ಉಸಿರಿಗೆ ಹಸಿರಿರಬೇಕು, ಹಸಿದವರಿಗೆ ಆಹಾರ ಸಿಗಬೇಕು
Team Udayavani, Oct 16, 2020, 9:54 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕಾಲಚಕ್ರ ಉರುಳಿದಂತೆ ಪ್ರಪಂಚ ಶರವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ.
ಆದರೆ ಕಡುಬಡತನದಿಂದ ಆಹಾರಕ್ಕಾಗಿ ಅಂಗಲಾಚುವರ ಪರಿಸ್ಥಿತಿ ಇಂದೂ ಶೋಚನೀಯವಾಗಿದೆ.
ಹಲವಾರು ಹಿಂದುಳಿದ ಗ್ರಾಮೀಣ ಪ್ರದೇಶಗಳಿಂದ ಹಿಡಿದು ನಗರಪ್ರದೇಶಗಳಲ್ಲೂ ಕೆಲವರು ಆಹಾರ ಸಿಗದೆ ಪರದಾಡುತ್ತಿದ್ದಾರೆ! ಇದಕ್ಕೆ ಕಾರಣ ಅವರ ಆರ್ಥಿಕಸ್ಥಿತಿ, ಶಿಕ್ಷಣದ ಅರಿವಿಲ್ಲದಿರುವುದು, ಸಮಾಜದಲ್ಲಿ ಹಿಂದುಳಿದಿರುವುದು.
ಅಂತಾರಾಷ್ಟ್ರೀಯ ಕಾನೂನಿನ ಅನ್ವಯ ಆಹಾರ ಪಡೆದುಕೊಳ್ಳುವುದು ಮತ್ತು ಪ್ರತಿಯೊಬ್ಬರ ಹಕ್ಕು, ಆದರೆ ವಾಸ್ತವಾಂಶ ಇದು ಕೇವಲ ಮಾತಿಗಷ್ಟೇ, ನಗರೀಕರಣ, ಜಾಗತೀಕರಣ, ಬೆಳೆದಂತೆಲ್ಲ ಸಮಾಜದ ಪರಿಸ್ಥಿತಿಯೂ ಕೂಡ ಬದಲಾಗಬೇಕು. ಆದರೆ ಇಲ್ಲಿ ಬದಲಾಗುತ್ತಿಲ್ಲ.
ಶ್ರೀಮಂತರು ಶ್ರೀಮಂತರಾಗುತ್ತಾ ಹೋಗುತ್ತಿದ್ದಾರೆ. ನಿರಾಶ್ರೀತರು ಹಸಿವು ಮತ್ತು ಬಡತನದಿಂದ ಕಣ್ಣೀರಿಡುತ್ತಿದ್ದಾರೆ. ಈಗಾಗಿ ಹಸಿವು ಮತ್ತು ಬಡತನ ಪರಿಸ್ಥಿತಿಯಲ್ಲಿ ಖಾಸಗಿ ಮತ್ತು ಸಾರ್ವಜನಿಕ ಭಾಗವಹಿಸುವಿಕೆ ಬಹಳ ಮುಖ್ಯ.
ಈಗಾಗಿ ಯುನೈಟೆಡ್ ನೇಶನ್ಸ್ 1945ರಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆ ( ಎಫ್ ಎಒ ) ಅನ್ನು ಸ್ಥಾಪಿಸಿತು. ಇದರ ಸ್ಮರಣಾರ್ಥ ಪ್ರತಿವರ್ಷವೂ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನವನ್ನು ಆಚರಿಸುತ್ತದೆ. ಆಚರಣೆಯ ಮುಖ್ಯಉದ್ದೇಶ ಪ್ರಪಂಚದಾದ್ಯಂತ ಹಸಿವು ಮತ್ತು ಬಡತನದ ನಿರ್ಮೂಲನೆಗಾಗಿ ಹೋರಾಡುವುದು, ಪ್ರತಿಯೊಬ್ಬರಿಗೂ ಪೌಷ್ಟಿಕಾಂಶಯುತ ಆಹಾರ ಸಿಗುವ ಹಾಗೆ ಶ್ರಮಿಸುವುದು ಇದರ ಮುಖ್ಯ ಉದ್ದೇಶವಾಗಿದೆ.ಇದರ ಜತೆಗೆ ಎಲ್ಲ ದೇಶಗಳ ಭಾಗಹಿಸುವಿಕೆಯು ಕೂಡ ಅತ್ಯಮೂಲ್ಯವಾಗಿದೆ, ಪ್ರತಿಯೊಂದು ದೇಶದ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳ ಭಾಗವಹಿಸುವಿಕೆಯು ಅವಶ್ಶಕವಾಗಿದೆ.
ಪ್ರತಿವರ್ಷ ಸುಮಾರು ಪ್ರಪಂಚದಾದ್ಯಂತ 821 ಮಿಲಿಯನ್ ಜನರಿಗೆ ಸಕ್ರಿಯ ಆರೋಗ್ಯಕರ ಜೀವನವನ್ನು ನಡೆಸಲು ಬೇಕಾದಷ್ಟು ಆಹಾರವಿಲ್ಲ. ಇನ್ನೂ ಪ್ರತಿವರ್ಷ 3.1 ಮಿಲಿಯನ್ ಮಕ್ಕಳು ಅಪೌಷ್ಟಿಕತೆಯಿಂದ ಸಾಯುತ್ತಾರೆ. ಹಸಿವು ಮತ್ತು ಬಡತನ, ಅಪೌಷ್ಟಿಕತೆ ಸಮಾಜದಲ್ಲಿ ತಾಂಡವವಾಡುತ್ತಿರುವ ಪಿಡುಗಾಗಿದೆ. ಹಸಿವೆಂಬುದು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಹಾದುಹೋಗುವ ಅಪಾಯಕಾರಿ ಕಾಲಚಕ್ರವಾಗಿದೆ. ಹಾಗಾಗಿ ಹಸಿವು, ಬಡತನ ನಿವಾರಣೆಯಲ್ಲಿ ಪ್ರತಿಯೊಬ್ಬರ ಪಾತ್ರವು ಹಿರಿದಾಗಿದೆ. ಏಕೆಂದರೆ ಸರಕಾರದ ಜತೆಗೆ ನಾಗರಿಕ ಸಮಾಜವು ಕೈಜೋಡಿಸಬೇಕಾಗಿದೆ.
ಶಿಕ್ಷಣ ನೀಡುವುದರ ಮೂಲಕ ಜಾಗೃತಿ, ಅಭಿಯಾನ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲೂ ಮೂಡಿಸಬೇಕು. ಉತ್ತಮ ಆಹಾರದ ಸೇವನೆ ಇಲ್ಲದೆ ಕಡುಬಡತನದಿಂದ ಬಳಲುತ್ತಿರುವ ಪ್ರದೇಶಗಳನ್ನು ದತ್ತುಪಡೆದು ಹಸಿವಿನಿಂದ ಅಂಗಲಾಚುತ್ತಿರುವವರನ್ನು ಗುರುತಿಸಿ ಅವರಿಗೆ ಸಮರ್ಪಕವಾಗಿ ಅವರಿಗೆ ಅದರಿಂದ ಮುಕ್ತಿಕೊಡಿಸಬೇಕು. ಪೌಷ್ಟಿಕಾಂಶದಿಂದ ನರಳಾಡುತ್ತಿರುವ ಮಕ್ಕಳಿಗೆ ಪೌಷ್ಟಿಕಾಂಶಯುತ ಆಹಾರ ಪದಾರ್ಥವನ್ನು ಒದಗಿಸಬೇಕು.
ಹಸಿವು ಮತ್ತು ಬಡತನಕ್ಕೆ ಕೀಲಿಕೈ ಆಗಿರುವ ರೈತರಿಗೆ ಹೆಚ್ಚಿನ ಪ್ರೋತ್ಸಾಹ ಅನುದಾನ ಬೆಂಬಲ ಬೆಲೆಯನ್ನು ನೀಡಬೇಕು. ಸರಕಾರದ ಜತೆಗೆ ದೊಡ್ಡ ದೊಡ್ಡ ಸಂಘ ಸಂಸ್ಥೆಗಳು ಆಹಾರ ಮತ್ತು ಪೌಷ್ಟಿಕತೆಯಿಂದ ಬಳಲುತ್ತಿರುವ ಜನರಿಗೆ ಸಹಕರಿಸಿ ಅಭಾರಿಯಾಗಬೇಕು. ಬಂಡವಾಳಶಾಹಿಗಳು ಬಂಡವಾಳವನ್ನು ಕೇಂದ್ರಿಕರಣದ ಜತೆ ತಿನ್ನಲನ್ನವಿಲ್ಲದೆ, ಪೌಷ್ಟಿಕಾಂಶಕೊರತೆಯಿಂದ ಕನ್ನೇರಿಡುತ್ತಿರುವ ಕಂದಮ್ಮಗಳ ನೆರವಿಗೆ ಧಾವಿಸಬೇಕು.
ಸಮಾಜದಲ್ಲಿ ತಾವು ಚೆನ್ನಾಗಿದ್ದು ಪರರ ಬಗ್ಗೆಯೂ ಸ್ವಲ್ಪ ಕಾಳಜಿ ವಹಿಸಿ ಒಬ್ಬನೇ ತಿನ್ನುವುದರ ಜತೆಗೆ ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರವನ್ನು ಹಂಚಬೇಕು. ಆಹಾರವನ್ನು ಬಿಸಾಡುವ ಬದಲು ಹಸಿದವರಿಗೆ ಕೊಡಬೇಕು ದೇಶದ ಪ್ರತಿಯೊಬ್ಬರು ಮನಸು ಮಾಡಿ ಒಬ್ಬೊಬ್ಬ ಹಸಿದವನಿಗೆ ಅನ್ನವನಿತ್ತರೆ ಈ ಸಮಸ್ಯೆಯೇ ಇರುವುದಿಲ್ಲ ಹಾಗಾಗಿ ದೇಶದ ಪ್ರತಿಯೊಬ್ಬರು ಸಹಕರಿಸಿ ಹಸಿವನ್ನು ದೂರಮಾಡಬೇಕು ಮತ್ತು ವಿಶ್ವಸಂಸ್ಥೆ ಆಹಾರ ಜಾಗೃತಿ ಅಭಿಯಾನಕ್ಕೆ ಕೈಜೋಡಿಸಿ ಪ್ರಪಂಚವನ್ನು ಹಸಿವು ಮುಕ್ತವನ್ನಾಗಿ ಮಾಡೋಣ.
ಸಂಪತ್ ಶೈವ, ಹಾಸನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.