿದೆ. ಅನಂತರ 2016ರಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ ಸೇರಿಕೊಂಡು ಅವರ ನಾಯಕತ್ವದಲ್ಲಿ ಬೆಂಗಳೂರು ಎಫ್.ಸಿ. ತಂಡವು 2018-19ರಲ್ಲಿ ಐ.ಎಸ್.ಎಲ್. ಟ್ರೋಫಿಯನ್ನು ಗೋವಾದ ವಿರುದ್ದ ಗೆದ್ದು ಉತ್ತಮ ನಾಯಕನೆನಿಸಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.