Social Media: ಸಾಮಾಜಿಕ ಜಾಲತಾಣದ ಮೂಲಕ ಗ್ರಾಮದ ಅಭಿವೃದ್ಧಿ ಸಾಧ್ಯವೇ?


Team Udayavani, Nov 3, 2024, 3:11 PM IST

17-

ಸಾಮಾಜಿಕ ಜಾಲತಾಣ ಅತ್ಯಂತ ಪ್ರಬಲಯುತವಾದ ಮಾಧ್ಯಮವಾಗಿ ರೂಪುಗೊಂಡಿದೆ. ಸಾಮಾಜಿಕ ಜಾಲತಾಣ ಉಪಯೋಗಿಸುವುದಕ್ಕೆ ವಯಸ್ಸಿನ ಮಿತಿಯೂ ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ತನಕವೂ ಎಲ್ಲರೂ ಬಳಸುತ್ತಿದ್ದಾರೆ.

ಸಾಕಷ್ಟು ಜನರು ಹೇಳುತ್ತಾರೆ ಮೊಬೈಲ್‌ ಬಂದಮೇಲೆ ಕಾಲ ಕೆಟ್ಟು ಹೋಯಿತು ಎಂದು. ಈ ಮಾತನ್ನು ಆವಶ್ಯಕವಾಗಿ ಒಪ್ಪೋಣ ಆದರೆ ಮೊಬೈಲ್‌ನಿಂದ ಸಾಕಷ್ಟು ಒಳ್ಳೆ ಕೆಲಸ ಮಾಡಲು ಕೂಡ ಸಾಧ್ಯ ಇದೆ ಎಂಬುದನ್ನು ನಾವು ನಮ್ಮ ಸುತ್ತಮುತ್ತ ಕಾಣಬಹುದು. ಮೊಬೈಲ್‌ ಅನ್ನು ನಾವು ಹೇಗೆ ಉಪಯೋಗ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ಅದರ ಪ್ರಯೋಜನ ನಿರ್ಧಾರವಾಗಿದೆ. ಮೊಬೈಲ್‌ನಿಂದ ಒಳ್ಳೆಯದು ಆಗಿದೆ, ಕೆಟ್ಟದ್ದು ಆಗಿದೆ.

ಅದೇನೆ ಇರಲಿ. ಪ್ರಸ್ತುತ ನಾವಿಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಒಳ್ಳೆಯ ಕೆಲಸವನ್ನು ಹೇಗೆ ಮಾಡಬಹುದು ಎಂಬುದರ ಬಗ್ಗೆ ಚರ್ಚೆ ಮಾಡೋಣ. ಅದೊಂದು ತಾಯಿ ಮತ್ತು ಮಗಳು ಇಬ್ಬರೇ ಇರುವ ಬಡ ಕುಟುಂಬ. ತಾಯಿಗೇ ವಯಸ್ಸಾಗಿದೆ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ. ಪದವಿ ಓದುತ್ತಿರುವ ಮಗಳು ಒಂದು ದಿನ ಕಾಲೇಜಿಗೆ ಹೋಗುವಾಗ ಹಿಂದೆ ಇಂದ ಬಂದ ಬೈಕ್‌ನವರು ಆಕೆಗೆ ಆಕ್ಸಿಡೆಂಟ್‌ ಮಾಡಿ, ಪರಾರಿಯಾಗುತ್ತಾರೆ. ತತ್‌ಕ್ಷಣ ಅಲ್ಲಿದ್ದವರ ಸಹಾಯದ ಮೂಲಕ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು.

ಎರಡು ಕಾಲು ಮುರಿದು ಹೋದ ಕಾರಣ ಚಿಕಿತ್ಸೆಗೆ ವೈದ್ಯರು ಕೇಳಿದ್ದು 4 ಲಕ್ಷ ರೂಪಾಯಿ. ಬಡತನ ಬೇರೆ ಅಷ್ಟೊಂದು ಹಣ ಇಲ್ಲ. ಆದರೆ ಆ ಊರಿನ ಯುವಕರೆಲ್ಲ ಸೇರಿ ಸಹಾಯ ಮಾಡಿ ಎಂಬ ವಿವರ ಸಹಿತ ಒಂದು ಪೋಸ್ಟರ್‌ ಮಾಡಿ ವಾಟ್ಸಾಪ್‌, ಫೇಸ್‌ಬುಕ್‌ ಹೀಗೆ ಇನ್ನೂ ಅನೇಕ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಎಲ್ಲ ಕಡೆ ಪೋಸ್ಟರ್‌ ಹಂಚುವ ಮೂಲಕ ಆ ಕುಟುಂಬಕ್ಕೆ ಚಿಕಿತ್ಸೆಗೆ ಬೇಕಾದ ಹಣದ ವ್ಯವಸ್ಥೆಯನ್ನು ಮಾಡಿದರು. ಈ ಪುಣ್ಯದ ಕಾರ್ಯ ಆಗಿದ್ದು ಸಾಮಾಜಿಕ ಜಾಲತಾಣದ ಮೂಲಕವೇ.

ಹಾಗಾದರೆ ಈ ಸಾಮಾಜಿಕ ಜಾಲತಾಣದ ಮೂಲಕ ಒಂದು ಗ್ರಾಮದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದರೆ ಖಂಡಿತ ಸಾಧ್ಯ ಎಂದು ಹೇಳಬಲ್ಲೆ. ಒಂದು ಗ್ರಾಮದ ಅಭಿವೃದ್ಧಿ ಎಂದರೆ ಆ ಊರಿನ ಶಾಲೆ, ದೇವಸ್ಥಾನ, ಅಂಗನವಾಡಿ ಹೀಗೆ ಇನ್ನು ಅನೇಕ ಕಡೆ ಮೂಲಭೂತ ಸೌಲಭ್ಯಗಳ ಕೊರತೆ ಆಗದಂತೆ ನೋಡಿಕೊಳ್ಳುವುದು. ಕಳೆದ ವರ್ಷ ನಮ್ಮ ಶಾಲೆಯ ಬಗ್ಗೆ ಒಂದು ಲೇಖನ ಬರೆದು ಫೇಸ್‌ಬುಕ್‌ನಲ್ಲಿ ಹಾಕಿದೆ. ನಮ್ಮೂರ ಸರಕಾರಿ ಶಾಲೆಯಲ್ಲಿ  80 ಮಕ್ಕಳಿದ್ದಾರೆ. ಎಲ್ಲರೂ ಬಡಕುಟುಂಬದಿಂದ ಬಂದವರು. ಹೀಗಾಗಿ ಪುಸ್ತಕ, ಬ್ಯಾಗ್‌ ಬೇಕು ಎಂದು ಒಬ್ಬರಿಗೆ ಫೇಸಬುಕ್‌ನಲ್ಲಿಯೇ ಸಂದೇಶ ಹಾಕಿದೆ. ಅವರು ಖುಷಿಯಿಂದ ಒಪ್ಪಿದ್ದರು. ಹೀಗೆಯೇ ಪುಸ್ತಕ, ಬ್ಯಾಗ್‌ ಜತೆಗೆ ಪ್ರತಿ ಮಕ್ಕಳಿಗೂ ಚೆಂದದ 2 ಜತೆ ಸಮವಸ್ತ್ರ, ಐಡಿ ಕಾರ್ಡ್‌, ಮೈಕ್‌ ಹೀಗೆ ಸುಮಾರು 2,20,000 ರೂ. ಮೌಲ್ಯದ ವಸ್ತುಗಳು ದಾನಿಗಳಿಂದ, ಸಾಮಾಜಿಕ ಜಾಲತಾಣದ ಮೂಲಕವೇ ಶಾಲೆಗೆ ಬಂತು. ಊರಿಗೆ ಬಸ್‌ ನಿಲ್ದಾಣದ ಅವಶ್ಯಕತೆ ಇದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಹಾಕಲಾಗಿತ್ತು. ಬಸ್‌ ನಿಲ್ದಾಣ ಕೂಡ ಒಂದು ಸಂಸ್ಥೆಯ ಮೂಲಕ ನಿರ್ಮಾಣವಾಗಲು ತಯಾರಾಗುತ್ತಿದೆ.

ಇನ್ನು ಅನೇಕ ವಿಭಿನ್ನ ಶೈಲಿಯಿಂದ ಗ್ರಾಮದ ಅಭಿವೃದ್ಧಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಮಾಡಲು ಸಾಧ್ಯ. ಯಾವುದೇ ಆಗಲಿ ನಾವು ಬಳಸಿಕೊಳ್ಳುವ ರೀತಿ ಮುಖ್ಯವಾಗಿದೆ. ಸಾಮಾಜಿಕ ಜಾಲತಾಣವನ್ನು ಒಳ್ಳೆ ರೀತಿಯಲ್ಲಿ ಬಳಸಿಕೊಂಡರೆ ಖಂಡಿತ ಉಪಕಾರ ಪಡೆಯಬಹುದಾಗಿದೆ.  ಮನಸ್ಸುಗಳು ಬದಲಾಗಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಪಣ ತೊಡೋಣ.

-ವಿನಾಯಕ ಪ್ರಭು

ವಾರಂಬಳ್ಳಿ

ಟಾಪ್ ನ್ಯೂಸ್

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

ಹೊಸ ಸೇರ್ಪಡೆ

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.